For Quick Alerts
ALLOW NOTIFICATIONS  
For Daily Alerts

Women's Day Special: ಬೆಂಗಳೂರಿನಲ್ಲಿ ಬಸ್‌ ಸ್ಟೇರಿಂಗ್ ಹಿಡಿದ ಮೊದಲ ಮಹಿಳೆ ಪ್ರೇಮಾ ರಾಮಪ್ಪ

|

ಮಹಿಳೆ ಎಂಬುವುದು ಒಂದು ಶಕ್ತಿಯ ರೂಪ, ಅವಳಲ್ಲಿರುವ ಶಕ್ತಿ ಎಂಥದ್ದು ಅನೇಕ ಬಾರಿ ಅವಳಿಗೇ ಗೊತ್ತಿರಲ್ಲ. ಕೆಲವೊಂದು ಕೆಲಸವನ್ನು ಬರೀ ಪುರುಷರಿಗಷ್ಟೇ ಮಾಡಲು ಸಾಧ್ಯ ಎಂದು ಸಮಾಜ ನಂಬಿದ್ದ ಕಾಲವೊಂದಿತ್ತು. ಆದರೆ ಮಹಿಳೆ ಪುರುಷರಷ್ಟೇ ಸಮರ್ಥಳು ಎಂಬುವುದನ್ನು ಮಹಿಳೆಯರು ಸಾಧಿಸಿ ತೋರಿಸಿದ್ದಾರೆ. ಅಂಥ ಸಾಧನೆ ಮಾಡಿದ ಮಹಿಳೆಯ ಪರಿಚಯ ನಿಮಗಾಗಿ.

ಒಂದು ಕಾಲದಲ್ಲಿ ಬಸ್‌ ಓಡಿಸಲು ಪುರುಷರಿಂದ ಮಾತ್ರ ಸಾಧ್ಯ ಎಂದೇ ಎಂದೇ ಎಲ್ಲರು ಭಾವಿಸಿದ್ದರು. ಆದರೆ ಅಂಥವರಿಗೆ ಹೆಣ್ಣಿಂದಲೂ ಸಾಧ್ಯ ಎಂದು ಉತ್ತರ ನೀಡಿದ್ದು ಪ್ರೇಮಾ ರಾಮಪ್ಪ. ಬೆಂಗಳೂರಿನಲ್ಲಿ ಬಸ್‌ ಸ್ಟೇರಿಂಗ್‌ ಕೈಯಲ್ಲಿ ಹಿಡಿದ ದಿಟ್ಟ ಮಹಿಳೆ. ಬೆಂಗಳೂರು ನಗರದಲ್ಲಿ ಬಸ್‌ನಲ್ಲಿ ಓಡಾಡುತ್ತಿರುವವರು ಬಹುಶಃ ಇವರನ್ನು ನೋಡಿರಬಹುದು.

ಬೆಂಗಳೂರಿನಲ್ಲಿ ಬಸ್‌ ಓಡಿಸುವುದು ಎಂದರೆ ಸಾಮಾನ್ಯ ಕಾರ್ಯವಲ್ಲ, ಆ ಸಂಚಾರ ದಟ್ಟಣೆ ನಡುವೆ ಬಸ್‌ ಅನ್ನು ಚಾಕಚಕ್ಯತೆಯಿಂದ ಓಡಿಸುವ ಪ್ರಾವೀಣ್ಯತೆ ಇರಬೇಕು. ಇಲ್ಲಿ ಬಸ್‌ ಓಡಿಸಲು ಪುರುಷರೇ ಹೆದರುತ್ತಾರೆ, ಅಂಥದ್ದರಲ್ಲಿ ಯಾವ ಶಿಫ್ಟ್‌ ಆಗಲಿ ಇಂದಿಷ್ಟೂ ಬೇಸರಿಸದೇ ತನ್ನ ಕರ್ತವ್ಯ ಮುಗಿಸಿ ಬರುತ್ತಾಳೆ ಈ ಹೆಣ್ಣು ಮಗಳು.

