Latest Updates
-
ರೆಪೋ ದರ ಸ್ಥಿರ: ಸಾಲಗಾರರೇ ಎಚ್ಚರ, ನಿಮ್ಮ EMI ಹೊರೆಯನ್ನು ಕಡಿಮೆ ಮಾಡಲು ಈ ಸ್ಮಾರ್ಟ್ ಟಿಪ್ಸ್ ಫಾಲೋ ಮಾಡಿ -
ಬೆಂಗಳೂರಿನಲ್ಲಿ 'ಫ್ರೀಡಂ ಫ್ರಮ್ ವೇಸ್ಟ್': ದಂಡದಿಂದ ಪಾರಾಗಲು ಆಗಸ್ಟ್ 15ರೊಳಗೆ ಈ ಕೆಲಸ ಮಾಡಿ! -
8,000mAh ಬ್ಯಾಟರಿಯ ರೆಡ್ಮಿ ನೋಟ್ 17 ಲಾಂಚ್: ಖರೀದಿಸುವ ಮುನ್ನ ನೀವು ತಿಳಿಯಲೇಬೇಕಾದ ಪ್ರಮುಖ ವಿಷಯಗಳಿವು! -
ಬಾಣಂತಿಯರಿಗೆ ಬೆಂಬಲ: ತಾಯಿಯ ಆರೋಗ್ಯಕ್ಕೆ ತಂದೆಯ ಸಣ್ಣ ಸಹಾಯ ಎಷ್ಟು ಮುಖ್ಯ? -
8,000mAh ಬ್ಯಾಟರಿಯ POCO M8 Power ಲಾಂಚ್: ಈ ಫೋನ್ ಖರೀದಿಸುವ ಮುನ್ನ ನೀವು ತಿಳಿಯಲೇಬೇಕಾದ ವಿಷಯಗಳಿವು! -
ರಾಷ್ಟ್ರೀಯ ಮೂಳೆ ಮತ್ತು ಕೀಲು ದಿನ: ಬೆನ್ನು ಮತ್ತು ಮೊಣಕಾಲು ನೋವಿಗೆ ಈ 10 ನಿಮಿಷದ ವ್ಯಾಯಾಮವೇ ಮದ್ದು! -
ಫ್ರೆಂಡ್ಶಿಪ್ ಡೇ ವಿಶ್ ಮಾಡೋಕೆ ಮರೆತಿದ್ದೀರಾ? ನಿಮ್ಮ ಸ್ನೇಹಿತರ ಮನ ಗೆಲ್ಲಲು ಇಲ್ಲಿದೆ ಸಿಂಪಲ್ ಟಿಪ್ಸ್! -
ಅಮೆಜಾನ್-ಫ್ಲಿಪ್ಕಾರ್ಟ್ ಸೇಲ್: 999 ರೂ. ಒಳಗಿನ ಬೆಸ್ಟ್ ಡೀಲ್ಗಳು ಮತ್ತು ಶಾಪಿಂಗ್ ಟಿಪ್ಸ್! -
ಶ್ರಾವಣ ಸೋಮವಾರದ ಉಪವಾಸ: ಆಫೀಸ್ ಕೆಲಸದ ನಡುವೆಯೂ ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿವೆ ಸರಳ ಟಿಪ್ಸ್! -
ಟಾಟಾ ಮುಂಬೈ ಮ್ಯಾರಥಾನ್ 2027: ನೋಂದಣಿಗೆ ಸಿದ್ಧರಾಗಿ, ಓಟಗಾರರಿಗೆ ಇಲ್ಲಿದೆ ಮಹತ್ವದ ಸಲಹೆಗಳು!
ಹಿಂದೂ ಧರ್ಮದಲ್ಲಿ ವಾರದ ವಿಶಿಷ್ಟ ದಿನಗಳಲ್ಲಿ ನಾನ್‌ವೆಜ್ ಸೇವಿಸುವುದಿಲ್ಲ ಯಾಕೆ ಗೊತ್ತೇ?

