Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಸದ್ಗುರುವಿನ ಪ್ರಕಾರ ಶಿವ ಯಾರು?
ಸದ್ಗುರು ಜೀವನದ ಆಳ-ಅಗಲದ ಬಗ್ಗೆ ಹಾಗೂ ಜೀವನ ಚಲಿಸುವ ಆಧ್ಯಾತ್ಮಿಕ ಮಾರ್ಗದ ಕುರಿತು ಸಾಕಷ್ಟು ಜ್ಞಾನವನ್ನು ತಂದುಕೊಟ್ಟಿದ್ದಾರೆ. ಇವರ ಅನುಯಾಯಿಗಳು ಅವರಿಂದ ಬಹಳ ಆಳವಾದ ಮತ್ತು ಮಹತ್ವ ಪೂರ್ಣವಾದ ಪ್ರಶ್ನೆಗಳಿಗೆ ಉತ್ತರವನ್ನು ಬಯಸುತ್ತಾರೆ. ಸದ್ಗುರುವಿನ ಪ್ರಕಾರ ಶಿವನು ಯಾರು? ಸೃಷ್ಟಿಯಲ್ಲಿ ಶಿವನ ಪಾತ್ರ ಎಷ್ಟು ಮಹತ್ವವಾದದ್ದು ಎನ್ನುವುದರ ಕುರಿತು ಮಹತ್ವಪೂರ್ಣ ಮಾಹಿತಿಯನ್ನು ನೀಡಿದ್ದಾರೆ...
ಶಿವ ಯಾರು?
ಸಾವಿರ ವರ್ಷಗಳ ಹಿಂದೆ ಹಿಮಾಲಯ ಪ್ರದೇಶದಲ್ಲಿ ಒಬ್ಬ ವ್ಯಕ್ತಿ ಕಾಣಿಸಿಕೊಂಡಿದ್ದನು. ಅವನು ಧ್ಯಾನ ಮಾಡುವುದರಲ್ಲಿಯೇ ಆಳವಾಗಿ ಮುಳುಗಿಹೋಗಿದ್ದನು. ಅವನ ಧ್ಯಾನವನ್ನು ತಪ್ಪಿಸಲು ಹಾಗೂ ಅವನ ಬಗ್ಗೆ ತಿಳಿದುಕೊಳ್ಳಲು ಅನೇಕರು ಪ್ರಯತ್ನಿಸಿದರು. ಆದರೆ ಅದ್ಯಾವುದೂ ಪ್ರಯೋಜನಕ್ಕೆ ಬರಲಿಲ್ಲ. ಆ ವ್ಯಕ್ತಿಯು ಯಾವುದೇ ವಿಚಾರಗಳಿಗೂ ಕಿವಿಕೊಡದೆ ಧ್ಯಾನದಲ್ಲಿಯೇ ಮಗ್ನನಾಗಿದ್ದನು. ದಿನವಿಡೀ ಧ್ಯಾನ ಮಾಡುವುದರಲ್ಲಿಯೇ ಮುಳುಗಿದ್ದನು.

ವ್ಯಕ್ತಿಯ ಬಗ್ಗೆ ಇದ್ದ ನಿಗೂಢತೆಗೆ ಉತ್ತರ ನೀಡಿದ್ದು ಎಂದರೆ ಕಣ್ಣುಗಳನ್ನು ಮುಚ್ಚಿ ಧ್ಯಾನಿಸುವಾಗ ಕಣ್ಣುಗಳ ಕೆಳಭಾಗದಲ್ಲಿ ಕಣ್ಣೀರುಗಳು ನಿಂತಿರುವುದು ಗೋಚರವಾಗಿರುವುದು. ಇಷ್ಟು ಬಿಟ್ಟರೆ ಜೀವದ ಬಗ್ಗೆ ಯಾವುದೇ ಲಕ್ಷಣಗಳು ಗೋಚರವಾಗಲಿಲ್ಲ. ವ್ಯಕ್ತಿಯ ಬಗ್ಗೆ ತಿಳಿದುಕೊಳ್ಳಲು ಬಯಸಿದವರಲ್ಲಿ ಏಳು ಮಹಾನ್ ಪುರುಷರು ಇದ್ದರು. ಅವರು ಸಪ್ತ ಋಷಿಗಳು ಎಂದು ನಂಬಲಾಗಿದೆ.