ಮೊದಲ ಮಹಿಳಾ ಡ್ರೈವರ್

ಮೊದಲ ಮಹಿಳಾ ಡ್ರೈವರ್

ಪ್ರೇಮಾ ರಾಮಪ್ಪ ಮೂಲತಃ ಬೆಳಗಾವಿಯವರು. ನರ್ಸ್‌ ಆಗಿದ್ದ ಅವರು ಆ ವೃತ್ತಿ ಬಿಡುತ್ತಾರೆ. ಗಂಡ-ಪುಟ್ಟ ಮಗು ಎಂದು ಅವರನ್ನು ನೋಡಿಕೊಳ್ಳುತ್ತಾ ತಮ್ಮ ಪಾಡಿಗೆ ತಾವಿರುತ್ತಾರೆ. ಆದರೆ ಗಂಡನ ಅಕಾಲಿಕ ಸಾವು ಅವರ ಜೀವನದಲ್ಲಿ ಬರ ಸಿಡಿಲು ಬಡಿದಂತಾಗುತ್ತದೆ.

ವಯಸ್ಸಾದ ತಾಯಿ, ಪುಟ್ಟ ವರ್ಷ ಮಗ , ತನ್ನವರೂ ಅಂತ ಸಹಾಯಕ್ಕೆ ಬರಲು ಯಾರೂ ಇಲ್ಲ ಮುಂದೇನು ಎಂದು ದಿಕ್ಕು ತೋಚದಿದ್ದಾಗ ಗಟ್ಟಿ ಮನಸ್ಸು ಮಾಡಿ ಬೆಂಗಳೂರಿನ ಮೆಟ್ರೋ ಟ್ರಾನ್ಸ್‌ಪೋರ್ಟ್‌ ಕಾರ್ಪೋರೇಷನನ್‌ಗೆ ಅಪ್ಲೈ ಮಾಡುತ್ತಾರೆ. ಅವರ ಜತೆ ಇತರ ಮಹಿಳೆಯರೂ ಆಯ್ಕೆ ಆಗಿರುತ್ತಾರೆ.

ಅವರೆಲ್ಲಾ ಕಂಡೆಕ್ಟರ್ ಆದರೆ ತಾವು ಲಾರಿ ಓಡಿಸುವುದು ಕಲಿತು ಹೆವಿ ವೆಹಿಕಲ್‌ ಡ್ರೈವಿಂಗ್‌ ಲೈಸೆನ್ಸ್ ಪಡೆದು ಬಿಎಮ್‌ಟಿಸಿಗೆ ಅಪ್ಲೈ ಮಾಡುತ್ತಾರೆ. 1990ರಿಂದ ಸಾರಿಗೆ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಪುರುಷರಿಗಿಂತ ವೇಗವಾಗಿ ಟ್ರೈನಿಂಗ್ ಮುಗಿಸಿದ್ದ ಜಾಣೆ

ಪುರುಷರಿಗಿಂತ ವೇಗವಾಗಿ ಟ್ರೈನಿಂಗ್ ಮುಗಿಸಿದ್ದ ಜಾಣೆ

ಪುರುಷರು ಒಂದು ತಿಂಗಳು ಟ್ರೈನಿಂಗ್ ಪಡೆದರೆ ಇವರು ಮಾತ್ರ ಎಂಟೇ ದಿನದಲ್ಲಿ ಟ್ರೈನಿಂಗ್‌ ಮುಗಿಸಿದ್ದಾರೆ. ಇವರ ಕೌಶಲ್ಯಕ್ಕೆ ಸಾರಿಗೆ ರತ್ನಾ ಪ್ರಶಸ್ತಿಯೂ ಲಭಿಸಿದೆ. ಇವರಿಗೆ 2016ರಲ್ಲಿ ಭಾರತಭೂಷಣ ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ.

ಕಡು ಬಡತನದಲ್ಲಿ ಬೆಳೆದ ಪ್ರತಿಭೆ

ಕಡು ಬಡತನದಲ್ಲಿ ಬೆಳೆದ ಪ್ರತಿಭೆ

ಕಡು ಬಡತನದಲ್ಲಿ ಬೆಳೆದ ಪ್ರೇಮಾ ಅವರು ಜನಿಸಿದ್ದು ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಬೈರನಟ್ಟಿ ಗ್ರಾಮದಲ್ಲಿ. ಚಿಕ್ಕದಲ್ಲಿ ಬೈಸಿಕಲ್ ಮತ್ತು ಬೈಕ್‌ ಓಡಿಸುವ ಕ್ರೇಝ್ ಅವರಲ್ಲಿತ್ತು. ಕಾಲೇಜಿನಲ್ಲಿದ್ದಾಗಲೇ ಅವರಿಗೆ ಹೆವಿ ಲೈಸೆನ್ಸ್ ದೊರೆತಿತ್ತು. ಕಿತ್ತೂರು ನಾಡಿನಿಂದ ಬಂದ ಈ ಹೆಣ್ಣಮಗಳಲ್ಲಿ ಕಿತ್ತೂರು ಚೆನ್ನಮ್ಮನ ಧೈರ್ಯವೂ ಇದೆ.

