Latest Updates
-
ಕೋಲ್ಕತ್ತಾ ದುರ್ಗಾ ಪೂಜೆ: ಟ್ರಾಫಿಕ್ ಕಿರಿಕಿರಿ ತಪ್ಪಿಸಿ, ಪಂಡಾಲ್ ಹಾಪಿಂಗ್ಗೆ ಇಲ್ಲಿದೆ ಸ್ಮಾರ್ಟ್ ಪ್ಲಾನ್! -
ದೆಹಲಿಯಲ್ಲಿ ಡೆಂಗ್ಯೂ ಭೀತಿ: ನಿಮ್ಮ ಮನೆಯನ್ನು ಸೊಳ್ಳೆ ಮುಕ್ತವಾಗಿಸಲು 20 ನಿಮಿಷಗಳ ಈ ಚೆಕ್ಲಿಸ್ಟ್ ಬಳಸಿ -
ಹಬ್ಬದ ಸೀಸನ್ನಲ್ಲಿ ಎಚ್ಚರ! ಕಲಬೆರಕೆ ಸಿಹಿತಿಂಡಿ ಪತ್ತೆ ಹಚ್ಚುವುದು ಹೇಗೆ? ಆರೋಗ್ಯಕರ ಟಿಪ್ಸ್ ಇಲ್ಲಿದೆ -
ನವರಾತ್ರಿ 4ನೇ ದಿನ: ರಾಯಲ್ ಬ್ಲೂ ಡ್ರೆಸ್ ಕೋಡ್ನಲ್ಲಿ ಮಿಂಚಲು ಇಲ್ಲಿದೆ ಸಿಂಪಲ್ ಸ್ಟೈಲಿಂಗ್ ಟಿಪ್ಸ್! -
ನವರಾತ್ರಿ 4ನೇ ದಿನ: ಉಪವಾಸದ ನಡುವೆಯೂ ಗರ್ಬಾ ಆಡಲು ಬೇಕಾದ ಶಕ್ತಿ ಮತ್ತು ಆರೋಗ್ಯದ ರಹಸ್ಯ ಇಲ್ಲಿದೆ! -
ನವರಾತ್ರಿ ಗರ್ಬಾ ಸಂಭ್ರಮ: ಬೆಂಗಳೂರಿನ ಕಪಲ್ಸ್ ಎಂಜಾಯ್ ಮಾಡಲು ಇಲ್ಲಿದೆ ಬೆಸ್ಟ್ ಸೇಫ್ಟಿ ಟಿಪ್ಸ್ -
ದೆಹಲಿ ವಾಯು ಮಾಲಿನ್ಯ: ಮನೆಯೊಳಗೆ ಶುದ್ಧ ಗಾಳಿ ಪಡೆಯಲು 20 ನಿಮಿಷದ ಈ ಸರಳ ಟ್ರಿಕ್ಸ್ ಫಾಲೋ ಮಾಡಿ -
ಹಣದುಬ್ಬರದ ಬಿಸಿ: ₹120ರ ಬಜೆಟ್ನಲ್ಲಿ ಪೌಷ್ಟಿಕ ಹೈ-ಪ್ರೋಟೀನ್ ಊಟ ತಯಾರಿಸುವುದು ಹೇಗೆ? -
ನವರಾತ್ರಿ 3ನೇ ದಿನ: ಕೆಂಪು ಬಣ್ಣದ ಲುಕ್ನಲ್ಲಿ ಆಫೀಸ್ನಿಂದ ನೇರ ಗರ್ಬಾಗೆ ಮಿಂಚುವ ಸ್ಮಾರ್ಟ್ ಟಿಪ್ಸ್! -
ಮುಂಬೈನಲ್ಲಿ ಕಳಪೆ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಎಚ್ಚರಿಕೆ ಮರೆಯದಿರಿ, ಇಲ್ಲದಿದ್ದರೆ ಅಪಾಯ!
ಗಣೇಶ ಚತುರ್ಥಿ 2020: ಎಲ್ಲಾ ಸಂಕಷ್ಟಗಳಿಂದ ಪಾರುಮಾಡುವ 'ಗಣೇಶ ಕವಚ ಸ್ತೋತ್ರಂ'
ನಾವು ಜೀವನದಲ್ಲಿ ಎಷ್ಟೇ ಬೆಳವಣಿಗೆಯನ್ನು ಹೊಂದಿದ್ದರೂ ದೇವರ ಅನುಗ್ರಹ ನಮ್ಮ ಮೇಲಿರಬೇಕು. ನಾವು ಏನಾಗಿದ್ದರೂ ಅದಕ್ಕೆ ಅವರ ಶ್ರೀರಕ್ಷಯೇ ಕಾರಣ ಎಂಬುದನ್ನು ಮರೆಯಬಾರದು. ದೇವರ ಅನುಗ್ರಹ ನಿಮ್ಮ ಮೇಲೆ ಇದೆ ಎಂದಾದರೆ ಯಾರಿಗೂ ನಿಮ್ಮನ್ನು ಏನೂ ಮಾಡಲು ಸಾಧ್ಯವಿಲ್ಲ. ದುಷ್ಟ ಶಕ್ತಿಗಳಿಂದ ದುಷ್ಟ ಜನರಿಂದ ನಿಮ್ಮನ್ನು ರಕ್ಷಿಸುವ ಶಕ್ತಿ ಆ ಮಹಾನ್ ಮಹಿಮನಾಗಿದ್ದಾನೆ.

