ಮನೆಯಲ್ಲಿ ಸದಾ ಹೀಗೆಯೇ 'ದೀಪ' ಹಚ್ಚಿ, ಶಾಂತಿ ಸಮೃದ್ಧಿಯಿಂದಿರಿ...

By: manu
Subscribe to Boldsky

ಮನೆಯಲ್ಲೊಂದು ಪುಟ್ಟ ದೀವಟಿಗೆ ಅಥವಾ ಹಣತೆ ಸದಾ ಉರಿಯುತ್ತಿರಬೇಕು. ಇದರಿಂದ ಸದಾ ದೇವರ ಅನುಗ್ರಹ ಮನೆಯನ್ನು ಕಾಯುತ್ತದೆ ಎಂದು ನಾವೆಲ್ಲಾ ಬಲ್ಲೆವು. ಇದರ ಜ್ವಾಲೆ ಬಾಳಿನಲ್ಲಿ ಕತ್ತಲನ್ನು ನಿವಾರಿಸಿ ಬೆಳಕು ಮೂಡಿಸುವ ಸಂಕೇತವಾಗಿದೆ. ಆದರೆ ಇದರ ಹಿಂದೆ ಒಂದು ವೈಜ್ಞಾನಿಕ ಕಾರಣವೂ ಇದೆ.

ಹಣತೆಯ ಜ್ವಾಲೆಗೆ ಸುತ್ತಲಿನ ಪರಿಸರದಲ್ಲಿ ಆಯಸ್ಕಾಂತೀಯ ಅಲೆಗಳನ್ನು ಸೃಷ್ಟಿಸುವ ಶಕ್ತಿಯಿದೆ. ಈ ಅಲೆಗಳು ವಿದ್ಯುದಾಯಸ್ಕಾಂತೀಯ ಶಕ್ತಿಯನ್ನು ಹೊಂದಿದ್ದು ಅತಿ ಕಡಿಮೆ ಪ್ರಮಾಣದಲ್ಲಿ ಚರ್ಮಕ್ಕೆ ನವಿರಾದ ಪ್ರಚೋದನೆ ನೀಡುತ್ತದೆ. ಇದರಿಂದ ಕನಿಷ್ಠ ಮೂರು ಗಂಟೆಗಳವರೆಗಾದರೂ ಚರ್ಮದ ಅಡಿಯಲ್ಲಿ ಸಾಗುವ ರಕ್ತಕಣಗಳನ್ನು ಹೆಚ್ಚು ಚುರುಕುಗೊಳಿಸುತ್ತದೆ. 

ಪ್ರಜ್ವಲಿಸುವ 'ದೀಪ', ಸಾಕ್ಷಾತ್ ದೇವಿಯ ಸ್ವರೂಪ

ಎರಡನೆಯದಾಗಿ ವಿಶೇಷ ಹಬ್ಬವಾದ ದೀಪಾವಳಿಯೂ ಅಕ್ಟೋಬರ್ ನವೆಂಬರ್ ತಿಂಗಳಲ್ಲಿ ಆಗಮಿಸುತ್ತದೆ. ಈ ಸಮಯದಲ್ಲಿ ಭೌಗೋಳಿಕವಾಗಿ ಭಾರತದ ಪಶ್ಚಿಮ ಭಾಗದಲ್ಲಿ ಜಗುರುವ ಕ್ಷೋಭೆಯಿಂದಾಗಿ ಉತ್ತರ ಭಾರತದಲ್ಲಿ ಮಳೆಯಾಗುತ್ತದೆ. ಈ ಮಳೆಯಿಂದಾಗಿ ಗಾಳಿಯಲ್ಲಿ ಹೆಚ್ಚುವ ತೇವಾಂಶ ಕೆಲವು ಬಗೆಯ ಕ್ರಿಮಿಗಳು ಹಾಗೂ ಬ್ಯಾಕ್ಟೀರಿಯಾಗಳು ಭಾರೀ ಸಂಖ್ಯೆಯಲ್ಲಿ ವೃದ್ಧಿಗೊಳ್ಳಲು ಕಾರಣವಾಗುತ್ತದೆ.

