For Quick Alerts
ALLOW NOTIFICATIONS  
For Daily Alerts

ಜರಾಸಂಧ ತನ್ನ ಮೇಲೆ ಹದಿನೇಳು ಬಾರಿ ಆಕ್ರಮಣ ಮಾಡಿದರೂ, ಆತನನ್ನು ಕೃಷ್ಣ ಕೊಲ್ಲಲಿಲ್ಲವೇಕೆ?

|

ಈ ಜಗತ್ತಿನಲ್ಲಿ ಪ್ರತಿ ಬಾರಿ ವಿಷ್ಣು ಅವತಾರವೆತ್ತಿದಾಗಲೂ ಇದಕ್ಕೆಲ್ಲಾ ಲೋಕದಲ್ಲಿ ಧರ್ಮವನ್ನು ಸ್ಥಾಪಿಸುವುದೇ ಪ್ರಮುಖ ಕಾರಣವಾಗಿತ್ತು. ಕೃಷ್ಣನ ಅವತಾರವೆತ್ತಿದಾಗ ಆತನ ಜೀವನದಲ್ಲಿ ಎರಡು ಪ್ರಮುಖ ಉದ್ದೇಶಗಳಿದ್ದವು. ಮೊದಲನೆಯದು ಕೌರವರಿಗೆ ಬುದ್ದಿ ಕಲಿಸುವುದು ಹಾಗೂ ಎರಡನೆಯದು ಆತನ ಮಾವನಾದ ಕಂಸನನ್ನು ಕೊಲ್ಲುವುದಾಗಿತ್ತು. ಇದನ್ನು ಸಾಧಿಸಲು ಆತ ತನ್ನ ಪ್ರಮುಖ ಸಂಬಂಧಿಗಳ ಜೊತೆಗೇ ವೈಷಮ್ಯ ಪಡೆಯಬೇಕಾಗಿ ಬಂದಿತ್ತು. ತನ್ನ ಭಾವನೆಗಳನ್ನು ನಿಯಂತ್ರಿಸಿಕೊಂಡು ಜಾಣ್ಮೆಯಿಂದ ಪರಿಸ್ಥಿತಿಯನ್ನು ನಿಭಾಯಿಸುವುದು ಆತನ ಆಯ್ಕೆಯೇನೂ ಆಗಿರಲಿಲ್ಲ ಆದರೆ ಆ ಸಂದರ್ಭ ಒದಗಿಸಿದ್ದ ಬೇಡಿಕೆಯಾಗಿತ್ತು. ಪ್ರಾಯಶಃ ಈ ಪಾಠವನ್ನೇ ಕೃಷ್ಣ ಈ ಮಹಾಗ್ರಂಥದ ಮೂಲಕ ನಮಗೆ ನೀಡುತ್ತಿದ್ದಿರಬಹುದು.

ಜರಾಸಂಧ ಕೃಷ್ಣನ ಮೇಲೆ ಹದಿನೇಳು ಬಾರಿ ಆಕ್ರಮಣ ಎಸಗಿದ್ದ

ಜರಾಸಂಧ ಕೃಷ್ಣನ ಮೇಲೆ ಹದಿನೇಳು ಬಾರಿ ಆಕ್ರಮಣ ಎಸಗಿದ್ದ

ಕೃಷ್ಣನ ಬಗ್ಗೆ ಇರುವ ಕಥೆಗಳಲ್ಲಿ ಒಂದು ಕಥೆಯ ಪ್ರಕಾರ ಜರಾಸಂಧ ಕೃಷ್ಣನ ಮೇಲೆ ಹದಿನೇಳು ಬಾರಿ ಆಕ್ರಮಣ ಮಾಡಿದ ಬಳಿಕವೇ ಕೃಷ್ಣನಿಂದ ಹತನಾದ. ಜರಾಸಂಧನನ್ನು ಮೊದಲೇ ಕೊಲ್ಲಬೇಕಾಗಿದ್ದರೆ ಪ್ರಬಲನಾಗಿದ್ದ ಕೃಷ್ಣನಿಗೆ ಕಷ್ಟದ ಕೆಲಸವೇನೂ ಆಗಿರಲಿಲ್ಲ, ಆದರೂ ಆತ ದೀರ್ಘಕಾಲದವರೆಗೆ ಕಾದಕ್ಕೇಕೆ? ಈ ಪ್ರಶ್ನೆಗೆ ಕುತೂಹಲಕರವಾದ ಮಾಹಿತಿ ಇಲ್ಲಿದೆ, ಬನ್ನಿ ನೋಡೋಣ...

