ಶಿವನನ್ನು ಒಲಿಸಿಕೊಳ್ಳಲು ಕಾರ್ತಿಕ ಮಾಸದ ಪೂಜೆ ಕೈಗೊಳ್ಳಬೇಕು

By: Divya pandith
Subscribe to Boldsky

ಹಿಂದೂ ಪಂಚಾಂಗದಲ್ಲಿ ಕಾರ್ತಿಕ ಮಾಸವನ್ನು ಅತ್ಯಂತ ಪವಿತ್ರ ತಿಂಗಳಲ್ಲಿ ಒಂದು ಎಂದು ಪರಿಗಣಿಸಲಾಗುತ್ತದೆ. ದೀಪಾವಳಿಯ ನಂತರದ ದಿನದಲ್ಲಿ ಪ್ರಾರಂಭವಾಗುವ ಕಾರ್ತಿಕ ಮಾಸ ದೇವರ ಆರಾಧನೆಗೆ ಸೂಕ್ತವಾದ ಕಾಲ ಎಂದು ಹೇಳಲಾಗುತ್ತದೆ. ಚಳಿಗಾಲದ ಆರಂಭವನ್ನು ಸೂಚಿಸುವ ಈ ಮಾಸ ಹಿಂದೂ ಪಂಚಾಗದಲ್ಲಿ ಎಂಟನೇ ತಿಂಗಳು. ಅಕ್ಟೋಬರ್ ಅಂತ್ಯದಲ್ಲಿ ಹಾಗೂ ನವಂಬರ್ ಆರಂಭದ ಕಾಲ ಎಂದು ಹೇಳಲಾಗುತ್ತದೆ.

ಗ್ರೀಗೋರಿಯನ್ ಪಂಚಾಗದ ಪ್ರಕಾರ ಕಾರ್ತಿಕ ಮಾಸವು ನವೆಂಬರ್ ತಿಂಗಳಲ್ಲಿ ಪ್ರಾರಂಭವಾಗುತ್ತದೆ. ಈ ಮಾಸದಲ್ಲಿ ಹಿಂದೂಗಳು ಶಿವನನ್ನು ಆರಾಧಿಸುತ್ತಾರೆ. ತಿಂಗಳ ಪೂರ್ತಿ ಆಚರಣೆ ಹಾಗೂ ಆರಾಧನೆಯಿಂದ ಕೂಡಿರುತ್ತದೆ. ಈ ಸಮಯದಲ್ಲಿ ಶಿವನನ್ನು ಆರಾಧಿಸಿ ಪೂಜಿಸಿದರೆ ಬಹಳ ಶ್ರೇಷ್ಠವಾದದ್ದು ಎಂದು ಪರಿಗಣಿಸಲಾಗುವುದು. ಶಿವ ಮತ್ತು ವಿಷ್ಣು ಇಬ್ಬರೂ ಮನುಕುಲದ ಒಳಿತಿಗೆ ಆಶೀರ್ವದಿಸುತ್ತಾರೆ. ಹಾಗಾಗಿ ಈ ತಿಂಗಳಲ್ಲಿ ವಿಷ್ಣು ಹಾಗೂ ಶಿವನ ದೇಗುಲಗಳಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸಲಾಗುತ್ತದೆ. ಅಂತೆಯೇ ಭಕ್ತರೂ ಸಹ ಶಿವ ಮತ್ತು ವಿಷ್ಣುವಿನ ದೇಗುಲಕ್ಕೆ ಹೋಗುತ್ತಾರೆ.

