For Quick Alerts
ALLOW NOTIFICATIONS  
For Daily Alerts

ಮನೆಯಲ್ಲಿ ಶಂಖ ಏಕೆ ಇಡಬೇಕು? ಯಾವ ಶಂಖ ಇಟ್ಟರೆ ಶುಭ

|

ಶುಭ, ಸಕಾರಾತ್ಮಕತೆಯ ಸಂಕೇತ ಶಂಖ ಹಿಂದೂ ಹಾಗೂ ಬೌದ್ಧ ಧರ್ಮದಲ್ಲಿ ಸಾಕಷ್ಟು ಮಹತ್ವ ಪಡೆದಿದೆ. ಅದರಲ್ಲೂ ಹಿಂದೂಗಳ ಬಹುತೇಕರ ಮನೆಯ ದೇವರ ಮನೆಗಳಲ್ಲಿ ಶಂಖ ಪ್ರಮುಖ ಸ್ಥಾನ ಪಡೆದಿದೆ. ಕಾರಣ ಪೂಜೆಯ ಸಂದರ್ಭದಲ್ಲಿ ಶಂಖ ಊದುವುದು ವಾಡಿಕೆಯಲ್ಲಿದೆ, ಇದರಿಂದ ಹೊರಡುವ ಶಬ್ಧ ಮನೆಯಲ್ಲಿ ಸಕಾರಾತ್ಮಕತೆಯನ್ನು ಸೃಷ್ಟಿಸುತ್ತದೆ ಎಂದು ಹೇಳಲಾಗುತ್ತದೆ.

Types And Significance of Shankha As Per Hindu

ವಿಷ್ಣುವಿನ ಒಂದು ಕೈಯಲ್ಲಿ ಶಂಖ ಮತ್ತೊಂದು ಕೈಯಲ್ಲಿ ಚಕ್ರ ಹಿಡಿದಿರುವುದು ನಮಗೆಲ್ಲಾ ತಿಳಿದಿರುವ ವಿಷಯ. ಪೌರಾಣಿಕ ಹಿನ್ನೆಲೆಯ ಪ್ರಕಾರ ಶಂಖ ಊದುವ ಮೂಲಕ ಪ್ರಪಂಚದಲ್ಲಿರುವ ನಕಾರಾತ್ಮಕತೆಯನ್ನು ಭಗವಾನ್‌ ವಿಷ್ಣು ನಾಶಪಡಿಸುತ್ತಿದ್ದನು ಎಂದು ಹೇಳಲಾಗಿದೆ. ಇನ್ನು ಆರೋಗ್ಯದ ದೃಷ್ಟಿಯಿಂದ ಶಂಖವನ್ನು ಪ್ರತಿದಿನ ಊದುವುದರಿಂದ ಹೃದಯದ ಸಮಸ್ಯೆಯಿಂದ ನಮ್ಮನ್ನು ರಕ್ಷಿಸುತ್ತದೆ, ಅಲ್ಲದೆ ಅದರಲ್ಲಿ ಸುಣ್ಣದ ಅಂಶ ಕೂಡಿರುವುದರಿಂದ ಆರೋಗ್ಯಕ್ಕೆ ಉತ್ತಮ ಎಂದು ಹೇಳಲಾಗುತ್ತದೆ. ಶಂಖದ ನೀರು ಸಹ ಪವಿತ್ರ ಎಂಬ ನಂಬಿಕೆಯಿದೆ. ಅದರ ನೀರನ್ನು ಕುಡಿದು ತಲೆಗೆ ಪ್ರೋಕ್ಷಣೆ ಮಾಡುವುದರಿಂದ ಪಾಪ ನಿವಾರಣೆಯಾಗುತ್ತದೆ ಎಂಬ ನಂಬಿಕೆ. ಶಂಖ ಊದುವುದರಿಂದ ಮನೆಯಲ್ಲಿರುವ ದುಷ್ಟ ಶಕ್ತಿ ನಿವಾರಣೆಯಾಗುತ್ತದೆ. ಇಷ್ಟೆಲ್ಲಾ ಮಹತ್ವ ನೈಸರ್ಗಿಕ ಕೊಡುಗೆ ಶಂಖದ ಬಗ್ಗೆ ಈ ಲೇಖನದಲ್ಲಿ ಮತ್ತಷ್ಟು ತಿಳಿಯೋಣ:

