For Quick Alerts
ALLOW NOTIFICATIONS  
For Daily Alerts

ಭಗವಾನ್ ಹನುಮಂತನಿಗೆ ಕುಂಕುಮವೆಂದರೆ ತುಂಬಾನೇ ಪ್ರೀತಿಯಂತೆ...

|

ಸಕಲ ದೇವ ದೇವತೆಗಳ ಪೈಕಿ ಭಗವಾನ್ ಹನುಮ೦ತನು ಚಿರ೦ಜೀವಿಯು. ಹನುಮನೆ೦ದರೆ ಆತನು ವಾನರ ಹಾಗೂ ಮಾನವ ಇವರೀರ್ವರ ಮಿಶ್ರ ಸ್ವರೂಪನು. ಯಾವುದೇ ಓರ್ವ ಬಡ ವ್ಯಕ್ತಿಯು ಭಗವಾನ್ ಹನುಮನನ್ನು ಆರಾಧಿಸಿದ್ದೇ ಆದಲ್ಲಿ, ಆತನು ಶ್ರೀಮ೦ತನಾಗುವನು ಹಾಗೂ ಸಿರಿವ೦ತನಾದ ಓರ್ವ ವ್ಯಕ್ತಿಯು ಆತನನ್ನು ಪೂಜಿಸಿದರೆ ಆತನೆ೦ದಿಗೂ ದಾರಿದ್ರ್ಯವನ್ನು ಹೊ೦ದಲಾರನು. ಹನುಮಾನ್ ಪದದ ಒ೦ದು ಅರ್ಥವೇನೆ೦ದರೆ "ಯಾವುದೇ ಅಹ೦ಭಾವವಿಲ್ಲದಿರುವುದು".

"ಹನು" ಎ೦ದರೆ ಕೊಲ್ಲುವುದು ಹಾಗೂ "ಮಾನ್" ಎ೦ದರೆ ಅಹ೦ಕಾರ ಎ೦ದರ್ಥವಾಗಿದೆ. ಆದ್ದರಿ೦ದ ಅಹ೦ಕಾರವನ್ನು ಕೊ೦ದುಕೊ೦ಡಿರುವ ವ್ಯಕ್ತಿಯೇ ಹನುಮಾನ್ ಎ೦ದು ಗುರುತಿಸಲ್ಪಡುತ್ತಾನೆ. ಸ್ವತಃ ಭಕ್ತನಾದ ಹನುಮಾನ್ ದೇವರನ್ನು, ಶಿವನ ಅವತಾರವೆಂದು ನಂಬಲಾಗಿದೆ. ಅವನು ಕೂಡ ಶಿವನನ್ನು ಕೂಡ ಮುಗ್ಧ ಹೃದಯದ ದೇವರು ಎಂದು ಪರಿಗಣಿಸಲಾಗುತ್ತದೆ. ಆದರೆ, ಶಿವನಿಗೆ ಯಾವತ್ತೂ ಅರ್ಪಿಸಲ್ಪಡದ ಕುಂಕುಮವನ್ನು ಹನುಮನಿಗೆ ಏಕೆ ಸಲ್ಲಿಸಲಾಗುತ್ತದೆ ಎಂಬುದು ಆಶ್ಚರ್ಯಕರವಾದ ವಿಷಯವಾಗಿದ್ದರೂ ಇದುವೇ ಸತ್ಯವಾಗಿದೆ.

ಹನುಮಂತನ ದೇವಸ್ಥಾನಗಳಲ್ಲಿ ಕುಂಕುಮದಿಂದ ಅಲಂಕಾರಗೊಂಡ ಹಮನುಂತನನ್ನು ನೀವು ನೋಡಿರುತ್ತೀರಿ. ಆದರೆ ಈ ರೀತಿ ಕುಂಕುಲವನ್ನು ದೇವರಿಗೆ ಏಕೆ ಅರ್ಪಿಸಲಾಗುತ್ತದೆ ಎಂಬುದರ ಕುರಿತು ಕುತೂಹಲಕಾರಿಯಾದ ವಿಷಯವೊಂದಿದೆ. ಬನ್ನಿ ಆ ವಿಷಯವೇನು ಎಂಬುದನ್ನು ಇಂದಿಲ್ಲಿ ಅರಿತುಕೊಳ್ಳೋಣ...

