For Quick Alerts
ALLOW NOTIFICATIONS  
For Daily Alerts

ಶ್ರಾವಣ ಮಾಸದಲ್ಲಿ ಉಪವಾಸ ಕೈಗೊಳ್ಳುವುದರ ಹಿಂದಿನ ರಹಸ್ಯ ಏನು ನೋಡಿ...

|

ಶ್ರಾವಣ ಮಾಸ ಎಂದರೆ ಎಲ್ಲಾ ದೇವಾನು ದೇವತೆಗಳಿಗೆ ವಂದಿಸುವ ಸಮಯ ಎನ್ನಲಾಗುವುದು. ಪರಮ ಶಕ್ತಿಯನ್ನು ಪಡೆದ ಹರ-ಹರಿಗೆ ಈ ಮಾಸವು ಮೀಸಲಾಗಿದೆ. ಅಲ್ಲದೆ ದೇವಿಯ ಅವತಾರವಾದ ತುಳಸಿ, ಗೌರಿ, ಲಕ್ಷ್ಮಿ ಎಲ್ಲರಿಗೂ ವಿಶೇಷ ಪೂಜೆ ಹಾಗೂ ವ್ರತವನ್ನು ಕೈಗೊಳ್ಳಲಾಗುವುದು. ವಿವಿಧ ಬಗೆಯ ಪುಷ್ಪ-ಫಲಗಳನ್ನು ಅರ್ಪಿಸುವುದರ ಮೂಲಕ ಭಕ್ತಿಯನ್ನು ಜನರು ಮೆರೆಯುತ್ತಾರೆ. ಶ್ರಾವಣ ಮಾಸ ಎಂದರೆ ಕೇವಲ ಮನುಕುಲಕ್ಕಷ್ಟೇ ಅಲ್ಲ ಪ್ರಕೃತಿ ಹಾಗೂ ಎಲ್ಲಾ ಬಗೆಯ ಜೀವ ಸಂಕುಲಗಳಿಗೂ ಅತ್ಯಂತ ಶ್ರೇಷ್ಠವಾದ ಮಾಸ. ಭೂ ತಾಯಿಯು ಎಲ್ಲೆಲ್ಲೂ ಹಸಿರು ವೈಭವಗಳಿಂದ ಕಂಗೊಳಿಸುತ್ತದೆ. ಸರ್ವರಿಗೂ ಸುಖ ಹಾಗೂ ಸಂತೋಷವನ್ನು ನೀಡುತ್ತದೆ.

ಮನೆಬಾಗಿಲಿಗೆ ಹಸಿರು ತೋರಣ,ಅಂಗಳದಲ್ಲಿ ರಂಗೋಲೆ ಚಿತ್ತಾರ , ಮನೆಯೊಳಗೆ ವಿಶೇಷ ಪೂಜೆಗಳ ಘಂಟಾನಾದ, ಅಡುಗೆ ಮನೆಯಲ್ಲಿ ಸಿಹಿ ಖಾದ್ಯಗಳ ಪರಿಮಳವು ಮನೆಯಲ್ಲಿ ಒಂದು ಬಗೆಯ ಸಂತೋಷ ಹಾಗೂ ಮನಸ್ಸಿಗೆ ನೆಮ್ಮದಿಯನ್ನು ನೀಡುತ್ತವೆ. ಶ್ರವಣ ನಕ್ಷತ್ರ ವಿಷ್ಣುವಿನ ಜನ್ಮನಕ್ಷತ್ರವಂತೆ, ಶ್ರಾವಣ ಹುಣ್ಣಿಮೆಯಂದು ಶ್ರವಣ ನಕ್ಷತ್ರ ಬರುವುದರಿಂದ ಇಡೀ ಮಾಸಕ್ಕೆ ಪಾವಿತ್ರ್ಯ ಬಂತು ಎನ್ನುತ್ತಾರೆ. ಕೇರಳದಲ್ಲಿ ಅದರಲ್ಲಿನ 'ಶ್ರ"ಕಳೆದು ವಣಂ ಮಾತ್ರ ಉಳಿಯಿತು.ಅದು ಅನಂತಶಯನನಾದ ಶ್ರೀವಿಷ್ಣುವಿನ ನಕ್ಷತ್ರವಾಗಿ ತಿರು(ಶ್ರೀ) ವೋಣಂ ಆಯ್ತು . ಬಲಿ ಚಕ್ರವರ್ತಿ ಮತ್ತು ವಿಷ್ಣುವಿನ ವಾಮನಾವತಾರದ ನಡುವಿನ ಕತೆಯೂ ಇದರೊಂದಿಗೆ ಹೊಂದಿಕೊಂಡಿದೆ.

