For Quick Alerts
ALLOW NOTIFICATIONS  
For Daily Alerts

ಅಷ್ಟಕ್ಕೂ ಕಲಿಯುಗದ ಅಂತ್ಯ ಸಮೀಪಿಸುತ್ತಿದೆಯೇ..?

By Super
|

ಪತ್ರಿಕೆಯಲ್ಲಿ ಬರುವ ಭಯಾನಕ ಸುದ್ದಿಗಳನ್ನು ಓದಿದ ಬಳಿಕ ಹಿರಿಯರು "ಎಂಥಾ ಕಾಲ ಬಂತಪ್ಪಾ, ಕಲಿಯುಗ, ಕಲಿಯುಗ!" ಎಂದು ವಿಷಾದದ ನಿಟ್ಟುಸಿರು ಬಿಡುವುದನ್ನು ಹಿರಿಯರಿರುವ ಎಲ್ಲಾ ಮನೆಯಲ್ಲಿ ಕಾಣಬಹುದು. ವೇದಗಳ ಪ್ರಕಾರ ಈ ಪ್ರಪಂಚದ ಆಯಸ್ಸನ್ನು ನಾಲ್ಕು ಯುಗಗಳನ್ನಾಗಿ ವಿಂಗಡಿಸಲಾಗಿದೆ. ಸತ್ಯಯುಗ, ತ್ರೇತಾಯುಗ, ದ್ವಾಪರಯುಗ ಮತ್ತು ಅಂತಿಮವಾಗಿ ಕಲಿಯುಗ. ವೇದಗಳ ಪ್ರಕಾರ ಸತ್ಯಯುಗದಲ್ಲಿ ಸತ್ಯ ಮತ್ತು ಸದಾಚಾರವೇ ಪ್ರಧಾನವಾದ ದಿನಗಳಾಗಿದ್ದರೆ ಕಲಿಯುಗದಲ್ಲಿ ಕತ್ತಲು, ಅಪರಾಧ ಮತ್ತು ದುರ್ಗುಣಗಳೇ ಪ್ರಧಾನವಾಗುತ್ತವೆ.

ಪುರಾಣಗಳ ಲೆಕ್ಕಾಚಾರದಂತೆ ಈ ಯುಗ ಕ್ರಿಸ್ತಪೂರ್ವ 3102 ಇಸವಿಯಿಂದ ಪ್ರಾರಂಭವಾಯಿತು. ಅಂದು ಬುಧ, ಶುಕ್ರ, ಮಂಗಳ, ಜ್ಯೂಪಿಟರ್ ಮತ್ತು ಶನಿ ಎಂಬ ಐದು ಗ್ರಹಗಳು ಮೇಷ ರಾಶಿಯಲ್ಲಿ ಒಂದೇ ಅಕ್ಷಾಂಶದಲ್ಲಿ ಬಂದಿದ್ದವು. ಅಂದರೆ ಐದೂ ಗ್ರಹಗಳು ಒಂದೇ ಸರಳರೇಖೆಯಲ್ಲಿದ್ದವು. ಆ ಸಮಯ ಭಗವಾನ್ ಕೃಷ್ಣನ ಸಮಯದ ನಂತರದ ಮೂವತ್ತೈದು ವರ್ಷಗಳು ಕಳೆದ ಬಳಿಕ ಪ್ರಾರಂಭವಾಯಿತು.

ಪುರಾಣಗಳ ಪ್ರಕಾರ ನಾಲ್ಕು ಯುಗಗಳಲ್ಲಿ ಕಲಿಯುಗವೇ ಅತ್ಯಂತ ಕರಾಳವಾಗಿದ್ದು ಕತ್ತಲಿನಿಂದ ತುಂಬಿರುತ್ತದೆ. ಸಮಯ ಕಳೆದಂತೆ ಕಲಿಯುಗದಲ್ಲಿಯೂ ಹಲವಾರು ಬದಲಾವಣೆಗಳಾಗುತ್ತಾ ಬರುತ್ತದೆ. ಆಧ್ಯಾತ್ಮಿಕತೆಯತ್ತ ಜನರ ಒಲವು ಕಡಿಮೆಯಾಗುತ್ತಾ ಹೋಗುತ್ತದೆ. ಕಲಿಯುಗದ ಅಂತ್ಯದಲ್ಲಿ ಜನರು ಭಗವಂತನನ್ನು ಮರೆಯುತ್ತಾರೆ ಹಾಗೂ ನೈತಿಕತೆ ಇಲ್ಲವಾಗುತ್ತದೆ. ಅಧರ್ಮ, ದುರ್ಮಾರ್ಗ, ಕಾಮವಾಂಛೆ, ಕೋಪ, ಸ್ವಾರ್ಥಪರತೆ ಮೊದಲಾದವು ಜಗತ್ತಿನಲ್ಲಿ ತಾಂಡವವಾಡುತ್ತವೆ. ಸತ್ಯುಗದಲ್ಲಿದ್ದ ಸತ್ಯಪರತೆ ಕಲಿಯುಗದಲ್ಲಿ ಕಾಲು ಭಾಗಕ್ಕೆ ಇಳಿಯುತ್ತದೆ. ಆದರೆ ಕಲಿಯುಗ ಯಾವಾಗ ಅಂತ್ಯವಾಗುತ್ತದೆ ಎಂಬ ಪ್ರಶ್ನೆಗೆ ಎಲ್ಲಿಯೂ ಖಚಿತವಾದ ಉತ್ತರ ದೊರಕುವುದಿಲ್ಲ.

