For Quick Alerts
ALLOW NOTIFICATIONS  
For Daily Alerts

ವಸಂತ ಮಾಸದಲ್ಲಿ ಆಚರಿಸುವ ಹೋಳಿ ಹಬ್ಬದ ಮಹತ್ವವೇನು?

|

ಹೋಳಿ ಭಾರತದ ಅತ್ಯಂತ ದೊಡ್ಡ ಹಬ್ಬ. ಹಬ್ಬ ಹತ್ತಿರವಾಗುತ್ತಿದ್ದಂತೆ ಅದನ್ನು ಆಚರಿಸುವ ಉಮೇದೂ ನಮ್ಮಲ್ಲಿ ಹೆಚ್ಚಾಗುತ್ತದೆ. ಹೋಳಿ ಬಣ್ಣಗಳ ಹಬ್ಬವಾಗಿದ್ದು ದೂರದ ಊರಲ್ಲರಿವವರು ತಮ್ಮ ತಾಯ್ನಾಡಿಗೆ ಹಬ್ಬವನ್ನು ಆಚರಿಸುವುದಕ್ಕಾಗಿ ಮರಳುತ್ತಾರೆ.

ವಸಂತ ಮಾಸದಲ್ಲಿ ಹೋಳಿ ಹಬ್ಬವನ್ನು ಆಚರಿಸುತ್ತಾರೆ. ಚಳಿಗಾಲದ ಕೊನೆಯನ್ನು ವಸಂತದ ಆಗಮನವನ್ನು ಸಾರುವ ಹಬ್ಬವಾಗಿದೆ ಹೋಳಿ. ಬಣ್ಣಗಳನ್ನು ಪರಸ್ಪರ ಎರಚಿಕೊಳ್ಳುವ ಮೂಲಕ ಜನರು ಈ ಹಬ್ಬವನ್ನು ಆಚರಿಸುತ್ತಾರೆ. ಪಲ್ಗುಣ ಮಾಸದಲ್ಲಿ ಜನರು ಹೋಳಿ ಹಬ್ಬವನ್ನು ಆಚರಿಸುತ್ತಾರೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಹೋಳಿ ಆಚರಣೆ ಬರೀ ಬಣ್ಣದ ಹಬ್ಬ ಮಾತ್ರವಲ್ಲ!

ಯಾವುದೇ ಜಾತಿ ಧರ್ಮದ ಭೇದವಿಲ್ಲದೆ ಹೋಳಿಯನ್ನು ಪ್ರತಿಯೊಬ್ಬರೂ ಭಾರತದಲ್ಲಿ ಆಚರಿಸುತ್ತಾರೆ. ಹೋಳಿಯನ್ನು ಏಕೆ ಆಚರಿಸುತ್ತಾರೆ ಎಂಬುದು ನಿಮಗೆ ತಿಳಿದಿದೆಯೇ? ಬನ್ನಿ ಇಂದಿನ ಲೇಖನದಲ್ಲಿ ಹೋಳಿ ಹಬ್ಬವನ್ನು ಏಕೆ ಆಚರಿಸುತ್ತಾರೆ ಮತ್ತು ಅದಕ್ಕಿರುವ ಪ್ರಾಮುಖ್ಯತೆಯನ್ನು ಅರಿತುಕೊಳ್ಳೋಣ.

Why Is Holi Celebrated?

ಹೋಲಿಕನ ಕಥೆ:
ಹೋಲಿಕನ ಕಥೆಯೊಂದಿಗೆ ಹೋಳಿ ಹಬ್ಬ ಸಂಯೋಜನೆಗೊಂಡಿದೆ. ಹಿರಣ್ಯಕಶಿಪುವಿನ ಸಹೋದರಿ ಹೋಲಿಕಾ. ಹಿರಣ್ಯಕಶಿಪು ತನ್ನ ರಾಜ್ಯದಲ್ಲಿ ದೇವರನ್ನು ಪೂಜಿಸುವುದನ್ನು ನಿಷೇಧಿಸಿದ್ದ. ಆದರೆ ಆತನ ಮಗ ಪ್ರಹ್ಲಾದ ವಿಷ್ಣು ದೇವರ ಪರಮ ಭಕ್ತನಾಗಿದ್ದ. ಎಲ್ಲಾ ಪ್ರಯತ್ನಗಳನ್ನು ಮಾಡಿದ್ದರೂ ತನ್ನ ಪುತ್ರ ಪ್ರಹ್ಲಾದ ವಿಷ್ಣುವನ್ನು ಆರಾಧನೆ ಮಾಡದಂತೆ ತಡೆಯುವುದು ಹಿರಣ್ಯಕಶಿಪುವಿನಿಂದ ಸಾಧ್ಯವಾಗಲಿಲ್ಲ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಹೋಳಿಯಲ್ಲಿ ಕೂದಲು ಹಾಗೂ ತ್ವಚೆ ಸಂರಕ್ಷಣೆಗೆ ಟಿಪ್ಸ್