Shravan

ಮನೆಯ ಎಲ್ಲರೂ ಸಂತೋಷದಿಂದ ಬಗೆ ಬಗೆಯ ತಿಂಡಿ-ತಿನಿಸುಗಳನ್ನು ತಯಾರಿಸುತ್ತಾ ದೇವಾನು ದೇವತೆಗಳಿಗೆ ಪರ್ಪಿಸುವುದರ ಮೂಲಕ ವಿವಿಧ ಹಬ್ಬ ಹಾಗೂ ವ್ರತವನ್ನು ಮಾಡುತ್ತಾರೆ. ಗಾಳಿ, ಮಳೆ, ಬಿಸಿಲು, ಗಿಡ-ಮರ, ಪ್ರಾಣಿ-ಪಕ್ಷಿಗಳೆಲ್ಲವೂ ನಮಗೆ ದೇವತೆಗಳು ಹಿಂದೂ ಧರ್ಮದಲ್ಲಿ ಶ್ರಾವಣ ಮಾಸದಲ್ಲಿ ಇವುಗಳಿಗೂ ಪೂಜೆಯನ್ನು ಸಲ್ಲಿಸುವುದರ ಮೂಲಕ ಧನ್ಯತೆಯನ್ನು ಹೇಳುತ್ತಾರೆ. ಶ್ರಾವಣ ಮಾಸದ ಇನ್ನೊಂದು ವಿಶೇಷವೆಂದರೆ ದೇವರ ಆರಾಧನೆಯ ಜೊತೆಗೆ ಉಪವಾಸ ವ್ರತಗಳನ್ನು ಕೈಗೊಳ್ಳುವುದು.

Most Read: 'ಶ್ರಾವಣ' ಎಂದರೆ ನಮ್ಮೆಲ್ಲರಿಗೂ ಶುಭವ ತರುವ ಮಾಸ

ಶ್ರಾವಣ ತಿಂಗಳಲ್ಲಿ ಶ್ರಾವಣ ಸೋಮವಾರ, ಶ್ರಾವಣ ಮಂಗಳವಾರ, ಶ್ರಾವಣ ಶುಕ್ರವಾರ ಹಾಗೂ ಶ್ರಾವಣ ಶನಿವಾರಗಳನ್ನು ವಿಶೇಷ ದಿನವನ್ನಾಗಿ ಆಚರಿಸುತ್ತಾರೆ. ಈ ದಿನಗಳಲ್ಲಿ ಮಂಗಳೆಯರು ಉಪವಾಸ ಕೈಗೊಳ್ಳುವುದರ ಮೂಲಕ ಮನೆ, ಯಜಮಾನ, ಮಕ್ಕಳು ಹಾಗೂ ಕುಟುಂಬದ ಎಲ್ಲಾ ಸದಸ್ಯರಿಗೂ ಒಳಿತಾಗಲಿ, ಮನೆಯಲ್ಲಿ ಸುಖ-ಶಾಂತಿ, ನೆಮ್ಮದಿಯು ಸದಾ ತುಂಬಿರಲಿ ಎಂದು ಬೇಡಿಕೊಳ್ಳುತ್ತಾರೆ. ಇವರು ನಡೆಸುವ ವ್ರತ ಹಾಗೂ ಶ್ರದ್ಧಾ ಭಕ್ತಿಯಿಂದ ಮನೆಯಲ್ಲಿ ಸಮೃದ್ಧಿ ಉಂಟಾಗುವುದು ಎನ್ನುವ ನಂಬಿಕೆಯನ್ನು ಹೊಂದಿದ್ದಾರೆ. ಇಷ್ಟೇ ಅಲ್ಲಾ ಶ್ರಾವಣ ಮಾಸದಲ್ಲಿ ಬಹುತೇಕ ಮಂದಿ ಉಪವಾಸವನ್ನು ಕೈಗೊಳ್ಳುತ್ತಾರೆ. ಕೆಲವರು ತಿಂಗಳಲ್ಲಿ ಒಂದೇ ಊಟವನ್ನು ಮಾಡುವವರು ಇದ್ದಾರೆ. ವಿಶೇಷ ವಾರಗಳ ವ್ರತದೊಂದಿಗೆ, ಏಕಾದಶಿ, ಚತುರ್ಥಿ, ಹುಣ್ಣಿಮೆ ಸೇರಿದಂತೆ ಇತರ ದಿನಗಳ ಕುರಿತಾಗಿಯೂ ಉಪವಾಸವನ್ನು ಕೈಗೊಳ್ಳುತ್ತಾರೆ.