 ಹಗಲಾಗಲಿ, ರಾತ್ರಿಯಾಗಲಿ ನಿರ್ಭಯದಿಂದ ಬಸ್‌ ಓಡಿಸುತ್ತಾರೆ

ಹಗಲಾಗಲಿ, ರಾತ್ರಿಯಾಗಲಿ ನಿರ್ಭಯದಿಂದ ಬಸ್‌ ಓಡಿಸುತ್ತಾರೆ

ಇವರು ಯಾವುದೇ ಶಿಫ್ಟ್‌ನಲ್ಲಿ ಕಾರ್ಯ ನಿರ್ವಹಿಸಲು ಹಿಂದೆ-ಮುಂದೆ ನೋಡಲ್ಲ. ಬೆಳಗ್ಗಿನ ಶಿಫ್ಟ್‌ ಆದರೆ ಮುಂಜಾನೆ ಮನೆ ಬಿಡಬೇಕು, ಅದೇ ಮಧ್ಯಾಹ್ನದ ಶಿಫ್ಟ್ ಆದರೆ ಮನೆ ಸೇರುವಾಗ ರಾತ್ರಿಯಾಗಿರುತ್ತೆ. ಆದರೆ ಬದುಕಿನಲ್ಲಿ ಎದುರಾಗುವ ಸವಾಲುಗಳನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ.

 ಮುಷ್ಕರದ ನಡುವೆ ಕರ್ತವ್ಯ ಪ್ರಜ್ಞೆ ಮೆರೆದ ಪ್ರೇಮಾ ಅವರ ಕಾರ್ಯಕ್ಕೆ ಮೆಚ್ಚುಗೆ

ಮುಷ್ಕರದ ನಡುವೆ ಕರ್ತವ್ಯ ಪ್ರಜ್ಞೆ ಮೆರೆದ ಪ್ರೇಮಾ ಅವರ ಕಾರ್ಯಕ್ಕೆ ಮೆಚ್ಚುಗೆ

ಬಿಎಂಟಿಸಿ ನೌಕರರ ಮುಷ್ಕರ ಇರುವಾಗ 24 ಗಂಟೆ ಕಾರ್ಯ ನಿರ್ವಹಿಸಿದ ಪ್ರೇಮಾ ಅವರ ಕಾರ್ಯಕ್ಕೆ ಮಚ್ಚುಗೆ ಗಳಿಸಿದ್ದರು. ಒಂದು ದಿನ ಬಸ್‌ ನೌಕರರ ಮುಷ್ಕರ ಇದ್ದಾಗ ಜನ ಸಾಮಾನ್ಯರಿಗೆ ಎಷ್ಟರ ಮಟ್ಟಿಗೆ ತೊಂದರೆ ಉಂಟಾಗುತ್ತದೆ ಎಂಬುವುದು ಎಲ್ಲರಿಗೆ ಗೊತ್ತು. ಅಲ್ಲದೆ ಮುಷ್ಕರ ಸಮಯದಲ್ಲಿ ಬಸ್‌ ತೆಗೆಯುವ ಧೈರ್ಯವನ್ನು ಕುಡ ಯಾರೂ ಮಾಡುವುದಿಲ್ಲ. ಪ್ರೇಮಾ ಅವರು ಆ ಮುಷ್ಕರದ ಸಮಯದಲ್ಲಿ ಡ್ರೈವರ್ ಕಂ ಕಂಡೆಕ್ಟರ್ ಆಗಿ ಕಾರ್ಯ ನಿರ್ವಹಿಸಿದ್ದಕ್ಕೆ ಅವರ ಕಾರ್ಯವನ್ನು ಮೆಚ್ಚಿ ಸಾರಿಗೆ ಇಲಾಖೆ 10,000 ಬಹುಮಾನವನ್ನು ನೀಡಿತ್ತು.