ಆದ್ದರಿಂದ ಕೊನೆಗೆ ಹಿರಣ್ಯಕಶಿಪು ತನ್ನ ಮಗನನ್ನು ದಂಡಿಸಲು ತೀರ್ಮಾನಿಸಿದ. ಇದಕ್ಕಾಗಿ ಬೆಂಕಿಯು ಸುಡದಂತೆ ವರವನ್ನು ಪಡೆದಿದ್ದ ತನ್ನ ತಂಗಿ ಹೋಲಿಕಾನ ಸಹಾಯವನ್ನು ಹಿರಣ್ಯಕಶಿಪು ಪಡೆಯುತ್ತಾನೆ. ತನ್ನ ಮಗನನ್ನು ಆಕೆಯ ತೊಡೆಯ ಮೇಲೆ ಕುಳ್ಳಿರಿಸಲು ಹಿರಣ್ಯಕಶಿಪು ತಂಗಿಯಲ್ಲಿ ಕೇಳಿದನು. ಹೋಲಿಕಾ ಅಣ್ಣನ ಆಣತಿಯಂತೆ ಹಾಗೆ ಮಾಡುತ್ತಾಳೆ. ಆದರೆ ಈ ಪಾಪಕೃತ್ಯವನ್ನು ಹೋಲಿಕಾ ಮಾಡಿದ್ದರಿಂದಾಗಿ, ಆಕೆಯ ವರ ನಿಷ್ಫಲವಾಗುತ್ತದೆ. ಹೋಲಿಕಾ ಸುಟ್ಟು ಬೂದಿಯಾಗುತ್ತಾಳೆ ಪ್ರಹ್ಲಾದ ಸುರಕ್ಷಿತವಾಗಿ ಬೆಂಕಿಯಿಂದ ಹೊರಬರುತ್ತಾನೆ.

ಅದಕ್ಕಾಗಿ ಪ್ರತೀ ವರ್ಷ ಹೋಲಿಯ ಮುನ್ನ ಹಿಂದೂ ಮನೆಗಳಲ್ಲಿ ಹೋಲಿಕನನ್ನು ಸುಡುತ್ತಾರೆ. ಮನೆಯ ಎಲ್ಲಾ ಸದಸ್ಯರು ಸೇರಿ ದೀಪೋತ್ಸವವನ್ನು ರಚಿಸುತ್ತಾರೆ. ಈ ದೀಪೋತ್ಸವವವು ಎಲ್ಲಾ ದುಷ್ಟ ಶಕ್ತಿಗಳನ್ನು ಪಾಪಗಳನ್ನು ಸುಡುತ್ತದೆ ಎಂಬ ನಂಬಿಕೆ ಇದೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಮೈಗೆ ಮೆತ್ತಿದ ಬಣ್ಣ ಹೋಗಲಾಡಿಸಬೇಕೆ?

ಹೋಳಿಯ ಪ್ರಾಮುಖ್ಯತೆ:
ಹೋಳಿಯ ದಿನದಂದು ಮಕ್ಕಳಾದಿಯಾಗಿ ದೊಡ್ಡರೂ ಕೂಡ ಸಂಭ್ರಮ ಸಡಗರದಿಂದ ಈ ಹಬ್ಬವನ್ನು ಆಚರಿಸುತ್ತಾರೆ. ಬಣ್ಣವನ್ನು ಎರಚುತ್ತಾ ಪಿಚಕಾರಿಯನ್ನು ಹೊಡೆಯುತ್ತಾ ಸಂತೋಷದಿಂದ ಹಬ್ಬದಲ್ಲಿ ಪಾಲ್ಗೊಳ್ಳುತ್ತಾರೆ. ಈ ಹಬ್ಬ ಮನೆಯ ಪ್ರತಿಯೊಬ್ಬ ಸದಸ್ಯರನ್ನು ಒಂದುಗೂಡಿಸುತ್ತದೆ ಮತ್ತು ಹಬ್ಬದ ಸಡಗರವನ್ನು ಪ್ರತಿಯೊಬ್ಬರಲ್ಲಿ ತುಂಬುತ್ತದೆ.

ಕೆಟ್ಟದ್ದು ಒಳ್ಳೆಯದರ ಮುಂದೆ ತಲೆಬಾಗಲೇಬೇಕು ಎಂಬ ಸಂದೇಶವನ್ನು ಹೋಳಿ ಹಬ್ಬ ಸಾರುತ್ತದೆ. ದುಷ್ಕ್ರತ್ಯಗಳು ದೇವರ ಶಕ್ತಿಯ ಎದುರು ಎಂದಿಗೂ ಜಯವನ್ನು ಪಡೆಯಲು ಸಾಧ್ಯವಿಲ್ಲ ಎಂಬ ಸಾರ ಈ ಹಬ್ಬದ ಹಿಂದಿದೆ. ಹೋಲಿಕನಂತೆ ಕೆಟ್ಟ ಶಕ್ತಿಗಳು, ದುಷ್ಟ ಆಲೋಚನೆಗಳು ನಾಶವಾಗಿ ಹೊಸದರ ಪ್ರಾರಂಭದ ಕಡೆಗೆ ಮನುಷ್ಯ ಮುನ್ನುಗ್ಗುತ್ತಾನೆ.

English summary

Why Is Holi Celebrated?

Holi is one of the most popular festivals of India. As the festival is nearing, the enthusiasm of celebrating it is also increasing. This festival of colours is famous throughout the globe and people outside India make it a point to visit the country at this time of the year.
Story first published: Thursday, March 6, 2014, 16:12 [IST]
X
Desktop Bottom Promotion