For Quick Alerts
ALLOW NOTIFICATIONS  
For Daily Alerts

ಒಳ್ಳೆಯ ಸಂಬಳ ಪಡೆಯಲು ಪಾಲಿಸಿ ಈ ಉಪಾಯ

|
Best Tricks o The Best Salary
ವಿದ್ಯಾಭ್ಯಾಸ ಮುಗಿಸಿದ ನಂತರ ಒಂದು ಒಳ್ಳೆಯ ಕೆಲಸಕ್ಕೆ ಸೇರಬೇಕು, ಕೈತುಂಬಾ ಸಂಬಳ ಬರಬೇಕು ಅನ್ನುವುದು ವಿದ್ಯಾರ್ಥಿಗಳಾಗಿರುವಾಗ ಪ್ರತಿಯೊಬ್ಬರ ಕನಸಾಗಿರುತ್ತದೆ. ನಾವು ಯಾವ ಕೆಲಸಕ್ಕೆ ಸೇರಬೇಕೆಂದು ಹೆಚ್ಚಿನವರು ಹತ್ತನೆ ತರಗತಿಯಲ್ಲಿರುವಾಗಲೇ ನಿರ್ಧರಿಸಿರುತ್ತೇವೆ. ಆ ಗುರಿ ಸಾಧಿಸಲು ತುಂಬಾ ಕಷ್ಟ ಪಟ್ಟು ಓದಿ, ಒಳ್ಳೆಯ ಮಾರ್ಕ್ಸ್ ತೆಗೆದುಕೊಂಡು ಮುಂದೆ ನಮ್ಮ ಕನಸು ನೆನಸಾಗಲು ಯಾವ ವಿಷಯ ಸೂಕ್ತವೋ ಅದರಲ್ಲಿ ಮುಂದಿನ ವಿದ್ಯಾಭ್ಯಾಸ ಮುಂದುವರೆಸುತ್ತೇವೆ.

ವಿದ್ಯಾಭ್ಯಾಸ ಮುಗಿಯುತ್ತಾ ಬಂದಂತೆ ಕೆಲಸಕ್ಕೆ ಸೇರಲು ಏನೆಲ್ಲಾ ಸಿದ್ಧತೆ ಮಾಡಬೇಕೊ ಅದರತ್ತ ಗಮನ ಹರಿಸಲು ಪ್ರಾರಂಭಿಸುತ್ತೇವೆ. ಆದರೆ ಎಷ್ಟೋ ಜನರಿಗೆ ಬಯಸಿದ ಉದ್ಯೋಗ ಸಿಗುವುದಿಲ್ಲ, ಕೊನೆಗೆ ಯಾವುದಾದರೂ ಒಂದು ಕೆಲಸ ಸಿಕ್ಕಿದರೆ ಸಾಕಪ್ಪ ಎಂದು ಅನಿಸಿಬಿಡುತ್ತದೆ. ಕೊನೆಗೂ ಒಂದು ಕೆಲಸಕ್ಕೆ ಕರೆ ಬಂದು, ಅದರ ಸಂದರ್ಶನದಲ್ಲಿ ಆಯ್ಕೆ ಆಗಿ ಸಂಬಳದ ಬಗ್ಗೆ ಮಾತುಕತೆ ನಡೆಯುವಾಗ ಬಯಸಿದಂತಹ ಸಂಬಳ ಸಿಕ್ಕರೆ ಖುಷಿ ಪಡುತ್ತೇವೆ, ಆದರೆ ನಾವು ನಿರೀಕ್ಷಿಸಿದ ಸಂಬಳ ತುಂಬಾ ಜನರಿಗೆ ಸಿಗುವುದಿಲ್ಲ, ಇದರಿಂದ ತೀವ್ರ ನಿರಾಸೆಗೆ ಒಳಗಾಗುತ್ತೇವೆ. ಅಲ್ಲದೆ ನನ್ನ ಫ್ರೆಂಡ್ಸ್ ರಿಗೆ ತುಂಬಾ ಸಂಬಳವಿರುವ ಕೆಲಸ ಸಿಕ್ಕಿದೆ, ನನಗೆ ಮಾತ್ರ ಸಿಗಲಿಲ್ಲ ಎಂಬ ನಿರಾಸೆಯಲ್ಲಿ ಕೆಲಸದ ಮೇಲಿರುವ ಉತ್ಸಾಹವನ್ನು ಕಳೆದುಕೊಂಡು ಬಿಡುತ್ತೇವೆ.

ಜೀವನದಲ್ಲಿ ಒಳ್ಳೆಯ ಸಂಬಳಬೇಕು, ಉನ್ನತ ಸ್ಥಾನಕ್ಕೇರಬೇಕು ಎಂದು ಬಯಸುವುದಾದರೆ ಈ ಕೆಳಗಿನ ಸಲಹೆಗಳನ್ನು ಅನುಸರಿಸುವುದು ಒಳ್ಳೆಯದು.