ಯಾರು ಈ ಜರಾಸಂಧ?

ಯಾರು ಈ ಜರಾಸಂಧ?

ಜರಾಸಂಧ ಕಂಸನ ಮಾವನಾಗಿದ್ದ (ಹೆಂಡತಿಯ ತಂದೆ), ಕಂಸ ಕೃಷ್ಣನ ಮಾವನಾಗಿದ್ದ (ತಾಯಿಯ ಅಣ್ಣ), ಅಂದರೆ ಕೃಷ್ಣನಿಗೆ ಜನ್ಮನೀಡಿದ ತಾಯಿ ದೇವಕಿಯ ಅಣ್ಣನಾಗಿದ್ದ (ಕೃಷ್ಣನನ್ನು ಬೆಳೆಸಿದ ತಾಯಿ ಯಶೋದೆ). ಕೃಷ್ಣ ಯಾವಾಗ ಕಂಸನನ್ನು ಕೊಂದನೋ, ಆಗ ಸ್ವಾಭಾವಿಕವಾಗಿಯೇ ಜರಾಸಂಧನಿಗೆ ಕೃಷ್ಣನ ಮೇಲೆ ಕೆಂಡದಂತಹ ಕೋಪ ಬಂದಿದ್ದು ಇದೇ ಕಾರಣಕ್ಕೆ ಕೃಷ್ಣನನ್ನು ಕೊಲ್ಲುವ ಉದ್ದೇಶ ಹೊಂದಿದ್ದ.

ಕೃಷ್ಣನನ್ನು ಕೊಲ್ಲಲು ಎಲ್ಲಾ ಬಗೆಯ ತಯಾರಿ ಮಾಡಿಕೊಂಡಿದ್ದ ಜರಾಸಂಧ

ಕೃಷ್ಣನನ್ನು ಕೊಲ್ಲಲು ಎಲ್ಲಾ ಬಗೆಯ ತಯಾರಿ ಮಾಡಿಕೊಂಡಿದ್ದ ಜರಾಸಂಧ

ಕೃಷ್ಣನನ್ನು ಕೊಲ್ಲುವುದೇ ತನ್ನ ಜೀವನದ ಪರಮೋದ್ದೇಶ ಎಂದು ಭಾವಿಸಿದ್ದ ಜರಾಸಂಧ ಇದಕ್ಕಾಗಿ ತನ್ನ ಸೈನ್ಯವನ್ನು ಬಲಪಡಿಸತೊಡಗಿದ. ಇದಕ್ಕಾಗಿ ಜರಾಸಂಧ ಕೃಷ್ಣನೊಂದಿಗೆ ವೈಷಮ್ಯ ಹೊಂದಿದ್ದ ಅಕ್ಕಪಕ್ಕದ ಇತರ ರಾಜ್ಯಗಳ ರಾಜರೊಂದಿಗೂ ಸಂಧಾನ ನಡೆಸಿ ಒಟ್ಟಾಗಿ ಧಾಳಿ ಮಾಡುವ ಸಂಚನ್ನೂ ರೂಪಿಸಿದ್ದ.

Most Read: ನೀವು ತಿಳಿದಿರಲೇಬೇಕಾದ ಕೃಷ್ಣ ಪರಮಾತ್ಮನ ಒಲಿಸಿಕೊಳ್ಳಲು ಕೆಲವು ಮಂತ್ರಗಳು

ಜರಾಸಂಧನ ಪ್ರಯತ್ನಗಳೆಲ್ಲಾ ವಿಫಲಗೊಂಡವೇಕೆ?

ಜರಾಸಂಧನ ಪ್ರಯತ್ನಗಳೆಲ್ಲಾ ವಿಫಲಗೊಂಡವೇಕೆ?