ಶಿವನು ಕಣ್ಣನ್ನು ತೆರೆಯುವ ತನಕವೂ ಋಷಿಗಳು ಅಲ್ಲಿಯೇ ಇದ್ದರು. ಆ ಸ್ಥಳವನ್ನು ಬಿಟ್ಟು ಎಲ್ಲಿಗೂ ಹೋಗಲಿಲ್ಲ ಎಂದು ಹೇಳಲಾಗುತ್ತದೆ. ಅನೇಕ ವರ್ಷಗಳ ನಂತರ ಶಿವನು ಕಣ್ಣು ಬಿಟ್ಟ ನಂತರ ಋಷಿಗಳಿಗೆ ಅತ್ಯಂತ ಸಂತೋಷವಾಯಿತು. ಮನುಷ್ಯನಲ್ಲಿ ಒಂದು ಅತೀಂದ್ರಿಯ ಶಕ್ತಿ ಇದೆ ಎನ್ನುವುದು ಋಷಿಗಳು ಖಚಿತಪಡಿಸಿಕೊಂಡರು. ಜೊತೆಗೆ ಈ ವ್ಯಕ್ತಿಗೆ ತನ್ನ ಸುತ್ತಲಿನ ಜನರಿಗೆ ಇರುವ ನೋವು -ನಲಿವಿನ ಬಗ್ಗೆ ಅರಿಯುವ ದೈವ ಶಕ್ತಿ ಇದೆ ಎಂದು ತಿಳಿದರು.
ದೈವ ಜ್ಞಾನವನ್ನು ಪ್ರಚೋದಿಸಲು ಶಿವನಿಗೆ ವಿನಂತಿಸಿದರು
ಋಷಿಗಳು ಶಿವನಿಗೆ ತಮ್ಮ ದೈವ ದೃಷ್ಟಿಯಿಂದ ಜ್ಞಾನವನ್ನು ನೀಡಬೇಕು ಎಂದು ಕೇಳಿಕೊಂಡರು. ಇದರಿಂದ ಜನರ ದುಃಖವನ್ನು ಗ್ರಹಿಸಬಹುದು ಎಂದರು. ಇದನ್ನು ಕೇಳಿದ ಶಿವನು ಅವರಿಗೆ ಜ್ಞಾನವನ್ನು ಭೋದಿಸಿದನು. ಅವುಗಳೇ ಯೋಗದ ಏಳು ಮೂಲ ಸ್ವರೂಪಗಳು. ಯೋಗ ಎನ್ನುವುದು ಹಿಂದಿಯ ಶಬ್ದ. ಇದರ ಅರ್ಥ ಒಕ್ಕೂಟ ಎಂದು. ಜನರು ಸಾಮಾನ್ಯವಾಗಿ ದೇಹದ ತಿರುವುಗಳನ್ನು ತಪ್ಪಾಗಿ ಗ್ರಹಿಸುತ್ತಾರೆ. ಯೋಗ ಎನ್ನುವುದು ಶಿವನು ಜಗತ್ತಿಗೆ ಕೊಟ್ಟ ಒಂದು ವರ. ಇಂದಿಗೂ ಏಳಿಗೆಯಾಗುತ್ತಿರುವ ಒಂದು ದೈವಿಕ ಶಕ್ತಿಯ ಸ್ಥಿತಿಯಾಗಿದೆ. ಶಿವನು ಮೊದಲು ನೀಡಿದ ಯೋಗದ ಜ್ಞಾನವನ್ನು ಪಡೆದವರೇ ಸಪ್ತ ಋಷಿಗಳು ಎಂದು ಹೇಳಲಾಗುತ್ತದೆ. ಹಾಗಾಗಿಯೇ ಶೀವನನ್ನು ಆದಿಯೋಗಿ ಎಂದು ಕರೆಯಲಾಯಿತು. ಅವನೇ ಮೊದಲ ಯೋಗಿಯಾದನು ಎನ್ನುವರು.