1. ಕೆಲಸಕ್ಕೆ ಸೇರುವಾಗ ಹೆಚ್ಚಿನ ಕಂಪನಿಗಳಿಗೆ 'ಫ್ರೆಶರ್' ಎಂಬ ಪದ ಕೇಳಿದರನೆ ಅಲರ್ಜಿ. ಕೆಲಸದಲ್ಲಿ ಕಡಿಮೆ ಅಂದರೂ ಒಂದು ವರ್ಷದ ಅನುಭವ ಬೇಕೆಂದು ಕೇಳುತ್ತಾರೆ. ಅಂತಹ ಪರಿಸ್ಥಿತಿ ಇರುವಾಗ ಸೇರವಾಗಲೇ ಉತ್ತಮವಾದ ಸಂಬಳಬೇಕೆಂದು ಬಯಸುತ್ತಾ ಕೂರುವುದು ಸರಿಯಲ್ಲ. ಮೊದಲು ಕೆಲಸ ಪಡೆದುಕೊಂಡು ನಂತರ ಅದರಲ್ಲಿ ಪರಿಣಿತಿಯನ್ನು ಪಡೆದರೆ ಮುಂದೆ ಉತ್ತಮ ಸಂಬಳವನ್ನು ಪಡೆಯುವುದು ಕಷ್ಟದ ಕೆಲಸವಲ್ಲ.

2. ಸಂಬಳದ ಬಗ್ಗೆ ಎಚ್ ಆರ್ (HR) ಜೊತೆ ಮಾತುಕತೆ ನಡೆಸುವಾಗ ಮೊದಲೇ ಇಷ್ಟು ಬೇಕೆಂದು ಕೇಳಬಾರದು. ಕಂಪನಿ ಎಷ್ಟು ಕೊಡಬಹುದೆಂದು ತಿಳಿದು, ನಂತರ ನಿಮಗೆ ಎಷ್ಟು ಬೇಕೆಂದು ಹೇಳಬೇಕು. ನಂತರ ಸಂಬಳದ ವಿಷಯದಲ್ಲಿ ಎಚ್ ಆರ್ ನಿಮ್ಮ ಜೊತೆ ಮಾತುಕತೆ ನಡೆಸಬಹುದು. ನಂತರ ಇಷ್ಟು ಕೊಡುತ್ತೇವೆ ಎಂದು ಕಂಪನಿ ಹೇಳುತ್ತದೆ. ಆ ಸಂಬಳ ನಿಮಗೆ ಒಪ್ಪಿಗೆಯಾದರೆ ಸೇರಬೇಕು.

3. ಆದರೆ ಈ ರೀತಿ ನಿಮ್ಮ ಒಪ್ಪಿಗೆ ತಿಳಿಸುವ ಮೊದಲು ಕಂಪನಿ ನಿಮ್ಮಿಂದ ಏನು ಬಯಸುತ್ತಿದೆ, ನಿಮ್ಮ ಕೆಲಸದ ಗುಣ ಲಕ್ಷಣ ಇವುಗಳ ಬಗ್ಗೆ ಕೇಳಿ ತಿಳಿದುಕೊಳ್ಳಬೇಕು.

4. ನಿಮ್ಮಲ್ಲಿರುವ ಕೆಲಸದ ಕೌಶಲ್ಯ ಮತ್ತು ಕೆಲಸ ಸಾಮರ್ಥ್ಯದ ಬಗ್ಗೆ ಪೂರ್ಣ ವಿವರವನ್ನು ಕಂಪನಿ ಅಧಿಕಾರಿಗಳಿಗೆ ಹೇಳಬೇಕು. ನಂತರ ನೀವು ಬೇಡಿಕೆಯಿಟ್ಟ ಸಂಬಳಕ್ಕೆ ಸೂಕ್ತವಾದಂತಹ ವ್ಯಕ್ತಿಯೆಂಬುವುದನ್ನು ಅವರಿಗೆ ಮನವರಿಕೆ ಮಾಡಿದರೆ ಅವರೂ ಕೂಡ ಒಳ್ಳೆಯ ಸಂಬಳ ಕೊಡಲು ರೆಡಿಯಿರುತ್ತಾರೆ.

ಮೊದಲು ಕೆಲಸವನ್ನು ಕಲೆತು ಅದರಲ್ಲಿ ಅದರಲ್ಲಿ ಪರಿಣಿತರಾದರೆ ನೀವು ಬಯಸಿದಂತಹ ಸಂಬಳ ಪಡೆಯಬಹುದು.

English summary

Best Tricks o The Best Salary | Work And Lifestyle | ಉತ್ತಮ ಸಂಬಳಕ್ಕಾಗಿ ಒಳ್ಳೆಯ ಉಪಾಯ | ಕೆಲಸ ಮತ್ತು ಜೀವನ ಶೈಲಿ

Being in a job interview is a stressful affair. But, if you play by the rules, you may succeed. The most important part of a job interview comes when you negotiate the salary.
Story first published: Tuesday, June 19, 2012, 15:07 [IST]
X
Desktop Bottom Promotion