ತನ್ನ ಸಂಪೂರ್ಣ ದೇಹಕ್ಕೆ ಹನುಮಂತನು ಕುಂಕುಮವನ್ನು ಹೇಗೆ ಹಚ್ಚಿಕೊಂಡರು

ತನ್ನ ಸಂಪೂರ್ಣ ದೇಹಕ್ಕೆ ಹನುಮಂತನು ಕುಂಕುಮವನ್ನು ಹೇಗೆ ಹಚ್ಚಿಕೊಂಡರು

ಸೀತಾ ಮಾತೆಯು ತನ್ನ ಬೈತಲೆಗೆ ಸಿಂಧೂರವನ್ನು ಹಚ್ಚಿಕೊಳ್ಳುತ್ತಿದ್ದ ಸಮಯದಲ್ಲಿ ಆಕೆಯ ಸಮೀಪ ಹನುಮಂತನು ಕುಳಿತುಕೊಂಡು ಆಕೆ ಮಾಡುತ್ತಿದ್ದುದನ್ನು ಗಮನಿಸುತ್ತಿದ್ದರು. ಈ ಬಗೆಯಾಗಿ ಹನುಮಂತನು ಸೀತಾ ಮಾತೆಯಲ್ಲಿ ತಾಯಿ ನೀವು ಸಿಂಧೂರವನ್ನು ಏಕೆ ಹಚ್ಚಿಕೊಳ್ಳುತ್ತಿದ್ದೀರಿ ಎಂದು ಕೇಳುತ್ತಾರೆ. ಆಕೆ, ಸಿಂಧೂರವವು ವಿವಾಹದ ಸಂಕೇತವಾಗಿದೆ. ಇದರ ಶಕ್ತಿಯು ಆಕೆಯ ಪತಿಯನ್ನು ಸಂರಕ್ಷಿಸುತ್ತದೆ. ಪತಿ ಪ್ರೇಮದ ಇನ್ನೊಂದು ರೂಪವೇ ಸಿಂಧೂರವನ್ನು

ಹಚ್ಚಿಕೊಳ್ಳುವುದಾಗಿದೆ. ಏಕೆಂದರೆ ಪತ್ನಿಗೆ ಪತಿಯೇ ಸರ್ವಸ್ವವಾಗಿರುತ್ತಾರೆ. ಆತನ ಬಗೆಗಿರುವ ಪ್ರೀತಿಯನ್ನು ಈ ಸಿಂಧೂರ ತೋರಿಸುತ್ತದೆ. ಸೀತಾ ಮಾತೆಯ ಮಾತುಗಳಿಂದ ಪ್ರೇರಣೆಗೊಂಡ ಹನುಮಂತನು ರಾಮನಿಗಾಗಿ ತಾನು ಕೂಡ ಸಿಂಧೂರ, ಕುಂಕುಮವನ್ನು ಹಚ್ಚಿಕೊಳ್ಳುತ್ತಾರೆಂದು ನಿರ್ಧರಿಸುತ್ತಾರೆ. ತನ್ನ ಹಣೆಗೆ ಮಾತ್ರವಲ್ಲದೆ ಸಂಪೂರ್ಣ ದೇಹಕ್ಕೆ ಅವರು ಕುಂಕುಮವನ್ನು ಹಚ್ಚಿಕೊಳ್ಳುತ್ತಾರೆ.

