For Quick Alerts
ALLOW NOTIFICATIONS  
For Daily Alerts

ಸೀತೆಯ ಆಭರಣಗಳನ್ನೇ ಗುರುತಿಸುವಲ್ಲಿ ವಿಫಲನಾದ ರಾಮ!

|

ಹಿಂದೂಗಳ ಪವಿತ್ರ ಮಹಾ ಕಾವ್ಯವಾದ ರಾಮಾಯಣ ಮಹಾ ಭಾರತವು ಮನುಕುಲಕ್ಕೆ ಸಾಕಷ್ಟು ಮಾರ್ಗದರ್ಶನವನ್ನು ನೀಡುತ್ತದೆ. ಅವುಗಳಲ್ಲಿ ಬರುವ ಕಥೆಗಳು ಮತ್ತು ಉಪಕಥೆಗಳು ಜೀವನದ ಅಗತ್ಯ ಮೌಲ್ಯಗಳನ್ನು ಪ್ರತಿಬಿಂಬಿಸುತ್ತವೆ. ಲೋಕ ಕಲ್ಯಾಣ ಕಾರಣಕ್ಕಾಗಿ ವಿಷ್ಣು ದೇವನು ಮನುಷ್ಯನ ರೂಪದಲ್ಲಿ ಅವತರಿಸಿ ಬಂದ ಕಥೆಗಳೇ ರಾಮಾಯಣ ಮಹಾಭಾರತ. ರಾಮಾಯಣವು ಆದರ್ಶ ಪುರುಷನಾದ ರಾಮನು ಅಹಂಕಾರಿಯಾದ ರಾವಣನನ್ನು ವಧಿಸುವ ಕಥೆಯನ್ನು ಒಳಗೊಂಡಿದೆ.

ಬಿಲ್ಲು ಬಾಣಗಳ ಪಾರಂಗತನಾದ ರಾಜಕುಮಾರ ರಾಮ. ರಾಮನು ತನ್ನ ಬಿಲ್ಲು ಬಾಣದ ಕೌಶಲ್ಯದಿಂದಲೇ ಸೀತೆಯ ಸ್ವಯಂ ವರದಲ್ಲಿ ಗೆದ್ದು, ಜನಕ ರಾಜನ ಮಗಳು ಜಾನಕಿ/ಸೀತೆಯನ್ನು ವಿವಾಹವಾಗಿ, ತನ್ನ ರಾಜ್ಯಕ್ಕೆ ಕರೆತಂದನು. ರಾಮನ ತಂದೆಯ ಎರಡನೇ ಹೆಂಡತಿ ಕೈಕೇಯಿಯ ಕುತಂತ್ರದಿಂದಾಗಿ ರಾಮನು 14 ವರ್ಷಗಳ ವನವಾಸವನ್ನು ಅನುಭವಿಸಬೇಕಾಯಿತು. ವನವಾಸಕ್ಕೆ ತೆರಳುವಾಗ ರಾಮನ ಪತ್ನಿ ಹಾಗೂ ಸಹೋದರನಾದ ಲಕ್ಷ್ಮಣನು ರಾಮನ ಜೊತೆಯಲ್ಲಿಯೇ ವನವಾಸಕ್ಕೆ ನಡೆದರು.

ಸ್ವಯಂ ವರದಲ್ಲಿ ಸೋತಿದ್ದ ರಾವಣನು ಸೀತೆಯನ್ನು ಪಡೆಯಬೇಕು ಎನ್ನುವ ಹಂಬಲವನ್ನು ಹೊಂದಿದ್ದನು. ಆ ಕಾರಣಕ್ಕಾಗಿ ಒಂದು ದಿನ ಮಾಯಾವಿ ಭಿಕ್ಷುಕನ ವೇಶವನ್ನು ಧರಿಸಿ, ರಾಮನಿಲ್ಲದ ಸಮಯದಲ್ಲಿ ಸೀತೆಯನ್ನು ಅಪಹರಿಸಿದನು. ಆ ಸಮಯದಲ್ಲಿ ಉಂಟಾದ ಕೆಲವು ಸನ್ನಿವೇಶಗಳ ವಿವರಣೆಯನ್ನು ಈ ಲೇಖನದ ಮುಂದಿನ ಭಾಗ ತಿಳಿಸಲಾಗಿದೆ.