ಕೃಷ್ಣನ ನಗರವಾಗಿದ್ದ ದ್ವಾರಕೆಯತ್ತ ಜರಾಸಂಧ ತನ್ನ ಸೈನ್ಯವನ್ನು ನಡೆಸಿಕೊಂಡು ಹೋದ ಪ್ರತಿ ಧಾಳಿಯಲ್ಲಿಯೂ ಜರಾಸಂಧ ಪರಾಜಯವನ್ನು ಅನುಭವಿಸಿದ್ದ. ಆದರೂ ಸೋಲೊಪ್ಪಿಕೊಳ್ಳದೇ ತನ್ನ ಪ್ರಯತ್ನಗಳನ್ನು ನಡೆಸುತ್ತಲೇ ಇದ್ದ. ಪ್ರತಿಬಾರಿಯೂ ಆತ ತನ್ನ ಹಿಂದಿನ ಪ್ರಯತ್ನಕ್ಕಿಂತಲೂ ಭಿನ್ನವಾದ ಮತ್ತು ಪ್ರಬಲ ಸಂಚನ್ನೇ ಪ್ರಯೋಗಿಸುತ್ತಿದ್ದ ಹಾಗೂ ಇನ್ನಷ್ಟು ಪ್ರಬಲರಾದ ರಾಜರನ್ನು ತನ್ನ ಧಾಳಿಯಲ್ಲಿ ಸೇರಿಸಿಕೊಳ್ಳುತ್ತಿದ್ದ. ಅಷ್ಟೇ ಅಲ್ಲ, ಈ ಕಾರ್ಯಕ್ಕಾಗಿ ಇದುವರೆಗೆ ತನ್ನ ಶತ್ರುಗಳಾಗಿದ್ದ ರಾಜರೊಂದಿಗೂ ರಾಜಿ ಮಾಡಿಕೊಂಡು ತನ್ನ ಧಾಳಿಯಲ್ಲಿ ಸಹಾಯ ಮಾಡುವಂತೆ ನೋಡಿಕೊಂಡಿದ್ದ. ಆದರೆ ಈ ಎಲ್ಲಾ ಪ್ರಯತ್ನಗಳೆಲ್ಲವೂ ನಿಷ್ಪ್ರಯೋಜಕವಾಗಿದ್ದವು. ಆದರೆ ಇಷ್ಟು ಸೋಲುಗಳಾದರೂ ಆತ ಧೃತಿಗೆಡಗಿಲ್ಲ. ಬದಲಿಗೆ ಇನ್ನಷ್ಟು ಕೆಚ್ಚಿನಿಂದ ಮರುಧಾಳಿಗೆ ಸನ್ನದ್ಧನಾಗುತ್ತಿದ್ದ. ಹೀಗೆ ಒಂದಲ್ಲಾ, ಎರಡಲ್ಲ, ಹದಿನೇಳು ಬಾರಿ ಆತ ಕೃಷ್ಣನನ್ನು ಕೊಲ್ಲಲು ಯತ್ನಿಸಿದ್ದ. ಆದರೆ ಪ್ರತಿ ಬಾರಿಯ ಧಾಳಿಯಲ್ಲಿಯೂ ಕೃಷ್ಣ ಆತನ ಸೈನ್ಯವನ್ನು ಮಾತ್ರವೇ ನಾಶ ಮಾಡುತ್ತಿದ್ದನೇ ಹೊರತು ಜರಾಸಂಧನನ್ನು ಹಾಗೇ ಬಿಡುತ್ತಿದ್ದ.

