For Quick Alerts
ALLOW NOTIFICATIONS  
For Daily Alerts

ಶುಭ ಮಹೂರ್ತದಲ್ಲೆ ಶುಭ ಕಾರ್ಯ ಏಕೆ ಮಾಡಬೇಕು? ಮಹೂರ್ತಕ್ಕೆ ಯಾಕಿಷ್ಟು ಪ್ರಾಮುಖ್ಯತೆ? ಇಲ್ಲಿದೆ ಇಂಟ್ರೆಸ್ಟಿಂಗ್ ಸ್ಟೋರಿ

|

ನಮ್ಮ ಮನೆಗಳಲ್ಲಿ ಯಾವುದೇ ಕಾರ್ಯಕ್ರಮ ಮಾಡುವುದಿದ್ದರೂ ಶುಭ ಮಹೂರ್ತ ನೋಡುತ್ತೇವೆ. ನಾವು ಎಷ್ಟೇ ಶ್ರೀಮಂತಿಕೆ ಇದ್ದರೂ, ಎಷ್ಟೇ ವಿದ್ಯಾಭ್ಯಾಸ ಇದ್ದರೂ ಕೂಡ ಯಾವುದೇ ಕಾರ್ಯಕ್ರಮ ನಡೆಸುವುದಾದರೂ ಶುಭ ಮಹೂರ್ತವನ್ನು ನೋಡಿ ಕಾರ್ಯಕ್ರಮ ನಡೆಸುತ್ತೇವೆ. ಭಾರತದಲ್ಲಿ ಮಹೂರ್ತಗಳಿಗೆ ಅದರದೆ ಆದ ಸ್ಥಾನವಿದೆ. ಶುಭ ಮಹೂರ್ತಗಳಿಲ್ಲದೇ ಯಾವುದೇ ಕಾರ್ಯಕ್ರಮ ನಡೆಯುವುದಿಲ್ಲ. ಹಿಂದಿನಿಂದಲೂ ಇದು ನಡೆದುಕೊಂಡು ಬಂದ ರೂಡಿ. ಹಾಗಾದ್ರೆ ಮಹೂರ್ತ ಎಂದರೇನು? ಇದರ ಪ್ರಾಮುಖ್ಯತೆ ಏನು? ಇಲ್ಲಿದೆ ಈ ಬಗ್ಗೆ ಸಂಪೂರ್ಣ ಮಾಹಿತಿ.

ಮುಹೂರ್ತ ಎಂದರೇನು?

ಮುಹೂರ್ತ ಎಂದರೇನು?

ಮುಹೂರ್ತ ಎಂದರೆ 'ಸಮಯ' ಎಂದು ಅರ್ಥ. ಯಾವುದೇ ಶುಭ ಕಾರ್ಯ ಆರಂಭಿಸಲು ನಾವು ಶುಭ ಮುಹೂರ್ತವನ್ನು ಕೇಳುತ್ತೇವೆ. ಹಿಂದೂ ಪಂಚಾಂಗದ ಪ್ರಕಾರ ಮಹೂರ್ತ ಎಂದರೆ ಶುಭ ಸಮಯವನ್ನು ಅಳೆಯುವ ಪದ್ದತಿಯಾಗಿದೆ. ಮಹೂರ್ತ ಸಂಸ್ಕೃತ ಪದದಿಂದ ಬಂದಿದೆ. ಮಹೂ+ರ್ತ ಎಂಬ ಪದಗಳಿಂದ ಮಹೂರ್ತ ಉಂಟಾಗಿದೆ. ತಿಥಿ, ವಾರ, ನಕ್ಷತ್ರ, ಯೋಗ, ಕಾರಣ, ರಾಶಿ, ಗ್ರಹ, ಆಯನ ಮುಹೂರ್ತದ ಅಂಗಗಳು ಇವುಗಳು ಉತ್ತಮ ರೀತಿಯಲ್ಲಿ ಕೂಡಿ ಬರುವುದೇ ಶುಭ ಮುಹೂರ್ತವಾಗುತ್ತದೆ. ವೇದ ಕಾಲಗಳಲ್ಲಿ ಮಹೂರ್ತವನ್ನು ಯಾಗಗಳಿಗೆ ಬಳಸುತ್ತಿದ್ದರು. ಇನ್ನು ಇಂದಿನ ಜ್ಯೋತಿಷ್ಯ ಶಾಸ್ತ್ರದಲ್ಲಿ ಮಹೂರ್ತಕ್ಕೆ ತನ್ನದೇ ಆದ ಸ್ಥಾನವಿದೆ. ಮಹೂರ್ತವು ಮನುಷ್ಯನ ಗರ್ಭಧಾರಣೆಯಿಂದ ಹಿಡಿದು ಸಾವಿನವರೆಗೆ ತನ್ನದೇ ಆದ ಮಹತ್ವವನ್ನು ಹೊಂದಿದೆ. ಉತ್ತಮ ಮಹೂರ್ತದಿಂದ ಉತ್ತಮ ಕೆಲಸಗಳು ನಡೆಯುತ್ತದೆ ಅನ್ನುವ ನಂಬಿಕೆ ಇದೆ.

