For Quick Alerts
ALLOW NOTIFICATIONS  
For Daily Alerts

ಮಂಗಳ ಗೌರಿ ವ್ರತದ ಹಿನ್ನಲೆ

|
Mangala Gowry Vratha
ಒಬ್ಬ ಗುರು ಮತ್ತು ಶಿಷ್ಯ ಇದ್ದರು. ಶಿಷ್ಯ ಭಿಕ್ಷೆಯನ್ನು ತರಲು ಮನೆಮನೆಗೆ ಹೋಗುತ್ತಿದ್ದ. ಹೀಗೆ ಬಿಕ್ಷೆ ಬೇಡುತ್ತಾ ಬಂದ ಹುಡುಗನ್ನು ನೋಡಿ ಮಹಾರಾಣಿ ಭಿಕ್ಷೆ ನೀಡಲು ಬಂದಳು. ಆದರೆ ಆ ಹುಡುಗ ಮಹಾರಾಣಿ ಕೈಯಿಂದ ಭಿಕ್ಷೆ ಪಡೆದುಕೊಳ್ಳಲಿಲ್ಲ, ಅದರ ಬದಲು ಬೇರೆ ಮಹಿಳೆಯ ಹತ್ತಿರ ಭಿಕ್ಷೆ ಬೇಡಿ ಮರಳಿದನು. ಈ ವಿಷಯದ ಬಗ್ಗೆ ಮಹಾರಾಜ ಮತ್ತು ಮಹಾರಾಣಿ ಚರ್ಚಿಸಿದರು, ಆ ಹುಡುಗ ಏಕೆ ಹಾಗೇ ಮಾಡಿದ ಎಂದು ಗೊತ್ತಾಗಲಿಲ್ಲ.

ಮಾರನೇ ದಿನ ಆ ಹುಡುಗ ಮತ್ತೆ ಭಿಕ್ಷೆ ಬೇಡುತ್ತಾ ಬಂದ, ರಾಣಿ ಅವನಿಗೆ ಭಿಕ್ಷೆ ನೀಡಲು ಬಂದಳು. ಆದರೆ ಹುಡುಗ ಅವಳ ಕೈಯಿಂದ ಆ ಭಿಕ್ಷೆ ತೆಗೆದುಕೊಳ್ಳಲಿಲ್ಲ. ಹುಡುಗನ ಆ ವರ್ತನೆ ನೋಡಿ ರಾಜನಿಗೆ ತುಂಬಾ ಕೋಪ ಬರುತ್ತದೆ. ಕೋಪದಿಂದ ಕೇಳುತ್ತಾನೆ ಏಕೆ ನೀನು ಹೀಗೆ ಮಾಡುತ್ತಿದ್ದೀಯ? ಎಂದು ಕೋಪದಿಂದ ಕೇಳುತ್ತಾನೆ. ಅದಕ್ಕೆ ಆ ಹುಡುಗ ನಿಮಗೆ ಮಕ್ಕಳಿಲ್ಲ, ಆದ್ದರಿಂದ ನೀವು ಅದೃಷ್ಟವಂತರಲ್ಲ ಎಂದು ಹೇಳುತ್ತಾನೆ.

ಇದನ್ನು ಕೇಳಿದ ರಾಜ ರಾಣಿಗೆ ಕೋಪ ಮತ್ತು ಬೇಸರವಾಗುತ್ತದೆ. ತುಂಬಾ ಕೋಪದಿಂದ ಹೇಳುತ್ತಾನೆ, "ಅದೃಷ್ಟವಿದೆಯೇ ಅಥವಾ ಇಲ್ಲವೇ ಎಂದು ಶಿವ ನಿರ್ಧರಿಸುತ್ತಾನೆ " ಎಂದು ಹೇಳುತ್ತಾನೆ, ಆ ಹುಡುಗ ಮಾಯವಾಗುತ್ತಾನೆ, ಆಗ ಈ ರಾಜ, ರಾಣಿಗೆ ಆ ಬಾಲಕ ಶಿವ ಅಂತ ಗೊತ್ತಾಗುತ್ತದೆ. ಶಿವನ ಮೇಲೆ ಕೋಪಗೊಂಡಿದ್ದಕ್ಕೆ ಕ್ಷಮೆ ಕೇಳಿ, ಪ್ರಾರ್ಥನೆ ಮಾಡುತ್ತಾರೆ. ಅವರಿಗೆ ಒಂದು ಗಂಡು ಮಗು ಆಗುತ್ತದೆ, ಆಗ ಶಿವ ಪ್ರತ್ಯಕ್ಷವಾಗಿ "ಇವನ ಆಯುಸ್ಸು 16 ವರ್ಷಗಳವರೆಗೆ ಮಾತ್ರ" ಎಂದು ಹೇಳಿ ಮಾಯವಾಗುತ್ತಾನೆ. ಆ ಮಗುವಿಗೆ ಚಂದ್ರ ಶೇಖರ ಎಂದು ಹೆಸರಿಡುತ್ತಾರೆ.