Worshipped During Karthik Masa

ಈ ತಿಂಗಳಲ್ಲಿ ಭಕ್ತರು "ಸೋಮವಾರ ವ್ರತ"ಎನ್ನುವ ಆಚರಣೆಯನ್ನು ಮಾಡುತ್ತಾರೆ. ಈ ಧಾರ್ಮಿಕ ಕ್ರಿಯೆಯ ಪ್ರಕಾರ ಶಿವನನ್ನು ಆರಾಧಿಸುತ್ತಾ ಸೋಮವಾರ ಉಪವಾಸವನ್ನು ಕೈಗೊಳ್ಳುತ್ತಾರೆ. ಈ ಆಚರಣೆ ಹೆಚ್ಚಾಗಿ ಕರ್ನಾಟಕ ಹಾಗೂ ಆಧ್ರಪ್ರದೇಶದಲ್ಲಿರುವುದನ್ನು ಕಾಣಬಹುದು. ಈ ವ್ರತವನ್ನು ಆಚರಿಸುವುದರಿಂದ ಭಕ್ತರು ಶಿವನ ಸಾನಿಧ್ಯಕ್ಕೆ ತೀರ್ಥಯಾತ್ರೆ ಕೈಗೊಂಡಷ್ಟೇ ಫಲ ಲಭಿಸುತ್ತದೆ ಎನ್ನುವ ನಂಬಿಕೆಯಿದೆ.

ಕಾರ್ತಿಕ ಮಾಸದ ಹಿನ್ನೆಲೆ

ಈ ಮಾಸದ ಹೆಸರು ಕಾರ್ತಿಕ್‍ನಿಂದ ಬಂದಿದೆ ಎನ್ನಲಾಗುತ್ತದೆ. ಈ ತಿಂಗಳಲ್ಲಿ ಕಾರ್ತಿಕ್ ಎನ್ನುವ ನಕ್ಷತ್ರವು ಚಂದ್ರನಿಗೆ ಬಹಳ ಸಮೀಪ ಬರುತ್ತದೆ ಎನ್ನುಲಾಗುವುದು. ಅದಕ್ಕಾಗಿಯೇ ನಕ್ಷತ್ರದ ಹೆಸರನ್ನು ಮಾಸಕ್ಕೆ ಇಡಲಾಗಿದೆ ಎನ್ನುವರು. ಪರಮಾತ್ಮನಾದ ಶಿವನಿಗೆ ಅನೇಕ ಹೆಸರುಗಳಿವೆ. ಅದರಲ್ಲಿ ಸೋಮೇಶ್ವರ ಮತ್ತು ಸೋಮ್ ಎನ್ನುವ ಹೆಸರು ಬಹಳ ಪ್ರಸಿದ್ಧವಾದದ್ದು ಎಂದು ಹೇಳಲಾಗುತ್ತದೆ.

Worshipped During Karthik Masa

ಸೋಮವಾರ ವ್ರತ

ಸೋಮವಾರ ವ್ರತದಲ್ಲಿ ಉಪವಾಸವನ್ನು ಕೈಗೊಂಡು, ಶಿವನನ್ನು ಜಪಿಸಲಾಗುವುದು. ಹಿಂದೂಗಳ ನಂಬಿಕೆಯ ಪ್ರಕಾರ ಕಾರ್ತಿಕ ಮಾಸದಲ್ಲಿ ಶಿವ ಪರಮಾತ್ಮನನ್ನು ಆರಾಧಿಸಿದರೆ ಶಿವನು ಆಶೀರ್ವದಿಸುತ್ತಾನೆ. ಇದರಿಂದ ನಾವು ಮಾಡಿದ ಪಾಪಗಳೆಲ್ಲವೂ ತೊಳೆದು ಹೋಗುತ್ತದೆ ಎನ್ನುವ ಪವಿತ್ರ ನಂಬಿಕೆಯಿದೆ.