ಪುರಾಣಗಳು ಮತ್ತು ಇತರ ಪವಿತ್ರ ಗ್ರಂಥಗಳಲ್ಲಿ ಯಾವಾಗ ಜಗತ್ತಿನಲ್ಲಿ ಅನಾಚಾರ ತಲೆ ಎತ್ತುತ್ತದೋ ಆಗೆಲ್ಲಾ ಭಗವಾನ್ ವಿಷ್ಣು ಹೊಸ ಅವತಾರ ಎತ್ತಿ ಬರುತ್ತಾನೆ ಮತ್ತು ಜಗತ್ತಿನಲ್ಲಿ ಶಾಂತಿ ಮತ್ತು ಸತ್ಯಸಂಧತೆಯನ್ನು ಮತ್ತೊಮ್ಮೆ ಸ್ಥಾಪಿಸುತ್ತಾನೆ ಎಂದು ತಿಳಿಸಲಾಗಿದೆ. ಆ ಪ್ರಕಾರ ಕಲಿಯುಗದಲ್ಲಿ ಅವತಾರ ಎತ್ತಲಿರುವ ವಿಷ್ಣುವಿನ ಇದು ಇಪ್ಪತ್ತೆರಡೆನಯ ಅವತಾರವಾಗಿದ್ದು ಕಲಿಯುಗದ ಅನಾಚಾರಗಳನ್ನು ತಡೆದು ಸತ್ಯುಗದಲ್ಲಿದ್ದ ಸತ್ಯಸಂಧತೆಯನ್ನು ಮತ್ತೊಮ್ಮೆ ಭೂಮಿಯಲ್ಲಿ ಸ್ಥಾಪಿಸುತ್ತಾನೆ. ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಕೆಳಗಿನ ಸ್ಲೈಡ್ ಷೋ ಮೂಲಕ ನೀಡಲಾಗಿದೆ...

ಕಲಿಯುಗ 4,32,000 ವರ್ಷಗಳದ್ದಾಗಿರುತ್ತದೆ

ಕಲಿಯುಗ 4,32,000 ವರ್ಷಗಳದ್ದಾಗಿರುತ್ತದೆ

ನಾಲ್ಕು ಯುಗಗಳಲ್ಲಿ ಕಲಿಯುಗವೇ ಅತ್ಯಂತ ದೀರ್ಘವಾಗಿದ್ದು 4,32,000 ವರ್ಷಗಳಾಗಿರುತ್ತದೆ. ಒಂದು ನಂಬಿಕೆಯ ಪ್ರಕಾರ ಕಲಿಯುಗದ ಹಿಂದಿನ ಯುಗವಾದ ದ್ವಾಪರಯುಗ ಕಳೆದು ಐದು ಸಾವಿರ ವರ್ಷಗಳಾಗಿವೆ. ಆ ಲೆಕ್ಕದ ಪ್ರಕಾರ ಕಲಿಯುಗ ಇನ್ನೂ 4,27,000 ವರ್ಷ ಮುಂದುವರೆಯುತ್ತದೆ. ಆ ಬಳಿಕ ಮತ್ತೊಮ್ಮೆ ಸುರ್ವಣಯುಗವಾದ ಸತ್ಯುಗ ಪ್ರಾರಂಭವಾಗುತ್ತದೆ.

ಬ್ರಹ್ಮ ಪುರಾಣದ ಪ್ರಕಾರ 10,000 ವರ್ಷಗಳು ಸುವರ್ಣಯುಗವಾಗಿರುತ್ತದೆ

ಬ್ರಹ್ಮ ಪುರಾಣದ ಪ್ರಕಾರ 10,000 ವರ್ಷಗಳು ಸುವರ್ಣಯುಗವಾಗಿರುತ್ತದೆ

ಬ್ರಹ್ಮ ಪುರಾಣದ ಪ್ರಕಾರ ಕಲಿಯುಗದ ಹತ್ತು ಸಾವಿರ ವರ್ಷಗಳ ಕಾಲ ಪ್ರಗತಿಯ ಅತ್ಯುನ್ನತ ಮಟ್ಟವನ್ನು ಪಡೆದು 'ಕಲಿಯುಗದ ಸುವರ್ಣಯುಗ' ಎಂಬ ಪಟ್ಟವನ್ನು ಪಡೆಯುತ್ತದೆ. ಆದರೆ ಇದೇ ಸಮಯದಲ್ಲಿ ಮಾನವತೆಯೂ ಅಧೋಭಿಮುಖವಾಗಿ ಇಳಿಯುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಬ್ರಹ್ಮ ಪುರಾಣದ ಪ್ರಕಾರ 10,000 ವರ್ಷಗಳು ಸುವರ್ಣಯುಗವಾಗಿರುತ್ತದೆ

