ವರಮಹಾಲಕ್ಷ್ಮಿ ವ್ರತದಂದು ನೆನಪಿನಲ್ಲಿ ಹೀಗೆ ಮಾಡಿ, ಕಷ್ಟ ನಿವಾರಣೆ ಆಗುವುದು

By Hemanth
Subscribe to Boldsky

ಹಿಂದೂ ಧರ್ಮದಲ್ಲಿ ಒಂದೊಂದು ವಿಷಯಕ್ಕೆ ಒಬ್ಬೊಬ್ಬರು ದೇವರನ್ನು ಪೂಜಿಸಲಾಗುವುದು. ಯಾಕೆಂದರೆ ಆ ದೇವರನ್ನು ಪೂಜಿಸಿದರೆ ಮಾತ್ರ ನಮ್ಮ ಇಷ್ಟಾರ್ಥಗಳು ಬೇಗನೆ ಪೂರ್ತಿಯಾಗುತ್ತದೆ ಎಂದು ತಿಳಿದಿರುವುದು. ಇದರಿಂದಾಗಿ ಯಾವುದೇ ಕಷ್ಟ ಬಂದಾಗ ನಾವು ಅದನ್ನು ಬೇಗನೆ ಯಾರು ನಿವಾರಿಸುತ್ತಾರೆ ಎಂದು ತಿಳಿದಿರುತ್ತೇವೆಯಾ ಆ ದೇವರನ್ನು ಬೇಗ ಪೂಜಿಸುತ್ತೇವೆ. ಲಕ್ಷ್ಮೀ ದೇವರನ್ನು ಪೂಜಿಸದವರು ಇಲ್ಲವೆನ್ನಬಹುದು.

ವರಮಹಾಲಕ್ಷ್ಮಿ ಪೂಜೆ ಹೇಗೆ ಮಾಡಬೇಕು?...ಇಲ್ಲಿದೆ ನೋಡಿ ಕಂಪ್ಲೀಟ್ ಡಿಟೇಲ್ಸ್‌

ಯಾಕೆಂದರೆ ಪ್ರತಿಯೊಬ್ಬರಿಗೂ ಸುಖ, ಸಮೃದ್ಧಿ ಹಾಗೂ ಸಂಪತ್ತು ಬೇಕೇಬೇಕು. ಲಕ್ಷ್ಮೀ ದೇವಿಯು ಈ ಮೂರನ್ನು ಕರುಣಿಸುತ್ತಾಳೆ. ಈ ಸೃಷ್ಟಿಯಲ್ಲಿ ಹಸಿರು ಹಾಗೂ ಸಮೃದ್ಧಿ ನೀಡುವ ಮಹಾತಾಯಿಯೇ ವರಮಹಾಲಕ್ಷ್ಮಿ ದೇವಿ. ಲಕ್ಷ್ಮೀ ದೇವಿಯನ್ನು ಭಕ್ತಿಭಾವದಿಂದ ಪೂಜಿಸಿದಾಗ ಮನೆಯಲ್ಲಿ ಸುಖ-ಸಮೃದ್ಧಿ ನೆಲೆಸುವುದರಲ್ಲಿ ಸಂಶಯವೇ ಇಲ್ಲ.