ಧಾರ್ಮಿಕ ಮಹತ್ವ

ಧಾರ್ಮಿಕ ಮಹತ್ವ

ಶಂಖದಲ್ಲಿ ವಿವಿಧ ವಿನ್ಯಾಸ ಪ್ರಕಾರದ ಶಂಖಗಳಿವೆ. ಹಿಂದೂ ಸಂಪ್ರದಾಯದಲ್ಲಿ ಪ್ರತಿಯೊಂದು ಶಂಖಕ್ಕೂ ನಿರ್ದಿಷ್ಟ ಹೆಸರಿದೆ. ವಿಷ್ಣುವಿನ ಶಂಖವನ್ನು "ಪಂಚಜನ್ಯ" ಎಂದು ಕರೆಯಲಾಗುತ್ತದೆ, ಈ ಶಂಖದ ವಿಶೇಷತೆ ಕೆಟ್ಟದ್ದರ ಮೇಲೆ ಒಳ್ಳೆಯದೇ ಗೆಲ್ಲುತ್ತದೆ ಎಂಬುದಾಗಿದೆ. ಮಹಾಕಾವ್ಯ ಮಹಾಭಾರತದಲ್ಲಿ ಶಂಖ ಗಮನಾರ್ಹ ಸ್ಥಾನವನ್ನು ಪಡೆದುಕೊಂಡಿತು. ಅರ್ಜುನನ ಶಂಖವನ್ನು "ದೇವದುತ್ತ", ಭೀಮನ ಶಂಖವನ್ನು "ಪೌಂಡ್ರಾ", ಯುಧಿಷ್ಠಿರನ ಶಂಖವನ್ನು"ಅನಂತವಿಜಯ", ನಕುಲನ ಶಂಖವನ್ನು "ಸುಘೋಸ" ಮತ್ತು ಸಹದೇವನ ಶಂಖವನ್ನು "ಮಣಿಪುಷ್ಪಕ" ಎನ್ನಲಾಗಿದೆ.

ವೈಜ್ಞಾನಿಕ ಮಹತ್ವ

ವೈಜ್ಞಾನಿಕ ಮಹತ್ವ

ಪುರಾಣವನ್ನು ಬದಿಗಿಟ್ಟು ಶಂಖದ ಮಹತ್ವವನ್ನು ವೈಜ್ಞಾನಿಕವಾಗಿ ನೋಡಿದರೆ, ನಿಮ್ಮ ಕಿವಿಯ ಬಳಿ ಶಂಖವನ್ನು ಇಟ್ಟಕೊಂಡರೆ ನಿಧಾನವಾಗಿ ಗುನುಗುತ್ತಿರುವ ಸಮುದ್ರದ ಅಲೆಯ, ನದಿ ಹರಿಯುವ ಶಬ್ದವನ್ನು ಕೇಳಬಹುದು. ಇದು ವಾಸ್ತವವಾಗಿ ಭೂಮಿಯ ನೈಸರ್ಗಿಕ ಕಂಪನ ಅಥವಾ ಕಾಸ್ಮಿಕ್ ಶಕ್ತಿಯು ಶಂಖದ ಮೂಲಕ ಹೊರಹೊಮ್ಮಿ ವರ್ಧಿಸುತ್ತದೆ.

