For Quick Alerts
ALLOW NOTIFICATIONS  
For Daily Alerts

ಬಾಳಬುತ್ತಿಯಲ್ಲಿರುವ ಸಿಹಿ ಕಹಿಯನ್ನು ಸಮಾನವಾಗಿ ಸ್ವೀಕರಿಸಿ

ಯುಗಾದಿಯನ್ನು ಹೊಸ ವರುಷವೆಂದೇ ನಾಡಿನಲ್ಲಿ ಜನಪ್ರಿಯವಾಗಿ ಆಚರಿಸುತ್ತಾರೆ. ಬೇವು ಬೆಲ್ಲ ಈ ಹಬ್ಬದ ವಿಶೇಷತೆಯಾಗಿದ್ದು ಜೀವನದಲ್ಲಿ ಬರುವ ಸಿಹಿ ಕಹಿಯನ್ನು ಸಮಾನವಾಗಿ ಸ್ವೀಕರಿಸಬೇಕೆಂಬ ಆಶಯ ಈ ಬೇವು ಬೆಲ್ಲದ ಸಿಹಿಯಲ್ಲಡಗಿದೆ.

By Jaya Subramanya
|
ಯುಗಾದಿ 2018 : ಬೇವು ಬೆಲ್ಲ ಹಿಂದಿರುವ ಮಹತ್ವ | Oneindia Kannada

ಯುಗ ಯುಗಗಳು ಕಳೆದರೂ ಯುಗಾದಿ ಮರಳಿ ಬರುತಿದೆ ಹೊಸ ವರುಷವ ಹೊಸ ಹರುಷವ ಎಲ್ಲೆಡೆಯೂ ತಂದಿದೆ ಎಂಬ ಜನಪ್ರಿಯ ಹಾಡು ಯುಗಾದಿಯು ಆಗಮನವನ್ನು ಬರಮಾಡಿಕೊಳ್ಳುತ್ತಿದೆ. ಯುಗಾದಿಯನ್ನು ಹೊಸ ವರುಷವೆಂದೇ ನಾಡಿನಲ್ಲಿ ಜನಪ್ರಿಯವಾಗಿ ಆಚರಿಸುತ್ತಾರೆ. ಬೇವು ಬೆಲ್ಲ ಈ ಹಬ್ಬದ ವಿಶೇಷತೆಯಾಗಿದ್ದು ಜೀವನದಲ್ಲಿ ಬರುವ ಸಿಹಿ ಕಹಿಯನ್ನು ಸಮಾನವಾಗಿ ಸ್ವೀಕರಿಸಬೇಕೆಂಬ ಆಶಯ ಈ ಬೇವು ಬೆಲ್ಲದ ಸಿಹಿಯಲ್ಲಡಗಿದೆ. ಯುಗಾದಿ ಆಚರಣೆ ಹೀಗಿರಲಿ- ಸುಖ, ಶಾಂತಿ, ಸಮೃದ್ಧಿ ನಿಮ್ಮದಾಗುತ್ತದೆ

ಚಳಿಗಾಲದ ಕೊರೆಯುವ ಚಳಿಯಿಂದ ಮುಕ್ತಿಯನ್ನು ಪಡೆದುಕೊಂಡು ಭೂಮಿ ತಾಯಿ ಸಂಪದ್ಭರಿತವಾಗುವ ಕಾಲವನ್ನು ಯುಗಾದಿ ಸೂಚಿಸುತ್ತದೆ. ಮಾವು, ತೆಂಗು, ಕಂಗು, ಹಲಸು, ಹೂವುಗಳು, ಬೇರೆ ಬೇರೆ ಫಲಗಳು ಚಿಗುರು ಬಿಟ್ಟು ಮಳೆಯ ಆಗಮನವನ್ನು ಮಾಡುವ ಸಮಯ ಇದಾಗಿದೆ. ಇಂದಿನ ಲೇಖನದಲ್ಲಿ ಯುಗಾದಿ ಹಬ್ಬದ ಕುರಿತಾದ ಇನ್ನಷ್ಟು ಮಾಹಿತಿಗಳನ್ನು ನಾವು ಹಂಚಿಕೊಳ್ಳುತ್ತಿದ್ದು ಈ ಹಬ್ಬದ ಪ್ರಾಮುಖ್ಯತೆಯನ್ನು ನೀವು ಇನ್ನಷ್ಟು ಆಳವಾಗಿ ಅರಿತುಕೊಳ್ಳಬಹುದಾಗಿದೆ.

Ugadi

ಬೇವು ಬೆಲ್ಲದ ಅರ್ಥ
ಹಬ್ಬದ ಸಂದರ್ಭದಲ್ಲಿ ಭಕ್ಷ್ಯಗಳನ್ನು ತಯಾರಿಸುವುದು ಪ್ರತಿಯೊಬ್ಬ ಭಾರತೀಯರು ಅನುಸರಿಸುವ ಕ್ರಮವಾಗಿದೆ. ಯುಗಾದಿಯ ವಿಶೇಷ ತಿನಿಸು ಬೇವು ಬೆಲ್ಲವಾಗಿದೆ. ಬೇವು ಹುಳಿ ಮತ್ತು ಬೆಲ್ಲದ ಹುಡಿಯಿಂದ ಈ ಖಾದ್ಯವನ್ನು ತಯಾರಿಸುತ್ತಾರೆ.