ಈ ಸಮಯದಲ್ಲಿ ಮನೆಯ ಸುತ್ತಲೂ ನೂರಾರು ದೀಪಗಳನ್ನು ಉರಿಸುವ ಮೂಲಕ ಗಾಳಿಯಲ್ಲಿ ತೇಲಾಡುತ್ತಿರುವ ಈ ಸೂಕ್ಷ್ಮ ಬ್ಯಾಕ್ಟೀರಿಯಾ ಮತ್ತು ಕ್ರಿಮಿಗಳನ್ನು ಕೊಲ್ಲಲು ಸಾಧ್ಯವಾಗುತ್ತದೆ. ದೀಪವನ್ನು ಹಚ್ಚಲು ಸಾಮಾನ್ಯವಾಗಿ ಹರಳೆಣ್ಣೆಯನ್ನು ಬಳಸಲಾಗುತ್ತದೆ. ಹೆಚ್ಚು ಹೊತ್ತು ಉರಿಯುತ್ತದೆ ಎಂಬುದು ಪ್ರಮುಖ ಕಾರಣವಾದರೆ ಬೇರೆ ಬೇರೆ ತೈಲಗಳನ್ನು ಉರಿಸುವ ಕಾರಣಗಳೂ ಬೇರೆ ಬೇರೆಯೇ ಇವೆ. ಬನ್ನಿ, ಇವುಗಳ ಮಹತ್ವವೇನೆಂದು ಅರಿಯೋಣ....

ಹಸುವಿನ ತುಪ್ಪದ ದೀಪ:

ಹಸುವಿನ ತುಪ್ಪದ ದೀಪ:

ಈ ದೀಪದ ಬೆಳಕು ಮನೆಯಲ್ಲಿ ತೇಜಸ್ಸು, ದೇವರ ಅನುಗ್ರಹ, ಸಮೃದ್ಧಿ ಹಾಗೂ ಆರೋಗ್ಯವನ್ನು ತರುತ್ತದೆ.

ಸಾಮಾನ್ಯ ಎಣ್ಣೆ

ಸಾಮಾನ್ಯ ಎಣ್ಣೆ

ಮನೆಯಲ್ಲಿ ನೆಮ್ಮದಿ ಹಾಗೂ ಜ್ಞಾನವನ್ನು ಹೆಚ್ಚಿಸುತ್ತದೆ.

ಬೇವಿನ ಎಣ್ಣೆ

ಬೇವಿನ ಎಣ್ಣೆ

ಇದರಿಂದ ಮನೆಯಲ್ಲಿ ಸಮೃದ್ಧಿ ಹೆಚ್ಚುತ್ತದೆ.

ಎಳ್ಳೆಣ್ಣೆ

ಎಳ್ಳೆಣ್ಣೆ

ಕಣ್ಣಿಗೆ ಕಾಣಿಸದ ಅಪಾಯ ಹಾಗೂ ಅಡ್ಡಿಗಳನ್ನು ನಿವಾರಿಸುತ್ತದೆ.

ಸಸ್ಯಜನ್ಯ ಎಣ್ಣೆ ಅಥವಾ ಸುಗಂಧವಿರುವ ಎಣ್ಣೆ

ಸಸ್ಯಜನ್ಯ ಎಣ್ಣೆ ಅಥವಾ ಸುಗಂಧವಿರುವ ಎಣ್ಣೆ

ಇದರ ಪರಿಮಳದಿಂದ ಮಾನಸಿಕ ಒತ್ತಡ ನಿವಾರಣೆಯಾಗುತ್ತದೆ.

ಹಣತೆಯನ್ನು ಹಚ್ಚಲು ಮಣ್ಣಿನ ಅಥವಾ ಹಿತ್ತಾಳೆ-ಯಾವುದು ಉತ್ತಮ?

ಹಣತೆಯನ್ನು ಹಚ್ಚಲು ಮಣ್ಣಿನ ಅಥವಾ ಹಿತ್ತಾಳೆ-ಯಾವುದು ಉತ್ತಮ?

