For Quick Alerts
ALLOW NOTIFICATIONS  
For Daily Alerts

ದುಬಾರಿ ಮತ್ತು ಪ್ರಸಿದ್ಧವಾಗಿರುವ ಟಾಪ್ 5 ಜೀನ್ಸ್ ಬ್ರಾಂಡ್

|
Top 5 Most Expensive Jeans Brands
ಮಾಡರ್ನ್ ಇಷ್ಟಪಡುವ ಯುವಕ-ಯುವತಿಯರ ಹತ್ತಿರ ನಿಮಗೆ ತುಂಬಾ ಕಂಫರ್ಟ್ ಅನಿಸುವ ಡ್ರೆಸ್ ಯಾವುದು? ಎಂದು ಕೇಳಿ ನೋಡಿ. ತಕ್ಷಣ ದೊರೆಯುವ ಉತ್ತರ ಜೀನ್ಸ್. ಜೀನ್ಸ್ ಯೌವನ ಪ್ರಾಯದವರು ಮಾತ್ರವಲ್ಲ ಚಿಕ್ಕ ಮಕ್ಕಳಿಂದ ಹಿಡಿದು 60ರ ಹರೆಯದವರು ಕೂಡ ಧರಿಸಲು ಇಷ್ಟಪಡುವ ಉಡುಗೆಯಾಗಿದೆ.

ತುಂಬಾ ಸ್ಟೈಲಿಷ್ ಆಗಿರುವ ಈ ಜೀನ್ಸ್ ಅನ್ನು ಆಗಾಗ ಒಗೆಯುವ ತಾಪ್ರತೆ ಕೂಡ ಇಲ್ಲ, ಆದ್ದರಿಂದಲೇ ಇದರ ಜನಪ್ರಿಯತೆ ಹೆಚ್ಚಿದೆ. ಜೀನ್ಸ್ ಪ್ಯಾಂಟ್ ಗಳು ಅನೇಕ ಬ್ರಾಂಡ್ ಗಳಲ್ಲಿ ದೊರೆಯುತ್ತವೆ. ಅವುಗಳಲ್ಲಿ ಈ ಕೆಳಗಿನ ಜನಪ್ರಿಯವಾದ 5 ಬ್ರಾಂಡ್ ದುಬಾರಿ ಜೀನ್ಸ್ ಗಳಾಗಿವೆ:

1. ಲಿವೈಸ್ ಕ್ಯಾಪಿಟಲ್ ಇ (Levis Capital E): ಈ ಬ್ರಾಂಡ್ ನ ಜೀನ್ಸ್ ಸೆಲೆಬ್ರಿಡ್ ಗಳ ಮೆಚ್ಚಿನ ಬ್ರಾಂಡ್ ಆಗಿದೆ. ಇದಕ್ಕಿಂತ ದುಬಾರಿಯಾದ ಬ್ರಾಂಡ್ಡ್ ಜೀನ್ಸ್ ಗಳಿವೆ. ಆದರೆ ತುಂಬಾ ಜನಪ್ರಿಯತೆ ಗಳಿಸಿರುವ ಜೀನ್ಸ್ ಗಳಲ್ಲಿ ಇದು ದುಬಾರಿಯಾಗಿದೆ.

2. ಗೂಕಿ ಜೀನಯಸ್ ಜೀನ್ಸ್ (Gucci Genius Jeans): ಈ ಜೀನ್ಸ್ ಅನ್ನು ಕೂಡ ದುಬಾರಿ ಬ್ರಾಂಡ್ ಜೀನ್ಸ್ ಗಳ ಪಟ್ಟಿಯಲ್ಲಿ ಸೇರಿಸಬಹುದು. ಈ ಜೀನ್ಸ್ ಉಳಿದೆಲ್ಲಾ ಜೀನ್ಸ್ ಗಳಿಗಿಂತ ವಿಭಿನ್ನವಾದ ಸ್ಟೈಲ್ ಅನ್ನು ಹೊಂದಿದೆ.

3. ಸೆವನ್ ಫಾರ್ ಆಲ್ ಮ್ಯಾನ್ ಕೈಂಡ್ (Seven For All Mankind): ಇದು ಜೀರೊ ಸೈಜ್ ಜೀನ್ಸ್ ಆಗಿ ಪ್ರಸಿದ್ಧಿಯನ್ನು ಪಡೆಯಿತು. ಈ ಬ್ರಾಂಡ್ ಎಲ್ಲಾ ಜೀನ್ಸ್ ಗಳು ಮೈಗಂಟಿದ ರೀತಿಯಲ್ಲಿರುತ್ತದೆ.ಈ ಜೀನ್ಸ್ ಹಾಳಾಗುವುದಿಲ್ಲ ಮತ್ತು ಇದಕ್ಕೆ ಇಸ್ತ್ರಿ ಹಾಕಬೇಕಾದ ಅವಶ್ಯಕತೆ ಕೂಡ ಇಲ್ಲ.

4. ಲಿವೈಸ್ ಸ್ಟ್ರೌಸ್, ಆಂಟಿಕ್ ಜೀನ್ಸ್(Levi Strauss, Antique Jeans):ಇದರಲ್ಲಿ ಯೌವನ ಪ್ರಾಯದವರಿಗೆ ಮಾತ್ರವಲ್ಲ ಸ್ವಲ್ಪ ವಯಸ್ಸಾದವರಿಗೂ ಈ ಬ್ರಾಂಡ್ ನಲ್ಲಿ ಒಳ್ಳೆಯ ವಿನ್ಯಾಸದ ಜೀನ್ಸ್ ಗಳು ದೊರೆಯುತ್ತವೆ.

5. ರಾಬಿಯಟೊ ಕವಲಿ(Robeto Cavalli): ಈ ಜೀನ್ಸ್ ಕೂಡ ದುಬಾರಿಯಾದ ಜೀನ್ಸ್ ಆಗಿದೆ. ಈ ಜೀನ್ಸ್ ಇದರ ವಿನ್ಯಾಸಕ್ಕೆ ಹೆಸರುವಾಸಿಯಾಗಿದೆ.

English summary

Top 5 Most Expensive Jeans Brands | Life Style | ದುಬಾರಿಯಾದ ಪ್ರಸಿದ್ಧ 5 ಬ್ರಾಂಡ್ ನ ಜೀನ್ಸ್ ಗಳು | ಜೀವನ ಶೈಲಿ

From which brand will the most expensive jeans in your wardrobe? Here are the top 5 brands of expensive jeans that should occupy the place of honour in your wardrobe.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more