For Quick Alerts
ALLOW NOTIFICATIONS  
For Daily Alerts

ಜನ್ಮಾಷ್ಟಮಿ 2019: ದುಷ್ಟ ಶಿಕ್ಷಕ, ಶಿಷ್ಟ ರಕ್ಷಕ ಗೋಪಾಲ

|

ಹಿಂದೂಗಳ ಪವಿತ್ರ ಹಬ್ಬ ಕೃಷ್ಣ ಜನ್ಮಾಷ್ಟಮಿ ಈ ಸಾಲಿನಲ್ಲಿ ಶ್ರಾವಣ ಶನಿವಾರ 24ರಂದು ಆಚರಿಸಲಾಗುತ್ತಿದೆ. ಶ್ರೀಕೃಷ್ಣನ ಜನ್ಮದಿನವನ್ನು ಚಾಂದ್ರಮಾನ ರೀತಿಯಲ್ಲಿ ಶ್ರಾವಣ ಕೃಷ್ಣ ಅಷ್ಟಮಿಯಂದು, ಸೌರಮಾನ ರೀತಿಯಲ್ಲಿ ಸಿಂಹಮಾಸದ ರೋಹಿಣಿ ನಕ್ಷತ್ರದ ದಿನ ಆಚರಿಸುತ್ತಾರೆ.

Krishna Janmashtami
ಕೃಷ್ಣಾ ನೀ ಬೇಗನೆ ಬಾರೋ

ಶ್ರೀ ಕೃಷ್ಣ ನೀ ಬೇಗನೆ ಬಾರೋ

ಜನನವು ನೀನೆ, ಮರಣವು ನೀನೆ, ನನ್ನೆದೆ ಧ್ಯಾನವು ನೀನೆ, ಧ್ಯಾನದ ಪ್ರಣತಿಯು ನಾನೇ

ಬೆಳಗುವೆ ದೀಪ, ತೋರಿಸೋ ರೂಪ, ಎಂದಿಗೆ ಬರುವೆಯೋ ನೀನು, ಎನ್ನುತ ಕಾಯುವೆ ನಾನು

ಗೋಪಾಲ ಗೋಪಿ ಕೃಷ್ಣ, ಮಾಯಾವಿ ಮಾಯ ಕೃಷ್ಣ

ನೀನಿರದೆ ನಾನಿಲ್ಲ, ನೀ ಬರದೆ ಬಾಳಿಲ್ಲ

ಕೇಶವ ಜನಾರ್ಧನ ಬಾ..... ಬೇಗ ಬಾ.....ನೀ ಬೇಗ ಬಾ....

ಕೃಷ್ಣಾ ನೀ ಬೇಗನೆ ಬಾರೋ

ಶ್ರೀ ಕೃಷ್ಣ ನೀ ಬೇಗನೆ ಬಾರೋ

ಎಂದು ಇಂದು ನಾವು ಕೃಷ್ಣ ಜನ್ಮಾಷ್ಣಮಿಯನ್ನು ಕೊಂಡಾಡುತ್ತೇವೆ.

ಸಾಂಪ್ರದಾಯಿಕ ಹಿಂದೂ ಧರ್ಮೀಯರ ನಂಬಿಕೆಯಂತೆ ಕೃಷ್ಣ ವಿಷ್ಣುವಿನ ಅವತಾರಗಳಲ್ಲಿ ಒಬ್ಬ. ದೇವಕಿ ಮತ್ತು ವಸುದೇವ ದಂಪತಿಗಳ ಪುತ್ರ. ತನ್ನ ರಾಕ್ಷಸ ಸೋದರಮಾವನಾದ ಕಂಸನನ್ನು ಕೊಲ್ಲಲು ಬಂದ ಅವತಾರ ಪುರುಷ.

ಕೃಷ್ಣ ಜನ್ಮಾಷ್ಟಮಿ 2019: ದಿನಾಂಕ, ಸಮಯ, ಮಹತ್ವ

ಮಹಾಭಾರತದಲ್ಲಿ ಕಥೆಯಲ್ಲಿ ಪ್ರಮುಖ ಸೂತ್ರಧಾರಿ ಕೃಷ್ಣ. ಕೃಷ್ಣಾವತಾರದ ಕಥೆ ಮಹಾಭಾರತದ ಉದ್ದಕ್ಕೂ ಕಂಡುಬರುತ್ತದೆ. ಕಂಸ, ಶಿಶುಪಾಲ ಮುಂತಾದ ದುಷ್ಟರನ್ನು ಕೊಲ್ಲುವ ಕೃಷ್ಣ, ದ್ರೌಪದಿಯ ವಸ್ತ್ರಾಪಹರಣ ಸಮಯದಲ್ಲಿ ದ್ರೌಪದಿ ಕೃಷ್ಣನನ್ನು ಕೂಗಿದಾಗ ಬಂದು ದ್ರೌಪದಿಯ ಮಾನ ಕಾಪಾಡುತ್ತಾನೆ. ಕೃಷ್ಣ ಮಹಾಭಾರತ ಯುದ್ಧದಲ್ಲಿ ಅರ್ಜುನನ ಸಾರಥಿಯಾಗಿ ನಿಂತು ಪಾಂಡವರ ಗೆಲುವಿಗೆ ಕಾರಣವಾಗುತ್ತಾನೆ. ಮಹಾಭಾರತ ಯುದ್ಧದ ಸಂದರ್ಭದಲ್ಲಿ ಯುದ್ಧ ಬೇಡವೆಂದು ನಿರಾಕರಿಸುವ ಅರ್ಜುನನಿಗೆ ಕೃಷ್ಣ ಮಾಡುವ ಉಪದೇಶವೇ ಹಿಂದೂಗಳ ಪವಿತ್ರ ಗ್ರಂಥವಾದ ಭಗವದ್ಗೀತೆ ಎಂದು ಪ್ರಸಿದ್ಧವಾಗಿದೆ.

ಈ ಕೃಷ್ಣ ಜನ್ಮಾಷ್ಟಮಿಯಂದು ದುಷ್ಟರ ಸಂಹಾರ ಮಾಡಿ, ಶಿಷ್ಟರ ರಕ್ಷಣೆ ಮಾಡುವ ಕೃಷ್ಣನನ್ನು ಮತ್ತೊಮ್ಮೆ ಅವತಾರ ಎತ್ತಿ ಬಾ ಕೃಷ್ಣ, ಬಂದು ದುಷ್ಟರ ಸಂಹಾರ ಮಾಡು. ದ್ರೌಪದಿಯಗೆ ಆದಂತೆ ಇವತ್ತಿಗೂ ಅನೇಕ ಅಬಲೆ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ, ದೌರ್ಜನ್ಯ ನಡೆಯುತ್ತಿದೆ ಈ ಅಕ್ರಮಗಳನ್ನು ತಡೆಯಲು ಮತ್ತೊಮ್ಮೆ ಅವತರಿಸು, ದುಷ್ಟರನ್ನು ಸಂಹರಿಸು ಎಂದು ನಾವೆಲ್ಲಾ ಪ್ರಾರ್ಥಿಸೋಣ.

ಆತ್ಮೀಯ ಕನ್ನಡ ಬೋಲ್ಡ್ ಸ್ಕೈ ಓದುಗಗರಿಗೆ ಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು.

English summary

Krishna Janmashtami 2019

The birthday of Hinduism's favorite Lord Krishna is a special occasion for Hindus, who consider him their leader, hero, protector, philosopher, teacher and friend all rolled into one.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more