ವರಮಹಾಲಕ್ಷ್ಮಿ ಪೂಜೆ ಮಾಡುವಾಗ ಇದರ ಬಗ್ಗೆ ಗಮನವಿರಲಿ

ಆದರೆ ಲಕ್ಷ್ಮೀಯು ಅಷ್ಟು ಸುಲಭದಲ್ಲಿ ಒಲಿಯುವುದಿಲ್ಲ. ಆಕೆಯನ್ನು ಒಲಿಸಿಕೊಳ್ಳಲು ತುಂಬಾ ಕಷ್ಟ ಪಡಬೇಕು. ವರವರಮಹಾಲಕ್ಷ್ಮಿ ಹಬ್ಬದಂದು ಲಕ್ಷ್ಮೀ ದೇವಿಯನ್ನು ಪೂಜಿಸಿದರೆ ಬೇಗನೆ ಒಲಿಯುತ್ತಾಳೆ ಎನ್ನಲಾಗುತ್ತದೆ. ಲಕ್ಷ್ಮೀ ದೇವಿಯ ಆಶೀರ್ವಾದ ಪಡೆಯಲು ಮತ್ತು ಒಲೈಸಿಕೊಳ್ಳಲು ಏನು ಮಾಡಬೇಕು ಎಂದು ಬೋಲ್ಡ್ ಸ್ಕೈ ನಿಮಗೆ ತಿಳಿಸಲಿದೆ..... 

ಲಕ್ಷ್ಮೀ ಪೂಜೆಯ ವೇಳೆ ವಿಷ್ಣು ದೇವರನ್ನು ಪ್ರಾರ್ಥಿಸಿ

ಲಕ್ಷ್ಮೀ ಪೂಜೆಯ ವೇಳೆ ವಿಷ್ಣು ದೇವರನ್ನು ಪ್ರಾರ್ಥಿಸಿ

ಲಕ್ಷ್ಮೀ ದೇವಿ ಮತ್ತು ಮಹಾವಿಷ್ಣು ದೇವರನ್ನು ಬೇರ್ಪಡಿಸಲು ಅಸಾಧ್ಯ. ವರವರಮಹಾಲಕ್ಷ್ಮಿ ಪೂಜೆ ಮಾಡುವ ಮನೆಯಲ್ಲಿ ವಿಷ್ಣುವನ್ನು ಕೂಡ ಆರಾಧಿಸಿದರೆ ಮಾತ್ರ ಲಕ್ಷ್ಮೀಯು ಒಲಿಯುತ್ತಾಳೆ. ವಿಷ್ಣು ದೇವರ ಪ್ರಾರ್ಥನೆಯೊಂದಿಗೆ ವರಮಹಾಲಕ್ಷ್ಮಿ ಪೂಜೆಯನ್ನು ಆರಂಭಿಸಿದರೆ ಒಳ್ಳೆಯದು.

ತುಳಸಿ ಗಿಡ ಬೆಳೆಸಿ

ತುಳಸಿ ಗಿಡ ಬೆಳೆಸಿ

ತುಳಸಿ ಗಿಡವನ್ನು ನಿಮ್ಮ ಮಗುವಿನಂತೆ ಬೆಳೆಸಿ ಆರೈಕೆ ಮಾಡಿ. ತುಳಸಿ ಮನೆಯ ಸಂಪತ್ತು ಎಂದು ನಂಬಲಾಗಿದೆ. ತುಳಸಿಯಲ್ಲಿ ವರಮಹಾಲಕ್ಷ್ಮಿಯು ನೆಲೆಸಿರುವ ಕಾರಣದಿಂದ ವಿಷ್ಣು ದೇವರನ್ನು ಪೂಜಿಸುವಾಗ ತುಳಸಿ ಎಲೆಗಳನ್ನು ಸಮರ್ಪಿಸಬೇಕು. ತುಳಸಿ ಗಿಡವನ್ನು ಪೂಜಿಸಿ ಮತ್ತು ವರವರಮಹಾಲಕ್ಷ್ಮಿಗೆ ಪೂಜೆ ಸಲ್ಲಿಸುವಂತೆಯೇ ತುಳಸಿ ಗಿಡಕ್ಕೆ ಕೂಡ ಪೂಜೆ ಮಾಡಿ. ಕೆಲವು ಮನೆಗಳಲ್ಲಿ ಮಹಾವಿಷ್ಣುವಿನ ಪೂಜೆಯ ವೇಳೆ ತುಳಸಿ ಗಿಡವನ್ನು ದೇವರ ಕೋಣೆಯಲ್ಲಿ ತಂದಿಡುತ್ತಾರೆ.

