For Quick Alerts
ALLOW NOTIFICATIONS  
For Daily Alerts

ನೀರೆಯರ ಮನಗೆಲ್ಲುವ ಬೆಂಗಾಲಿ ಸೀರೆಗಳು

|

ಸೀರೆ ಭಾರತೀಯ ಹೆಣ್ಣು ಮಕ್ಕಳ ಮೆಚ್ಚಿನ ಉಡುಗೆಯಾಗಿದೆ. ರಾಜ್ಯದಿಂದ-ರಾಜ್ಯಕ್ಕೆ ಇದನ್ನು ಉಡುವ ಶೈಲಿಯಲ್ಲಿ ಭಿನ್ನತೆ ಇದ್ದರೂ ಸೀರೆ ಭಾರತೀಯ ಹೆಣ್ಣು ಮಕ್ಕಳ ಮೆಚ್ಚಿನ ಸಾಂಪ್ರದಾಯಕ ಉಡುಗೆಯಾಗಿ ಸೀರೆಯನ್ನು ಧರಿಸುತ್ತಾರೆ. ಸ್ಯಾರಿಯಲ್ಲಿ ಅನೇಕ ಬಗೆ ಇದ್ದು ಒಂದೊಂದು ಕಡೆ ಒಂದೊಂದು ಬಗೆಯ ಸೀರೆ ಹೆಚ್ಚು ಪ್ರಾಮುಖ್ಯತೆಯನ್ನು ಪಡೆದಿರುತ್ತದೆ.

ಅದರಲ್ಲೂ ಕರ್ನಾಟಕದಲ್ಲಿ ಮೈಸೂರು ಸಿಲ್ಕ್ ಸೀರೆ, ಕೇರಳದಲ್ಲಿ ಬಿಳಿ ಹಾಗೂ ಚಿನ್ನದ ಬಣ್ಣದ ಬಾರ್ಡರ್ ನ ಕೇರಳ ಸೀರೆ, ತಮಿಳು ನಾಡಿನಲ್ಲಿ ಕಾಂಚಿ ಪುರಂ ಸೀರೆ, ಬೆಂಗಾಲಿಯಲ್ಲಿ ತಾಂತ್, ಜಾಮ್ ದಾನಿ ಈ ರೀತಿಯ ಸೀರೆಗಳ ತುಂಬಾ ಜನಪ್ರಿಯೆತೆಯನ್ನು ಪಡೆದಿದೆ.

ಈ ಲೇಖನದಲ್ಲಿ ಬೆಂಗಾಲಿ ಸೀರೆಯೆಂದು ಗುರುತಿಸಿಕೊಂಡ ಕೆಲವೊ ಸೀರೆಗಳ ಬಗ್ಗೆ, ಅವುಗಳ ಗುಣ ಲಕ್ಷಣಗಳ ಬಗ್ಗೆ ಹೇಳಲಾಗಿದೆ ನೋಡಿ:

ತಾಂತ್ ಸೀರೆ:

ತಾಂತ್ ಸೀರೆ:

ಈ ಬಗೆಯ ಸೀರೆಗಳನ್ನು ಹಬ್ಬದ ಸಮಯದಲ್ಲಿ ಹೆಚ್ಚಾಗಿ ಧರಿಸುತ್ತಾರೆ. ಈ ಸೀರೆ ಕೆಂಪು ಬಾರ್ಡರ್ ನಲ್ಲಿದ್ದು ಹೆಂಗಳೆಯರ ಮನ ಸೆಳೆಯುವ ವಿನ್ಯಾಸದಿಂದ ಕೂಡಿರುತ್ತದೆ. ಈ ಬಗೆಯ ಸೀರೆಗಳನ್ನು ಧರಿಸಿದಾಗ ಕಂಫರ್ಟ್ ಅನಿಸುವುದರ ಜೊತೆಗೆ ಆಕರ್ಷಕವಾಗಿಯೂ ಕಾಣುವಿರಿ.