ಸಾಮಾನ್ಯವಾಗಿ ಮಣ್ಣಿನ ಹಣತೆಯನ್ನು ಬಳಸಲಾಗುತ್ತದೆ. ಇದಕ್ಕೆ ಪ್ರಮುಖ ಕಾರಣವೆಂದರೆ ಇದು ಅತ್ಯಂತ ಅಗ್ಗ ಹಾಗೂ ಸುಲಭವಾಗಿ ಲಭ್ಯವಿರುತ್ತದೆ ಅಥವಾ ತಯಾರಿಸಿಕೊಳ್ಳಲು ಸಾಧ್ಯವಿದೆ.

ಹಣತೆಯನ್ನು ಹಚ್ಚಲು ಮಣ್ಣಿನ ಅಥವಾ ಹಿತ್ತಾಳೆ-ಯಾವುದು ಉತ್ತಮ?

ಹಣತೆಯನ್ನು ಹಚ್ಚಲು ಮಣ್ಣಿನ ಅಥವಾ ಹಿತ್ತಾಳೆ-ಯಾವುದು ಉತ್ತಮ?

ಆದರೆ ನಿಮಗೆ ಖರ್ಚು ಭರಿಸಲು ಸಾಧ್ಯವಿದೆ ಎಂದಾದಲ್ಲಿ ಹಿತ್ತಾಳೆ, ಬೆಳ್ಳಿ ಅಥವಾ ಚಿನ್ನದ್ದನ್ನೂ ಮಾಡಿಸಿಕೊಳ್ಳಬಹುದು. ನೆನಪಿರಲಿ! ದೀಪದ ಜ್ವಾಲೆ ಮುಖ್ಯವೇ ಹೊರತು ದೀಪವನ್ನು ತಯಾರಿಸಿದ ಸಾಮಾಗ್ರಿ ಅಲ್ಲ.

ಹಿಂದೂ ಧರ್ಮದ ಪ್ರಕಾರ....

ಹಿಂದೂ ಧರ್ಮದ ಪ್ರಕಾರ....

ಹಿಂದೂ ಧರ್ಮೀಯರು ಈ ಜ್ವಾಲೆಯನ್ನು ಜ್ಞಾನ, ಸಂತೋಷ, ಶಾಂತಿ, ವಿವೇಕ, ಸತ್ಯ ಹಾಗೂ ಸಮೃದ್ಧಿಯ ಸಂಕೇತವೆಂದು ಪರಿಗಣಿಸುತ್ತಾರೆ. ಹಲವು ದಂತಕಥೆಗಳಲ್ಲಿ ಹಾಗೂ ಪುರಾಣಗಳಲ್ಲಿ ದೀಪದ ಜ್ವಾಲೆಯನ್ನು ತಿಳಿವಳಿಕೆಯ ಸಂಕೇತವನ್ನಾಗಿ ಸೂಚಿಸಲಾಗಿದೆ.

ಜ್ಞಾನದೆಡೆ ಒಯ್ಯುವ ದಾರಿದೀಪ

ಜ್ಞಾನದೆಡೆ ಒಯ್ಯುವ ದಾರಿದೀಪ

ಇದು ಜ್ಞಾನದೆಡೆ ಒಯ್ಯುವ ದಾರಿದೀಪವೂ ಆಗಿದೆ. ಈ ಜ್ವಾಲೆಯ ಬೆಳಕನ್ನು ಪಡೆದ ಪ್ರತಿಯೊಬ್ಬರೂ ಜೀವನದಲ್ಲಿ ನೆಮ್ಮದಿಯ ಮನ ಮತ್ತು ಆತ್ಮವನ್ನು ಹೊಂದುವ ನಿಟ್ಟಿನಲ್ಲಿ ಸರಿಯಾದ ಮಾರ್ಗ ತುಳಿಯುವಂತೆ ಮಾರ್ಗದರ್ಶನ ನೀಡುತ್ತದೆ.

English summary

Why Do We Light A 'Ghee' Diya? The Scientific Reason

We all know the spiritual significance of lighting a diya. The light represents moving from darkness into the light. But do you know there is a scientific reason too behind this tradition.
Subscribe Newsletter