ಹಿಂದೂ ಧರ್ಮದ ಪ್ರಕಾರ ಶ್ರಾವಣ ಮಾಸವು ಏಕೆ ಅತ್ಯಂತ ಶ್ರೇಷ್ಠತೆಯನ್ನು ಪಡೆದುಕೊಂಡಿದೆ? ಶ್ರಾವಣ ಮಾಸದಲ್ಲಿ ಏಕೆ ವ್ರತ ಹಾಗೂ ಉಪವಾಸಗಳ ಪದ್ಧತಿಯನ್ನು ಕೈಗೊಳ್ಳಲಾಯಿತು? ಇದಕ್ಕೆ ಯಾವ ನಿಯಮಗಳು ಅಥವಾ ಕಾರಣಗಳು ಹೆಣೆದುಕೊಂಡಿದೆ? ಇದರಿಂದ ಯಾವ ಬಗೆಯ ಪ್ರಯೋಜನ ಉಂಟಾಗುವುದು?ಇದರೊಂದಿಗೆ ವ್ಯಕ್ತಿಯ ಆರೋಗ್ಯಕ್ಕೆ ಯಾವುದಾದರೂ ಸಂಬಂಧಗಳಿವೆಯೇ? ಎನ್ನುವಂತಹ ವಿವಿಧ ವಿಷಯಗಳಿಗೆ ಸಂಬಂಧಿಸಿದ ಪ್ರಶ್ನೆಗಳು ನಿಮ್ಮನ್ನು ಒಮ್ಮೆಯಾದರೂ ಕಾಡಿರಬಹುದು. ಅಂತಹ ಪ್ರಶ್ನೆಗಳಿಗೆ ಈ ಲೇಖನದ ಮುಂದಿನ ಭಾಗ ವಿವರಣೆಯನ್ನು ನೀಡುವುದು.

Most Read: ಶ್ರಾವಣ ತಿಂಗಳಲ್ಲಿ ಅಪ್ಪಿ ತಪ್ಪಿಯೂ ಈ 7 ತಪ್ಪುಗಳನ್ನು ಮಾಡದಿರಿ!

Shravan

ಆಧ್ಯಾತ್ಮಿಕ ಕಾರಣಗಳು

ಹಿಂದೂ ಧರ್ಮದಲ್ಲಿ ಉಪವಾಸ ಕೈಗೊಳ್ಳುವುದು ಎಂದರೆ ದೇವರ ಕ್ರಪೆಗೆ ಒಳಗಾಗುವುದು ಎಂದರ್ಥ. ಪುರಾತನ ಕಾಲದಿಂದಲೂ ನಡೆದುಕೊಂಡು ಬಂದ ಈ ಪದ್ಧತಿಯು ಜೀವನದ ಒಂದು ಭಾಗ ಅಥವಾ ವಿಧಾನ ಎಂದು ಹೇಳಬಹುದು. ಮನುಷ್ಯರಾದ ನಮಗೆ ಆ ದೇವನು ಆಹಾರವನ್ನು ಸಂಗ್ರಹಿಸುವುದು, ಯೋಜಿಸುವುದು, ತಯಾರಿಸುವುದು ಹಾಗೂ ಅದನ್ನು ಹಂಚಿಕೊಂಡು ತಿನ್ನುವ ಗುಣವನ್ನು ನೀಡಿದ್ದಾನೆ. ಈ ಕ್ರಮವು ವ್ಯಕ್ತಿಯ ವೈಯಕ್ತಿಕ ವಿಷಯಕ್ಕೆ ಸೀಮಿತಗೊಳ್ಳದೆ ಅದು ಆಧ್ಯಾತ್ಮಿಕ ಜೀವನದ ವಿಧಾನವಾಗಬೇಕು ಎನ್ನುವ ನಿಲುವನ್ನು ಹೊಂದಿದ್ದಾರೆ.