ಹಿಂದೂ ದೇವರುಗಳಲ್ಲಿ ಅತಿ ಶಕ್ತಶಾಲಿ ಎಂದೆನಿಸಿರುವ ಗಣೇಶನು ವಿಘ್ನ ವಿನಾಶಕ ಎಂಬ ಬಿರುದಿನಿಂದಲೇ ಪ್ರಸಿದ್ಧತೆಯನ್ನು ಗಳಿಸಿದವರಾಗಿದ್ದಾರೆ. 2020ರಲ್ಲಿ ಗಣೇಶ ಚತುರ್ಥಿಯನ್ನು ಆಗಸ್ಟ್ 22ರಂದು ಶನಿವಾರದಂದು ಅಚರಿಸಲಾಗುತ್ತಿದ್ದು, ಮಗುವಿನ ಮನಸ್ಸನ್ನು ಹೊಂದಿರುವ ಗಣೇಶನಲ್ಲಿ ನಾವು ಯಾವುದೇ ಕಷ್ಟಗಳನ್ನು ತೋಡಿಕೊಂಡರೂ ಅದಕ್ಕೆ ಪರಿಹಾರ ಕೂಡಲೇ ದೊರೆಯುತ್ತದೆ ಅಂತೆಯೇ ನಮ್ಮ ದುಃಖಕ್ಕೆ ಮೂಲವಾಗಿರುವ ಕಾರಣವನ್ನು ಸಮಸ್ಯೆಯನ್ನು ಆತ ದೂರಮಾಡುತ್ತಾರೆ, ನಿವಾರಿಸುತ್ತಾರೆ.
ಪಾರ್ವತಿ ದೇವಿಯ ಮುದ್ದಿನ ಕಂದನಾಗಿರುವ ಗಣಪನು ಭಕ್ತರ ನೆಚ್ಚಿನ ಗೆಳೆಯ ಎಂದೆನಿಸಿದ್ದಾರೆ. ಶಿವ ಗಣಗಳಿಗೆ ಅಧಿಪತಿಯಾಗಿರುವ ಗಣಪನು ತನ್ನನ್ನು ನಂಬಿದ ಭಕ್ತರನ್ನು ಕೈಬಿಡುವ ಮಾತೇ ಇಲ್ಲ. ಸಂಕಟಗಳಿಂದ ನಮ್ಮನ್ನು ಕಾಪಾಡಲು ಗಣೇಶ ಕವಚವನ್ನು ನೀವು ಪಠಿಸಿದಲ್ಲಿ ನಿಮಗೆ ಶಾಂತಿ ಸಮಾಧಾನವನ್ನು ನೀಡುತ್ತದೆ. ನಿತ್ಯವೂ ಈ ಮಂತ್ರವನ್ನು ಪಠಿಸುವುದರಿಂದ ನಿಮ್ಮೆಲ್ಲಾ ಕಷ್ಟಗಳು ನಿವಾರಣೆಯಾಗಲಿವೆ.
ನಿಮ್ಮನ್ನು ನಿಮ್ಮ ಪ್ರೀತಿಪಾತ್ರರನ್ನು ನಿಮಗೆ ಸಂಬಂಧಿಸಿದ ಸ್ವತ್ತುಗಳನ್ನು ಕಾಪಾಡುವಂತೆ ಈ ಮಂತ್ರದ ಮೂಲಕ ಗಣಪನನ್ನು ಬೇಡಿಕೊಳ್ಳಬಹುದು. ಮೂರು ಬಾರಿ, ಹನ್ನೆರಡು, ಇಪ್ಪತ್ತೊಂದು, ಮೂವತ್ತು, ಐವತ್ತೊಂದು, ಸಾವಿರದ ಎಂಟು, ಒಂದು ಲಕ್ಷದ ಎಂಟು ಬಾರಿ ಹೀಗೆ ತಮ್ಮ ಆಯ್ಕೆಗೆ ಅನುಗುಣವಾಗಿ ಭಕ್ತರು ಗಣೇಶ ಕವಚವನ್ನು ಪಠಿಸುತ್ತಾರೆ.