ಕಾರ್ತಿಕ ಪೂರ್ಣಿಮೆಯಂದು ಶಿವನು ತ್ರಿಪುರ ಅಸುರರನ್ನು ಸಂಹಾರ ಮಾಡಿದನು. ಇದರಿಂದಾಗಿ ಪ್ರಪಂಚವು ಅಸುರರಿಂದ ಕೈತಪ್ಪಿ ಉಳಿದುಕೊಂಡಿತು. ಹಾಗಾಗಿಯೇ ಭಕ್ತರು ಶಿವನನ್ನು ತ್ರಿಪುರಾರಿ ಎಂದು ಕರೆದರು. ಇಷ್ಟೇ ಅಲ್ಲದೆ ಈ ಸಮಯದಲ್ಲಿ ಗಂಗಾ ನದಿಯ ನೀರು ಕೊಳವೆ, ಬಾವಿ, ಕಾಲುವೆ, ಸರೋವರಗಳು ಸೇರಿದಂತೆ ಇನ್ನಿತರ ನೀರಿನ ಮೂಲದಿಂದ ಹರಿದು ಬರುತ್ತದೆ ಎನ್ನುವ ನಂಬಿಕೆಯಿದೆ.

Lord Shiva

ವೈಕುಂಠ ಚತುರ್ದಶಿ

ಕಾರ್ತಿಕ ಮಾಸದಲ್ಲಿ ಅತ್ಯಂತ ಪವಿತ್ರ ದಿನಗಳಲ್ಲಿ ವೈಕುಂಠ ಚತುರ್ದಶಿಯೂ ಒಂದು. ವೈಕುಂಠ ಚತುರ್ದಶಿ ಎನ್ನುವುದು ಬಹಳ ಪವಿತ್ರ ಹಾಗೂ ಮಂಗಳಕರ ದಿನವೆಂದು ಪರಿಗಣಿಸಲಾಗುತ್ತದೆ. ಕಾರ್ತಿಕ ಪೂರ್ಣಿಮೆಯ ಮೊದಲ ದಿನವೆಂದು ಇದನ್ನು ಆಚರಿಸಲಾಗುತ್ತದೆ. ಭಕ್ತರು ತಮ್ಮ ಪ್ರಾರ್ಥನೆ ಹಾಗೂ ಪೂಜೆಯನ್ನು ಶಿವ ಮತ್ತು ವಿಷ್ಣು ದೇವರಿಗೆ ಸಮರ್ಪಿಸಬಹುದು.

ಆದಿನದ ಮಧ್ಯರಾತ್ರಿ ಅಥವಾ ನಿಶಿತದ ಸಮಯದಲ್ಲಿ ವಿಷ್ಣು ದೇವರನ್ನು ಪೂಜಿಸುತ್ತಾರೆ. ನಂತರ ಮುಂಜಾನೆಯ ವಿರಾಮದ ಸಮಯದಲ್ಲು ಶಿವನನ್ನು ಆರಾಧಿಸುತ್ತಾರೆ. ಇದನ್ನು ಅರುಣೋದಯ ಎಂದು ಕರೆಯುವರು. ಹಿಂದೂ ದಂತಕಥೆಯ ಪ್ರಕಾರ, ವಿಷ್ಣು ಮತ್ತು ಶಿವನು ಪರಸ್ಪರ ಒಬ್ಬರನ್ನೊಬ್ಬರು ಗೌವರವಿಸಿಕೊಂಡರು. ಜೊತೆಗೆ ಸತ್ಕಾರದಿಂದ ಕಂಡರು. ವಿಷ್ಣು ದೇವರು ಶಿವನಿಗೆ ಬಿಲ್ವ ಪತ್ರೆಯನ್ನು ಉಡುಗೊರೆಯನ್ನಾಗಿ ನೀಡಿದನು. ಶಿವನು ವಿಷ್ಣುವಿಗೆ ತುಳಸಿ ಎಲೆಯನ್ನು ಉಡುಗೊರೆಯನ್ನಾಗಿ ನೀಡಿದನು ಎನ್ನಲಾಗುತ್ತದೆ.