ಕೆಲವು ವಿಶಿಷ್ಟ ದಿನಗಳಲ್ಲಿ ಹಿಂದೂ ಧರ್ಮೀಯರು ಸಾಮಾನ್ಯ ಮಾಂಸಾಹಾರಗಳಾದ ಕೋಳಿ, ಕುರಿ, ಮೀನು ಅಥವಾ ಮೊಟ್ಟೆಯನ್ನು ಸೇವಿಸುವುದಿಲ್ಲ. ಇವುಗಳಲ್ಲಿ ವಿಶೇಷವಾಗಿ ಮಂಗಳವಾರ, ಗುರುವಾರ ಮತ್ತು ಶನಿವಾರಗಳು ಪ್ರಮುಖವಾಗಿವೆ ಹಾಗೂ ವರ್ಷದ ಕೆಲವು ಪವಿತ್ರ ದಿನಗಳಾದ ಏಕಾದಶಿ, ಸಂಕ್ರಾಂತಿ, ದಸರಾ, ಸಂಕಷ್ಟಿ ಚತುರ್ಥಿ, ಅಂಗಾರಕಿ ಚತುರ್ಥಿ, ಗುಡಿಪಾಡ್ವಾ, ಅಕ್ಷಯ ತೃತೀಯ ಹಾಗೂ ದೀಪಾವಳಿಯ ಎಲ್ಲಾ ದಿನಗಳು ಮಾಂಸಾಹಾರ ಸೇವನೆರಹಿತ ದಿನಗಳಾಗಿವೆ.
ವಾರದ ದಿನಗಳನ್ನು ಹೊರತುಪಡಿಸಿ ಈ ವಿಶಿಷ್ಟ ದಿನಗಳಲ್ಲಿ ಮಾಂಸಾಹಾರ ಸೇವಿಸದೇ ಇರಲು ಅಪ್ಪಟ ಧಾರ್ಮಿಕ ಕಾರಣಗಳಿವೆ. ಹಿಂದೂ ಧರ್ಮದಲ್ಲಿ ಪ್ರಾಣಿಗಳನ್ನು ಕೊಲ್ಲುವುದು ಪಾಪ ಎಂದು ಪರಿಗಣಿಸಲಾಗುತ್ತದೆ. ಹಾಗಾಗಿ ಕನಿಷ್ಟ ಈ ದಿನಗಳಲ್ಲಾದರೂ ಮಾಂಸಾಹಾರ ಸೇವಿಸದೇ ಪ್ರಾಣಿವಧೆಯನ್ನು ನಡೆಸದಿರಲು ಹಾಗೂ ಈ ದಿನದ ಪಾವಿತ್ರ್ಯತೆಯನ್ನು ಕಾಪಾಡಲು ಯತ್ನಿಸುತ್ತಾರೆ.

ಸೋಮವಾರ, ಗುರುವಾರ ಮತ್ತು ಶನಿವಾರ
ಸೋಮವಾರ, ಗುರುವಾರ ಮತ್ತು ಶನಿವಾರಗಳಂದು ಮಾಂಸಾಹಾರ ಸೇವಿಸದೇ ಇರಲು ಕಾರಣವೇನೆಂದರೆ ಮಾನವಾದ ನಾವು ಮಿಶ್ರಾಹಾರಿಗಳಾಗಿದ್ದು ನಮಗೆ ಸಸ್ಯಾಹಾರವೂ ಮಾಂಸಾಹಾರವೂ ಮಿಶ್ರರೂಪದಲ್ಲಿ ಬೇಕೇ ಹೊರತು ವಾರದ ಎಲ್ಲಾ ದಿನ ಮಾಂಸಾಹಾರದ ಅಗತ್ಯವೇ ಇಲ್ಲ. ಅಲ್ಪ ಪ್ರಮಾಣದ ಮಾಂಸಾಹಾರದಿಂದಲೂ ಅಗತ್ಯಕ್ಕೆ ತಕ್ಕಷ್ಟು ಪ್ರಮಾಣದ, ಸಸ್ಯಜನ್ಯ ಆಹಾರಗಳಿಂದ ಸಿಗದ ಪೋಷಕಾಂಶಗಳು, ವಿಶೇಷವಾಗಿ ಕಬ್ಬಿಣ ಮತ್ತು ವಿಟಮಿನ್ ಬಿ12 ಗಳು ಲಭಿಸುತ್ತವೆ. ಇದೇ ಕಾರಣದಿಂದ ಮಾನವರು ಪರಿಪೂರ್ಣ ಮಾಂಸಾಹಾರಿಗಳಾಗುವ ಅವಶ್ಯಕತೆ ಇಲ್ಲ. ಹಾಗಾಗಿ ವಾರದ ಎಲ್ಲಾ ದಿನ ಮಾಂಸಾಹಾರ ಸೇವಿಸಿದರೆ ಈ ಆಹಾರಕ್ರಮವನ್ನು ನಮ್ಮ ದೇಹ ವ್ಯಸನವನ್ನಾಗಿ ಪರಿಗಣಿಸುತ್ತದೆ. ಹಾಗಾಗಿ ಎಲ್ಲಾ ದಿನ ಮಾಂಸಾಹಾರ ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದಲ್ಲ.

