Latest Updates
-
ಬೇಸಿಗೆಯಲ್ಲಿ ಈ ಗಂಜಿ ಕುಡಿಯಿರಿ.. ಕೊಬ್ಬು ಕಡಿಮೆ, ದೇಹಕ್ಕೂ ತಂಪು! ಈ ಗಂಜಿಯ ಆರೋಗ್ಯ ರಹಸ್ಯ ಇಲ್ಲಿದೆ -
30 ವರ್ಷಗಳ ಬಳಿಕ ಸೂರ್ಯ-ಶನಿ ಸಂಯೋಗ! ಯಾರಿಗೆ ಶುಭ? ಯಾರಿಗೆ ಸಮಸ್ಯೆ? 12 ರಾಶಿಗಳ ಜಾತಕ ತಿಳಿಯಿರಿ -
ಈ 5 ವಿಷಯಗಳಲ್ಲಿ ಮಿತಿ ಮೀರಿದ್ರೆ ಜೀವನ ಸರ್ವನಾಶ! ಅಹಂಕಾರ ಬಿಡಿ.. ಇಂದೇ ಇವುಗಳಿಂದ ದೂರವಿರಿ -
ಪಕ್ಕಾ ಹೈದರಾಬಾದಿ ರುಚಿ.. ಅತಿಥಿಗಳು ಬಂದ್ರೆ ಈ ಚಿಕನ್ ಯಖನಿ ಪುಲಾವ್ ಮಾಡಿ! ಸಿಂಪಲ್ & ಸೂಪರ್ ರುಚಿ -
2026ರ ಸೂರ್ಯ ಗೋಚಾರ: ಇವರಿಗೆ ಸಿಗಲಿದೆ ಸರ್ಕಾರಿ ಉದ್ಯೋಗ! ಯಾರಿಗೆ ಮಾನಸಿಕ ಒತ್ತಡ? 12 ರಾಶಿಯವರಿಗೆ ರಾಶಿಫಲ ಇಲ್ಲಿದೆ -
ಹೋಟೆಲ್ ಶೈಲಿಯ ಆಲೂ ಮಸಾಲಾ ಪೂರಿ! ಈ ರೀತಿ ಮನೆಯಲ್ಲೇ ಮಾಡಿ, ಪರ್ಫೆಕ್ಟ್ ಆಗಿ ಉಬ್ಬಿ ಬರುತ್ತೆ -
ಇವರ ಜೀವನದಲ್ಲಿ ಹೊಸ ಕಿಡಿ ಹೊತ್ತಿಕೊಳ್ಳಲಿದೆ! ಹಠಮಾರಿ ಸ್ವಭಾವವನ್ನು ಬಿಡಿ -
March 12 Horoscope: ಹಣಕಾಸಿನ ಸವಾಲುಗಳು ದೊಡ್ಡದಾಗುವ ಸಂಭವ -
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ? -
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್
ನಿಮಗೆ ಗೊತ್ತಾ? ಅಂದು ಸೀತೆ ಲಕ್ಷ್ಮಣನನ್ನೇ ನುಂಗಿದಳಂತೆ!
ಸೀತೆ ಲಕ್ಷ್ಮಣನನ್ನು ನುಂಗಿದ ರಾಮಾಯಣದ ಕತೆ ಬಲು ಸೊಗಸಾಗಿದೆ. ಸೀತೆ ಲಕ್ಷ್ಮಣನನ್ನೇ ನುಂಗುವ ಪರಿಸ್ಥಿತಿ ಬಂದಿದ್ದು ಯಾಕೆ ಮತ್ತು ಹೇಗೆ ಎಂಬ ಸ್ವಾರಸ್ಯಕರವಾದ ರಾಮಾಯಣದ ಘಟನೆಯನ್ನು ನೀವೂ ಓದಿ.