ಹದಿನೇಳನೇ ಆಕ್ರಮಣದ ಬಳಿಕವೇ ಜರಾಸಂಧನನು ಹತ್ಯೆ ಮಾಡಿದ ಕೃಷ್ಣ

ಹದಿನೇಳನೇ ಆಕ್ರಮಣದ ಬಳಿಕವೇ ಜರಾಸಂಧನನು ಹತ್ಯೆ ಮಾಡಿದ ಕೃಷ್ಣ

ಇದು ಜರಾಸಂಧನ ಹದಿನೇಳನೇ ಆಕ್ರಮಣವಾಗಿತ್ತು ಹಾಗೂ ಈ ಆಕ್ರಮಣದ ಬಳಿಕ ಜರಾಸಂಧನನ್ನು ಕೊಂದು ಈ ಆಕ್ರಮಣಗಳನ್ನು ಕೊನೆಗೊಳಿಸಬೇಕೆಂದು ಕೃಷ್ಣ ಯೋಜಿಸಿದ್ದ. ಜರಾಸಂಧ ಇಬ್ಬರು ತಾಯಂದಿರ ಗರ್ಭದಿಂದ ಎರಡು ಭಾಗಗಳಲ್ಲಿ ಜನಿಸಿದ್ದ ಹಾಗೂ ಈ ಎರಡೂ ಭಾಗಗಳನ್ನು ಜರಾ ಎಂಬ ರಾಕ್ಷಸಿ ಒಂದಾಗಿಸಿ ಈತನಿಗೆ ಜೀವ ನೀಡಿದ್ದಳು. ಇದೇ ಕಾರಣಕ್ಕೆ ಜರಾಸಂಧ (ಜರಾಳಿಂದ ಸಂಧಿಸಲ್ಪಟ್ಟ) ಎಂಬ ಹೆಸರನ್ನು ಇಡಲಾಗಿತ್ತು. ಅಲ್ಲದೇ ಈತನನ್ನು ಕೊಂದರೆ ತಕ್ಷಣವೇ ಆತ ಮತ್ತೊಮ್ಮೆ ಜೀವಿತನಾಗುವ ವರವನ್ನೂ ಪಡೆದಿದ್ದ. ಈತನನ್ನು ಕೊಲ್ಲುವ ಒಂದೇ ವಿಧಾನವೆಂದರೆ ಈತ ಹುಟ್ಟಿದಾಗ ಹೇಗೆ ಎರಡು ಭಾಗಗಳನ್ನು ಜೋಡಿಸಲಾಗಿತ್ತೂ ಹಾಗೇ ಎರಡಾಗಿ ವಿಭಾಜಿಸಬೇಕಾಗಿತ್ತು. ಈ ವಿಷಯ ತಿಳಿದಿದ್ದ ಕೃಷ್ಣ ಇದೇ ವಿಧಾನದಲ್ಲಿ ಜರಾಸಂಧನನ್ನು ಕೊಲ್ಲಲು ಯೋಜಿಸಿದ್ದ, ಹೇಗೆ? ಮುಂದೆ ಓದಿ.

Most Read: ಶ್ರೀ ಕೃಷ್ಣಾವತಾರದ ಸಮಾಪ್ತಿ; ನೀವು ಕೇಳರಿಯದ ಕಥೆಗಳು

ಜರಾಸಂಧನನ್ನು ಕೊಲ್ಲಲು ಕೃಷ್ಣನ ಯೋಜನೆ ಹೀಗಿತ್ತು

ಜರಾಸಂಧನನ್ನು ಕೊಲ್ಲಲು ಕೃಷ್ಣನ ಯೋಜನೆ ಹೀಗಿತ್ತು

ಒಮ್ಮೆ ಯುಧಿಷ್ಠಿರನಿಗೆ ರಾಜಸೂಯ ಯಜ್ಞವನ್ನು ಮಾಡುವ ಬಯಕೆಯುಂಟಾಗಿತ್ತು. ಆದರೆ ಈ ಯಜ್ಞವನ್ನು ನಡೆಸುವ ವ್ಯಕ್ತಿ ಕಡ್ಡಾಯವಾಗಿ ಚಕ್ರವರ್ತಿಯಾಗಿರಬೇಕಿತ್ತು ಹಾಗೂ ಇತರ ಎಲ್ಲಾ ರಾಜರೂ ಆತನನ್ನು ತಮ್ಮ ಚಕ್ರವರ್ತಿ ಎಂದು ಒಪ್ಪಿಕೊಂಡಿರಬೇಕಿತ್ತು. ಆದರೆ ಈತ ಚಕ್ರವರ್ತಿಯಾಗುವುದನ್ನು ಜರಾಸಂಧ ಎಂದಿಗೂ ಒಪ್ಪಿಕೊಳ್ಳಲು ಸಾಧ್ಯವೇ ಇರಲಿಲ್ಲ. ಹಾಗಾಗಿ ಯುಧಿಷ್ಠಿರ ಕೃಷ್ಣನಲ್ಲಿ ಸಹಾಯ ಬೇಡಿ ಬಂದಿದ್ದ.