ಹೀಗೂ ನಂಬಿಕೆಯಿದೆ

ಶಿವನ ದೇವಸ್ಥಾನದಲ್ಲಿ ಭಕ್ತರು ಹಣತೆಯನ್ನು ಹಚ್ಚಿ, ದೀಪವನ್ನು ಬೆಳಗಬೇಕು. ಆಗ ಅದೃಷ್ಟ ಮತ್ತು ಸಮೃದ್ಧತೆ ನಮಗೆ ಒಲಿಯುತ್ತದೆ ಎನ್ನಲಾಗುವುದು. ಈ ಮಾಸದಲ್ಲಿ ಭಕ್ತರು ಅನೇಕ ಆಚರಣೆ ಹಾಗೂ ಪದ್ಧತಿಯನ್ನು ಅನುಸರಿಸುತ್ತಾರೆ. ನೆಲ್ಲಿಕಾಯಿ ಮರದ ಕೆಳಗೆ ಕುಳಿತು ಊಟ ಮಾಡುವುದರಿಂದ ಎಲ್ಲಾ ಪಾಪಗಳೂ ಕಳೆಯುತ್ತವೆ ಎನ್ನಲಾಗುವುದು. ಈ ತಿಂಗಳಲ್ಲಿ ಧಾನ-ಧರ್ಮವನ್ನು ಮಾಡಬೇಕು, ದಿನದಲ್ಲಿ ಒಂದು ಹೊತ್ತು ಮಾತ್ರ ಊಟವನ್ನು ಮಾಡಬೇಕು ಎನ್ನುವಂತಹ ನಂಬಿಕೆ ಹಾಗೂ ಆಚರಣೆಗಳೂ ಚಾಲ್ತಿಯಲ್ಲಿವೆ.

Lord Shiva

ತಿಂಗಳ ಕೊನೆಯಲ್ಲಿ

ಕಾರ್ತಿಕ ಮಾಸದ ಕೊನೆಯ ದಿನವು ಬಹಳ ಪ್ರಮುಖ ಹಾಗೂ ಪವಿತ್ರವಾದದ್ದು ಎನ್ನಲಾಗುವುದು. ಇದನ್ನು ಪೋಲಿ ಸ್ವರ್ಗ ಎಂದು ಕರೆಯುತ್ತಾರೆ. ಭಕ್ತರು ಈ ದಿನ ಬಾಳೆ ದಿಂಡಿನಲ್ಲಿ ದೀಪವನ್ನು ಇಟ್ಟು ನದಿ ನೀರಿನಲ್ಲಿ ಬಿಡುತ್ತಾರೆ. ಕಾರ್ತಿಕ ಮಾಸ ಬಹಳ ಪವಿತ್ರ ವಾದದ್ದು ಎನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ. ಈ ಮಾಸದಲ್ಲಿ ಎಲ್ಲಾ ಆಚರಣೆ ಮತ್ತು ಪದ್ಧತಿಗಳನ್ನು ಸೂಕ್ತರೀತಿಯಲ್ಲಿ ಆಚರಿಸಿದರೆ ಮುಂದಿನ ವರ್ಷ ನಮಗೆ ಆರೋಗ್ಯ, ಐಶ್ವರ್ಯ, ಸಂಪತ್ತು ಎಲ್ಲವೂ ಶಿವನಿಂದ ಆಶೀರ್ವದಿಸಿ ಬರುತ್ತದೆ. ಹಾಗಾಗಿ ಪ್ರಾರ್ಥನೆ ಹಾಗೂ ಧಾನ-ಧರ್ಮಗಳನ್ನು ಮಾಡಲು ಅತ್ಯಂತ ಶ್ರೇಷ್ಠವಾದ ಕಾಲ ಎಂದು ಹೇಳಲಾಗುತ್ತದೆ.

English summary

Why Lord Shiva Is Worshipped During Karthik Masa

Karthik Masa is considered to be one of the most promising months for all the Hindus. The Karthik Masa commences on the day that falls after Diwali. This month also brings in the winter season. The Karthik Masa generally starts during October to November, which is the eighth month according to the Hindu calendar.
Subscribe Newsletter