ಉಪವಾಸದ ಸಮಯದಲ್ಲಿ ಸಾಮಾನ್ಯವಾಗಿ ಆಹಾರವನ್ನು ತ್ಯಜಿಸುವುದು, ಸಾತ್ವಿಕ ಆಹಾರ ಸೇವನೆ ಮಾಡುವುದು, ಮಾಂಸಹಾರವನ್ನು ತ್ಯಜಿಸುವುದು, ಗಡ್ಡೆ-ಗೆಣಸುಗಳ ಸೇವನೆ, ಹಣ್ಣು-ಹಂಪಲುಗಳನ್ನು ತಿನ್ನುವುದು, ಒಣಗಿದ ಹಣ್ಣುಗಳು, ಧಾನ್ಯಗಳ ಸೇವನೆ, ಮೃದು ಪಾನೀಯಗಳನ್ನು ಸೇವನೆ ಹೀಗೆ ವಿವಿಧ ವಿಧಾನವನ್ನು ಅನುಸರಿಸುವುದರ ಮೂಲಕ ದೇಹವನ್ನು ಹಾಗೂ ಮಾನಸಿಕ ಚಿಂತನೆಗಳನ್ನು ನಿಯಂತ್ರಿಸುತ್ತಾರೆ. ಇದರ ಫಲವಾಗಿ ವ್ಯಕ್ತಿ ಅತ್ಯುತ್ತಮವಾದ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಪಡೆದುಕೊಳ್ಳುವನು ಎಂದು ಹೇಳಲಾಗುವುದು.

ಅಲ್ಲದೆ ವಿವಿಧ ಬಗೆಬಗೆಯ ಆಹಾರವನ್ನು ತಯಾರಿಸುವುದರಲ್ಲಿಯೇ ಹೆಚ್ಚು ಸಮಯವನ್ನು ವ್ಯಯಿಸಿದರೆ ದೇವರನ್ನು ನೆನೆಯಲು ಹಾಗೂ ಆತನ ಆರಾಧನೆ ಮಾಡಲು ಸಾಕಷ್ಟು ಸಮಯ ಹಿಡಿಯುವುದು. ಉಪವಾಸ ಕೈಗೊಂಡಾಗ ದೇಹವನ್ನು ದಂಡಿಸಿದಂತಾಗುವುದು, ಸರಳ ಆಹಾರದೊಂದಿಗೆ ದೇವರ ಧ್ಯಾನದಲ್ಲಿ ಮಗ್ನರಾಗಬಹುದು. ಹೆಚ್ಚಿನ ಸಮಯಗಳ ಕಾಲ ದೇವರ ಭಕ್ತಿ ಹಾಗೂ ಆರಾಧನೆಯಲ್ಲಿ ಕೈಗೊಳ್ಳಬಹುದು. ಇದರಿಂದ ದೇವರ ಆಶೀರ್ವಾದ ಪಡೆಯುವುದರ ಮೂಲಕ ವರ್ಷ ಪೂರ್ತಿ ಸಂತೋಷ ಹಾಗೂ ನೆಮ್ಮದಿಯಿಂದ ಬಾಳಬಹುದು ಎಂದು ಹೇಳಲಾಗುವುದು.

ಪ್ರಸ್ತುತ ಪರಿಸ್ಥಿತಿ:

ಇಂದಿನ ಪರಿಸ್ಥಿತಿಯಲ್ಲಿ ಜನರಿಗೆ ವಿವಿಧ ಬಗೆಯ ಆಹಾರವು ನಿತ್ಯವೂ ದೊರೆಯುತ್ತದೆ. ಡೈರಿ ಉತ್ಪನ್ನಗಳು, ಮಾಂಶ ಹಾರ, ವಿವಿಧ ಬಗೆಯ ವೈಭವೀಕರಿಸಿದ ಭಕ್ಷ್ಯಗಳನ್ನು ನಿತ್ಯವೂ ಸೇವಿಸಿದಂತೆ ಸೇವಿಸುತ್ತಾರೆ. ಇದರಿಂದಾಗಿ ಕೆಲವರಿಗೆ ಹಬ್ಬದ ಊಟವು ವಿಶೇಷ ಎಂದು ಎನಿಸದು. ಬದಲಿಗೆ ದೇವರ ಆರಾಧನೆ ಹಾಗೂ ಉಪವಾಸ ಕ್ರಮಗಳ ಬಗ್ಗೆ ಆಸಕ್ತಿಯನ್ನು ಕಳೆದುಕೊಂಡಿದ್ದಾರೆ. ಉಪವಾಸದ ಉದ್ದೇಶ ಹಾಗೂ ಗುರಿಯ ಬಗ್ಗೆ ಯಾವುದೇ ಆಸಕ್ತಿಯನ್ನು ಹೊಂದಿಲ್ಲ ಎಂದು ಹೇಳಬಹುದು. ಉಪವಾಸಗಳನ್ನು ಕೈಗೊಳ್ಳುವುದು ಮತ್ತು ಸಾತ್ವಿಕ ಆಹಾರವನ್ನು ದೂರ ಇಟ್ಟಿರುವುದರ ಪರಿಣಾಮವಾಗಿ ಸಾಕಷ್ಟು ಅನಾರೋಗ್ಯ ಹಾಗೂ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎನ್ನಬಹುದು.