ಜೀವನದಲ್ಲಿ ಸಿಹಿಯನ್ನು ಮಾತ್ರವೇ ನಿರೀಕ್ಷಿಸದೆ ಕಹಿಯನ್ನು ಸಿಹಿಯಂತೆಯೇ ಸ್ವೀಕರಿಸಿ ಎಂಬುದಾಗಿ ಈ ಹಬ್ಬ ಬೇವು ಬೆಲ್ಲದ ಸಮ್ಮಿಶ್ರಣದೊಂದಿಗೆ ನಿಮ್ಮನ್ನು ಸಮೀಪಿಸಲಿದೆ. ಆದ್ದರಿಂದ ಜೀವನದ ಪ್ರತಿ ಕ್ಷಣವನ್ನು ಆಸ್ವಾದಿಸಿ ಎಂಬುದಾಗಿಯೇ ಬೇವು ಬೆಲ್ಲ ನಮಗೆ ತಿಳಿಸುತ್ತದೆ.

ಯುಗಾದಿ ಪಚಡಿ
ಯುಗಾದಿ ಹಬ್ಬದಂದು ತಯಾರಿಸಲಾಗುವ ಇನ್ನೊಂದು ಖಾದ್ಯವಾಗಿದೆ ಪಚಡಿ. ಇದಕ್ಕಾಗಿ ಬೇವಿನ ಹೂವನ್ನು ಬಳಸುತ್ತಾರೆ. ಅಂತೆಯೇ ಇದಕ್ಕಾಗಿ ಬಳಸುವ ಇನ್ನಷ್ಟು ಸಾಮಾಗ್ರಿಗಳು ತುಸು ವಿಶೇಷ ಎಂದೆನ್ನಬಹುದಾಗಿದೆ. ಬೇವಿನ ಕಹಿಗಾಗಿ ಅದರ ಹೂವನ್ನು ಬಳಸಿದರೆ ಸಿಹಿಗಾಗಿ ಬಾಳೆಹಣ್ಣು ಮತ್ತು ಬೆಲ್ಲವನ್ನು ಬಳಸುತ್ತಾರೆ. ಅಂತೆಯೇ ಖಾರಕ್ಕಾಗಿ ಕಾಳುಮೆಣಸು ಮತ್ತು ಹಸಿಮೆಣಸನ್ನು ಉಪಯೋಗಿಸುತ್ತಾರೆ. ಸ್ವಲ್ಪ ಉಪ್ಪು ಮತ್ತು ಹುಳಿಯನ್ನು ಬೆರೆಸಿ ಈ ಪಚ್ಚಡಿಯನ್ನು ತಯಾರಿಸುತ್ತಾರೆ. ಹೊಸ ವರ್ಷಕ್ಕೆ ಇರಲೇಬೇಕು 'ಯುಗಾದಿ ಪಚಡಿ'

ಬೇವಿನ ಹೂವು ನಮ್ಮ ಜೀವನದಲ್ಲಿ ಬರುವ ನಿರಾಸೆಯನ್ನು ಪ್ರತಿನಿಧಿಸುತ್ತದೆ. ಅಂತೆಯೇ ಬಾಳೆಹಣ್ಣು ಮತ್ತು ಬೆಲ್ಲ ಜೀವನದ ಸಿಹಿಯ ಪ್ರತೀಕವಾಗಿದೆ. ಕಾಳುಮೆಣಸು ಮತ್ತು ಹಸಿಮೆಣಸು ಕೋಪದ ಸಂಕೇತವಾಗಿದ್ದರೆ, ಹುಳಿಯು ನಮ್ಮ ಜೀವನದ ಒತ್ತಡದಿಂದ ನಾವು ಅನುಭವಿಸುವ ಕಿರಿಕಿರಿಯನ್ನು ವ್ಯಕ್ತಪಡಿಸುತ್ತದೆ ಅಂತೆಯೇ ನಮ್ಮ ಜೀವನದಲ್ಲಿ ಬರುವ ಸ್ವಾರಸ್ಯವನ್ನು ಮಾವು ಪ್ರತಿನಿಧಿಸುತ್ತದೆ.

ಜೀವನದಲ್ಲಿ ಬಂದೊದದಗುವ ಕಹಿಯನ್ನು ನಿರಾಸೆಯಿಲ್ಲದೆ ಸ್ವೀಕರಿಸಬೇಕು ಅಂತೆಯೇ ಭಗವಂತ ಇದರ ಬೆನ್ನಿಗೇ ಸಿಹಿಯನ್ನು ಉಣಬಡಿಸಲಿದ್ದಾರೆ ಎಂಬ ನಿರೀಕ್ಷೆಯನ್ನು ನಾವಿಟ್ಟುಕೊಳ್ಳಬೇಕು. ಭಗವಂತ ನಮಗೆ ನೀಡಿರುವ ಕೊಡುಗೆ ಅಪೂರ್ವ ಮತ್ತು ವಿಶೇಷವಾಗಿರುತ್ತದೆ ಎಂಬುದನ್ನು ನಾವು ಮರೆಯಬಾರದು.

ಅಂತೆಯೇ ಈ ಹಬ್ಬ ನಮ್ಮ ಸುಖ ಸಂತೋಷ, ದುಃಖ, ಕಹಿಯ ಪ್ರತೀಕವಾಗಿದೆ. ಬಾಳಿನಲ್ಲಿ ಸಿಹಿ ಮತ್ತು ಕಹಿಯ ಬುತ್ತಿಯನ್ನು ಉಣಬಡಿಸಲಿದೆ ಈ ಹಬ್ಬ. ಭವಿಷ್ಯದಲ್ಲಿ ಬರುವ ತೊಡಕುಗಳನ್ನು ನಗು ನಗುತ್ತಲೇ ಎದುರಿಸೋಣ, ಜಯ ಎಂದೆಂದಿಗೂ ನಮ್ಮದೇ.

English summary

Ugadi And The Tastes Of Life

It is time to know the significance and the things required to celebrate the festival of Ugadi. Read this informative article on Ugadi and the tastes of life.
X
Desktop Bottom Promotion