For Quick Alerts
ALLOW NOTIFICATIONS  
For Daily Alerts

  ಮಹಾಭಾರತದಲ್ಲಿ ಭಗವಾನ್ ಶ್ರೀ ಕೃಷ್ಣನ ಚಾಣಾಕ್ಷ ನೀತಿ....

  By Deepu
  |

  ಪಾಂಡವರ ಹಿತಚಿಂತಕನಾಗಿದ್ದ ಕೃಷ್ಣನು ಕಪಟ ನಾಟಕ ಸೂತ್ರಧಾರಿ ಎಂದೇ ಬಿರುದಾಂಕಿತನು. ಸಕಲವನ್ನು ತಿಳಿದಿದ್ದ ಭಗವಂತನು ಲೋಕಕಲ್ಯಾಣಕ್ಕಾಗಿ ಜನ್ಮವೆತ್ತುತ್ತಾನೆ ಅಂತೆಯೇ ಎಲ್ಲಿ ಅನ್ಯಾಯ ಅತ್ಯಾಚಾರ ಹೆಚ್ಚಾಗುತ್ತದೋ ಅಲ್ಲೆಲ್ಲಾ ನಾನು ಅವತಾರವೆತ್ತಿ ಲೋಕ ಕಲ್ಯಾಣವನ್ನು ಮಾಡುತ್ತೇನೆ ಎಂಬುದಾಗಿ ಭಗವದ್ಗೀತೆಯಲ್ಲಿ ತಿಳಿಸಿದ್ದಾನೆ.

  ಮಹಾಭಾರತದಲ್ಲಿ ಅರ್ಜುನನ ಸಾರಥಿಯಾಗಿ, ಪ್ರಿಯಮಿತ್ರನಾಗಿ ಪಾಂಡವರ ಹಿತಚಿಂತಕ ಮತ್ತು ದ್ರೌಪದಿಯ ಸಹೋದರನಾಗಿ ತನ್ನ ಇರುವಿಕೆಯನ್ನು ಪ್ರಸ್ತುತಪಡಿಸಿದ್ದ ಶ್ರೀಕೃಷ್ಣನ ಮರಣದ ಕುರಿತು ಅನೇಕ ಊಹಾಪೋಹಗಳು ಹರಿದಾಡಿವೆ. ಭಗವಾನ್ ಶ್ರೀಕೃಷ್ಣನ ಸಮಾಪ್ತಿ ಹಿಂದಿದೆ, ಸೋಜಿಗದ ಸಂಗತಿ

  Why Lord Krishna Cheated many times during Mahabharata?
   

  ಆದು ಏನೇ ಇರಲಿ, ಆದರೆ ಮಹಾಭಾರತದಲ್ಲಿ ಕೃಷ್ಣನು ದುಷ್ಟರನ್ನು ಮಟ್ಟಹಾಕಲು ಹಲವು ಬಾರಿ ಚಾಣಾಕ್ಷತನವನ್ನು ಮೆರೆದಿರುವ ಪ್ರಸಂಗಗಳನ್ನು ಹಲವೆಡೆ ಪ್ರಸ್ತಾಪಿಸಲಾಗಿದೆ. ಕೃಷ್ಣನ ಪ್ರಕಾರ ಪಾಪವನ್ನು ನಿರ್ಮೂಲನೆ ಮಾಡಲು ಪಾಪಮಾರ್ಗವನ್ನು ಅನುಸರಿಸುವುದರಲ್ಲಿ ಏನೂ ತಪ್ಪಿಲ್ಲ, ಎನ್ನುವುದಕ್ಕೆ ಮಹಾಭಾರತದಲ್ಲಿ ಸಾಕಷ್ಟು ಉದಾಹರಣೆಯನ್ನು ನಾವು ಕೇಳಿದ್ದೇವೆ, ಬನ್ನಿ ಭಗವಾನ್ ಕೃಷ್ಣನ ಕೆಲವೊಂದು ಇಂತಹ ಚಾಣಾಕ್ಷ ನೀತಿಗಳನ್ನು ಮುಂದೆ ಓದಿ...   ಜನ್ಮಾಷ್ಟಮಿ ವಿಶೇಷ: ಶ್ರೀ ಕೃಷ್ಣ ಜಗತ್ತಿಗೆ ಸಾರಿದ ಉಪದೇಶ

  ಮಹಾಭಾರತದಲ್ಲಿ ಭಗವಾನ್ ಶ್ರೀ ಕೃಷ್ಣನ ಚಾಣಾಕ್ಷ ನೀತಿಗಳು

  1. ಯುಕ್ತಿಯಿಂದ ದ್ರೋಣಾಚಾರ್ಯರ ವಧೆ!