Most Read: ಶ್ರಾವಣ ಮಾಸ 2019: ದಿನಾಂಕ, ಸಮಯ ಹಾಗೂ ಮಹತ್ವ

ಸುಧಾರಿತ ಜೀರ್ಣಕ್ರಿಯೆ, ಸುಧಾರಿತ ಇನ್ಸುಲಿನ್ ಮಟ್ಟ, ದೇಹದ ತೂಕ ಹಾಗೂ ಉಪವಾಸದ ಯಾವುದೇ ಪ್ರಯೋಜನವನ್ನು ಪಡೆದುಕೊಳ್ಳಲು ದೇವರ ಆರಾಧನೆ, ಉಪವಾಸ ಕ್ರಮ ಹಾಗೂ ಆರೋಗ್ಯಕರವಾದ ಸರಳ ಜೀವನ ಕ್ರಮವನ್ನು ಅನುಸರಿಸುವುದು ಆರೋಗ್ಯ ಹಾಗೂ ಬದುಕನ್ನು ಅತ್ಯುತ್ತಮವಾಗಿ ಇರಿಸುತ್ತದೆ. ಇಲ್ಲವಾದರೆ ಬೊಜ್ಜು, ಅತಿಯಾದ ಆಮ್ಲೀಯತೆ ಹಾಗೂ ನಿತ್ಯದ ಬದುಕನ್ನು ಸಾಗಿಸಲು ಕಷ್ಟವಾಗುವುದು ಎಂದು ಹೇಳಲಾಗುವುದು.

ಶ್ರಾವಣ ಮಾಸದ ಉಪವಾಸ

ಶ್ರಾವಣ ಮಾಸವು ಪ್ರಕೃತಿ ದತ್ತವಾಗಿ ಹಾಗೂ ಆಧ್ಯಾತ್ಮಿಕವಾಗಿ ಅತ್ಯಂತ ಮಹತ್ವವನ್ನು ಪಡೆದುಕೊಂಡ ತಿಂಗಳು ಎಂದು ಹೇಳಬಹುದು. ಈ ಸಮಯವು ದೇವರ ಆರಾಧನೆಗೆ ಪ್ರಶಸ್ತವಾದ ಕಾಲ. ಅಲ್ಲದೆ ದೇಹದ ಆರೋಗ್ಯವನ್ನು ಸರಿಪಡಿಸುವುದರ ಮೂಲಕ ನಮ್ಮ ಜೀವನವನ್ನು ಸಂತೋಷದಿಂದ ಇರಿಸುವುದು ಎಂದು ಹೇಳಲಾಗುವುದು. ಹಾಗಾಗಿ ನೀವು ನಿಮ್ಮ ಆರೋಗ್ಯ ಹಾಗೂ ಜೀವನವು ಉತ್ತಮವಾಗಿ ಇರಬೇಕು ಎಂದು ಬಯಸಿದರೆ ಶ್ರಾವಣ ಮಾಸದ ಆಚರಣೆ ಹಾಗೂ ಉಪವಾಸ ಕ್ರಮವನ್ನು ಅನುಸರಿಸುವುದು ಸೂಕ್ತ.

ಉಪವಾಸದಿಂದ ಆರೋಗ್ಯ ಪ್ರಯೋಜನ ಪಡೆಯುವುದು ಹೇಗೆ?