ತನ್ನ ಸಂಪೂರ್ಣ ದೇಹಕ್ಕೆ ಹನುಮಂತನು ಕುಂಕುಮವನ್ನು ಹೇಗೆ ಹಚ್ಚಿಕೊಂಡರು

ತನ್ನ ಸಂಪೂರ್ಣ ದೇಹಕ್ಕೆ ಹನುಮಂತನು ಕುಂಕುಮವನ್ನು ಹೇಗೆ ಹಚ್ಚಿಕೊಂಡರು

ಕುಂಕುಮವನ್ನು ದೇಹವೆಲ್ಲಾ ಏಕೆ ಹಚ್ಚಿಕೊಂಡಿರುವೆ ಎಂದು ಶ್ರೀರಾಮನು ಹನುಮಂತನಲ್ಲಿ ಕೇಳಿದಾಗ, ಅವರು ಸೀತಾ ಮಾತೆಯು ಸ್ವತಃ ದೇವತೆಯಾಗಿದ್ದಾರೆ. ಆಕೆ ಸಣ್ಣದಾಗಿ ಕುಂಕುಮವನ್ನು ಹಚ್ಚಿಕೊಂಡರೂ ಅದಕ್ಕೆ ಮಹತ್ವವಿದೆ ಆದರೆ ನಾನು ನಿಮ್ಮ ಮೇಲಿನ ನನ್ನ ಪ್ರೀತಿಯನ್ನು ಬೃಹತ್ತಾಗಿ ತೋರಿಸಬೇಕೆಂದಿರುವೆ. ಅದಕ್ಕಾಗಿ ಸಂಪೂರ್ಣ ದೇಹಕ್ಕೆ ಕುಂಕುಮವನ್ನು ಹಚ್ಚಿಕೊಂಡಿರುವೆ ಎಂದು ಹೇಳುತ್ತಾರೆ. ಹನುಮನ ಮುಗ್ಧ ಭಕ್ತಿಗೆ ಮೆಚ್ಚಿದ ಶ್ರೀರಾಮನು ಹನುಮನ ಪೂಜೆಯ ಸಮಯದಲ್ಲಿ ಕುಂಕುಮವನ್ನು ಅರ್ಪಿಸಿ ಪೂಜಿಸಬೇಕೆಂಬ ವರವನ್ನು ನೀಡುತ್ತಾರೆ. ಇದರಿಂದ ಕುಂಕುಮವನ್ನು ಹನುಮನಿಗೆ ಅರ್ಪಿಸಲಾಗುತ್ತದೆ.

ರಾಮ ನಾಮದ ಪ್ರೀತಿ

ರಾಮ ನಾಮದ ಪ್ರೀತಿ

ಹನುಮನಿಗೆ ಕುಂಕುಮವನ್ನು ಅರ್ಪಿಸುವುದರಿಂದ ನಿಮ್ಮ ಮನದ ಇಷ್ಟಕಾಮನೆಗಳು ಆಂಜನೇಯನು ಸಂಪೂರ್ಣಗೊಳಿಸುತ್ತಾರೆ. ಅವರಿಗೆ ಯಾವುದು ಹೆಚ್ಚು ಪ್ರೀತಿಯದು ಎಂದು ಕೇಳಿದಾಗ ಯಾವುದೇ ಆಹಾರಗಳ ಹೆಸರನ್ನು ಹೇಳದೆಯೇ ಹನುಮನು ರಾಮ ನಾಮ ಎಂದು ಹೇಳುತ್ತಾರೆ. ಇದರಿಂದಾಗಿಯೇ ಹನುಮನಿಗೆ ರಾಮನು ಎಷ್ಟು ಪ್ರಾಮುಖ್ಯರು ಎಂಬುದನ್ನು ನಾವು ಅರಿತುಕೊಳ್ಳಬಹುದಾಗಿದೆ. ಇನ್ನು ಕೆಲವೆಡೆಗಳಲ್ಲಿ ಮಹಿಳೆಯರು ಹನುಮಂತನ ಮೂರ್ತಿಯನ್ನು

ಸ್ಪರ್ಶಿಸಬಾರದು ಎಂದು ಹೇಳಲಾಗಿದೆ. ಅವರು ಬಾಲ ಬ್ರಹ್ಮಚಾರಿಯಾಗಿದ್ದಾರೆ. ಆದರೆ ಇನ್ನು ಕೆಲವು ಸಮುದಾಯಗಳಲ್ಲಿ ವಿವಾಹಿತ ಸ್ತ್ರೀಯರು ಹನುಮನ ಪೂಜೆಯನ್ನು ಮಾಡುತ್ತಾರೆ.

ಹನುಮಂತನನ್ನ ಯಾರು ಪೂಜಿಸಬೇಕು

ಹನುಮಂತನನ್ನ ಯಾರು ಪೂಜಿಸಬೇಕು

ಹನುಮಂತನಿಗೆ ಪ್ರಾರ್ಥನೆ ಇಲ್ಲವೇ ಪೂಜೆಯನ್ನು ಸಲ್ಲಿಸಲು ಮಂಗಳವಾರ ಶುಭವಾಗಿದೆ. ಅವರನ್ನು ಪೂಜಿಸುವುದರಿಂದ ಗೃಹ ದೋಷ ನಿವಾರಣೆಯಾಗುತ್ತದೆ. ವಿವಾಹಕ್ಕೆ ಇದು ತೊಡಕನ್ನುಂಟು ಮಾಡುತ್ತಿರುತ್ತದೆ. ಅಂತೆಯೇ ವಿವಾಹದಲ್ಲಿ ವಿಳಂಬವಾಗುತ್ತಿರುವವರು ಹನುಮನ ಪೂಜೆಯನ್ನು ಮಾಡುತ್ತಾರೆ. ಅದಕ್ಕಾಗಿಯೇ ಅವಿವಾಹಿತ ಹುಡುಗಿಯರು ಹನುಮಂತನಿಗೆ ತಮ್ಮ ಪ್ರಾರ್ಥನೆಯನ್ನು ಸಲ್ಲಿಸಿ ಪೂಜೆ ನಡೆಸುತ್ತಾರೆ.