ಚಂದ್ರ ಶೇಖರ ರಾಜಕುಮಾರನಿಗೆ ತನ್ನ ಆಯುಸ್ಸು ಕುರಿತು ತಿಳಿದಿರುತ್ತದೆ. ಇವನು ಕೂಡ ತನಗೆ 15 ವರ್ಷ ಕಳೆದ ಕೂಡಲೇ ಕಾಶಿಗೆ ಹೋಗುತ್ತಾನೆ. ಹೀಗೆ ಕಾಶಿಗೆ ಹೋಗುವಾಗ ದಾರಿ ಮಧ್ಯೆಯಲ್ಲಿ ಒಬ್ಬ ರಾಜಕುಮಾರಿ ತನ್ನ ಸಂಗಡಿಗರ ಜೊತೆ ಕೂತು ಮಾತನಾಡುತ್ತಿರುವುದು ಕಾಣುತ್ತದೆ, ಇವನು ನಡೆದು ಅವಳ ಸಮೀಪ ಹೋದಾಗ "ನಾನು ಗೌರಿಯನ್ನು ಪೂಜೆ ಮಾಡುತ್ತಿದ್ದೇನೆ ಆದ್ದರಿಂದ ನನ್ನ ಮದುವೆಯಾದ ಗಂಡು ತುಂಬಾ ವರ್ಷ ಬದುಕುತ್ತಾನೆ " ಎಂದು ಅವಳು ಹೇಳುವುದು ಕೇಳುತ್ತದೆ.

ಈ ರಾಜಕುಮಾರ ಅವಳನ್ನು ಮದುವೆಯಾಗಲು ತೀರ್ಮಾನಿಸಿ ಅವಳ ತಂದೆಯ ಹತ್ತಿರ ಹೋಗುತ್ತಾನೆ. ಆ ರಾಜಕುಮಾರಿಯ ತಂದೆ ಕಾಯಿಲೆ ಬಿದ್ದಿರುತ್ತಾನೆ, ತನ್ನ ಮಗಳನ್ನು ಕೇಳಿ ಬಂದ ಈ ರಾಜಕುಮಾರನಿಗೆ ತನ್ನ ಮಗಳನ್ನು ಮದುವೆ ಮಾಡಿಕೊಡಲು ಸಂತೋಷದಿಂದ ಒಪ್ಪುತ್ತಾನೆ. ಅವರ ಮದುವೆಯಾಗುತ್ತದೆ, ಅವತ್ತಿಗೆ ಅವನಿಗೆ 16 ವರ್ಷ ತುಂಬುತ್ತದೆ. ಅವನು ತನ್ನ ಕಥೆಯನ್ನು ರಾಜಕುಮಾರಿಗೆ ಹೇಳುತ್ತಾನೆ, ರಾತ್ರಿ ಅವನು ಮಲಗಿದ್ದಾಗ ಅವನ ಬಳಿ ಹಾವು ಬರುತ್ತಿರುವುದು ಕಾಣುತ್ತದೆ, ರಾಜಕುಮಾರಿ ಮಂಗಳ ಗೌರಿಗೆ ಪೂಜೆ ಮಾಡಿದ್ದ ಅಕ್ಕಿಯನ್ನು ಹಾವಿಗೆ ಎರಚುತ್ತಾಳೆ, ಹಾವು ಸತ್ತು ಹೋಗುತ್ತದೆ, ಸತ್ತ ಹಾವನ್ನು ಪೂಜೆಗೆ ಇಟ್ಟ ಕಲಶದಲ್ಲಿ ಹಾಕಿಡುತ್ತಾಳೆ.

ಮಾರನೆ ದಿನ ಬೆಳಗ್ಗೆ ರಾಜಕುಮಾರಿ ಏಳುವ ಮೊದಲು ಚಂದ್ರಶೇಖರ ತನ್ನ ಮದುವೆಯ ಉಂಗುರ ಬಿಚ್ಚಿಟ್ಟು ಕಾಶಿಗೆ ಹೋಗುತ್ತಾನೆ. ರಾಜಕುಮಾರಿಯನ್ನು ಮದುವೆಯಾಗಲು ಬೇರೆ ರಾಜಕುಮಾರರು ಮುಂದೆ ಬರುತ್ತಾರೆ, ಆದರೆ ಅವಳು ಒಪ್ಪುವುದಿಲ್ಲ. ಈ ರಾಜಕುಮಾರ ಕಾಶಿಗೆ ಹೋಗಿ ಒಂದು ವರ್ಷ ಕಳೆದರೂ ಸಾಯುವುದಿಲ್ಲ. ನಂತರ ಮರಳಿ ಬಂದು ರಾಜಕುಮಾರಿ ಜೊತೆ ಸುಖವಾಗಿ, ಸಂತೋಷದಿಂದ ಬಾಳ್ವೆ ನಡೆಸುತ್ತಾನೆ. ಮಂಗಳ ಗೌರಿ ಪೂಜೆ ಮಾಡಿದರೆ ಗಂಡನ ಆಯುಸ್ಸು ಹೆಚ್ಚಾಗುತ್ತದೆ ಎಂಬ ನಂಬಿಕೆಯಲ್ಲಿ ಈ ವ್ರತ ಮಾಡಲಾಗುವುದು.

English summary

Mangala Gowry Vratha Story | Festival And Lifestyle | ಮಂಗಳ ಗೌರಿ ವ್ರತ | ಹಬ್ಬ ಮತ್ತು ಜೀವನ ಶೈಲಿ

It was the Shravan month and the girls were performing the Mangala Gowri Vratha. Those who perform this one whoever they marries will live a long life.
X
Desktop Bottom Promotion