ಈಗ ಕೃಷ್ಣ ಸಂಚೊಂದನ್ನು ರೂಪಿಸಿದ. ತಾನು ಭೀಮ ಮತ್ತು ಅರ್ಜುನರೊಡನೆ ಭಾಹ್ಮಣರಂತೆ ಮಾರುವೇಶ ಧರಿಸಿ ಮಗಧ ರಾಜ್ಯವನ್ನು ಪ್ರವೇಶಿಸಿ ಜರಾಸಂಧನನ್ನು ಕುಸ್ತಿ ಕಾಳಗಕ್ಕೆ ಆಹ್ವಾನಿಸುವುದು ಈ ಸಂಚಿನ ಯೋಜನೆಯಾಗಿತ್ತು. ಕುಸ್ತಿ ಎಂದರೆ ಜೀವ ಬಿಡುತ್ತಿದ್ದ ಜರಾಸಂಧ ಬಂದೇ ಬರುತ್ತಾನೆ ಎಂಬ ನಂಬಿಕೆ ಇವರಿಗಿತ್ತು. ಅಂತೆಯೇ ಜರಾಸಂಧ ಕುಸ್ತಿಯಾಡಲು ಬಂದ. ಭೀಮ ಕುಸ್ತಿಪಟುವಾಗಿ ಜರಾಸಂಧನೊಡನೆ ಕುಸ್ತಿ ಆಡಲು ಪ್ರಾರಂಭಿಸಿದ. ಕುಸ್ತಿ ಒಂದೆರಡಲ್ಲ, ಸತತ ನಾಲ್ಕು ದಿನಗಳವರೆಗೆ ಮುಂದುವರೆದಿತ್ತು, ಆದರೆ ಬಲಶಾಲಿಯಾಗಿದ್ದ ಭೀಮನಿಗೂ ಜರಾಸಂಧನನ್ನು ಕೊಲ್ಲಲು ಕಷ್ಟವಾಗಿತ್ತು. ಆಗ ಕೃಷ್ಣ ಜರಾಸಂಧನನ್ನು ಕೊಲ್ಲುವುದು ಹೇಗೆ ಎಂದು ಸೂಚ್ಯವಾಗಿ ಭೀಮನಿಗೆ ತಿಳಿಸಿದ. ಇದಕ್ಕಾಗಿ ಎಲೆಯೊಂದನ್ನು ತೆಗೆದುಕೊಂಡು ಇದನ್ನು ಎರಡು ಭಾಗಳನ್ನಾಗಿ ಸೀಳಿ ಎರಡು ವಿರುದ್ಧ ದಿಕ್ಕುಗಳಿಗೆ ಎಸೆದ (ಕೆಲವು ಕಥೆಗಳಲ್ಲಿ ಎಲೆಯ ಬದಲು ಮರದ ಚಿಕ್ಕ ಕಡ್ಡಿಯನ್ನು ಬಳಸಿದ್ದ ಉಲ್ಲೇಖವಿದೆ). ಈ ವಿವರವನ್ನು ಅರ್ಥ ಮಾಡಿಕೊಂಡ ಭೀಮ ತನ್ನ ಒಂದು ಕಾಲಿನಿಂದ ಜರಾಸಂಧನ ಒಂದು ಕಾಲನ್ನು ಒತ್ತಿ ಹಿಡಿದು ಎರಡೂ ಕೈಗಳಿಂದ ಇನ್ನೊಂದು ಕಾಲನ್ನು ಸೆಳೆದು ಇಡಿಯ ದೇಹವನ್ನು ಎರಡಾಗಿ ಸೀಳಿಬಿಟ್ಟ ಹಾಗೂ ಎರಡೂ ಭಾಗಗಳು ಮತ್ತೆ ಒಂದಾಗದಂತೆ ಭಿನ್ನವಾದ ದಿಕ್ಕುಗಳಲ್ಲಿ ಎಸೆದುಬಿಟ್ಟ.