ಸೆಗಣಿಯನ್ನು ಹೊಸ್ತಿಲ ಅಲಂಕಾರಕ್ಕೆ ಬಳಸಿಕೊಳ್ಳಿ

ಸೆಗಣಿಯನ್ನು ಹೊಸ್ತಿಲ ಅಲಂಕಾರಕ್ಕೆ ಬಳಸಿಕೊಳ್ಳಿ

ಸೆಗಣಿಯಲ್ಲಿ ಲಕ್ಷ್ಮೀ ನೆಲೆಸಿದ್ದಾಳೆಂದು ಹೇಳಲಾಗುತ್ತದೆ. ಮನೆಯ ಅಂಗಳಕ್ಕೆ ನೆಗಣಿ ಸಾರಿಸಿ ಬಳಿಕ ಒಳ್ಳೆಯ ರಂಗೋಲಿ ಬಿಡಿಸಿ. ಸೆಗಣಿಯು ಧನಾತ್ಮಕ ಅಂಶಗಳನ್ನು ಸೆಳೆಯುತ್ತದೆ ಎನ್ನುವ ನಂಬಿಕೆಯಿದೆ. ಮನೆಯ ಪ್ರವೇಶದ್ವಾರವನ್ನು ಮಾವಿನ ಎಲೆಗಳಿಂದ ಶೃಂಗಾರ ಮಾಡಿ. ಮಾವಿನ ಎಲೆಗಳು ತುಂಬಾ ಪವಿತ್ರವೆಂದು ಪರಿಗಣಿಸಲಾಗಿದೆ.

ಹಸು ಹಾಗೂ ಕರುಗಳಿಗೆ ಆಹಾರ ನೀಡಿ

ಹಸು ಹಾಗೂ ಕರುಗಳಿಗೆ ಆಹಾರ ನೀಡಿ

ಭಾರತದಲ್ಲಿ ಹಸುವನ್ನು ಗೋಮಾತೆಯೆಂದು ಪೂಜಿಸಲಾಗುತ್ತದೆ ಮತ್ತು ಹಬ್ಬಗಳ ಸಂದರ್ಭದಲ್ಲಿ ಇದಕ್ಕೆ ಹೆಚ್ಚಿನ ಮಹತ್ವ ನೀಡಲಾಗುವುದು. ಕಾಮಧೇನುವೆಂದು ಕರೆಯುವ ಹಸುವಿನ ಪ್ರತಿಯೊಂದು ಉತ್ಪನ್ನವನ್ನು ನಾವು ಬಳಸಿಕೊಳ್ಳುತ್ತೇವೆ. ಹಾಲನ್ನು ಅಭಿಷೇಕಕ್ಕೆ ಅಥವಾ ದೇವರ ಮಜ್ಜನ ಮಾಡಲು, ಪ್ರಸಾದ ಅಥವಾ ನೈವೇದ್ಯಕ್ಕಾಗಿಯೂ ಇದನ್ನು ಬಳಸಲಾಗುವುದು. ಕೃಷ್ಣ ದೇವರು ಗೋವುಗಳನ್ನು ತುಂಬಾ ಪ್ರೀತಿಸುತ್ತಿದ್ದರು. ಇದರಿಂದಾಗಿಯೇ ವರಮಹಾಲಕ್ಷ್ಮಿಯು ಗೋವುಗಳನ್ನು ಇಷ್ಟಪಡುತ್ತಾಳೆ. ತಾಜಾ ಹುಲ್ಲು, ಬಾಳೆಹಣ್ಣು ಮತ್ತು ಬೆಲ್ಲವನ್ನು ಹಸುಗಳಿಗೆ ನೀಡಿ. ಗೋವಿನಲ್ಲಿ ಸುಮಾರು ಒಂದು ಸಾವಿರಕ್ಕೂ ಹೆಚ್ಚಿನ ದೇವರು ನೆಲೆಸಿದ್ದಾರೆ ಮತ್ತು ಅದರಲ್ಲಿ ವರಮಹಾಲಕ್ಷ್ಮಿಯು ತುಂಬಾ ಪ್ರಮುಖ ಸ್ಥಾನದಲ್ಲಿದ್ದಾಳೆ ಎಂದು ನಂಬಲಾಗಿದೆ.