  • ಈ ಶಂಖ ಚಿಪ್ಪುಗಳಿಂದ ಉಂಟಾಗುವ ಕಂಪನಗಳು ಭೂಮಿಯಿಂದ ದುಷ್ಟ ಶಕ್ತಿಗಳನ್ನು ಮೀರಿಸಬಲ್ಲವು.
  • ಜಾಗತಿಕ ತಾಪಮಾನ ಏರಿಕೆಗೆ ಕಾರಣವಾಗುವ ಓಜೋನ್ ಪದರದ ರಂಧ್ರವನ್ನು ಸಹ ಸರಿಮಾಡುವ ಶಕ್ತಿ ಶಂಖಕ್ಕಿದೆ.
  • ಪರಿಸರ ಮಾಲಿನ್ಯವನ್ನು ತಡೆಗಟ್ಟುವಲ್ಲಿ ಸಹ ಶಂಖ ಪ್ರಾಮುಖ್ಯತೆ ವಹಿಸಿದೆ.
  • ಶಂಖ ಊದುವುದರಿಂದ ಧೈರ್ಯ, ದೃಢ ನಿಶ್ಚಯ, ಭರವಸೆ, ಆಶಾವಾದ, ಇಚ್ಛಾಶಕ್ತಿ ಮುಂತಾದ ಸಕಾರಾತ್ಮಕ ಮಾನಸಿಕ ಕಂಪನಗಳನ್ನು ಹೆಚ್ಚಿಸುತ್ತದೆ.
  • ಧಾರ್ಮಿಕವಾಗಿ ಶಂಖಗಳಲ್ಲಿರು ಪ್ರಕಾರಗಳು

    ಧಾರ್ಮಿಕವಾಗಿ ಶಂಖಗಳಲ್ಲಿರು ಪ್ರಕಾರಗಳು

    ದಕ್ಷಿಣವರ್ತಿ ಶಂಖ

    ವಾಮವರ್ತಿ ಶಂಖ

    ಗಣೇಶ ಶಂಖ

    ಗೌಮುಖಿ ಶಂಖಾ

    ಕೌರಿ ಶಂಖಾ

    ಮೋತಿ/ ಮುತ್ತು ಶಂಖ

    ಹೀರಾ ಶಂಖ

    ದಕ್ಷಿಣವರ್ತಿ ಶಂಖ

    ದಕ್ಷಿಣವರ್ತಿ ಶಂಖ

    ಬಲಗೈ ಕಡೆಗೆ ತೆರೆದುಕೊಳ್ಳುವ ಶಂಖವನ್ನು ದಕ್ಷಿಣವರ್ತಿ ಶಂಖ ಎಂದು ಕರೆಯಲಾಗುತ್ತದೆ. ಇದು ಅಪರೂಪದ ಶಂಖವಾಗಿದ್ದು, ಬಿಳಿ ಮತ್ತು ಕಂದು ಬಣ್ಣದ ರೇಖೆಗಳು ಈ ಶಂಖದ ಮೇಲೆ ಇರುತ್ತದೆ. ಸಂಪತ್ತಿನ ಆಧಿಪತಿ ಕುಬೇರ ದಕ್ಷಿಣದಲ್ಲಿ ವಾಸಿಸುತ್ತಾನೆ, ಆದ್ದರಿಂದ ಈ ಶಂಖವನ್ನು ಸಹ ಸಂಪತ್ತು ಮತ್ತು ಸಮೃದ್ಧಿಯನ್ನು ಪ್ರತಿನಿಧಿಸುತ್ತದೆ ಎನ್ನಲಾಗುತ್ತದೆ. ಈ ಶಂಖದಲ್ಲಿ ವಿಭಿನ್ನ ಗಾತ್ರಗಳಿದ್ದು, ಗೋಧಿ ಧಾನ್ಯದ ಗಾತ್ರದಿಂದ ಹಿಡಿದು ತೆಂಗಿನಕಾಯಿಯಷ್ಟು ದೊಡ್ಡದಾಗಿ ಸಹ ಲಭ್ಯವಿದೆ. ದಕ್ಷಿಣವರ್ತಿ ಶಂಖಗಳು ಆಳವಾದ ಸಮುದ್ರಗಳಲ್ಲಿ ಮಾತ್ರ ಕಂಡುಬರುತ್ತದೆ, ಆದೂ ಬಹಳ ವಿರಳ.