ಹನುಮಂತನನ್ನ ಯಾರು ಪೂಜಿಸಬೇಕು

ಹನುಮಂತನನ್ನ ಯಾರು ಪೂಜಿಸಬೇಕು

ಅಂತೆಯೇ ಋಣಾತ್ಮಕ ಅಂಶಗಳಿಂದ ಬಳಲುತ್ತಿರುವವರೂ ಕೂಡ ಹನುಮನ ಅನುಗ್ರಹಕ್ಕೆ ಪಾತ್ರರಾಗಬಹುದಾಗಿದೆ. ರಾತ್ರಿ ವೇಳೆ ಕೆಟ್ಟ ಕನಸನ್ನು ಅನುಭವಿಸುತ್ತಿರುವವರು ಹನುಮಾನ್ ಚಾಲೀಸವನ್ನು ಪಠಿಸಬಹುದಾಗಿದೆ. ಅಂತೆಯೇ ದುಷ್ಟ ಶಕ್ತಿಗಳಿಂದ ಸಂರಕ್ಷಣೆಯನ್ನು ಆಂಜನೇಯ ಮಾಡುತ್ತಾರೆ. ವಿದ್ಯಾರ್ಥಿಗಳು ಹನುಮನನ್ನು ನೆನೆಯುವುದರಿಂದ ವಿದ್ಯಾಭ್ಯಾಸದಲ್ಲಿ ಉನ್ನತಿಯನ್ನು ಪಡೆಯಬಹುದಾಗಿದೆ.

ಭಗವಾನ್ ಹನುಮಂತನ ಬಗೆ ನೀವು ತಿಳಿದಿರದ ಒಂದಿಷ್ಟು ಕುತೂಹಲಕಾರಿ ಸಂಗತಿಗಳು

ಭಗವಾನ್ ಹನುಮಂತನ ಬಗೆ ನೀವು ತಿಳಿದಿರದ ಒಂದಿಷ್ಟು ಕುತೂಹಲಕಾರಿ ಸಂಗತಿಗಳು

ರಾಮಾಯಣದಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದ ಹನುಮಂತನು ತಮ್ಮ ವಾನರ ಸೇನೆಯಿಂದ ಪರಾಕ್ರಮಗಳಿಂದ ಯುದ್ಧದ ಸಮಯದಲ್ಲಿ ಹೆಚ್ಚು ಸ್ಮರಣೀಯರಾಗಿದ್ದಾರೆ. ಹಿಂದೂ ಮಹಾನ್ ಗ್ರಂಥಗಳಾದ ಮಹಾಭಾರತ ಮತ್ತು ಅಗ್ನಿ ಪುರಾಣದಲ್ಲೂ ಹನುಮಂತನ ಹೊಗಳಿಕೆಯನ್ನು ಮಾಡಲಾಗಿದೆ. ನಾವು ಇಂದಿನ ಲೇಖನದಲ್ಲಿ ನೀವು ತಿಳಿಯದೇ ಇರುವ ಕೆಲವೊಂದು ಸಂಗತಿಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದು ಈ ಅಂಶಗಳು ನಿಮ್ಮನ್ನು ಕುತೂಹಲದ ಕೂಪಕ್ಕೆ ತಳ್ಳಲಿದೆ....