ಮಹೂರ್ತದ ಪ್ರಾಮುಖ್ಯತೆ ಏನು?

ಮಹೂರ್ತದ ಪ್ರಾಮುಖ್ಯತೆ ಏನು?

ಪುರಾಣದ ಕಾಲದಿಂದಲೂ ಮಹೂರ್ತಕ್ಕೆ ತನ್ನದೇ ಆದ ಪ್ರಾಮುಖ್ಯತೆ ಇದೆ. ಇಲ್ಲಿ ಅನೇಕ ಕೆಲಸಕ್ಕೆ ಮಹೂರ್ತವನ್ನು ಬಳಸಲಾಗುತ್ತಿತ್ತು. ಉದಾಹರಣೆಗೆ ಗೃಹ ಪ್ರವೇಶ, ಮದುವೆ, ಯಾಗ, ಕೃಷಿ ಕಾರ್ಯ, ಪ್ರಯಾಣ, ಪಟ್ಟಾಭೀಷೇಕ ಹೀಗೆ ಎಲ್ಲ ಕಾರ್ಯಕ್ರಮಗಳಿಗೂ ಮಹೂರ್ತವನ್ನು ಬಳಸಲಾಗುತ್ತಿತ್ತು. ಈಗಲೂ ಇದು ಚಾಲ್ತಿಯಲ್ಲಿದೆ. ಇತ್ತೀಚಿಗೆ ಮದುವೆ, ಗೃಹ ಪ್ರವೇಶದಂತಹ ಶುಭ ಕಾರ್ಯಕ್ಕೆ ಮಹೂರ್ತ ಇಲ್ಲದೇ ಆಗುವುದೇ ಇಲ್ಲ. ಮಹೂರ್ತದ ಮುಖ್ಯ ಪ್ರಾಮುಖ್ಯತೆ ಶುಭ ಮಹೂರ್ತದಲ್ಲಿ ಯಾವುದೇ ಕಾರ್ಯಕ್ರಮ ಅಥವಾ ಕೆಲಸ ಮಾಡಿದರು ಶುಭ ವಾಗುತ್ತದೆ ಅನ್ನು ನಂಬಿಕೆ ಇದೆ. ಅಶುಭ ಮಹೂರ್ತದಲ್ಲಿ ಕಾರ್ಯ ಕೈಗೊಂಡರೆ ಅದಕ್ಕೆ ವಿಘ್ನಗಳು ಬಂದು ಅಶುಭವಾಗುತ್ತದೆ ಎನ್ನುತ್ತಾರೆ ತಿಳಿದವ್ರು. ಇನ್ನು ಜಾತಕದಲ್ಲಿ ತಿಥಿ, ವಾರ, ನಕ್ಷತ್ರ, ಯೋಗ, ಕಾರಣ, ರಾಶಿ, ಗ್ರಹ, ಆಯನಕ್ಕೆ ತೊಂದರೆ ಇದ್ದರೆ ಅಥವಾ ದೋಷಗಳಿದ್ದರೆ ಉತ್ತಮ ಮುಹೂರ್ತದಲ್ಲಿ ಕೆಲಸ ಕೈಗೊಂಡರೆ ತೊಂದರೆಗಳು ನಿರ್ವಿಘ್ನವಾಗಿ ನೆರವೇರುತ್ತದೆ ಎಂದು ಮುಹೂರ್ತಶಾಸ್ತ್ರ ಹೇಳುತ್ತದೆ. ಇನ್ನು ಜಾತಕದ ದೋಷ ನಿವಾರಣೆಗೆ ಮುಹೂರ್ತ ಇಡುವಾಗ ದೋಷಗಳು ಕಡಿಮೆ ಇದ್ದು ಗುಣಗಳು ಹೆಚ್ಚಾಗಿರುವಂಥ ಮುಹೂರ್ತ ಇಡಬೇಕು. ಸಾಧಾರಣ ಗುಣ ದೋಷಗಳನ್ನೂ ಪರಿಶೀಲಿಸಿ ಒಳ್ಳೆಯ ಗುಣಗಳು ಹೆಚ್ಚಾಗಿರುವ ಮುಹೂರ್ತವನ್ನೂ ಇಡಬೇಕು ಇದರಿಂದ ಶುಭ ಕಾರ್ಯಗಳು ನಡೆಯುತ್ತದೆ. ಮಂಗಳಕರ ಮುಹೂರ್ತವನ್ನು ಹುಡುಕಲು ಸಮಯವಿಲ್ಲದೇ ಕೆಲಸವನ್ನು ಆರಂಭಿಸಿದರೆ ಮುಂದೆ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹೀಗಾಗಿ ಇಷ್ಟೆಲ್ಲ ಪ್ರಾಮುಖ್ಯತೆ ಇರುವ ಹಿನ್ನೆಲೆ ಮಹೂರ್ತ ತನ್ನದೇ ಆದ ಮಹತ್ವ ಪಡೆದುಕೊಂಡಿದೆ.