14 ವರ್ಷಗಳ ವನವಾಸ ಮುಗಿದಾಗ ಹೀಗಾಗಿತ್ತು! ರಾಮ, ಲಕ್ಷ್ಮಣ ಹಾಗೂ ಸೀತೆ 14 ವರ್ಷ ವನವಾಸ ಅನುಭವಿಸಿದ ರಾಮಾಯಣದ ಕತೆ ಗೊತ್ತಿದೆ. ಸೀತೆ ಲಕ್ಷ್ಮಣನನ್ನು ನುಂಗಿದ ಕತೆ ಈ ವನವಾಸ ಮುಂಗಿದ ನಂತರ ನಡೆದದ್ದಾಗಿದೆ. 14 ವರ್ಷಗಳ ಸುದೀರ್ಘ ವನವಾಸ ಮುಗಿಸಿ ರಾಮ, ಲಕ್ಷ್ಮಣ, ಸೀತೆ ಹಾಗೂ ಅವರೊಂದಿಗೆ ಹನುಮಾನ ಎಲ್ಲರೂ ಮರಳಿ ಅಯೋಧ್ಯೆಗೆ ಬರುತ್ತಾರೆ. ಆದರೆ ವನವಾಸ ಸುರಕ್ಷಿತವಾಗಿ ಮುಗಿದು ತಾವು ಅಯೋಧ್ಯೆಗೆ ವಾಪಸಾದರೆ ತಾನು ಸರಯೂ ನದಿಗೆ ಭೇಟಿ ನೀಡಿ ಅದರ ತಟದಲ್ಲಿ ಪ್ರಾರ್ಥನೆ ಮಾಡುವುದಾಗಿ ಸೀತಾಮಾತೆ ವನವಾಸಕ್ಕೆ ಹೊರಡುವ ಮುನ್ನ ಶಪಥ ಮಾಡಿರುತ್ತಾಳೆ. ಯಾವಾಗ ಎಲ್ಲರೂ ಸುರಕ್ಷಿತವಾಗಿ ಅಯೋಧ್ಯೆ ಮರಳಿದರೋ ಆಗ ಸೀತಾಮಾತೆಗೆ ತನ್ನ ಶಪಥದ ನೆನಪಾಗಿ ಸರಯೂ ನದಿ ತಟಕ್ಕೆ ಹೋಗಲು ಸಿದ್ಧಳಾಗುತ್ತಾಳೆ.

ಲಕ್ಷ್ಮಣನೊಂದಿಗೆ ಸರಯೂ ನದಿ ತಟಕ್ಕೆ ಪ್ರಯಾಣ
ಲಕ್ಷ್ಮಣನೊಂದಿಗೆ ಸೀತಾಮಾತೆಯು ಸರಯೂ ನದಿಯತ್ತ ಪ್ರಯಾಣ ಬೆಳೆಸುತ್ತಾಳೆ. ಇವರಿಬ್ಬರೂ ಸರಯೂ ನದಿಯತ್ತ ಪ್ರಯಾಣ ಬೆಳೆಸಿದ್ದನ್ನು ನೋಡಿದ ಹನುಮಾನನಿಗೆ ತಾನೂ ಅವರ ಜೊತೆ ಹೋಗಬೇಕೆಂದು ಮನಸಾಗುತ್ತದೆ. ಆದರೆ ಕೇಳಿದರೆ ಎಲ್ಲಿ ಸೀತಾಮಾತೆ ಕೋಪ ಮಾಡಿಕೊಳ್ಳುವಳೋ ಎಂದು ಸುಮ್ಮನಾಗುತ್ತಾನೆ.ಆದರೂ ಅವರಿಬ್ಬರೂ ಹೊರಟಾಗ ಅವರಿಗೆ ತಿಳಿಯದಂತೆ ಅವರ ಹಿಂದಿನಿಂದ ತಾನೂ ರಹಸ್ಯವಾಗಿ ಅವರನ್ನು ಹಿಂಬಾಲಿಸುತ್ತಾನೆ. ಸೀತೆ ಹಾಗೂ ಲಕ್ಷ್ಮಣ ಇಬ್ಬರೂ ಸರಯೂ ನದಿಯ ತಟ ತಲುಪಿದಾಗ ಹಿಂದಿನಿಂದ ಬಂದ ಹನುಮಾನನು ಅವರಿಗೆ ಕಾಣದಂತೆ ಒಂದು ಮರದ ಹಿಂದೆ ಅವಿತುಕೊಂಡು ನಿಲ್ಲುತ್ತಾನೆ.