ಕಮಲದ ಹೂ

ಕಮಲದ ಹೂ

ವರಮಹಾಲಕ್ಷ್ಮಿಯು ಕುಳಿತುಕೊಳ್ಳುವ ಜಾಗವು ಕಮಲದ ಹೂವಾಗಿದೆ. ಕೆಸರಿನಲ್ಲಿ ಅರಳಿದರೂ ಕಮಲವು ತನ್ನ ಪ್ರಾಮುಖ್ಯತೆ ಪಡೆದಿರುವುದು ಇದೇ ಕಾರಣಕ್ಕಾಗಿ. ಆಧ್ಯಾತ್ಮ ಮತ್ತು ಒಳ್ಳೆಯ ವಿಶ್ವಾಸದ ಪಥದಲ್ಲಿ ಆರಾಧನೆ ಮಾಡುವಂತಹ ಭಕ್ತರ ಇಷ್ಟಾರ್ಥಗಳು ಪೂರ್ತಿಯಾಗಲಿ ಎಂದು ವರಮಹಾಲಕ್ಷ್ಮಿಯು ಬಯಸುತ್ತಾಳೆ. ಕಮಲದ ತಾಜಾ ಹೂ ಪೂಜೆಗೆ ಅನಿವಾರ್ಯ.

ಶಂಖ ಊದುವುದು

ಶಂಖ ಊದುವುದು

ಶಂಖವನ್ನು ಊದುವುದರಿಂದ ಧನಾತ್ಮಕ ಶಕ್ತಿಗಳು ನಮ್ಮ ಮನೆಯೊಳಗೆ ಬರುವುದು. ಶಂಖ ಊದಿದಾಗ ಓಂಕಾರವು ಹೊರಬಂದು ಗಾಳಿಯಲ್ಲಿ ತುಂಬಿಕೊಳ್ಳುತ್ತದೆ ಎನ್ನಲಾಗುತ್ತದೆ. ಓಂ ಎಂದರೆ ಮಹಾವಿಷ್ಣು. ಶಂಖವನ್ನು ಊದುವುದರಿಂದ ಲಕ್ಷ್ಮೀ ದೇವಿಯನ್ನು ಆಹ್ವಾನಿಸಬಹುದು ಮತ್ತು ಆಕೆಯು ಮನೆಯಲ್ಲಿ ಸುಖಸಂಪತ್ತು ನೀಡುವಂತೆ ಮಾಡಬಹುದು.