    ದಕ್ಷಿಣವರ್ತಿ ಶಂಖವನ್ನು ಪವಿತ್ರ ಸ್ಥಳ, ಪೂಜಾ ಸ್ಥಳ ಅಥವಾ ಮನೆಯ ಲಾಕರ್‌ನಲ್ಲಿ ಇರಿಸಿದಾಗ ಬಹಳ ಶುಭ ಎಂದು ಪರಿಗಣಿಸಲಾಗಿದೆ. ಈ ಶಂಖವನ್ನು ಬಿಳಿಯ ಬಟ್ಟೆಯಲ್ಲಿ ಸುತ್ತಿ ನಂತರ ಅದನ್ನು ಇಡಬೇಕು. ಈ ಶಂಖವು ವ್ಯಕ್ತಿ ಮತ್ತು ಅವನ ಕುಟುಂಬಕ್ಕೆ ಅದೃಷ್ಟ ಮತ್ತು ಸಮೃದ್ಧಿಯನ್ನು ತರುತ್ತದೆ ಎಂದು ಹೇಳಲಾಗುತ್ತದೆ.

    ಅಲ್ಲದೇ, ಈ ಶಂಖ ಲಕ್ಷ್ಮಿ ದೇವಿಯ ಸಂಕೇತವಾಗಿದೆ. ಆದ್ದರಿಂದ ಇದನ್ನು ಮನೆಯಲ್ಲಿ ಇಡುವುದರಿಂದ ಲಕ್ಷ್ಮಿದೇವಿ ದುಃಖಗಳನ್ನು ತೆಗೆದುಹಾಕುತ್ತಾಳೆ, ಬುದ್ಧಿವಂತಿಕೆ, ಯಶಸ್ಸು ಮತ್ತು ಲೌಕಿಕ ಸ್ವಾತಂತ್ರ್ಯವನ್ನು ನೀಡುತ್ತಾಳೆ ಎಂದು ಹೇಳಲಾಗುತ್ತದೆ. ದಕ್ಷಿಣವರ್ತಿ ಶಂಖ ಸಂಪತ್ತನ್ನು ತರುವುದಲ್ಲದೆ ವಾತಾವರಣವನ್ನು ಸಹ ಶುದ್ಧೀಕರಿಸುತ್ತದೆ. ಎಲ್ಲಾ ನಾಕಾರತ್ಮಕ ಶಕ್ತಿಗಳು ಸ್ಥಳದಿಂದ ನಿವಾರಣೆಯಾಗುತ್ತದೆ.

    ವಾಮವರ್ತಿ ಶಂಖ

    ವಾಮವರ್ತಿ ಶಂಖ

    ಎಡಗೈ ಕಡೆಗೆ ತೆರೆದುಕೊಳ್ಳುವ ಶಂಖರು ವಾಮವರ್ತಿ ಶಂಖ ಎನ್ನಲಾಗುತ್ತದೆ. ಇವುಗಳು ಸಾಮಾನ್ಯವಾಗಿ ಲಭ್ಯವಿರುವ ಶಂಖಗಳು ಮತ್ತು ಎಲ್ಲಾ ಧಾರ್ಮಿಕ ಉದ್ದೇಶಗಳಿಗಾಗಿ ಬಳಸಲಾಗುತ್ತದೆ. ವಾಮವರ್ತಿ ಶಂಖಗಳ ಉಬ್ಬು ಎಡಭಾಗದ ಕಡೆಗೆ (ಉತ್ತರಕ್ಕೆ ಎದುರಾಗಿ) ತೆರೆಯುತ್ತದೆ.

    ಸುಲಭವಾಗಿ ಲಭ್ಯವಾಗುವ ಈ ಶಂಖವು ನೈಸರ್ಗಿಕ ಶಂಕವು ಸ್ಥಳವನ್ನು ಸಕಾರಾತ್ಮಕ ಶಕ್ತಿಯಾಗಿ ಸೃಷ್ಟಿಸುತ್ತದೆ ಮತ್ತು ಇದನ್ನು ಯಂತ್ರಗಳಾಗಿಯೂ ಬಳಸಲಾಗುತ್ತದೆ. ಋಣಾತ್ಮಕ ಗ್ರಹಗಳ ಪರಿಣಾಮಗಳನ್ನು ನಿಯಂತ್ರಿಸಲು ಸಹ ಕೆಲವು ಜ್ಯೋತಿಷಿಗಳು ಈ ಶಂಖವನ್ನು ಧರಿಸಲು ಅಥವಾ ಸೂಕ್ತ ಸ್ಥಳದಲ್ಲಿ ಇಡಲು ಶಿಫಾರಸು ಮಾಡುತ್ತಾರೆ. ಈ ಶಂಖವನ್ನು ವಿಭಿನ್ನ ವಿಧಾನಗಳಲ್ಲಿ ಪೂಜಿಸುವುದರಿಂದ ಸಂಪತ್ತು, ಯಶಸ್ಸು, ಮಾನಸಿಕ ಶಾಂತಿ ಮತ್ತು ಆರೋಗ್ಯ ವೃದ್ಧಿಯಾಗುತ್ತದೆ ಎಂದು ಭಾರತೀಯ ಗ್ರಂಥಗಳಲ್ಲಿ ಹೇಳಲಾಗಿದೆ.