ಹನುಮನ ಮೂರ್ತಿ ಏಕೆ ಕೆಂಪಗಿದೆ

ಹನುಮನ ಮೂರ್ತಿ ಏಕೆ ಕೆಂಪಗಿದೆ

ಹನುಮನು ಸಿಂಧೂರವನ್ನು ಮೈತುಂಬಾ ಹಚ್ಚಿಕೊಂಡಿರುವುದರಿಂದ ಅವರ ಮೂರ್ತಿಯು ಕೆಂಪಗಿದೆ. ಇದರ ಹಿಂದೆ ಒಂದು ಕಾರಣ ಕೂಡ ಇದೆ. ಸೀತಾಮಾತೆಯು ತನ್ನ ಹಣೆಗೆ ಸಿಂಧೂರವನ್ನು ಹಚ್ಚಿಕೊಳ್ಳುತ್ತಿರುವುದನ್ನು ಒಮ್ಮೆ ನೋಡಿದ ಹನುಮನು ದೇವಿಯನ್ನು ಇದೇಕೆ ಎಂದು ಕೇಳುತ್ತಾರೆ. ರಾಮನ ಮೇಲಿನ ಪ್ರೀತಿ ಮತ್ತು ಗೌರವ ಹಾಗೂ ಮಾಂಗಲ್ಯದ ಸಂಕೇತವಾಗಿ ಸಿಂಧೂರ ಇರುವುದರಿಂದ ಹಣೆಗೆ ಹಚ್ಚಿಕೊಳ್ಳುತ್ತಿರುವುದಾಗಿ ಆಕೆ ಹೇಳುತ್ತಾರೆ. ರಾಮ ಭಕ್ತ ಹನುಮಂತನು ತನ್ನ ಮೈ ತುಂಬಾ ಸಿಂಧೂರವನ್ನು ಬಳಿದುಕೊಂಡು ರಾಮನ ಮೇಲಿನ ಪ್ರೀತಿ, ಆದರವನ್ನು ಈ ಮೂಲಕ ತೋರಿಸುತ್ತಾರೆ. ಇದನ್ನರಿತ ರಾಮನು ಹನುಮನ ಭಕ್ತಿಗೆ ಮೆಚ್ಚಿ ಅವರಿಗೆ ವರವನ್ನು ನೀಡುತ್ತಾರೆ. ಯಾರು ಹನುಮನನ್ನು ಸಿಂಧೂರವನ್ನು ಹಚ್ಚಿ ಪೂಜಿಸುತ್ತಾರೋ ಅವರಿಗೆ ಯಾವುದೇ ಕಷ್ಟಗಳು ಇರುವುದಿಲ್ಲ ಮತ್ತು ಆ ಕಷ್ಟಗಳು ಮಂಜಿನಂತೆ ಕರಗಿ ಹೋಗುತ್ತದೆ ಎಂದಾಗಿದೆ.

ಹನುಮನಿಗೆ ಒಬ್ಬ ಪುತ್ರರಿದ್ದಾರೆ

ಹನುಮನಿಗೆ ಒಬ್ಬ ಪುತ್ರರಿದ್ದಾರೆ

ಲಂಕೆಯನ್ನು ದಹಿಸಿದ ನಂತರ ತನ್ನ ದೇಹವನ್ನು ತಂಪಾಗಿಸಲು ಹನುಮನು ಕೆರೆಗಿಳಿದು ದೇಹವನ್ನು ತಂಪು ಮಾಡಿ ಕೊಳ್ಳುತ್ತಾರೆ. ಅವರ ಬೆವರನ್ನು ನೀರಿನಲ್ಲಿರುವ ಮೀನುಗಳು ಸೇವಿಸುತ್ತವೆ ಇದರಿಂದ ಅವುಗಳು ಮಕಧ್ವಜನಿಗೆ ಜನ್ಮ ನೀಡಲು ಕಾರಣವಾಗುತ್ತದೆ. ಹೀಗೆ ಬ್ರಹ್ಮಚಾರಿಯಾಗಿದ್ದು ಕೂಡ ಹನುಮನು ಪುತ್ರನನ್ನು ಹೊಂದಿದ್ದಾರೆ.