ಶ್ರೀ ಸೋತ್ರ ಪಠಿಸುವುದು

ಶ್ರೀ ಸೋತ್ರ ಪಠಿಸುವುದು

ವರಮಹಾಲಕ್ಷ್ಮಿಯೆಂದರೆ ಅದು ನಾರಾಯಣ ದೇವರ ಪ್ರತಿಬಿಂಬ ಮತ್ತು ಭವ್ಯತೆ ಎಂದು ಹೇಳಬಹುದು. ಸೀತೆಯಿಂದ ರಾಮ ಬೇರ್ಪಟ್ಟಾಗ ಅವರಿಬ್ಬರು ದೂರವಾದರು ಎನ್ನಲಾಗುತ್ತದೆ. ಸೀತೆ ಮತ್ತು ರಾಮ ಬೇರ್ಪಟ್ಟಾಗ ಅವರು ತಮ್ಮ ಅಂತರಾತ್ಮದ ಹೊಳಪು ಮತ್ತು ಭವ್ಯತೆ ಕಳಕೊಂಡರು. ಶ್ರೀ ಸೋತ್ರವನ್ನು ಪಠಿಸುವುದು ತುಂಬಾ ಪವಿತ್ರವೆಂದು ಭಾವಿಸಲಾಗಿದೆ. ಸ್ಲೋಕವು ಪಠಣವಾಗುವುದರಿಂದ ಅದು ನಮ್ಮಲ್ಲಿ ಒಳ್ಳೆಯ ಭಾವವನ್ನು ತುಂಬುವುದು. ದ್ವೇಷ, ಅಸೂಯೆ ಮತ್ತು ಅತಿಯಾಸೆಯಿಂದ ನಮ್ಮನ್ನು ದೂರವಿಡುವುದು. ಈ ಸೋತ್ರದಲ್ಲಿ ವರಮಹಾಲಕ್ಷ್ಮಿ ದೇವಿಯ ದೈವತ್ವ, ಅನುಗ್ರಹ ಮತ್ತು ಪ್ರಭೆಯನ್ನು ವರ್ಣಿಸಲಾಗಿದೆ.

ಲಕ್ಷ್ಮೀ ಗಾಯತ್ರಿ ಪಠಿಸಿ

ಲಕ್ಷ್ಮೀ ಗಾಯತ್ರಿ ಪಠಿಸಿ

`ಓಂ ಶ್ರೀ ಮಹಾಲಕ್ಷ್ಮೇ ಚಾ ವಿದ್ಮಯೇ ವಿಷ್ಣು ಪತ್ನೈ ಚಾ ಧೀಮಹಿ ತನೋ ಲಕ್ಷ್ಮೀ ಪ್ರಚೋದಯಾತ್ ಓಂ'ಈ ಪವಿತ್ರ ಮಂತ್ರವನ್ನು ಪಠಿಸುವಾಗ ನೀವು ಶುದ್ಧವಾಗಿರಿ, ಮನಸ್ಸು ಶಾಂತಿ, ಪ್ರೀತಿ ಮತ್ತು ಭಕ್ತಿಯಿಂದ ತುಂಬಿರಲಿ. ಲಕ್ಷ್ಮೀ ಗಾಯತ್ರಿ ಮಂತ್ರವನ್ನು 108 ಸಲ ಪಠಿಸಿ. ಎಲ್ಲಾ ಮಂತ್ರಗಳಿಗಿಂತ ಇದು ತುಂಬಾ ಪ್ರಭಾವಶಾಲಿ ಮಂತ್ರವೆಂದು ನಂಬಲಾಗಿದೆ. ಇದು ದಾರಿದ್ರ್ಯವನ್ನು ದೂರ ಮಾಡಿ ಆರೋಗ್ಯಕರ ಮನಸ್ಸು, ದೇಹ ಹಾಗೂ ಆತ್ಮವನ್ನು ಕಾಪಾಡಲು ನೆರವಾಗುವುದು. ಈ ಮಂತ್ರವನ್ನು ಪಠಿಸುವುದರಿಂದ ದೇವಿಯು ಬೇಗನೆ ಪ್ರಸನ್ನಳಾಗಿ ಆಶೀರ್ವದಿಸುತ್ತಾಳೆ.

For Quick Alerts
ALLOW NOTIFICATIONS
For Daily Alerts

    English summary

    Varamahalakshmi Vrata | significance of Varamahalakshmi Vrata | how to celebrate Varamahalakshmi pooja

    Goddess Lakshmi is the Supreme Mother Earth. The greenery, abundance and prosperity is due to Her presence. Any household or premise that exudes a positive vibration, we in general exclaim about that place - "This is the place where Goddess Lakshmi stays. Hence this place has such warm vibrations." Goddess Lakshmi too will stay with us forever if only we continue to shower Her with our love, affection and good deeds. We need to give the Supreme Mother a special place in our heart and home.
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more