    ವಾಮವರ್ತಿ ಶಂಖವನ್ನು ಊದುವುದರಿಂದ ನಕಾರಾತ್ಮಕ ಶಕ್ತಿಗಳಿಂದ ಆಗುವ ದುಷ್ಪರಿಣಾಮಗಳನ್ನು ನಿವಾರಿಸುತ್ತದೆ ಮತ್ತು ಅದು ನಮ್ಮ ಸುತ್ತಮುತ್ತಲಿನ ವಾತಾವರಣ ಮತ್ತು ಆತ್ಮವನ್ನು ಶುದ್ಧೀಕರಿಸುತ್ತದೆ.

    ಗೌಮುಖಿ ಶಂಖ

    ಗೌಮುಖಿ ಶಂಖ

    ಗೌಮುಖಿ ಎಂದರೆ ಹಸುವಿನ ಮುಖ. ಈ ಶಂಖ ಹಸುವಿನ ಮುಖವನ್ನು ಹೋಲುತ್ತದೆ ಆದ್ದರಿಂದ ಇದಕ್ಕೆ ಗೌಮುಖಿ ಶಂಖ ಎಂದು ಕರೆಯಲಾಗುತ್ತದೆ. ಹಸುವನ್ನು ಹಿಂದೂ ಧರ್ಮದಲ್ಲಿ ಬಹಳ ಪವಿತ್ರವೆಂದು ಪರಿಗಣಿಸಲಾಗಿದೆ ಮತ್ತು ಈ ಶಂಖವೂ ಅಷ್ಟೇ. ಈ ಶಂಖವನ್ನು ದೇವಾಲಯ/ ಪೂಜಾ ಸ್ಥಳದಲ್ಲಿ ಇಟ್ಟುಕೊಳ್ಳುವುದರಿಂದ ಹಸುವನ್ನು ಸಾಕುವುದರಿಂದ ಸಿಗುವ ಎಲ್ಲಾ ಪ್ರಯೋಜನಗಳನ್ನು, ಪುಣ್ಯ ಲಭಿಸುತ್ತದೆ. ಇದು ಇರುವ ಸ್ಥಳದಲ್ಲಿ ಶಾಂತಿ, ಸಾಮರಸ್ಯ ಮತ್ತು ಸಂತೋಷವನ್ನು ತರಲು ಸಹಾಯ ಮಾಡುತ್ತದೆ.

    ಗಣೇಶ ಶಂಖ

    ಗಣೇಶ ಶಂಖ

    ಗಣೇಶ ಶಂಖ ಮತ್ತೊಂದು ಅಮೂಲ್ಯ ಮತ್ತು ಬಹುತೇಕರಿಂದ ಹೆಚ್ಚಾಗಿ ಪೂಜಿಸಲ್ಪಡುವ ಶಂಖ. ಈ ಶಂಖ ಗಣೇಶನನ್ನು ಪ್ರತಿನಿಧಿಸುತ್ತದೆ ಮತ್ತು ಅಡೆತಡೆಗಳನ್ನು ನಿವಾರಿಸಲು, ಕಲಿಕೆ, ಯಶಸ್ಸು, ಅದೃಷ್ಟ ಮತ್ತು ಕುಟುಂಬದ ಸಮೃದ್ಧಿಗಾಗಿ ಪೂಜಿಸಲಾಗುತ್ತದೆ. ದುಷ್ಟ ಪರಿಣಾಮಗಳಿಂದ ರಕ್ಷಿಸಲು ಈ ಶಂಖ ಬಹಳ ಶುಭ ವಸ್ತುವಾಗಿ ಪರಿಗಣಿಸಲಾಗಿದೆ ಮತ್ತು ಕುಟುಂಬಕ್ಕೆ ಅದೃಷ್ಟ ಮತ್ತು ಸಮೃದ್ಧಿಯನ್ನು ತರುತ್ತದೆ.