ಸಾರಿಗೆ ಸಂಸ್ಥೆ ನೀಡಿದ ಜಾಹೀರಾತಿನಲ್ಲಿ ಇವರದ್ದೇ ಫೋಟೋ

ಸಾರಿಗೆ ಸಂಸ್ಥೆ ನೀಡಿದ ಜಾಹೀರಾತಿನಲ್ಲಿ ಇವರದ್ದೇ ಫೋಟೋ

ಸಾರಿಗೆ ಸಂಸ್ಥೆ ನೀುವ ಜಾಹೀರಾತಿನಲ್ಲಿ ಇವರ ಫೋಟೋ ನೋಡಬಹುದು. ಎಷ್ಟೋ ಜನರಿಗೆ ಈ ಮೂಲಕ ವೃತ್ತಿ ಬದುಕು ಕಟ್ಟಿಕೊಳ್ಳುವಲ್ಲಿ ಸ್ಪೂರ್ತಿಯಾಗಿದ್ದಾರೆ. ಹೆಣ್ಣಕ್ಕಳು ಈಗ ಎಷ್ಟೋ ಜನರು ಸಾರಿಗೆ ಸಂಸ್ಥೆಯಲ್ಲಿದ್ದಾರೆ. ಆದರೆ ಪ್ರೇಮಾ ರಾಮಪ್ಪ ತೆಗೆದ ಆ ದಿಟ್ಟ ನಿರ್ಧಾರವೇ ಅನೇಕ ಮಹಿಳೆಯರು ಆ ನಿಟ್ಟಿನಲ್ಲಿ ಸಾಗಲು ಪ್ರೇರಣೆಯಾಗಿದೆ ಎಂದರೆ ತಪ್ಪಲ್ಲ.

ಇತರ ಮಹಿಳೆಯರಿಗೂ ಮಾದರಿಯಾದ ಪ್ರೇಮಾ ರಾಮಪ್ಪ

ಇತರ ಮಹಿಳೆಯರಿಗೂ ಮಾದರಿಯಾದ ಪ್ರೇಮಾ ರಾಮಪ್ಪ

ನಮ್ಮಿಂದ ಏನೂ ಸಾಧ್ಯವಿಲ್ಲ ಎಂದು ಕೊರಗುವ ಎಷ್ಟೋ ಜನರಿದ್ದಾರೆ. ಅಂಥವರಿಗೆ ಇಲ್ಲ ನೀವು ಮನಸ್ಸು ಮಾಡಿದರೆ ಅಸಾಧ್ಯ ಏನೂ ಇಲ್ಲ ಎಂಬುವುದಕ್ಕೆ ಉದಾಹರಣೆ ಪ್ರೇಮಾ ರಾಮಪ್ಪ. ಸಿಂಗಲ್‌ ಪೇರೆಂಟ್‌ ಆಗಿ ಮಕ್ಕಳನ್ನು ಸಾಕುವುದು ಸುಲಭವಲ್ಲ. ಯಾರ ಸಹಾಯವೂ ಇಲ್ಲದೆ ಮನಸ್ಸನ್ನು ಗಟ್ಟಿ ಮಾಡಿ ತನ್ನ ಮಗನಿಗಾಗಿ ಬದುಕನ್ನು ಕಟ್ಟಿಕೊಂಡ ಗಟ್ಟಿಗಿತ್ತಿ ಈ ಪ್ರೇಮಾ. ಇವರ ಬದುಕು ಹಲವರಿಗೆ ಸ್ಪೂರ್ತಿ. ಮಗ ಈಗ ಕಾಲೇಜು ತಲುಪಿದ್ದಾನೆ. ಬೆಂಗಳೂರಿನಲ್ಲಿ ಮಗನೊಂದಿಗೆ ಜೀವನ ಸಾಗಿಸುತ್ತಿರುವ ಪ್ರೇಮಾ ತಾಯಿಯಾಗಿಯೂ ಸೈ, ಮಹಿಳಾ ಡ್ರೈವರ್ ಆಗಿಯೂ ಸೈ ಅನಿಸಿಕೊಂಡಿದ್ದಾರೆ.

English summary

women's day Special: Inspiring Story Of Prema Ramappa, The First Woman driver Of BMTC

Inspired Story Of Prema Ramappa, The First Woman driver Of BMTC read on...
X
Desktop Bottom Promotion