For Quick Alerts
ALLOW NOTIFICATIONS  
For Daily Alerts

ಸಂಕ್ರಾಂತಿಗೆ ಎಳ್ಳು-ಬೆಲ್ಲ ಏಕೆ: ಎಳ್ಳು ದಾನದಿಂದ ಏನು ಲಾಭ?

|

ಗ್ರಹಗಳ ರಾಜನಾಗಿರುವ ಸೂರ್ಯ ಧನುರಾಶಿಯಿಂದ ಮಕರ ರಾಶಿಗೆ ಪ್ರವೇಶಿಸುವುದನ್ನು ಮಕರ ಸಂಕ್ರಾಂತಿ ಎಂದು ಆಚರಿಸಲಾಗುತ್ತದೆ. ಮಕರ ಸಂಕ್ರಾಂತಿಯಂದು ಕರ್ನಾಟಕದಲ್ಲಿ ಎಳ್ಳು ಬೆಲ್ಲ ನೀಡಿ ಈ ಹಬ್ಬವನ್ನು ಆಚರಿಸಲಾಗುವುದು.

ಮಕರ ಸಂಕ್ರಾಂತಿ ದಿನ ಎಳ್ಳು-ಬೆಲ್ಲವನ್ನೇ ಏಕೆ ಮಾಡಲಾಗುತ್ತದೆ, ನಮ್ಮ ಹಿರಿಯರು ಈ ಆಹಾರ ಸೇವಿಸುವ ಸಂಪ್ರದಾಯ ಮಾಡಿರುವ ಹಿಂದಿನ ಕಾರಣವೇನು, ಸಂಕ್ರಾಂತಿಗೆ ಎಳ್ಳು-ಬೆಲ್ಲ ಬಳಸುವುದರ ಹಿಂದಿರುವ ವೈದಿಕ ಹಾಗೂ ವೈಜ್ಞಾನಿಕ ಕಾರಣವೇನು ಎಂದು ಈ ಲೇಖನದಲ್ಲಿ ಹೇಳಲಾಗಿದೆ ನೋಡಿ.

ವೈದಿಕ ಕಾರಣ:

ವೈದಿಕ ಕಾರಣ:

ಶಾಸ್ತ್ರಗಳ ಪ್ರಕಾರ ಮಕರ ಸಂಕ್ರಾಂತಿಗೆ ಸೂರ್ಯನು ಧನು ರಾಶಿಯಿಂದ ಮಕರ ರಾಶಿಗೆ ಪ್ರವೇಶಿಸುತ್ತಾನೆ. ಶನಿ ಮಕರ ರಾಶಿಯ ಅಧಿಪತಿ, ಆದರೆ ಸೂರ್ಯನ ಜೊತೆಗೆ ಶನಿಗೆ ಶತ್ರುತ್ವ ಇರುತ್ತದೆ, ಸೂರ್ಯ ಮಕರ ರಾಶಿಗೆ ಪ್ರವೇಶಿಸಿದಾಗ, ಇದರಿಂದ ಶನಿ ಯಾವುದೇ ತೊಂದರೆ ಉಂಟು ಮಾಡದಿರಲು ಎಳ್ಳು ದಾನ ಮಾಡಲಾಗುವುದು.

 ಗ್ರಹದೋಷ ನಿವಾರಣೆ ಮಾಡುವ ಎಳ್ಳು

ಗ್ರಹದೋಷ ನಿವಾರಣೆ ಮಾಡುವ ಎಳ್ಳು

ಈ ದಿನ ಎಳ್ಳು ದಾನ ಮಾಡಿದರೆ ಗ್ರಹ ದೋಷಗಳು ನಿವಾರಣೆಯಾಗುತ್ತದೆ. ಅಲ್ಲದೆ ಎಳ್ಳು ದಾನ ಮಾಡುವುದರಿಂದ ಪಾಪಕರ್ಮದಿಂದಲೂ ಮೋಕ್ಷ ಸಿಗುತ್ತದೆ ಎಂದು ಹೇಳಲಾಗುವುದು. ಈ ದಿನ ಎಳ್ಳು-ಬೆಲ್ಲ ದಾನ ಮಾಡಿದರೆ ಜಾತಕದಲ್ಲಿ ಸೂರ್ಯ ಮತ್ತು ಶನಿಯ ಸ್ಥಿತಿಯಿಂದ ಶಾಂತಿ ಲಭಿಸುತ್ತದೆ ಎಂದು ಹೇಳಲಾಗುವುದು

ಶನಿ ಸಾಡೆಸಾತಿಗೂ ಪರಿಹಾರ

ಶನಿ ಸಾಡೆಸಾತಿಗೂ ಪರಿಹಾರ

ಶನಿ ಸಾಡೆಸಾತಿ ಬಂದರೆ ವ್ಯಕ್ತಿಗೆ ತುಂಬಾ ಕಷ್ಟಗಳು ಬರುವುದು. ಇದರಿಂದ ಹೊರಬರಲು ಏಳು ವರ್ಷಗಳು ಬೇಕಾಗುವುದು. ಶನಿ ಸಾಡೆಸಾತಿಗೆ ಒಳಗಾಗಿ ತುಂಬಾ ಕಷ್ಟ ಅನುಭವಿಸುತ್ತಿರುವವರು ತಾಮ್ರದ ಪಾತ್ರೆಯಲ್ಲಿ ಕರಿಎಳ್ಳು ತುಂಬಿ ದಾನ ಮಾಡಬೇಕು ಎಂದು ಹೇಳಲಾಗುವುದು.

ಎಳ್ಳು ಬೆಲ್ಲ ತಿನ್ನುವುದರಿಂದ ಆರೋಗ್ಯಕ್ಕೂ ಲಾಭ

ಎಳ್ಳು ಬೆಲ್ಲ ತಿನ್ನುವುದರಿಂದ ಆರೋಗ್ಯಕ್ಕೂ ಲಾಭ

ಸಂಕ್ರಾಂತಿಯನ್ನು ಚಳಿಗಾಲದ ಮಧ್ಯಭಾಗದಲ್ಲಿ ಆಚರಿಸಲಾಗುವುದು. ಈ ಸಮಯದಲ್ಲಿ ಎಳ್ಳು ತಿಂದರೆ ಅದು ದೇಹವನ್ನು ಬೆಚ್ಚಗಿಡುತ್ತದೆ, ಬೆಲ್ಲದಲ್ಲಿರುವ ಪೋಷಕಾಂಶಗಳು ರೋಗ ನಿರೋಧಕ ಶಕ್ತಿ ಹೆಚ್ಚಿಸಿ, ಸೋಂಕು, ಬ್ಯಾಕ್ಟಿರಿಯಾಗಳ ವಿರುದ್ಧ ಹೋರಾಡುತ್ತದೆ. ಇನ್ನು ಇದಕ್ಕೆ ನೆಲಗಡಲೆ, ಕೊಬ್ಬರಿ ಬಳಸುವುದರಿಂದ ಕೂದಲು ಹಾಗೂ ತ್ವಚೆಯ ರಕ್ಷಣೆ ಮಾಡುತ್ತದೆ.

English summary

Why Do We Prepare Ellu Bella on Sankranti

Here we explain why do we prepare ellu bella on sankranti, have a look,
Story first published: Wednesday, January 13, 2021, 11:57 [IST]
X
Desktop Bottom Promotion