    ಗಣೇಶ ಶಂಖವನ್ನು ಪೂಜೆ ಮಾಡುವ ಸ್ಥಳದಲ್ಲಿ ಇಟ್ಟು ಪ್ರತಿನಿತ್ಯ, ಎಲ್ಲಾ ಶುಭ ಸಂದರ್ಭಗಳಲ್ಲಿ ಮತ್ತು ಧಾರ್ಮಿಕ ಹಬ್ಬಗಳಲ್ಲಿ ಪೂಜೆ ಮಾಡುವುದು ಶುಭಕರ. ಅಲ್ಲದೇ, ಹಣ, ಒಡವೆಯ ಲಾಕರ್ನಲ್ಲಿ ಈ ಶಂಖವನ್ನು ಇಡುವುದರಿಂದ ಕುಟುಂಬವು ಎಂದಿಗೂ, ಯಾವುದೇ ರೀತಿಯ ಹಣದ ಕೊರತೆಯನ್ನು ಎದುರಿಸದಂತೆ ತಡೆಯುತ್ತದೆ. ಆದರೆ ಈ ಶಂಖವನ್ನು ಪೂಜಾ ಕೋಣೆಯಲ್ಲಾದರೆ ಕೆಂಪು ಬಟ್ಟೆಯ ಮೇಲೆ ಹಾಗೂ ಲಾಕರ್‌ನಲ್ಲಿ ಕೆಂಪು ಬಟ್ಟೆಯಲ್ಲಿ ಸುತ್ತಿ ಇಡಬೇಕು.

    ಗಣೇಶ ಶಂಖ ಬಹಳ ಅಪರೂಪದ್ದಾಗಿದ್ದು ಬಹಳ ಅದೃಷ್ಟಶಾಲಿ ಎಂದು ಪರಿಗಣಿಸಲಾಗಿದೆ. ಪ್ರತಿ ಮನೆಯಲ್ಲೂ ಕೆಟ್ಟ ಪರಿಣಾಮಗಳಿಂದ ರಕ್ಷಿಸಲು, ಸಂಪತ್ತು ಮತ್ತು ಸಮೃದ್ಧಿಯನ್ನು ಪಡೆಯಲು ಗಣೇಶ ಶಂಖ ಇರಬೇಕು. ಗಣೇಶ ಶಂಖವನ್ನು ನಿತ್ಯ ಪೂಜಿಸಿದರೆ, ಆರಾಧಿಸುವವರಿಗೆ ಉದಾತ್ತತೆ, ಬುದ್ಧಿವಂತಿಕೆ, ಉದ್ಯಮಶೀಲತೆ, ದೂರದೃಷ್ಟಿ, ಸಂಪನ್ಮೂಲಗಳ ವೃಧ್ಧಿ ಮತ್ತು ದೀರ್ಘಾವಧಿಯ ಜೀವನದಿಂದ ಆಶೀರ್ವದಿಸಲ್ಪಡುತ್ತಾರೆ ಎಂಬುದರಲ್ಲಿ ಸಂದೇಹವಿಲ್ಲ. ಅಲ್ಲದೇ, ಈ ಶಂಖದಿಂದ ವಿದೇಶಗಳಲ್ಲಿ ವ್ಯಾಪಾರ ಮಾಡುವ ಅದೃಷ್ಟ ತರುತ್ತದೆ ಮತ್ತು ವಿದೇಶ ಪ್ರವಾಸ ಮಾಡುವ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ ಎನ್ನಲಾಗಿದೆ.