ಆಹಾರದ ಮೇಲೆ ಗಮನವನ್ನು ಕೇಂದ್ರೀಕರಿಸಿ:

ಮುಂಚಿತವಾಗಿ ತಯಾರಿಸಿದ ಆಹಾರ ಅಥವಾ ಇನ್ಸ್ಟೆಂಟ್ ಆಹಾರ ಪದಾರ್ಥಗಳನ್ನು ಬಳಸುವ ಬದಲು ಹಸಿ ತರಕಾರಿ, ಹಣ್ಣುಗಳು ಹಾಗೂ ಲಘು ಆಹಾರವನ್ನು ಸೇವಿಸಲು ಪ್ರಾರಂಭಿಸಿ. ಇದು ನಿಮ್ಮ ಭಾವನೆಯನ್ನು ಉತ್ತಮವಾಗಿ ಇರಿಸುವುದರ ಜೊತೆಗೆ ಆರೋಗ್ಯವನ್ನು ಉತ್ತಮವಾಗಿ ಇರಿಸುತ್ತದೆ.

ಪೌಷ್ಟಿಕಾಂಶದಿಂದ ಕೂಡಿರುವ ಕಾರ್ಬಗಳನ್ನು ಸೇವಿಸಿ

ಪಿಷ್ಟದಿಂದ ಕೂಡಿರುವ ಆಲೂಗಡ್ಡೆ, ಸಾಬೂದಾನ್/ಸಾಬಕ್ಕಿ, ಚೆಸ್ನೆಟ್, ರಾಜ್ಗಿರಾ ಮತ್ತು ವರೈನಂತಹ ಆಹಾರವನ್ನು ವ್ರತ ಆಚರಣೆಯ ಪ್ರಯುಕ್ತ ಸೇವಿಸುವುದರಿಂದ ಪೌಷ್ಟಿಕಾಂಶವನ್ನು ಪಡೆದುಕೊಳ್ಳುವುದರ ಮೂಲಕ ಆರೋಗ್ಯವನ್ನು ಕಾಯ್ದುಕೊಳ್ಳಬಹುದು.

ಚೀನಿ ನಿಯಮವನ್ನು ಅನುಸರಿಸಿ

ಒಂದೇ ಬಾರಿ ಅತಿಯಾದ ಆಹಾರ ಅಥವಾ ಮಂದವಾದಂತಹ ಅನುಭವ ನೀಡುವಷ್ಟು ಆಹಾರವನ್ನು ಒಮ್ಮೆಲೇ ಸೇವಿಸಬೇಡಿ. ಬದಲು ಆಗಾಗ ಮಿತವಾದ ಆಹಾರ ಸೇವಿಸಿ. ಅದು ನಿಮಗೆ ಹೆಚ್ಚಿನ ಚಿಂತನೆ ಹಾಗೂ ಕ್ರಿಯಾಶೀಲವಾಗಿ ಇರುವಂತೆ ಮಾಡುವುದು.

MOst Read: ಪವಿತ್ರ ಶ್ರಾವಣ ಮಾಸದ ಈ ಎಂಟು ವಿಷಯಗಳು ಪ್ರತಿಯೊಬ್ಬರಿಗೂ ತಿಳಿದಿರಲೇಬೇಕು

ಶಕ್ತಿಯುತವಾದ ಮಾರ್ಗ ನಿರ್ವಹಿಸಿ

ಸಾಕಷ್ಟು ನೀರನ್ನು ಸೇವಿಸುವುದು, ತಾಜಾ ಹಣ್ಣುಗಳನ್ನು ತಿನ್ನುವುದು ಹಾಗೂ ಉತ್ತಮ ವಿಚಾರಗಳೊಂದಿಗೆ ವ್ಯವಹರಿಸುವುದು ರೂಢಿಸಿಕೊಂಡರೆ ಉತ್ತಮ ಶಕ್ತಿಯು ನಿಮಗೆ ಲಭ್ಯವಾಗುವುದು.

ಸಾತ್ವಿಕ ಮಾರ್ಗವನ್ನು ಪುನರುಜ್ಜೀವನಗೊಳಿಸುವುದು

ಉಪವಾಸ ಮಾರ್ಗ ಉತ್ತಮವಾಗಿರುವಂತೆ ಮಾಡಲು ಆರೋಗ್ಯಕರವಾದ ಅಡುಗೆ ವಿಧಾನವನ್ನು ಬಳಸಿ. ಸಬುದಾನ, ಅವಲಕ್ಕಿ, ಗೋಧಿ ಸೇರಿದಂತೆ ಇನ್ನಿತರ ಉತ್ತಮ ವಸ್ತುಗಳನ್ನು ಬಳಸುವುದರ ಮೂಲಕ ಆಹಾರ ತಯಾರಿಸಿ.