  ಕೌರವರ ಸೇನೆಯಲ್ಲಿದ್ದ ಅಶ್ವತ್ಥಾಮ ಎಂಬ ಹೆಸರಿನ ಆನೆಯೊಂದನ್ನು ಭೀಮ ಕೊಂದ ಬಳಿಕ ಯುಧಿಷ್ಠಿರ 'ಅಶ್ವತ್ಥಾಮನ ಕಥೆ ಮುಗಿಯಿತು" ಎಂದು ಉದ್ಗರಿಸುವಂತೆ ಹೇಳಿದ. ಅಂತೆಯೇ ಕೂಗಿದ ಯುಧಿಷ್ಠಿರನ ಮಾತನ್ನು ಕೇಳಿದ ದ್ರೋಣಾಚಾರ್ಯರು ತಮ್ಮ ಮಗ ಅಶ್ವತ್ಥಾಮನೇ ಕೊಲ್ಲಲ್ಪಟ್ಟ ಎಂದು ಭಾವಿಸಿ ದುಃಖಭರಿತರಾಗಿ ಬಿಲ್ಲುಬಾಣಗಳನ್ನು ಕೆಳಗಿಟ್ಟರು. ಇದನ್ನೇ ಕಾಯುತ್ತಿದ್ದ ಪಾಂಡವರು ದ್ರೋಣಾಚಾರ್ಯರ ಕಥೆಯನ್ನು ಮುಗಿಸುತ್ತಾರೆ.

  Why Lord Krishna Cheated many times during Mahabharata?
   

  2. ಕರ್ಣನ ಅಂತ್ಯ

  ಎಲ್ಲಿಯವರೆಗೆ ಕರ್ಣ ತನ್ನ ರಥದಲ್ಲಿದ್ದು ಎಲ್ಲಾ ಅಸ್ತ್ರಗಳು ಅವನ ಬಳಿ ಇರುತ್ತವೆಯೋ ಅಲ್ಲಿಯವರೆಗೆ ಆತನನ್ನು ಕೊಲ್ಲಲು ಯಾರಿಂದಲೂ ಸಾಧ್ಯವಿಲ್ಲ ಎಂದು ಕೃಷ್ಣ ಅರಿತಿದ್ದ. ಯುದ್ಧ ಸಮಯದಲ್ಲಿ ಕರ್ಣನ ರಥ ಕೆಸರಿನಲ್ಲಿ ಸಿಕ್ಕಿ ಹಾಕಿಕೊಂಡು ಹೊರಬರಲು ತಕರಾರು ಮಾಡುತ್ತಿತ್ತು. ಶ್ರೀ ಕೃಷ್ಣಾವತಾರದ ಸಮಾಪ್ತಿ; ನೀವು ಕೇಳರಿಯದ ಕಥೆಗಳು

  ಚಕ್ರವನ್ನು ಕೆಸರಿನಿಂದ ಬಿಡಿಸಲು ಕರ್ಣ ರಥದಿಂದ ಕೆಳಗಿಳಿದ ಸಂದರ್ಭವನ್ನು ಗಮನಿಸಿದ ಕೃಷ್ಣ ಕೂಡಲೇ ಅರ್ಜುನನ್ನು ಅತ್ತ ಕೊಂಡೊಯ್ದು ನಿರಾಯುಧನಾಗಿದ್ದ ಕರ್ಣನ ಮೇಲೆ ಅಸ್ತ್ರ ಉಪಯೋಗಿಸುವಂತೆ ಅರ್ಜುನನಿಗೆ ಸೂಚಿಸಿದ. ಇದನ್ನು ಪಾಲಿಸಿದ ಅರ್ಜುನ ಕೂಡಲೇ ಬಾಣ ಹೂಡಿ ಕರ್ಣನ ಮೇಲೆ ಪ್ರಯೋಗಿಸಿದ. ಇದು ಒಂದು ಪ್ರಬಲ ಅಸ್ತ್ರವಾಗಿದ್ದು ಕರ್ಣನ ಕುತ್ತಿಗೆಯಿಂದ ರುಂಡವನ್ನೇ ಬೇರ್ಪಡಿಸಿತ್ತು. 

  Why Lord Krishna Cheated many times during Mahabharata?
   