    ಕೌರಿ ಶಂಖಾ

    ಕೌರಿ ಶಂಖಾ

    ಕೌರಿ ಸಾಗರದಲ್ಲಿ ಕಂಡುಬರುವ ಅಪರೂಪದ ಪವಿತ್ರ ಉತ್ಪನ್ನವಾಗಿದೆ. ಕೌರಿ ಶಂಖಾ ಬಹಳ ಅಪರೂಪದ ಶಂಖವಾಗಿದ್ದು, ಇದನ್ನು ನಿಮ್ಮ ಮನೆಗಳಲ್ಲಿ ಇಟ್ಟುಕೊಂಡರೆ ಎಲ್ಲಾ ಅದೃಷ್ಟ ಮತ್ತು ಸಮೃದ್ಧಿನಿಮ್ಮದಾಗುತ್ತದೆ. ಕೌರಿ ಶಂಖ ಮನೆಯಲ್ಲಿದ್ದರೆ ಸಂಪತ್ತು ಮತ್ತು ಸರ್ವತೋಮುಖ ಸಮೃದ್ಧಿ ನಮ್ಮದಾಗುತ್ತದೆ ಎಂದು ಪ್ರಾಚೀನ ಕಾಲದಿಂದಲೂ ಹೇಳಲಾಗಿದೆ. ಅಲ್ಲದೇ ಈ ಶಂಖವನ್ನು ವಧುವಿನ ಮದುವೆಯ ಉಡುಪಿನ ಒಂದು ಭಾಗವಾಗಿದೆ. ಹಿಂದೂ ಪುರಾಣದ ಪ್ರಕಾರ, "ಕೌರಿ" ಯನ್ನು "ಸಮುದ್ರ ಮಂಥನ"ದ ವೇಳೆ "ಲಕ್ಷ್ಮಿದೇವಿ" ಹಾಗೂ ಇತರ ಅಪರೂಪದ ದೈವಿಕ ಮತ್ತು ಪವಿತ್ರ ಉತ್ಪನ್ನಗಳೊಂದಿಗೆ ದೊರೆತ ವಸ್ತುವಾಗಿದೆ. ಬಹಳ ಪ್ರಾಚೀನ

    ಶಿವನ ಕೂದಲುಗಳು "ಕೌರಿ" ಗೆ ಹೋಲುವ ಕಾರಣ ಇದು ಶಿವನಿಗೂ ಸಂಬಂಧಿಸಿದೆ. ಶಿವನ ಭಕ್ತ ನಂದಿಯನ್ನು ಅಲಂಕರಿಸಲು ಭಾರತೀಯರು ಕೌರಿ ಶಂಖವನ್ನು ಸಹ ಬಳಸುತ್ತಾರೆ. ಮಕ್ಕಳನ್ನು ದೆವ್ವದ ಪರಿಣಾಮಗಳಿಂದ ರಕ್ಷಿಸಲು ಇದು ಒಂದು ಉತ್ತಮ ಸಾಧನ ಎಂದೂ ಹೇಳಲಾಗುತ್ತದೆ. ಯಾರು ಲಕ್ಷ್ಮಿ ದೇವಿಯ ಪ್ರಾರ್ಥನೆಯ ಸಮಯದಲ್ಲಿ ಕೌರಿ ಶಂಖವನ್ನು ಇಟ್ಟುಕೊಳ್ಳುತ್ತಾರೋ ಅವರ ಜೀವನದಲ್ಲಿ ಯಶಸ್ಸು, ಸಮೃದ್ಧಿ, ಸಂಪತ್ತು ಮತ್ತು ಖ್ಯಾತಿಯನ್ನು ಪಡೆಯುತ್ತಾರೆ.

    ಮೋತಿ ಶಂಖಾ

    ಮೋತಿ ಶಂಖಾ

    ಮುತ್ತಿನಂತೆ ಹೊಳೆಯುವ ಮೋತಿ ಶಂಖಗಳು, ಬಹಳವೇ ಅಪರೂಪ ಮತ್ತು ಪತ್ತೆಯಾಗುವುದು ಸಹ ತೀರಾ ಕಷ್ಟ. ಈ ಶಂಖಗಳು ಮುತ್ತಿನ ಹೊಳಪನ್ನು ಹೊಂದಿರುತ್ತವೆ ಮತ್ತು ಸಾಮಾನ್ಯವಾಗಿ ದುಂಡಗಿನ ಆಕಾರದಲ್ಲಿರುತ್ತವೆ. ಇದು ದೊಡ್ಡ ಮತ್ತು ಸಣ್ಣ ಗಾತ್ರಗಳಲ್ಲಿ ಲಭ್ಯವಿದೆ.