Most Read: ಶ್ರಾವಣ ಮಾಸದಲ್ಲಿ ಶಿವ ಭಕ್ತರು, ಈ ಮೂರು ಬಗೆಯ ತರಕಾರಿಗಳನ್ನು ಸೇವಿಸಬಾರದು

Shravan

ಉಪವಾಸದ ಬಳಿಕ ಅತಿಯಾದ ಸೇವನೆ

ಕೆಲವರು ಉಪವಾಸ ಸಮಯ ಮುಗಿದ ಅತಿಯಾದ ಆಹಾರ ಸೇವಿಸುವುದು ಇಲ್ಲವೇ ಮನಸ್ಸು ಬಯಸಿದ ಹಾಗೆ ಅತಿಯಾಗಿ ತಿನ್ನಬಾರದು. ಇದು ಆರೋಗ್ಯದ ಮೇಲೆ ನಷ್ಟವನ್ನುಂಟು ಮಾಡುವುದು. ಈ ರೀತಿಯ ವರ್ತನೆ ಮಾಡಿದರೆ ಕ್ಯಾಲೋರಿಯನ್ನು ಸರಿದೂಗಿಸಿದಂತಾಗುವುದು ಎಂದು ಅಂದುಕೊಳ್ಳಬೇಡಿ.

ಸದಾ ವ್ಯಾಯಾಮವನ್ನು ಮಾಡಿ

ಉಪವಾಸದ ಸಮಯದಲ್ಲಿ ಲಘುವಾದ ವ್ಯಾಯಾಮ ಹಾಗೂ ನಿತ್ಯವೂ ಸಹಜವಾದ ಆರೋಗ್ಯಕರ ವ್ಯಾಯಾಮ ಮಾಡುವುದರ ಮೂಲಕ ದೇಹ ಹಾಗೂ ಮಾನಸಿಕ ಆರೋಗ್ಯವನ್ನು ಉತ್ತಮ ಸ್ಥಿತಿಯಲ್ಲಿ ಇರುವಂತೆ ನೋಡಿಕೊಳ್ಳಿ. ಇದು ನಿಮ್ಮ ಆರೋಗ್ಯ ಹಾಗೂ ಜೀವನ ಕ್ರಮ ಉತ್ತಮವಾಗಿರುವಂತೆ ಮಾಡುವುದು. ಶ್ರಾವಣ ಮಾಸದ ಆಚರಣೆಯನ್ನು ಸಾಂಪ್ರದಾಯಿಕ ರೀತಿಯಲ್ಲಿ ಆಹ್ವಾನಿಸುವುದರ ಮೂಲಕ ಕ್ರಮಬದ್ಧವಾದ ಆಚರಣೆಯಲ್ಲಿ ತೊಡಗೋಣ. ಇದರಿಂದ ನಮ್ಮ ಸಂಸ್ಕೃತಿ ಹಾಗೂ ಆಚಾರ-ವಿಚಾರಗಳು ಮುಂದಿನ ಪೀಳಿಗೆಯವರೆಗೂ ಮುಂದುವರಿಯುವುದು. ಜೊತೆಗೆ ಉತ್ತಮ ಆಚರಣೆಯಿಂದ ತಲತಲಾಂತರದ ವರೆಗೆ ಆರೋಗ್ಯ ಹಾಗೂ ಸಂತೋಷದ ಜೀವನ ವೃದ್ಧಿಯಾಗುವುದು. ದೇವರ ಆಶೀರ್ವಾದ ಪಡೆಯುವುದರ ಮೂಲಕ ಜೀವನವು ಸಂತೋಷದಿಂದ ಕೂಡಿರುವುದು.

English summary

Why do people follow a fast during Shravan?

The Hindu month of Shravan is when many people follow fasts on certain days like Mondays or eat only one meal for the entire month. There are also other days like the Chaturthi, Ekadashi, Poornima (full moon day) etc. when fasting is followed too. Why did this practice of fasting begin? What are the rules? Does it have any benefits – health and otherwise?
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X