For Quick Alerts
ALLOW NOTIFICATIONS  
For Daily Alerts

ಮಂಗಳ ಗೌರಿ ವ್ರತ ಆಚರಣೆಯ ವೈಶಿಷ್ಠ್ಯ

|
ಶ್ರಾವಣ ಮಾಸದಲ್ಲಿ ಮಂಗಳ ಗೌರಿ ಪೂಜೆಯನ್ನು ಮಾಡುತ್ತಾರೆ. ದೇವಿ ಪಾರ್ವತಿಯ ಕೃಪೆ ನಮಗೆ ದೊರೆಯಲಿ ಎಂದು ಮುತ್ತೈದೆ ಹೆಣ್ಣುಮಕ್ಕಳು ವ್ರತವನ್ನು ಮಾಡುತ್ತಾರೆ. ಈ ವ್ರತವನ್ನು ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಆಚರಿಸಲಾಗುತ್ತಿದ್ದು ಮಂಗಳ ಗೌರ್ ವ್ರತ ಎಂದು ಕರೆಯುತ್ತಾರೆ. ಈ ವ್ರತವನ್ನು ಮಂಗಳವಾರ ಅಂದರೆ ಶ್ರಾವಣ ಮಾಸದ ಮೊದಲನೇ ಮಂಗಳವಾರದಿಂದ ಕೊನೆಯ ಮಂಗಳವಾರದವರೆರೆಗೆ ಮಾಡಲಾಗುವುದು.

ಈ ಸಮಯದಲ್ಲಿ ಗೌರಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಮುತ್ತೈದೆ ಮಹಿಳೆಯರು ತುಂಬಾ ಸಾಂಪ್ರದಾಯಕವಾಗಿ ಡ್ರೆಸ್ ಮಾಡಿ ಕೈಗೆ ಬಳೆ, ಮಂಗಳ ಸೂತ್ರ, ತಲೆಗೆ ಹೂ ಮುಡಿದಿರುತ್ತಾರೆ. ಇದರರ್ಥ ನಮಗೆ ಕೊನೆಯವರಿಗೂ ಈ ರೀತಿಯ ಮುತ್ತೈದೆ ಭಾಗ್ಯ ಕರುಣಿಸು ಎಂಬುದಾಗಿದೆ. ಈ ಸಮಯದಲ್ಲಿ ಮನೆಗೆ ಮನೆಯವರಿಗೆ ಆರೋಗ್ಯ ಮತ್ತು ಐಶ್ವರ್ಯ ಕರುಣಿಸು ಗಂಡನೊಡನೆ ಸಂತೋಷವಾಗಿ ಬಾಳುವಂತೆ ಮಾಡು ಎಂದು ಬೇಡಿಕೊಳ್ಳಲಾಗುತ್ತದೆ. ಈ ಸಮಯದಲ್ಲಿ ಬರೀ ಸಸ್ಯಾಹಾರವನ್ನು ಮಾತ್ರ ತಿನ್ನಲಾಗುವುದು.

ಈ ವ್ರತವನ್ನು ಹೊಸದಾಗಿ ಮದುವೆಯಾದ ಹೆಣ್ಣು ಮಕ್ಕಳು ಮತ್ತು ಮದುವೆಯಾಗಿ ಇನ್ನೂ ಐದು ವರ್ಷ ತುಂಬಿರದ ಹೆಣ್ಣುಮಕ್ಕಳು ಸೇರಿ ಮಾಡಲಾಗುವುದು. ವ್ರತ ಮಂಗಳವಾರ ಮಾಡಲು ಸಾಧ್ಯವಾಗದಿದ್ದರೆ ಶುಕ್ರವಾರ ಮಾಡಲಾಗುವುದು. ವ್ರತದ ಕೊನೆಯಲ್ಲಿ ತಾಯಿಗೆ ಮತ್ತು ಇತರ ಮುತ್ತೈದೆಯರಿಗೆ ಉಡುಗೊರೆ ಕೊಡಲಾಗುವುದು.

ಈ ವ್ರತ ಹೇಗೆ ಆಚರಣೆಗೆ ಬಂತು ಎಂದು ತಿಳಿಯಲು ಮುಂದೆ ಓದಿ.

English summary

Mangala Gowry Vratha | Festival And Lifestyle | ಮಂಗಳ ಗೌರಿ ವ್ರತ | ಹಬ್ಬ ಮತ್ತು ಜೀವನ ಶೈಲಿ

The Vrath is done on Tuesdays in the month of Shravana masa. So it is called Mangala Gowry Vritha and also known as Shravana Masa Mangalvar. The Vrath is starts from the first Tuesdays to last Tuesdays of Shravana maasa.
X
Desktop Bottom Promotion