Just In
Don't Miss
- Sports
ಇಂಗ್ಲೆಂಡ್ ಟೆಸ್ಟ್ ಸರಣಿಗೂ ಮುನ್ನ ಭಾರತ-ಭಾರತ 'ಎ' ಮಧ್ಯೆ ಪಂದ್ಯ
- Movies
ಡ್ರಗ್ಸ್ ಪ್ರಕರಣ: ಇಂದ್ರಜಿತ್ ಲಂಕೇಶ್ ಗೆ ಮತ್ತೆ ಬುಲಾವ್ ನೀಡಿದ ಸಿಸಿಬಿ
- News
ಸಂಸದರಿಗೆ 10 ರುಗೆ ಬೋಂಡಾ, 100 ರುಗೆ ಚಿಕನ್ ಬಿರಿಯಾನಿ
- Education
BEL Recruitment 2021: 22 ಸರಂಕ್ಷಣೆ ಅಧಿಕಾರಿ, ಕಿರಿಯ ಮೇಲ್ವಿಚಾರಕರು ಮತ್ತು ಹವಿಲ್ದಾರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Automobiles
ಅನಾವರಣವಾಯ್ತು 2021ರ ಹ್ಯುಂಡೈ ಟ್ಯುಸಾನ್ ಎನ್ ಲೈನ್ ಎಸ್ಯುವಿ
- Finance
ಪ್ರಮುಖ ಮಾರುಕಟ್ಟೆಯಲ್ಲಿ ಅಡಿಕೆ, ಮೆಣಸು, ಕಾಫೀ ಜ. 27ರ ದರ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ದುರ್ಗಾ ಮೂರ್ತಿ ಮಾಡಲು ವೇಶ್ಯೆಯರ ಮನೆಯ ಮಣ್ಣು ಕಡ್ಡಾಯ, ಏಕೆ ಗೊತ್ತಾ?
ನವರಾತ್ರಿ-ಇದು ದುರ್ಗೆಯನ್ನು ಒಂಭತ್ತು ದಿನಗಳ ಆರಾಧಿಸುವ ಒಂದು ಆಚರನೆಯಾಗಿದೆ. ನವರಾತ್ರಿ ಬಂತೆಂದರೆ ಹಿಂದೂಗಳ ಮನೆ-ಮನೆಗಳಲ್ಲಿ ಸಡಗರ -ಸಂಭ್ರಮ. ಒಂಭತ್ತು ದಿನಗಳಲ್ಲಿ ದೇವಿಯ ವಿವಿಧ ರೂಪವನ್ನು ಆರಾಧಿಸಲಾಗುವುದು, ಹತ್ತನೇ ದಿನದಂದು ವಿಜಯದಶಮಿ ಆಚರಿಸಲಾಗುವುದು.
ನಮ್ಮ ಕರ್ನಾಟಕದಲ್ಲಿ ಈ ದಿನ ದಸರಾ ಹಬ್ಬದ ಸಡಗರ. ಕೋಲ್ಕತ್ತಾ, ಪಶ್ಚಿಮ ಬಂಗಾಳದಲ್ಲಿ ದುರ್ಗಾ ಪೂಜಾ ಎಂದು ಆಚರಿಸಲಾಗುವುದು. ನವರಾತ್ರಿಯ ಕೊನೆಯ ದಿನ ದುರ್ಗಾಮೂರ್ತಿಯನ್ನು ವಿಸರ್ಜನೆ ಮಾಡಲಾಗುವುದು.
ದುರ್ಗಾಮೂರ್ತಿಯನ್ನು ತಯಾರಿಸುವಾಗ ಅದಕ್ಕೆ ಇಂಥದ್ದೇ ವಸ್ತುಗಳನ್ನು ಬಳಸಿ ತಯಾರಿಸಬೇಕೆಂಬ ನಿಯಮಗಳಿವೆ. ಅದರಲ್ಲೂ ದುರ್ಗಾಮೂರ್ತಿ ತಯಾರಿಸುವಾಗ ವೇಶ್ಯೆಯರ ಜಾಗದ ಮಣ್ಣನ್ನು ಪಡೆದು ಅದರಿಂದ ಮೂರ್ತಿಯನ್ನು ತಯಾರಿಸುತ್ತಾರೆ. ವೇಶ್ಯೆಯರ ಮನೆಯ ಜಾಗದ ಮಣ್ಣು ಬಳಸದೆ ಮೂರ್ತಿ ತಯಾರಿಸಿದರೆ ಆ ಮೂರ್ತಿಯನ್ನು ಪರಿಗಣಿಸಲಾಗುವುದಿಲ್ಲ. ದುರ್ಗಾ ಮೂರ್ತಿ ತಯಾರಿಸುವಾಗ ಏಕೆ ವೇಶ್ಯೆಯರ ಮನೆಯ ಮಣ್ಣು ಬಳಸುತ್ತಾರೆ, ಇದರ ಹಿಂದಿನ ಉದ್ದೇಶವೇನು ಎಂದು ನೋಡೋಣ ಬನ್ನಿ:

ಸಮಾಜದಲ್ಲಿ ಕೀಳಾಗಿ ನೋಡುವ ವೇಶ್ಯೆಯರಿಗೆ ನವರಾತ್ರಿಯಲ್ಲಿ ವಿಶೇಷ ಮರ್ಯಾದೆ
ಹೆಣ್ಣನ್ನು ಕೀಳಾಗಿ ಕಾಣುವ ಪುರುಷ ಪ್ರಧಾನ ಸಮಾಜ ಇಂದಿಗೂ ಇದೆ ಎಂಬುವುದನ್ನು ಅಲ್ಲಗೆಳೆಯಲು ಸಾಧ್ಯವೇ ಇಲ್ಲ, ಅದರಲ್ಲೂ ವೇಶ್ಯೆಯರನ್ನೂ ಇಡೀ ಸಮಾಜ ಕೀಳಾಗಿ ನೋಡುತ್ತದೆ. ಅವರಿಗೆ ಸಮಾಜದಲ್ಲಿ ಯಾವುದೇ ಬೆಲೆ ನೀಡುವುದಿಲ್ಲ, ಮೈ ಮಾರಿ ಬದುಕುವ ಆಕೆಯ ಬಗ್ಗೆ ಎಲ್ಲರಿಗೆ ಒಂದು ರೀತಿಯ ತಾತ್ಸಾರ ಭಾವವಿರುತ್ತದೆ. ಆದರೆ ನವರಾತ್ರಿಯ ಸಮಯದಲ್ಲಿ ಆಕೆಗೆ ವಿಶೇಷ ಮರ್ಯಾದೆ. ಆಕೆಯನ್ನು ತಾತ್ಸಾರದಿಂದ ನೋಡುವವರು ಆಕೆಯ ಮನೆ ಮುಂದೆ ಬಂದು ನಿನ್ನ ಮನೆಯ ಸ್ವಲ್ಪ ಮಣ್ಣು ಕೂಡ ತಾಯಿ ಎಂದು ಬೇಡಿ ಮಣ್ಣನ್ನು ಪಡೆದುಕೊಂಡು ಹೋಗುತ್ತಾರೆ. ಆಕೆಯ ಮನೆಯ ಮಣ್ಣನ್ನು ಬೆರೆಸಿ ಶಕ್ತಿಮಾತೆ ದುರ್ಗಾದೇವಿಯ ಮೂರ್ತಿಯನ್ನು ತಯಾರಿಸುತ್ತಾರೆ.

ವೇಶ್ಯೆಯರ ಮನೆಯಲ್ಲಿ ಮಣ್ಣಿಗಾಗಿ ಭಿಕ್ಷೆ ಬೇಡುತ್ತಾರೆ
ದುರ್ಗೆಯ ಮೂರ್ತಿಯನ್ನು ಮಾಡಲು ದೇವಾಲಯದ ಅರ್ಚಕರು ವೇಶ್ಯೆಯರ ಮನೆ ಬಾಗಿಲಿಗೆ ಹೋಗಿ ಮಣ್ಣು ನೀಡುವಮತೆ ಭಿಕ್ಷೆ ಮಾಡುತ್ತಾರೆ, ಮಂತ್ರಗಳನ್ನು ಹೇಳುತ್ತಾರೆ. ಒಂದು ವೇಳೆ ಆಕೆ ನಿರಾಕರಿಸಿದರೆ ಆಕೆ ನೀಡುವವರಿಗೆ ಆಕೆಯ ಬಳಿ ಭಿಕ್ಷೆ ಬೇಡಿ ಮಣ್ಣನ್ನು ತರಲಾಗುವುದು.