ಆಸೆಗಳನ್ನು ಹತೋಟಿಯಲ್ಲಿ ಇಟ್ಟುಕೊಳ್ಳುವುದು
ಸದ್ಗುರು ಹೇಳುವ ಪ್ರಕಾರ ಶಿವನು ಋಷಿಗಳ ಮನಸ್ಸಿನಲ್ಲಿ ಒಂದು ಶಕ್ತಿಯನ್ನು ಕೊಟ್ಟನು. ಅದರ ಅನುಸಾರವಾಗಿ ಋಷಿಗಳು ತಮ್ಮ ಮಾನಸಿಕ ಹಾಗೂ ದೈಹಿಕ ಆಸೆ ಅಥವಾ ಮನೋಕಾಮನೆಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ಹಾಗೂ ಇಂದ್ರಿಯಗಳಿಂದ ಉಂಟಾಗುವ ಭಾವನೆಗಳನ್ನು ಗ್ರಹಿಸುವುದು. ಅದನ್ನು ನಿಯಂತ್ರಿಸುವ ಶಕ್ತಿಯಾಗಿತ್ತು. ಇದನ್ನು ಋಷಿಗಳು ಉತ್ತಮವಾಗಿ ಕಲಿತರು. ಯೋಗ ಎಂದು ಹೆಸರಿಸಲಾದ ಈ ವಿಜ್ಞಾನವು ಶಿವನಿಂದ ಆಶೀರ್ವದಿಸಲ್ಪಟ್ಟ ಆಧ್ಯಾತ್ಮಿಕ ವಿಜ್ಞಾನವಾಗಿದೆ.
ಈ ವಿಜ್ಞಾನವು ಅದರ ಬೇರುಗಳನ್ನು ಆಧ್ಯಾತ್ಮಿಕತೆಗೆ ಒಳಗಾಗುವಂತೆ ಮಾಡುವುದು. ಜೊತೆಗೆ ಮೋಕ್ಷದ ಕಡೆಗೆ ಮನುಷ್ಯನನ್ನು ಕೊಂಡೊಯ್ಯುತ್ತದೆ ಎಂದು ಸದ್ಗುರು ಹೇಳುತ್ತಾರೆ. ದೇಹದ ತಿರುವುಗಳನ್ನು ಹಾಗೂ ನಿಯಂತ್ರಣವನ್ನು ಯೋಗವು ನಿಯಂತ್ರಿಸುವಂತಹ ಆಧ್ಯಾತ್ಮಿಕ ಶಕ್ತಿಯನ್ನು ಪಡೆದುಕೊಂಡಿದೆ ಎನ್ನಲಾಗುವುದು. ಸದ್ಗುರು ಹೇಳುವ ಪ್ರಕಾರ ಮೋಕ್ಷವು ಎಲ್ಲಾ ಧರ್ಮಗಳಲ್ಲಿಯೂ ಜೀವನದ ಅಂತಿಮ ಗುರಿಯಾಗಿರುವಂತೆ ವಿವರಿಸಲ್ಪಟ್ಟಿದೆ. ಯಾರು ಯೋಗದ ಗುರಿ ಹಾಗೂ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತಾರೋ ಅವರು ಶಿವನ ಸದ್ಗತಿಯನ್ನು ಪಡೆಯುತ್ತಾರೆ. ಜೊತೆಗೆ ಜಗತ್ತಿನಾದ್ಯಂತ ಜನಪ್ರಿಯತೆಯನ್ನು ಗಳಿಸುವರು ಎನ್ನುವರು. ಯೋಗದ ಸರಿಯಾದ ಜ್ಞಾನದ ಮೂಲಕ ಸಾಮಾನ್ಯ ವ್ಯಕ್ತಿಗಿಂತ ಭಿನ್ನವಾದ ಜೀವನವನ್ನು ಆಧರಿಸಿ ಆಧ್ಯಾತ್ಮಿಕ ಜ್ಞಾನವನ್ನು ಪ್ರಸ್ತಾಪಿಸಿದವನು ಶಿವನು. ಅದು ಮನುಷ್ಯನಿಗೆ ಮೋಕ್ಷಕ್ಕೆ ದಾರಿಮಾಡಿಕೊಡುತ್ತದೆ ಎಂದು ಸದ್ಗುರು ಹೇಳುತ್ತಾರೆ.



Click it and Unblock the Notifications