ಜಯಟಾಯುವಿನ ಸಣ್ಣ ಸಹಾಯ

ಜಯಟಾಯುವಿನ ಸಣ್ಣ ಸಹಾಯ

ಭಿಕ್ಷೆಯನ್ನು ಬೇಡಲು ಬಂದ ರಾವಣನಿಗೆ ಲಕ್ಷ್ಮಣ ಹಾಕಿದ ಗೆರೆಯನ್ನು ದಾಟಿ ಮುಂದೆ ಬರಲು ಸಾಧ್ಯವಾಗಲಿಲ್ಲ. ಆಗ ಸೀತಾ ದೇವಿಯ ಬಳಿಯೇ ಇಲ್ಲಿಗೆ ಬಂದು ಭಿಕ್ಷೆ ಹಾಕಿ ಎಂದು ಬೇಡಿಕೊಂಡನು. ಅದನ್ನು ನಂಬಿದ ಸೀತಾ ದೇವಿ ಭಿಕ್ಷೆ ಹಾಕಲು ಲಕ್ಷ್ಮಣ ಹಾಕಿದ ಗೆರೆಯನ್ನು ದಾಟಿ ಮುಂದೆ ನಡೆದಳು. ಆಗ ಸೀತೆಯನ್ನು ಹಿಡಿದು ತನ್ನೊಂದಿಗೆ ಪುಷ್ಪಕ ವಿಮಾನದಲ್ಲಿ ಕರೆದೊಯ್ದನು. ರಾಮ ಮತ್ತು ಲಕ್ಷ್ಮಣನಿಗೆ ತನ್ನನ್ನು ಹುಡುಕಲು ಸಹಾಯವಾಗಲಿ ಎನ್ನುವ ಉದ್ದೇಶದಿಂದ ಸೀತೆ ತನ್ನ ಸರದ ಮಣಿಗಳನ್ನು ಬೀರುತ್ತಾ ಬಂದಿದ್ದಳು. ದುಃಖದಿಂದ ಕೂಗಿ ಸಹಾಯ ಕೇಳುತ್ತಿದ್ದ ಸೀತೆಯನ್ನು ಕಂಡ ರಾಮನ ಭಕ್ತ ಜಟಾಯು ಸಹಾಯಕ್ಕೆ ಧಾವಿಸಿದನು. ಆಗ ರಾವಣನು ಜಟಾಯು ಪಕ್ಷಿಯ ರೆಕ್ಕೆಯನ್ನು ಕಡಿದು ಬಿಸಾಡಿದನು.

ಹನುಮನು ರಾಮನ ಭಕ್ತನಾದ

ಹನುಮನು ರಾಮನ ಭಕ್ತನಾದ

ರಾಮ ಮತ್ತು ಲಕ್ಷ್ಮಣರ ನಿಜ ರೂಪ ಹಾಗೂ ಶಕ್ತಿಯನ್ನು ತಿಳಿದ ಹನುಮಂತನು ರಾಮನ ಬಗ್ಗೆ ಅತಿಯಾದ ಗೌರವ ಹಾಗೂ ಪ್ರೀತಿಯನ್ನು ಪಡೆದುಕೊಂಡನು. ನಂತರ ಸುಗ್ರೀವ ಮತ್ತು ಅವನ ಅನುಯಾಯಿಗಳು ವಾಸಿಸುತ್ತಿದ್ದ ಬೆಟ್ಟದ ತುದಿಗೆ ಕರೆತಂದನು. ರಾಮನ ದುರಂತ ಕಥೆಯನ್ನು ಕೇಳಿದ ಹನುಮಂತನು ಅವರ ಸಹಾಯಕ್ಕೆ ಮುಂದಾದನು. ಅಂತೆಯೇ ವಾನರರಿಂದಲೂ ಸಹಾಯ ಕೇಳಿದನು. ಆಗ ವಾನರರು/ಕೋತಿಗಳು ಆಕಾಶದಿಂದ ಉದುರಿದ ಆಭರಣಗಳ ಕಥೆಯನ್ನು ಹೇಳಿದರು. ಅವುಗಳನ್ನು ರಾಮ ಲಕ್ಷ್ಮಣರಿಗೆ ತೋರಿಸಿದರು ಎಂದು ಹೇಳಲಾಗುವುದು.

ರಾಮ ಆಭರಣಗಳನ್ನು ಪರಿಶೀಲಿಸಿದನು

ರಾಮ ಆಭರಣಗಳನ್ನು ಪರಿಶೀಲಿಸಿದನು

ಆಭರಣಗಳನ್ನು ಮತ್ತು ಮಣಿಗಳನ್ನು ಸೀತಾ ದೇವಿಯದ್ದೋ ಅಲ್ಲವೋ ಎಂದು ತಿಳಿದುಕೊಳ್ಳಲು ರಾಮನ ಮುಂದೆ ಇಟ್ಟರು. ಅದು ಸೀತಾ ದೇವಿಯದ್ದೇ ಆಗಿದ್ದರೆ ಅವಳನ್ನು ಯಾವ ಮಾರ್ಗದಲ್ಲಿ ಕರೆದೊಯ್ದರು ಎನ್ನುವುದು ಕೋತಿಗಳಿಗೆ ತಿಳಿದಿತ್ತು. ಮುಂದೆ ಸೀತೆಯನ್ನು ಪುನಃ ಕರೆ ತರುವುದು ಹೇಗೆ ಎನ್ನುವುದನ್ನು ಯೋಚಿಸಬಹುದು ಎನ್ನುವ ಉದ್ದೇಶವಾಗಿತ್ತು.