ಹನುಮನಿಗೆ ಮರಣವನ್ನು ಆದೇಶಿಸಿದ ಶ್ರೀರಾಮ

ಹನುಮನಿಗೆ ಮರಣವನ್ನು ಆದೇಶಿಸಿದ ಶ್ರೀರಾಮ

ನಾರದರು ಒಮ್ಮೆ ಹನುಮನ್ನು ಸಮೀಪಿಸಿ ವಿಶ್ವಾಮಿತ್ರನನ್ನು ಬಿಟ್ಟು ಮತ್ತೆಲ್ಲಾ ಋಷಿಗಳನ್ನು ವಂದಿಸಲು ಹೇಳುತ್ತಾರೆ. ಏಕೆಂದರೆ ವಿಶ್ವಾಮಿತ್ರನು ಹಿಂದೆ ರಾಜನಾಗಿದ್ದು ನಂತರ ಋಷಿಯಾದವರು. ಹನುಮನು ನಾರದ ಮಾತನ್ನು ತಳ್ಳಿಹಾಕದೇ ಹಾಗೆಯೇ ನಡೆಯುತ್ತಾರೆ. ನಾರದರು ಈ ವಿಷಯವನ್ನು ವಿಶ್ವಾಮಿತ್ರರ ಗಮನಕ್ಕೆ ತರುತ್ತಾರೆ. ಇದನ್ನರಿತ ವಿಶ್ವಾಮಿತ್ರರು ರಾಮನಿಗೆ ಹನುಮಂತನಿಗೆ ಮರಣ ಶಿಕ್ಷೆಯನ್ನು ನೀಡಲು ಹೇಳುತ್ತಾರೆ. ಗುರುವಿನ ಮಾತನ್ನು ತಳ್ಳಿಹಾಕದ ರಾಮನು ಅಂತೆಯೇ ಬಾಣಗಳಿಂದ ಹನುಮಂತನು ಸಾಯಬೇಕೆಂದು ಆದೇಶಿಸುತ್ತಾರೆ. ತದನಂತರ ವಿಷಯವನ್ನರಿತ ನಾರದರು ವಿಶ್ವಾಮಿತ್ರರ ಬಳಿ ಸಾರಿ ನಡೆದ ವಿಚಾರವನ್ನು ತಿಳಿಸುತ್ತಾರೆ.

ಸೀತಾ ಮಾತೆಯ ಬಹುಮಾನವನ್ನು ತಿರಸ್ಕರಿಸಿದ ಹನುಮಂತ

ಸೀತಾ ಮಾತೆಯ ಬಹುಮಾನವನ್ನು ತಿರಸ್ಕರಿಸಿದ ಹನುಮಂತ

ಒಂದು ದಿನ ಸೀತಾ ಮಾತೆಯು ಹನಮಂತನಿಗೆ ಬಿಳಿ ಮುತ್ತಿನ ಹಾರವನ್ನು ನೀಡುತ್ತಾರೆ. ಆದರೆ ಹಾರವು ರಾಮನ ಚಿತ್ರ ಅಥವಾ ಹೆಸರನ್ನು ಹೊಂದದೇ ಇರುವುದರಿಂದಾಗಿ ಹನುಮಂತನು ಅದನ್ನು ತಿರಸ್ಕರಿಸುತ್ತಾರೆ. ರಾಮನ ಮೇಲೆ ಹನುಮನ ಭಕ್ತಿ ಅದಮ್ಯವಾಗಿತ್ತು ಮತ್ತು ಅದಕ್ಕೆ ಬೆಲೆ ಕಟ್ಟಲು ಆಗುವುದಿಲ್ಲ. ಇದನ್ನರಿತ ರಾಮನು ಹನುಮಂತನಿಗೆ ಉತ್ತಮ ಆರೋಗ್ಯವನ್ನು ಆಶೀರ್ವದಿಸುತ್ತಾರೆ.

ಹನುಮನಿಗೆ 108 ಹೆಸರುಗಳಿವೆ

ಹನುಮನಿಗೆ 108 ಹೆಸರುಗಳಿವೆ

ನಾವಿಲ್ಲಿ 108 ವಿಭಿನ್ನ ಭಾಷೆಗಳ ಬಗ್ಗೆ ಮಾತನಾಡುತ್ತಿಲ್ಲ. ಸಂಸ್ಕೃತ ಭಾಷೆಯಲ್ಲಿದೆಯೇ ಹನುಮಂತನು 108 ಹೆಸರುಗಳನ್ನು ಹೊಂದಿದ್ದಾರೆ. ಹನುಮಂತನು ತನ್ನ ಭಕ್ತರಿಗೆ ಎಷ್ಟು ಪ್ರಿಯರಾಗಿದ್ದಾರೆ ಎಂಬುದನ್ನು ನಾವಿಲ್ಲಿ ತಿಳಿದುಕೊಳ್ಳಬಹುದಾಗಿದೆ.

English summary

Why Vermilion Is Offered To Lord Hanuman

Hanuman, the deity who is himself a devotee, is believed to be the incarnation of Lord Shiva. He too, just as Shiva, is considered an innocent-hearted deity. But ever wondered why vermilion which is never offered to Shiva, is one of the most important offerings done to Lord Hanuman? The idols of Hanuman in the temples are often seen covered with vermilion all over them. What can be the reason behind it? Here is an interesting story, which tells you why vermilion is offered to Lord Hanuman. Let us see the story unfold.
X
Desktop Bottom Promotion