ಯಾವುದು ಉತ್ತಮ ಮಹೂರ್ತ?

ಯಾವುದು ಉತ್ತಮ ಮಹೂರ್ತ?

ಮಹೂರ್ತಗಳಲ್ಲಿ ಬ್ರಾಹ್ಮೀ ಮಹೂರ್ತ ಮತ್ತು ಅಭಿಜಿತ್ ಮಹೂರ್ತಗಳು ಬಹಳ ಶ್ರೇಷ್ಠ ಎಂದು ಹೇಳಲಾಗಿದೆ. ಬ್ರಾಹ್ಮೀ ಮಹೂರ್ತ ಎಂದರೆ ಸೂರ್ಯೋದಕ್ಕೆ ಒಂದೂವರೆ ಗಂಟೆ ಮೊದಲು ಇರುವ ಮಹೂರ್ತ ಎಂದು ಹೇಳಲಾಗಿದೆ. ಪೂರ್ವಜರ ಪ್ರಕಾರ ಈ ಸಮಯದಲ್ಲಿ ಧ್ಯಾನ, ಪೂಜೆ, ವ್ಯಾಯಾಮ ಮಾಡುವುದರಿಂದ ದೈಹಿಕ, ಮಾನಸಿಕ, ಭಾವನಾತ್ಮಕ ಸಾಮರ್ಥ್ಯ ಹೆಚ್ಚುತ್ತದೆ ಎಂದು ಹೇಳಲಾಗಿದೆ. ಅಭಿಜಿತ್ ಮಹೂರ್ತವೊಂದು ಶಕ್ತಿಯುತವಾದ ಮತ್ತು ಶುಭಕಾರವಾದ ಮಹೂರ್ತ ಎಂದು ವೇದಗಳಲ್ಲಿ ತಿಳಿಸಲಾಗಿದೆ. ಅಭಿಜಿತ್ ಮಹೂರ್ತವು ಹಲವು ಋಣಾತ್ಮಕ ಶಕ್ತಿಗಳನ್ನು ನಿರ್ಮೂಲನೆ ಮಾಡುತ್ತದೆ ಎಂದು ಹೇಳಲಾಗಿದೆ. ಅಭಿಜಿತ್ ಮಹೂರ್ತವೂ ಮಧ್ಯಾಹ್ನದ 24 ನಿಮಿಷಗಳ ಮೊದಲು ಹಾಗೂ ಮಧ್ಯಾಹ್ನದ 24 ನಿಮಿಷಗಳ ನಂತರ, ಒಟ್ಟು 48 ನಿಮಿಷ ಈ ಮಹೂರ್ತ ಇರುತ್ತದೆ.

ಸಪ್ತಪದಿ ತುಳಿಯಲು ಗೋಧೂಳಿ ಮಹೂರ್ತ ಶ್ರೇಷ್ಠ!

ಸಪ್ತಪದಿ ತುಳಿಯಲು ಗೋಧೂಳಿ ಮಹೂರ್ತ ಶ್ರೇಷ್ಠ!

ಸಪ್ತಪದಿ ತುಳಿಯಲು ಗೋಧೂಳಿ ಮಹೂರ್ತ ಸರ್ವ ಶ್ರೇಷ್ಠ ಎಂದು ವೇದಗಳಲ್ಲಿ ಹೇಳಲಾಗಿದೆ. ಗೋಧೂಳಿ ಎಂದರೆ ಸಂಧ್ಯಾ ಕಾಲ. ಅಂದರೆ ಗೋವುಗಳು ಹಿಂತಿರುಗಿ ಬರುವ ಸಮಯ. ಆಗ ಬರುವ ಧೂಳನ್ನು ಗೋಧೂಳಿ ಎಂದು ಕರೆಯಲಾಗುತ್ತದೆ. ಅಲ್ಲದೇ ಗೋಧೂಳಿ ಮಹೂರ್ತ ಎಂದರೆ ಸೂರ್ಯ ಹಾಗೂ ಚಂದ್ರ ಸಂದಿಸುವ ಕಾಲ. ಸೂರ್ಯ ಹಾಗೂ ಚಂದ್ರ ಸಂದಿಸುವ ಕಾಲ ಎಂದೆಂದಿಗೂ ಅಮರ ಎಂದು ಹೇಳಲಾಗಿದೆ. ಹೀಗಾಗಿ ಸಂಧ್ಯಾ ಕಾಲದಲ್ಲಿ ಮದುವೆ ಮಾಡಲಾಗುತ್ತದೆ.

English summary

What is Muhurat; Why it is Important; and Important facts related to Muhurta in Kannada

Here we are discussing about What is Muhurat; Why it is Important; and Important facts related to Muhurta in Kannada. Read more.
Story first published: Friday, June 24, 2022, 11:01 [IST]
X
Desktop Bottom Promotion