ಪ್ಯೂರ್ ಸಿಲ್ಕ್:

ಪ್ಯೂರ್ ಸಿಲ್ಕ್:

ಸಿಲ್ಕ್ ಅಂದರೆ ರೇಷ್ಮೆ ಸೀರೆಯೂ ಬೆಂಗಾಲಿಯರ ಸಾಂಪ್ರದಾಯಕವಾದ ಉಡುಗೆಯಾಗಿದೆ. ಈ ಸಿಲ್ಕ್ ಸೀರೆಯಲ್ಲಿ ಕೊರಿಯಲ್, ಗರದ್, ಮಸ್ಲೀನ್, ಮೂಗಾ, ಬಲುಂಚರಿ ಈ ಬಗೆಯ ಸೀರೆಗಳೂ ಹೆಚ್ಚು ಪ್ರಸಿದ್ಧಿಯನ್ನು ಗಳಿಸಿವೆ. ರೇಷ್ಮೆ ಸೀರೆಯಲ್ಲಿ ಜಾರದೋಸಿ ಕೆಲಸ, ಪಾಶಮಿನಾ, ನಾರೋಶಿ ವಿನ್ಯಾಸವೂ ಈ ಸೀರೆಗಳು ಹೆಚ್ಚು ಸೊಬಗಿನಿಂದ ಕಾಣುತ್ತದೆ.

ಜಾಂದಾನಿ:

ಜಾಂದಾನಿ:

ಇದನ್ನು ಪರಿಶುದ್ಧವಾದ ಮಸ್ಲೀನ್ ನೂಲಿನಿಂದ ಮಾಡಲಾಗಿರುತ್ತದೆ. ಇದನ್ನು ಕೈಯಿಂದ ತಯಾರಿಸಲಾಗುವುದು. ಈ ಸೀರೆಯನ್ನು ಮಾಡಲು ಒಂದು ವರ್ಷ ತೆಗೆದುಕೊಳ್ಳುತ್ತದೆ. ಇದರಲ್ಲಿ ಬಿಳಿ ಹಾಗೂ ಗ್ರೇ ಮಿಶ್ರಿತ ಬಣ್ಣ ಹಾಗೋ ಕೆಂಪು ಹಾಗೂ ಚಿನ್ನದ ಬಣ್ಣ ಮಿಶ್ರಿತ ಸೀರೆ ಹೆಚ್ಚಿನ ಜನಪ್ರಿಯತೆಯನ್ನು ಪಡೆದಿದೆ.

ಕಾಂತ ಸ್ಟಿಚ್:

ಕಾಂತ ಸ್ಟಿಚ್:

ಇದು ಸಾಮಾನ್ಯ ಸೀರೆಯಾಗಿದ್ದು ಹಳ್ಳಿ ಪ್ರದೇಶದ ಮಹಿಳೆಯರು ದಿನನಿತ್ಯ ಉಡುಗೆಗೆ ಇದನ್ನು ಬಳಸುತ್ತಾರೆ. ಈ ಸೀರೆಯಲ್ಲಿ ಅತ್ಯಾಧುನಿಕ ವಿನ್ಯಾಸಗಳು ಬಂದಿದ್ದು ಫಂಕ್ಷನ್ ಗಳೀಗೆ ಕೂಡ ಹೋಗಬಹುದಾಗಿದೆ.

ಕಾಟನ್ ಸೀರೆ:

ಕಾಟನ್ ಸೀರೆ:

ಇಲ್ಲಿ ಕಾಟನ್ ಸೀರೆಗಳು ಕೂಡ ಜನಪ್ರಿಯತೆಯನ್ನು ಗಳಿಸಿದೆ. ಇಲ್ಲಿ ಸೆಕೆ ಜಾಸ್ತಿ ಇರುವುದರಿಂದ ಈ ಬಗೆಯ ಸೀರೆಯನ್ನು ಧರಿಸಿದಾಗ ತುಂಬಾ ಕಂಫರ್ಟ್ ಅನಿಸುತ್ತದೆ.

English summary

5 Famous Bengali Sarees To Try | Fashion And Lifestyle | ಜನಪ್ರಿಯತೆ ಗಳಿಸಿದ 5 ಬೆಂಗಾಳಿ ಸೀರೆ | ಫ್ಯಾಷನ್ ಮತ್ತು ಜೀವನ ಶೈಲಿ

Saree depicts the beauty of a woman. Women prefer wearing salwar kameez and sarees the most. Apart from Karnataka's traditional saree you want to try some other variety saree you can try this bengal saree.
X
Desktop Bottom Promotion