ಬ್ರಹ್ಮ ಪುರಾಣದ ಪ್ರಕಾರ 10,000 ವರ್ಷಗಳು ಸುವರ್ಣಯುಗವಾಗಿರುತ್ತದೆ

ಈ ಅವಧಿಯ ಅಂತ್ಯದಲ್ಲಿ ಅಧ್ಯಾತ್ಮಿಕತೆ ಮತ್ತು ಪ್ರಜ್ಞೆಯೂ ಅಳಿಯುತ್ತಾ ಬರುತ್ತದೆ ಹಾಗೂ ಕೆಲವೇ ಜನರಲ್ಲಿ ಉಳಿದುಕೊಂಡಿರುತ್ತದೆ. ಈ ಸಮಯದಲ್ಲಿ ಭಗವಂತ ವಿಷ್ಣು 'ಕಲ್ಕಿ' ಎಂಬ ಅವತಾರವನ್ನು ಎತ್ತಿ ಈ ಸ್ಥಿತಿಯಿಂದ ಕಾಪಾಡುತ್ತಾನೆ.

ಕಲಿಯುಗದಲ್ಲಿ ಆಯಸ್ಸು ಮತ್ತು ಎತ್ತರ ಕಡಿಮೆಯಾಗುತ್ತದೆ

ಕಲಿಯುಗದಲ್ಲಿ ಆಯಸ್ಸು ಮತ್ತು ಎತ್ತರ ಕಡಿಮೆಯಾಗುತ್ತದೆ

ಕೆಲವು ಮಾಹಿತಿಗಳ ಪ್ರಕಾರ ಕಲಿಯುಗದಲ್ಲಿ ಮಾನವರ ಸರಾರಸಿ ಆಯಸ್ಸು ಹನ್ನೆರಡು ವರ್ಷಗಳ ಕಾಲ ಮತ್ತು ಮನುಷ್ಯರ ಸರಾಸರಿ ಎತ್ತರ ನಾಲ್ಕು ಅಡಿಗಳಿಗೆ ಇಳಿಯುತ್ತದೆ.

ಕಲಿಯುಗ ಮತ್ತು ಮಾಯನ್ ಕ್ಯಾಲೆಂಡರ್‌ನ ಕಾಕತಾಳೀಯ

ಕಲಿಯುಗ ಮತ್ತು ಮಾಯನ್ ಕ್ಯಾಲೆಂಡರ್‌ನ ಕಾಕತಾಳೀಯ

ಕೆಲವು ಮಾಹಿತಿಗಳ ಪ್ರಕಾರ ಕಲಿಯುಗ ಐದು ಸಾವಿರ ವರ್ಷಗಳ ಅವಧಿಯದ್ದಾಗಿದ್ದು ಕಾಕತಾಳೀಯವೆಂಬಂತೆ ಮಾಯನ್ ಕ್ಯಾಲೆಂಡರ್ ತಿಳಿಸಿರುವ 'ಮಹಾ ಪರ್ವ' ಅಥವಾ 'The Great Cycle' ನ ಅವಧಿಯೊಂದಿಗೆ ತಾಳೆಹೊಂದುತ್ತದೆ.

ಕಲಿಯುಗ ಮತ್ತು ಮಾಯನ್ ಕ್ಯಾಲೆಂಡರ್‌ನ ಕಾಕತಾಳೀಯ

ಕಲಿಯುಗ ಮತ್ತು ಮಾಯನ್ ಕ್ಯಾಲೆಂಡರ್‌ನ ಕಾಕತಾಳೀಯ

ಒಂದು ನಂಬಿಕೆಯ ಪ್ರಕಾರ ಕಲಿಯುಗ 12ನೇ ಡಿಸೆಂಬರ್ 2012 ರಂದು ಕೊನೆಗೊಂಡಿದೆ. ಮಾಯಾ ಕ್ಯಾಲೆಂಡರ್ ಪ್ರಕಾರ ಈ ದಿನ ವಿಶ್ವದ ಅಂತ್ಯವಾಗಬೇಕಿತ್ತು. ಆದರೆ ಹಾಗಾಗದೇ ಜಗತ್ತು ಹೊಸ ಪರ್ವದತ್ತ ಎಚ್ಚರಾಗಿದೆ ಎಂದು ತಿಳಿಸುತ್ತದೆ.

English summary

When Will Kalyug End?

As per the Vedas, we are living in the age of ignorance and immorality that is also known as Kali Yuga. This age is said to have started from 3102 BC, when the five planets namely Mercury, Venus, Mars, Jupiter and Saturn all fell in at 0° of the Aries sign, approximately 35 years after the times of Lord Krishna.
Story first published: Monday, January 4, 2016, 18:35 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X