  3. ಭೀಷ್ಮ

  ಮಹಾಭಾರತದ ಯುದ್ಧದ ಸಮಯದಲ್ಲಿ, ಭೀಷ್ಮ ಪಿತಾಮಹರು ತಮ್ಮ ಪ್ರತಿಜ್ಞೆಗೆ ಬದ್ಧರಾಗಿದ್ದು ಹೆಣ್ಣಿನ ಮೇಲೆ ಅಸ್ತ್ರ ಉಪಯೋಗಿಸುತ್ತಿರಲಿಲ್ಲ.  ಆದ್ದರಿಂದ ಅರ್ಜುನನನ್ನು ಶಿಖಂಡಿಯ ರೂಪ ಧರಿಸಿ ರಣರಂಗಕ್ಕೆ ಕರೆತಂದ ಕೃಷ್ಣ. ಭೀಷ್ಮ ಶಿಖಂಡಿಯ ರೂಪದಲ್ಲಿದ್ದ ಅರ್ಜುನನ ಮೇಲೆ ಅಸ್ತ್ರ ಉಪಯೋಗಿಸಲಿಲ್ಲ. ಇದರ ಉಪಯೋಗ ಪಡೆದ ಅರ್ಜುನ ಬಾಣಗಳ ಮಳೆಯನ್ನೇ ಸುರಿಸಿ ಭೀಷ್ಮರನ್ನು ವಧಿಸಿದ. 

  4. ದುರ್ಯೋಧನನ ಸಾವು

  ದುರ್ಯೋಧನನನ್ನು ಆತನ ತಾಯಿ ಗಾಂಧಾರಿ ಏಕಾಂತದಲ್ಲಿ ಪೂರ್ಣ ವಿವಸ್ತ್ರನಾಗಿ ಬರಲು ಹೇಳುತ್ತಾಳೆ. ಆಗ ಕೃಷ್ಣ ಆಕೆ ನಿನ್ನ ತಾಯಿಯಾದರೂ ಒಂದು ಹೆಣ್ಣು. ಆಕೆಯ ಎದುರು ಬೆತ್ತಲೆ ಇರುವ ಬದಲು ಸೊಂಟದ ಸುತ್ತ ಬಾಳೆ ಎಲೆಯೊಂದನ್ನು ಸುತ್ತಿ ಹೋಗು ಎಂದು ಸಲಹೆ ನೀಡುತ್ತಾನೆ. ಇದನ್ನರಿಯದ ಗಾಂಧಾರಿ ಏಕಾಂತದಲ್ಲಿ ತನ್ನ ಕಣ್ಣಿನ ಬಟ್ಟೆಯನ್ನು ಬಿಚ್ಚುತ್ತಾಳೆ.

  Why Lord Krishna Cheated many times during Mahabharata?

  ಅವರ ಕಣ್ಣುಗಳಿಂದ ಹೊರಟ ತೇಜಸ್ಸು ದುರ್ಯೋಧನನ ಶರೀರವನ್ನು ವಜ್ರದಷ್ಟು ಕಠಿಣವಾಗಿಸುತ್ತದೆ. ಆದರೆ ಬಾಳೆ ಎಲೆಯ ಕಾರಣ ಸೊಂಟದ ಕೆಳಗೆ ಹಾಗೇ ಉಳಿಯುತ್ತದೆ. ಬಳಿಕ ಮಹಾಭಾರತದ ಯುದ್ಧದಲ್ಲಿ ಕೃಷ್ಣನೇ ದುರ್ಯೋಧನನ ತೊಡೆ ಮುರಿಯುವಂತೆ ಕಡ್ಡಿಯೊಂದನ್ನು ಸೀಳಿ ಭೀಮನಿಗೆ ಸಂಜ್ಞೆ ನೀಡುತ್ತಾನೆ. ಇದರಿಂದ ದುರ್ಯೋಧನನ ಕೊನೆಯಾಗುತ್ತದೆ.   ಅಪ್ರತಿಮ ವೀರ ಏಕಲವ್ಯನ ಸಾವಿಗೆ ಶ್ರೀಕೃಷ್ಣ ಕಾರಣನೇ?

  English summary

  Why Lord Krishna Cheated many times during Mahabharata?

  The purpose of Lord Krishna’s birth on earth was to remove evil and restore peace and dharma (virtue). He came to earth to spread the message to the world that those who are on the path of truth will achieve victory. He was clear that he wouldn’t hesitate for once to do anything to save virtue on earth.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more