ಬಲರಾಮನ ಪ್ರಶ್ನೆಗಳಿಗೆ ಕೃಷ್ಣನ ಉತ್ತರ

ಬಲರಾಮನ ಪ್ರಶ್ನೆಗಳಿಗೆ ಕೃಷ್ಣನ ಉತ್ತರ

ಕಂಸನ ದೊಡ್ಡ ಬೆಂಬಲಿಗನಾದ ಜರಾಸಂಧನನ್ನು ಕೊಂದ ಎಷ್ಟೋ ದಿನಗಳ ಬಳಿಕ ಬಲರಾಮ ಮತ್ತು ಕೃಷ್ಣ ಯಾವುದೋ ವಿಷಯವನ್ನು ಚರ್ಚಿಸುತ್ತಿದ್ದರು. ಬಲರಾಮ ಕೃಷ್ಣನ ಹಿರಿಯ ಸಹೋದರನಾಗಿದ್ದ. ಜರಾಸಂಧನನ್ನು ಕೊಲ್ಲಲು ಹಲವಾರು ಅವಕಾಶಗಳು ಮೊದಲೇ ಸಿಕ್ಕಿದ್ದರೂ ಆಗ ಕೊಲ್ಲದೇ ಈಗ ಹದಿನೇಳು ಆಕ್ರಮಣಗಳ ಬಳಿಕವೇ ಕೊಲ್ಲಲು ಕಾರಣವೇನು ಎಂದು ವಿಚಾರಿಸಿದ. ಇದಕ್ಕೆ ಉತ್ತರಿಸಿದ ಕೃಷ್ಣ ಹೀಗೆ ವಿವರಿಸಿದ: ಪ್ರತಿಬಾರಿ ಜರಾಸಂಧನ್ನು ಸೋಲಿಸಿದಾಗಲೂ ಮುಂದಿನ ಬಾರಿ ಆತ ಹೊಸ ಸೈನ್ಯದೊಡನೆ ಬರುತ್ತಿದ್ದ. ಈ ಸೈನ್ಯದಲ್ಲಿ ಅಕ್ಕಪಕ್ಕದ ಇತರ ಪ್ರಬಲ ರಾಜರ ಸೈನಿಕರೂ ಇರುತ್ತಿದ್ದರು ಹಾಗೂ ಇವರಲ್ಲಿ ಹೆಚ್ಚಿನವರು ದುರುಳರೂ ಮೋಸಗಾರರೂ ಆಗಿದ್ದರು. ಹಾಗಾಗಿ ಈ ದುಷ್ಟರನ್ನು ಒಂದೇ ಸ್ಥಳದಲ್ಲಿ ಕೊಂದು ಅವರಿಂದಾಗುವ ಅನಾಹುತದಿಂದ ಈ ಭೂಮಿಯನ್ನು ರಕ್ಷಿಸಲು ಕೃಷ್ಣನಿಗೆ ಜರಾಸಂಧನಿಂದ ಒಂದು ವಿಧದಲ್ಲಿ ಉಪಕಾರವೇ ಆಗುತ್ತಿತ್ತು. ಈ ಧಾಳಿಯಲ್ಲಿ ಸೇನೆ ನಾಶವಾದ ಬಳಿಕ ಜರಾಸಂಧ ಮುಂದಿನ ಬಾರಿ ಬೇರೆ ರಾಜ್ಯಗಳ ಸೈನ್ಯವನ್ನು ಕರೆತರುತ್ತಿದ್ದ ಹಾಗೂ ಕೃಷ್ಣ ಜರಾಸಂಧನನ್ನು ಕೊಲ್ಲದೇ ಈ ದುಷ್ಟರನ್ನು ಮಾತ್ರವೇ ಕೊಲ್ಲುತ್ತಿದ್ದ. ಅಂದರೆ ಉಳಿದ ದುಷ್ಟರನ್ನು ತರಲೆಂದೇ ಆತ ಜರಾಸಂಧನನ್ನು ಜೀವಂತವಾಗಿ ಬಿಡುತ್ತಿದ್ದ. ಹೀಗೇ ಹದಿನೇಳು ಪ್ರಯತ್ನಗಳ ಮೂಲಕ ಭೂಮಿಯ ಮೇಲಿದ್ದ ಎಲ್ಲಾ ದುಷ್ಟರನ್ನು ನಿರ್ಮೂಲನೆ ಮಾಡಿದ ಬಳಿಕವೇ ಕೃಷ್ಣ ಜರಾಸಂಧನನ್ನು ಕೊಲ್ಲಲು ಯೋಜಿಸಿದ್ದ. ತನ್ನ ಪ್ರಶ್ನೆಗೆ ಕೃಷ್ಣನ ಈ ಉತ್ತರ ಬಲರಾಮನನ್ನು ಮತ್ತೊಮ್ಮೆ ಸಂತುಷ್ಟಗೊಳಿಸಿತ್ತು.

English summary

Why Krishna Did Not Kill Jarasandh Until 17 Attacks From Him?

Jarasandh was the father in law of Kamsa. One of the aims behind Lord Vishnu's birth as Krishna was to kill Kamsa. However, his death at the hands of Krishna invited the wrath of Jarasandh. In retaliation, he attacked Lord Krishna's kingdom 17 times, though all in vain. Krishna killed him only after the 17th attack.
X
Desktop Bottom Promotion