    ಈ ಶಂಖವನ್ನು ಮನೆಯಲ್ಲಿ ಇಡುವುದು ಬಹಳ ಶುಭ ಮತ್ತು ಮಾನಸಿಕ ನೆಮ್ಮದಿ ಇರುತ್ತದೆ ಎಂದು ಪರಿಗಣಿಸಲಾಗಿದೆ. ಅಧ್ಯಯನ ಒಂದರ ಪ್ರಕಾರ 15 ಸಾವಿರ ಶಂಖಗಳಲ್ಲಿ ಕೇವಲ 1 ಮಾತ್ರ ಮುತ್ತಿನ ಶಂಖವನ್ನು ಉತ್ಪಾದಿಸುತ್ತದೆ. ಅದೂ ಸಹ 10ರಲ್ಲಿ 1 ಮಾತ್ರ ಉತ್ತಮ ಮುತ್ತಿನ ಶಂಖವಾಗಿರುತ್ತದೆ. ಈ ಶಂಖದ ಮತ್ತೊಂದು ವಿಶೇಷತೆ ಎಂದರೆ ಆರ್ಥಿಕ ಪ್ರಗತಿಗೆ ಇದು ಬಹಳ ಸಹಕಾರಿ ಆದರೆ ಮಾನಾವಾಸಕ್ತಿಯ ಇತರೆ ಯಾವುದೇ ಇತರೆ ಬೇಡಿಕೆಗಳನ್ನು ಇದು ಪೂರೈಸುವುದಿಲ್ಲ ಎಂಬುದನ್ನು ಗಮನಿಸಬೇಕು.

    ಹೀರಾ ಶಂಖಾ

    ಹೀರಾ ಶಂಖಾ

    ಹೀರಾ ಶಂಖಾವನ್ನು ಪಹಡಿ ಶಂಖಾ ಅಥವಾ ಪರ್ವತಗಳ ಶಂಖ ಎಂದೂ ಕರೆಯುತ್ತಾರೆ. ಇದು ಲಕ್ಷ್ಮಿ ದೇವಿಯ ಪೂಜೆಯಲ್ಲಿ ಈ ಶಂಖದ ಸ್ಥಾನ ವಿಶೇಷ. ಈ ಶಂಖ ಸಹ ದಕ್ಷಿಣವರ್ತಿ ಶಂಖದಂತೆ ಬಲಗೈ ಕಡೆಗೆ ತೆರೆದುಕೊಳ್ಳುತ್ತದೆ. ಈ ಶಂಖ ಪರ್ವತಗಳಲ್ಲಿ ಕಂಡುಬರುತ್ತದೆ. ಹೊರಗಿನ ಹೊರಪದರದಿಂದ ಇದು ಮಂದವಾಗಿದ್ದರೂ ಅದರ ಒಳ ಭಾಗವು ವಜ್ರಗಳಂತೆ ಹೊಳೆಯುತ್ತದೆ. ಇದು ಸಹ ತೀರಾ ಅಪರೂಪವಾಗಿರುವುದರಿಂದ ಇದು ತುಂಬಾ ದುಬಾರಿಯಾಗಿದೆ.

English summary

Types And Significance of Shankha As Per Hinduism

The sacred conch shell is an integral part of Hindu symbolic and religious tradition. Even today, all Hindus use the conch as a part of their religious practices. Whenever the conch shell is blown, it is said to purify the environment from all evil effects. In Indian mythology, the Shankha is regarded sacred and very auspicious. To initiate religious ceremonies, a shankha is blown. It is a major Hindu article of prayer. God Vishnu, the God of Preservation, is shown with a shankha in one hand and a disc or a chakra in the other.
Story first published: Wednesday, August 5, 2020, 17:57 [IST]
X
Desktop Bottom Promotion