ವೇಶ್ಯೆಯರ ಮಣ್ಣನ್ನು ಏಕೆ ಬಳಸಲಾಗುವುದು?
ವೇಶ್ಯೆಯರ ಮನೆಯ ಮಣ್ಣು ಪವಿತ್ರವಾದ ಮಣ್ಣೆಂದು ಪರಿಗಣಿಸಲಾಗಿದೆ. ಯಶರು ವೇಶ್ಯೆಯರ ಮನೆಗೆ ಪ್ರವೇಶಿಸುತ್ತಾರೋ ಅವರು ತಮ್ಮ ಅಹಂ, ದ್ವೇಷ ಎಲ್ಲವನ್ನೂ ಬಾಗಿಲಿನಲ್ಲಿಯೇ ಬಿಟ್ಟು ಮನೆಯೊಳಗೆ ಪ್ರವೇಶಿಸುತ್ತಾರೆ. ಆದ್ದರಿಂದ ಈ ಮಣ್ಣನ್ನು ಪವಿತ್ರವಾದ ಮಣ್ಣೆಂದು ಹೇಳಲಾಗುವುದು. ಅಲ್ಲದೆ ವೇಶ್ಯೆಯರ ಮನೆಯನ್ನು ಬಂಗಾಳಿಯಲ್ಲಿ ನಿಶಿದ್ದೋ ಪಲ್ಲಿಸ್ ಎಂದು ಕರೆಯಲಾಗುವುದು, ಅಂದರೆ ಜನರು ನಿರಾಕರಿಸಿದ ಸ್ಥಳ ಎಂಬ ಅರ್ಥ. ದುರ್ಗಾ ಪೂಜೆಗೆ ತಿಂಗಳ ಮುಂಚೆಯೇ ಮಣ್ಣನ್ನು ಸಂಗ್ರಹಿಸಿ ಮೂರ್ತಿಯನ್ನು ಮಾಡಲಾಗುವುದು.

ಪಶ್ಚಿಮ ಬಂಗಾಳದಲ್ಲಿ ಕಟ್ಟುನಿಟ್ಟಾಗಿ ಪಾಲಿಸುವ ಆಚರಣೆ
ವೇಶ್ಯೆಯರ ಮನೆಗೆ ಹೋಗಿ ಮಣ್ಣನ್ನು ಸಂಗ್ರಹಿಸುವ ಆಚರಣೆಯನ್ನು ಬಂಗಾಳಿಗಳು ಕಟ್ಟು ನಿಟ್ಟಾಗಿ ಪಾಲಿಸುತ್ತಾರೆ, ಆದರೆ ಇದರ ಕಡೆ ಇದನ್ನು ಅಷ್ಟಾಗಿ ಪಾಲಿಸುವುದಿಲ್ಲ. ನವರಾತ್ರಿಯ ಸಮಯದಲ್ಲಿ ವೇಶ್ಯೆಯ ಮನೆ ಬಾಗಿಲಿಗೆ ಹೋಗಿ ಹೊಸ್ತಿಲಿನ ಮಣ್ಣು ನೀಡುವಂತೆ ಬೇಡುವವರು ಉಳಿದ ಸಮಯದಲ್ಲಿ ಆಕೆಯನ್ನು ನಿರ್ಲಕ್ಷ್ಯ ಮಾಡುತ್ತಾರೆ.

ದುರ್ಗಾಮೂರ್ತಿ ತಯಾರಿಸಲು ಏನೆಲ್ಲಾ ಬಳಸುತ್ತಾರೆ?
ದುರ್ಗಾಮೂರ್ತಿಯನ್ನು ತಯಾರಿಸಲು ಗಂಗಾ ನದಿ ತೀರದಿಂದ ಮಣ್ಣು, ಸೆಗಣಿ, ಗೋ ಮೂತ್ರ ಜೊತೆಗೆ ವೇಶ್ಯೆಯ ಮನೆಯ ಹೊಸ್ತಿಲಿನಲ್ಲಿನ ಮಣ್ಣು ಇವುಗಳನ್ನು ಬಳಸಿ ತಯಾರಿಸಲಾಗುವುದು.