ರಾಮನು ಖಚಿತಪಡಿಸಲಿಲ್ಲ

ರಾಮನು ಖಚಿತಪಡಿಸಲಿಲ್ಲ

ಆಭರಣಗಳನ್ನು ನೋಡಿದ ರಾಮನಿಗೆ ಅದು ಸೀತೆಗೆ ಸೇರಿದ್ದೋ ಅಥವಾ ಇಲ್ಲವೋ ಎನ್ನುವುದನ್ನು ಸರಿಯಾಗಿ ಗುರುತಿಸಲು ಸಾಧ್ಯವಾಗಲಿಲ್ಲ. ಅವು ಸೀತೆಯ ಆಭರಣಗಳಂತೆ ಕಂಡರೂ ಸರಿಯಾಗಿ ಅವನಿಗೆ ದೃಢ ನಿಶ್ಚಯಕ್ಕೆ ಬರಲು ಸಾಧ್ಯವಾಗಲಿಲ್ಲ. ನಂತರ ಲಕ್ಷ್ಮಣನಲ್ಲಿ ಕೇಳಿದನು. ಈ ಆಭರಣಗಳಲ್ಲಿ ಯಾವುದಾದರೂ ಸೀತೆಯದ್ದು ಎಂದು ನೀನು ಗುರುತಿಸಬಲ್ಲೆಯಾ ಎಂದು.

ಲಕ್ಷ್ಮಣನ ಪರಿಶೀಲನೆ

ಲಕ್ಷ್ಮಣನ ಪರಿಶೀಲನೆ

ಆಭರಣಗಳನ್ನು ನೋಡಿದ ಲಕ್ಷ್ಮಣನಿಗೂ ಅವು ಸೀತೆಯದ್ದೇ ಎಂದು ಹೇಳಲು ಸಾಧ್ಯವಾಗಲಿಲ್ಲ. ಆದರೆ ಒಂದು ಕಾಲು ಗೆಜ್ಜೆಯನ್ನು ನೋಡಿ ಅದು ಸೀತೆಯದ್ದೇ ಎಂದು ಗುರುತಿಸಿದನು. ಅದು ಹೇಗೆ ಇದನ್ನೊಂದು ಮಾತ್ರ ಸೀತೆಯದ್ದೇ ಎಂದು ಗರುತಿಸಿದೆ ಎಂದು ಕೇಳಿದರು.

ಸೀತೆಯನ್ನು ಹಿಂಬಾಲಿಸುತ್ತಿದ್ದ

ಸೀತೆಯನ್ನು ಹಿಂಬಾಲಿಸುತ್ತಿದ್ದ

ರಾಮ ಲಕ್ಷ್ಮಣ ಮತ್ತು ಸೀತೆಯು ಹೋಗುವಾಗ ಲಕ್ಷ್ಮಣನು ಸೀತೆಯ ಹಿಂದೆ ಹೋಗುತ್ತಿದ್ದ. ಅವನು ಅತ್ತಿಗೆ ಮತ್ತು ಅಣ್ಣನನ್ನು ಅತೀವ ಗೌರವದಿಂದ ಕಾಣುತ್ತಿದ್ದ. ಸೀತೆಯ ಮುಖವನ್ನು ಎಂದಿಗೂ ತಲೆ ಎತ್ತಿ ನೋಡುತ್ತಿರಲಿಲ್ಲ. ಅವಳ ಎದುರು ತಲೆಯನ್ನು ತಗ್ಗಿಸಿಯೇ ನಡೆಯುತ್ತಿದ್ದ. ಈ ಹಿನ್ನೆಲೆಯಲ್ಲಿ ಅವನು ತಲೆ ತಗ್ಗಿಸಿ ಅವಳ ಹಿಂದೆ ಹೋಗುವಾಗ ಕಾಲಿಗೆ ಹಾಕಿದ್ದ ಗೆಜ್ಜೆಯ ಪರಿಚಯ ಲಕ್ಷ್ಮಣನಿಗೆ ಇತ್ತು. ಹಾಗಾಗಿ ಲಕ್ಷ್ಮಣನು ಸೀತೆಯ ಕಾಲ್ಗೆಜ್ಜೆಯನ್ನು ಗುರುತಿಸಿದನು ಎಂದು ಹೇಳಲಾಗುವುದು.