ಪ್ರತ್ಯಕ್ಷನಾದ ಅಘಾಸುರ ರಾಕ್ಷಸ
ನದಿ ದಡದಲ್ಲಿ ಪೂಜಾ ಕೈಂಕರ್ಯ ಕೈಗೊಳ್ಳಲು ನದಿಯಿಂದ ಕಲಶದಲ್ಲಿ ನೀರು ತರುವಂತೆ ಸೀತಾಮಾತೆ ಲಕ್ಷ್ಮಣನಿಗೆ ಹೇಳುತ್ತಾಳೆ. ಇದನ್ನೆಲ್ಲವನ್ನೂ ಹನುಮಾನ ಮರದ ಹಿಂದಿನಿಂದಲೇ ಸುಮ್ಮನೆ ನೋಡುತ್ತ ನಿಂತಿರುತ್ತಾನೆ. ಇನ್ನೇನು ಲಕ್ಷ್ಮಣ ಬಾಗಿ ನದಿಯಿಂದ ಕಲಶದಲ್ಲಿ ನೀರು ತುಂಬಿಕೊಳ್ಳಬೇಕು ಎನ್ನುವಷ್ಟರಲ್ಲಿ ಜೋರಾದ ಗಹಗಹಿಸುವ ನಗುವಿನ ಭಯಾನಕ ಸದ್ದು ಕೇಳಿಸುತ್ತದೆ. ಇದರ ಬೆನ್ನಲ್ಲೇ ಅಘಾಸುರ ಎಂಬ ರಾಕ್ಷಸವೊಂದು ನದಿ ನೀರಿನಿಂದ ಮೇಲೆದ್ದು ಲಕ್ಷ್ಮಣನತ್ತ ಬರಲಾರಂಭಿಸುತ್ತಾನೆ. ತಕ್ಷಣ ಬಿಲ್ಲಿಗೆ ಬಾಣವನ್ನು ಹೂಡಿದ ಲಕ್ಷ್ಮಣ ರಾಕ್ಷಸನತ್ತ ಗುರಿಯಿಡುತ್ತಾನೆ. ಆದರೆ ಲಕ್ಷ್ಮಣನಿಗೆ ಬೆದರದ ರಾಕ್ಷಸ, ತನ್ನನ್ನು ಯಾವ ಮಾನವನೂ ಕೊಲ್ಲಲು ಸಾಧ್ಯವಿಲ್ಲವೆಂದೂ, ಹಾಗಂತ ಶಿವ ಭಗವಂತ ತನಗೆ ವರವನ್ನು ದಯಪಾಲಿಸಿದ್ದಾನೆ ಎಂದು ಹೇಳುತ್ತಾನೆ. ಅಲ್ಲದೆ ನಿನ್ನನ್ನು ಈಗಲೇ ತಿಂದು ನನ್ನ ಹೊಟ್ಟೆ ತುಂಬಿಸಿಕೊಳ್ಳುತ್ತೇನೆ ಎಂದು ಘರ್ಜಿಸುತ್ತಾನೆ.

ಲಕ್ಷ್ಮಣನನ್ನೇ ನುಂಗಿದ ಸೀತೆ!
ಅಘಾಸುರ ಲಕ್ಷ್ಮಣನನ್ನು ತಿನ್ನಲು ಬರುತ್ತಿದ್ದುದನ್ನು ದೂರದಿಂದ ನೋಡಿದ ಸೀತೆ ಓಡಿ ಬಂದವಳೇ ರಾಕ್ಷಸನಿಂದ ರಕ್ಷಿಸಲು ತನ್ನ ದೈವಿಕ ಶಕ್ತಿಯನ್ನು ಬಳಸಿ ಲಕ್ಷ್ಮಣನನ್ನು ನುಂಗಿ ಬಿಡುತ್ತಾಳೆ. ಲಕ್ಷ್ಮಣನನ್ನು ನುಂಗುತ್ತಿದ್ದಂತೆಯೇ ಸೀತೆ ಕೆಂಪು ಬೆಳಕು ಬೀರುವ ಪ್ರಕಾಶಮಾನವಾದ ಚಿಕ್ಕ ಚೆಂಡಿನಂತಹ ವಸ್ತುವಾಗಿ ಬದಲಾಗುತ್ತಾಳೆ.