ಮೌಲಿ ಮಹೇಶಪುತ್ರೋ ಅವ್ಯಾಧಬಲಂ ಪಾತು ವಿನಾಯಕಂ
ತ್ರಿನೇತ್ರಾ ಪಾತು ಮಿ ನೇತ್ರೇ ಶೂರ್ಪಕರ್ನೋ ಅವಾತು ಶ್ರುತಿ
ಹೇರಂಭೋ ರಕ್ಷಾತು ಗೃಹನಾಮ್ ಮುಖಂ ಪಾತು ಗಜಾನನಹ
ಜಿವಾಹಂ ಪಾತು ಗಣೇಶೊ ಮಿ ಕಾಂತಂ ಶ್ರೀಕಾಂತ ವಲ್ಲಭ
ಸ್ಕಂದೊ ಮಹಾಬಲಾ ಪಾತು ವಿಘ್ನನಃ ಪಾತು ಮಿ ಭುಜೊ
ಕರೊ ಪರಶುಭೃತ್ ಪಾತು ಹೃದಯಂ ಸ್ಕಂದಪೂರ್ವಜಃ
ಮಧ್ಯಂ ಲಂಬೋಧರ ಪಾತು ನಾಭಿಂ ಸಿಂಧೂರ ಭೂಷಿತ
ಜಗನಮ್ ಪಾರ್ವತಿ ಪುತ್ರ ಸಕ್ತಿನಿ ಪಾತು ಪಾಶಾಭೃತ
ಜಾನುನಿ ಜಗತಂ ನಾತೊ ಜಂಗೇ ಮೂಶಿಕ ವಾಹನ
ಪಾದೊ ಪದ್ಮಾಸನಃ ಪಾತು ಪಾದೊ ದೈತ್ಯ ದರ್ಪಃ
ಏಕದಂತೊ ಅಗ್ರತಃ ಪಾತು ಪ್ರುಶ್ತೆ ಪಾತು ಗಣಾಧಿಪಃ
ಪಾಶ್ವರ್ಯಯೋ ಮೋದಕಹಾರೋ ದಿಗ್ವದಿಕ್ಷು ಚ ಸಿದ್ಧಿದಃ
ವಜ್ರಾತ್ ತಿಶ್‌ತತೊ ವಾಪಿ ಜಾಗ್ರತಃ ಸ್ವಪ್ತೊ ಅಶ್ನತಃ
ಚತುರ್ಥಿ ವಲ್ಲಭೊ ದೇವಾ ಪಾತು ಮಿ ಭುಕ್ತಿ ಮುಕ್ತಿದಃ
ಇದಂ ಪವಿತ್ರಂ ಸ್ತ್ರೋತ್ರಂ ಚ ಚತುರ್ಥಿಯಂ ನಿಯತಃ ಪಠೇತ್
ಸಿಂಧೂರಾಕ್ತಾ ಕುಸುಮಯಾ ದೂರ್ವಾಯಾ ಪೂಜಾಯ ವಿಘ್ನನಪಂ
ರಾಜಾ ರಾಜಾಸುತೋ ರಾಜಪತ್ನಿ ಮಂತ್ರಿ ಕುಲಂ ಚಾಲಂ
ತಸ್ಯವಶ್ಯಂ ಭವೇದ್ ವಶ್ಯಂ ವಿಘ್ನರಾಜ ಪ್ರಸಾದತಾ
ಸ ಮಂತ್ರ ಯಂತ್ರಂ ಯಹಾ ಸ್ತ್ರೋತ್ರಂ ಕರೇ ಸಂಲಿಕಾಯಾ ಧಾರಾಯೇತ್
ಧನ ಧಾನ್ಯ ಸಮೃದ್ಧಿ ಸಯಾತ್ ತಸ್ಯಾ ನಾಹ ತ್ಯಾತ್ರಾ ಸಮಸ್ಯಹಾ
ಅಸ್ಯ ಮಂತ್ರಹ ಏಮ್ ಕ್ಲೀಂ ಹ್ರೀಂ ವಕ್ರತುಂಡಾಯಹಂ
ರಸಲಕ್ಷಂ ಸದಾಯ್‌ಕಾಗೃಹಾಯ್ ಶದಂಗನ್ಯಾಸ ಪೂರ್ವಕಂ
ಹತ್ವಾ ತದಂತೆ ವಿಧಿವತ್ ಅಷ್ಟ ದ್ರವ್ಯಂ ಪಾಯೊ ಗೃಹತಂ
ಯಮ್ ಯಮ್ ಕಾಮಾಮಂ ಅಭಿಧ್ಯಾನ್ ವಕ್ರತುಂಡ ಪ್ರಸಾಧತಃ
ಭೃಗು ಪ್ರಣೀತಂ ಯಹಾ ಸ್ತೋತ್ರಂ ಪಠೇತ್ ಭುವಿ ಮಾನವಃ
ಭವೀತ್ ವ್ಯಹಾತ್ ಐಶ್ವರ್ಯಾ ಸ ಗಣೇಶ ಪ್ರಸಾದತಃ
ಇತಿ ವಕ್ರತುಂಡ ಗಣೇಶ ಕವಚಂ ಸಂಪೂರ್ಣಂ



Click it and Unblock the Notifications