 ಲಕ್ಷ್ಮಣನ ಆದರ್ಶ ಗೌರವ

ಲಕ್ಷ್ಮಣನ ಆದರ್ಶ ಗೌರವ

ಲಕ್ಷ್ಮಣನು ತನ್ನ ಸಂಕಲ್ಪಕ್ಕೆ ಹೆಸರುವಾಸಿಯಾಗಿದ್ದನು. ಅವು ಏನು ಸಂಕಲ್ಪ ಮಾಡಿಕೊಳ್ಳುತ್ತಿದ್ದನೋ ಅದನ್ನೇ ಮಾಡಿ ತೋರಿಸುತ್ತಿದ್ದನು. ಅಣ್ಣ ಮತ್ತು ಅತ್ತಿಗೆಯ ಮೇಲೆ ಅಪಾರವಾದ ಪ್ರೀತಿ, ಗೌರವ ಹಾಗೂ ವಿಶ್ವಾಸವನ್ನು ಹೊಂದಿದ್ದ. ಅದನ್ನು ಅವನು ಎಂದಿಗೂ ದುರುಪಯೋಗ ಮಾಡಿಕೊಳ್ಳಲಿಲ್ಲ. ಸೀತಾ ದೇವಿಯ ಮುಂದೆ ನಿಲ್ಲುವಾಗ ಅವಳ ಮುಖವನ್ನು ನೋಡುತ್ತಿರಲಿಲ್ಲ. ಬದಲಿಗೆ ತಲೆ ತಗ್ಗಿಸಿ ಪಾದಗಳನ್ನು ನೋಡುತ್ತಿದ್ದ. ಅವನ ಗೌರವದ ಭಾವನೆಯು ಕಷ್ಟದ ಸಮಯದಲ್ಲಿ ಸಹಾಯ ಮಾಡಿತು.

ಲಕ್ಷ್ಮಣನ ಗುಣಗಳು

ಲಕ್ಷ್ಮಣನ ಗುಣಗಳು

ಲಕ್ಷ್ಮಣನು ತನ್ನ ಅಣ್ಣನಿಗಾಗಿ ಜೀವನವನ್ನೇ ಮುಡಿಪಾಗಿ ಇಟ್ಟಿದ್ದನು. ಸಂತೋಷ ಹಾಗೂ ದುಃಖದ ಸಮಯದಲ್ಲಿ ಅಣ್ಣನ ಜೊತೆಗೆ ನಡೆದು ನಿಷ್ಠೆ, ಪ್ರೀತಿ ಮತ್ತು ಬದ್ಧತೆಯನ್ನು ತೋರಿದ್ದನು. ಇದರಿಂದಾಗಿ ರಾಮನ ಮನಸ್ಸಿನಲ್ಲೂ ಲಕ್ಷ್ಮಣನಿಗೆ ವಿಶೇಷ ಸ್ಥಾನ ಹಾಗೂ ಪ್ರೀತಿಯನ್ನು ನೀಡಿದ್ದನು. ತಮ್ಮ, ಹನುಮಂತ ಮತ್ತು ವಾನರಗಳ ಸಹಾಯದಿಂದ ಅಂತಿಮವಾಗಿ ಸೀತೆಯನ್ನು ಹುಡುಕುವಲ್ಲಿ ರಾಮನು ಯಶಸ್ವಿಯಾದನು. ಜೊತೆಗೆ ಸಮಾಜದಲ್ಲಿ ದುಷ್ಟ ಶಕ್ತಿಯಾದ ರಾವಣನನ್ನು ಸದೆ ಬಡಿದನು.

ಇಂತಹ ಪ್ರೀತಿ ಇಂದು ನಮ್ಮ ಜಗತ್ತಿನಲ್ಲಿ ಇದೆಯೇ?

ಇಂತಹ ಪ್ರೀತಿ ಇಂದು ನಮ್ಮ ಜಗತ್ತಿನಲ್ಲಿ ಇದೆಯೇ?

ನಿಷ್ಕಲ್ಮಶವಾದ ಪ್ರೀತಿ, ತ್ಯಾಗ ಹಾಗೂ ಗೌರವವು ರಾಮ ಮತ್ತು ಲಕ್ಷ್ಮಣನ ನಡುವೆ ಇತ್ತು. ಇಂತಹ ಒಂದು ಸಹೋದರ ಬಾಂಧವ್ಯ ಇಂದು ನಮ್ಮ ಸಮಾಜದಲ್ಲಿ ಕಾಣಬಹುದೇ? ಎನ್ನುವುದರ ಬಗ್ಗೆ ನೀವೇನು ಹೇಳುವಿರಿ?

Read more about: inspiration
English summary

When Rama could not recognize Sita jewels

Here we are discussing about when rama could not recognize sita jewels. This story is placed when Ravana had abducted Sita; Jatayu had fought with him; Sita had thrown her jewels from Pushpak; and Rama & Lakshmana are searching for her. Read more.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more