ಇನ್ನು ಚೆಂಡನ್ನೂ ರಾಕ್ಷಸ ತಿಂದು ಬಿಡುತ್ತಾನೆ ಎಂದುಕೊಂಡ ಹನುಮಂತ ಅದನ್ನು ನೀರಿನೊಂದಿಗೆ ಕಲಶದಲ್ಲಿ ಹಾಕಿ ಅಲ್ಲಿಂದ ಮಾಯವಾಗಿ ಬಿಡುತ್ತಾನೆ.

ರಾಮನಿಗೆ ತಿಳಿಸಿದ ಹನುಮಂತ
ಚೆಂಡಿನಂತಹ ಹೊಳೆಯುವ ವಸ್ತುವನ್ನು ಅಯೋಧ್ಯೆಗೆ ತಂದ ಹನುಮಂತ ನಡೆದುದೆಲ್ಲವನ್ನೂ ರಾಮನಿಗೆ ವಿವರಿಸುತ್ತಾನೆ. ಸೀತೆ ಹಾಗೂ ಲಕ್ಷ್ಮಣರನ್ನು ಮತ್ತೆ ಜೀವಂತ ಮಾಡಲು ಬೇಡಿಕೊಳ್ಳುತ್ತಾನೆ. ಅದಕ್ಕೆ ಉತ್ತರಿಸಿದ ರಾಮನು, ಸೀತೆ ಹಾಗೂ ಲಕ್ಷ್ಮಣ ಇಬ್ಬರೂ ಮಾನವರಲ್ಲ. ಅವರೂ ದೈವಾಂಶ ಸಂಭೂತರೇ ಎಂದು ಹೇಳುತ್ತಾನೆ. ಬೇಗ ನದಿಗೆ ಮರಳಿ ಹೋಗಿ ಕಲಶದಲ್ಲಿನ ನೀರನ್ನು ನದಿಗೆ ಸುರಿದು ಬರುವಂತೆ ಹನುಮಾನನಿಗೆ ರಾಮನು ಆದೇಶಿಸುತ್ತಾನೆ. ನದಿಯ ನೀರು ಹಾಗೂ ಅದರಲ್ಲಿನ ಪ್ರಾಣಿಗಳನ್ನು ರಕ್ಷಿಸಲು ಹೀಗೆ ಮಾಡುವುದು ಅಗತ್ಯ ಎಂದೂ ರಾಮನು ತಿಳಿಸುತ್ತಾನೆ.

ಅಘಾಸುರನ ನಿರ್ನಾಮ
ರಾಮನ ಅಣತಿಯಂತೆ ನದಿಗೆ ತೆರಳಿದ ಹನುಮಾನ ಕಲಶದಲ್ಲಿನ ನೀರನ್ನು ಮರಳಿ ನದಿಗೆ ಸುರಿಯುತ್ತಾನೆ. ಅದರಲ್ಲಿನ ಪ್ರಕಾಶಮಾನವಾದ ಚಿಕ್ಕ ಚೆಂಡಿನಂತಹ ವಸ್ತು ದೊಡ್ಡದಾಗುತ್ತ ಹೋಗಿ ಪ್ರಖರ ಬೆಂಕಿಯ ಉಂಡೆಯಾಗಿ ರಾಕ್ಷಸನನ್ನು ಸುಟ್ಟು ಹಾಕುತ್ತದೆ. ಹೀಗೆ ಅಘಾಸುರನ ವಧೆಯಿಂದ ನದಿಯು ಸುರಕ್ಷಿತವಾಗುತ್ತದೆ. ಇದೇ ಸಮಯದಲ್ಲಿ ಸೀತಾಮಾತೆ ಹಾಗೂ ಲಕ್ಷ್ಮಣ ಇಬ್ಬರೂ ಮತ್ತೆ ಹಳೆಯ ರೂಪ ಪಡೆದು ಪ್ರತ್ಯಕ್ಷರಾಗುತ್ತಾರೆ.



Click it and Unblock the Notifications