ಅತಿಯಾದ ಮಾಂಸಾಹಾರದಿಂದ ಈ ಎಲ್ಲಾ ಸಮಸ್ಯೆ ಕಾಡಬಹುದು
ಅತಿಯಾದ ಮಾಂಸಾಹಾರದಿಂದ ಮೂಲವ್ಯಾಧಿ, ಮೂತ್ರಪಿಂಡದ ಕಲ್ಲುಗಳು, ಕರುಳಿನ ಕ್ಯಾನ್ಸರ್, ಅಧಿಕ ರಕ್ತದೊತ್ತಡ, ಹೃದಯಾಘಾತ ಮೊದಲಾದವು ಎದುರಾಗುವ ಸಾಧ್ಯತೆ ಹೆಚ್ಚುತ್ತದೆ. ಅಲ್ಲದೇ ಒಮ್ಮೆ ಮಾಂಸಾಹಾರ ಒಗ್ಗಿಬಿಟ್ಟಿತೆಂದರೆ ಬೇರೆ ಆಹಾರವನ್ನೇ ದೇಹ ಬಯಸದೇ ಮಾನಸಿಕವಾಗಿಯೂ ಬಳಲಬಹುದು. ಹಾಗಾಗಿ, ಹಿಂದೂ ಧರ್ಮ ಈ ಕಟ್ಟುಪಾಡಿನ ಮೂಲಕ ದೇಹ ಮಾಂಸಾಹಾರದ ವ್ಯಸನಕ್ಕೆ ಒಳಗಾಗದಿರುವಂತೆ ತಡೆಯುತ್ತದೆ.

ವಾರದ ನಾಲ್ಕು ದಿನಗಳು
ಹಾಗಾಗಿ ವಾರದ ನಾಲ್ಕು ದಿನಗಳನ್ನು ನಾಲ್ಕು ಭಿನ್ನ ದೇವರಿಗೆ ಮುಡಿಪಾಗಿಸಿ ಈ ದಿನಗಳಂದು ಮಾಂಸಾಹಾರವನ್ನು ನಿಷೇಧಿಸಿದೆ. ಇವೆಂದರೆ:
ಸೋಮವಾರ: ಶಿವ ದೇವರಿಗೆ ಮೀಸಲು
ಮಂಗಳವಾರ: ಹನುಮಂತ ದೇವರಿಗೆ ಮೀಸಲು
ಗುರುವಾರ: ದತ್ತಾತ್ರೇಯ ದೇವರು ಮತ್ತು ಸಾಯಿ ಬಾಬಾ ಸ್ವಾಮಿ
ಹಾಗೂ ಶನಿವಾರ: ಹನುಮಂತ ದೇವರು ಹಾಗೂ ವೆಂಕಟೇಶ್ವರ ಸ್ವಾಮಿ.

ಕೆಲವು ಕಡೆ ಎಲ್ಲಾ ವಾರಗಳಲ್ಲೂ ನಾನ್ ವೆಜ್ ಸೇವಿಸುವುದಿಲ್ಲ!
ಈ ದಿನಗಳನ್ನು ಭಾರತದ ಬಹುತೇಕ ಪ್ರದೇಶಗಳಲ್ಲಿ ಅನ್ವಯಿಸಿಕೊಂಡರೆ ಕೆಲವು ಭಾಗಗಳಲ್ಲಿ ಬುಧವಾರ ಮತ್ತು ಶುಕ್ರವಾರಗಳಂದೂ ಇತರ ದೇವರಿಗೆ ಮೀಸಲಾಗಿಡಲಾಗಿದೆ ಹಾಗೂ ಇವು ಪ್ರದೇಶದಿಂದ ಪ್ರದೇಶಕ್ಕೆ ಭಿನ್ನವಾಗಿರುವ ಕಾರಣ ಖಚಿತವಾದ ಮಾಹಿತಿಯನ್ನು ನೀಡುವುದು ಕಷ್ಟಕರ. ಕೆಲವು ಕಡೆಗಳಲ್ಲಂತೂ ವಾರದ ಎಲ್ಲಾ ದಿನಗಳನ್ನೂ ಒಂದಲ್ಲಾ ಒಂದು ದೇವರಿಗೆ ಮೀಸಲಾಗಿರಿಸಿ ಮಾಂಸಾಹಾರವನ್ನೇ ನಿಷೇಧಿಸಲಾಗಿದೆ.

ಇವೆಲ್ಲಾ ಆರೋಗ್ಯ ಕಾಪಾಡಿಕೊಳ್ಳುವ ಸಲುವಾಗಿ...
ಈ ಮೂಲಕ ಹಿಂದೂ ಧರ್ಮಿಯರ ಮೇಲೆ ಕೆಲವು ಧಾರ್ಮಿಕ ಕಟ್ಟುಪಾಡುಗಳನ್ನು ಹೇರುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾವಿರಾರು ವರ್ಷಗಳ ಹಿಂದೆಯೇ ಕ್ರಮವನ್ನು ಕೈಗೊಳ್ಳಲಾಗಿದ್ದು ಇಂದಿಗೂ ಅನುಯಾಯಿಗಳು ಈ ವಿಶಿಷ್ಟ ದಿನಗಳಲ್ಲಿ ಮಾಂಸಾಹಾರ ಸೇವಿಸದೇ ಧರ್ಮದ ಪಾಲನೆಯ ಮೂಲಕ ಆರೋಗ್ಯವನ್ನೂ ಕಾಪಾಡಿಕೊಂಡು ಬರುತ್ತಿದ್ದಾರೆ.



Click it and Unblock the Notifications