Just In
Don't Miss
- Sports
ಐಪಿಎಲ್ 2021: ಮುಂಬೈ vs ಕೋಲ್ಕತ್ತಾ, ಪಂದ್ಯದ ಹೈಲೈಟ್ಸ್
- Automobiles
ಐಷಾರಾಮಿ ಸೌಲಭ್ಯವುಳ್ಳ ಸ್ಟಾರಿಯಾ ಎಂಪಿವಿ ಅನಾವರಣಗೊಳಿಸಿದ ಹ್ಯುಂಡೈ
- Movies
'ಏಕ್ ಲವ್ ಯಾ': ಪ್ರೇಮ್ ಬರೆದು ಹಾಡಿರುವ ಹಾಡು ನಾಲ್ಕು ಭಾಷೆಯಲ್ಲಿ ಬಿಡುಗಡೆ
- News
ಲಾಕ್ಡೌನ್ ಇಲ್ಲ, ಹದಿನೈದು ದಿನ ಶಿಸ್ತಿನ ಕರ್ಫ್ಯೂ: ಸಿಎಂ ಉದ್ಧವ್ ಠಾಕ್ರೆ
- Finance
2021 ಸ್ಕೋಡಾ ಕೊಡಿಯಾಕ್ ಅಧಿಕೃತವಾಗಿ ಬಿಡುಗಡೆ: ಶೀಘ್ರದಲ್ಲೇ ಭಾರತಕ್ಕೆ ಎಂಟ್ರಿ
- Education
WCL Recruitment 2021: 44 ಮೆಡಿಕಲ್ ಸ್ಪೆಷಲಿಸ್ಟ್ ಮತ್ತು ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ನ.26ಕ್ಕೆ ತುಳಸಿ ವಿವಾಹ: ಆರೋಗ್ಯ, ಮನೆಯವರ ಶ್ರೇಯಸ್ಸಿಗಾಗಿ ಈ ಪೂಜೆ ಶ್ರೇಷ್ಠ
ಕಾರ್ತಿಕ ಮಾಸ ಹಿಂದೂಗಳಿಗೆ ತುಂಬಾ ಪವಿತ್ರವಾದ ಮಾಸ. ಈ ಮಾಸದಲ್ಲಿ ಸಂಜೆ ದೀಪ ಬೆಳಗಿ ದೇವರನ್ನು ಪೂಜಿಸಲಾಗುವುದು. ಈ ಮಾಸ ಶಿವನಿಗೆ ಮುಡುಪಾಗಿರುವ ಮಾಸ . ಕಾರ್ತಿಕ ಮಾಸದ ಶುದ್ಧ ದ್ವಾದಶಿ ಭಕ್ತರಿಗೆ ಮತ್ತಷ್ಟು ವಿಶೇಷವಾದ ದಿನವಾಗಿದೆ. ಈ ದಿನ ತುಳಸಿ ಹಬ್ಬವನ್ನು ಆಚರಿಸಲಾಗುವುದು. ಇದನ್ನು ಉತ್ಥಾನ ದ್ವಾದಶಿ ಎಂತಲೂ ಕರೆಯುವರು. ಉತ್ಥಾನ ಎಂದರೆ ಏಳುವುದು ಎಂದರ್ಥ.
ಅಂದರೆ ಶ್ರೀಮನ್ನಾರಾಯಣನು ಪಾಲ್ಗಡಲಿನಲ್ಲಿ ತನ್ನ ಸುಖಶಯನದಿಂದ ಮೇಲೆದ್ದು ತನ್ನ ನಿದ್ರಾಮುದ್ರೆಯನ್ನು ಭಕ್ತರಿಗೆ ಸಾಕ್ಷಾತ್ಕರಿಸುವ ದಿನ.ಈ ದಿನ ಸಂಜೆಯ ಸಮಯದಲ್ಲಿ ತುಳಸಿ ವಿವಾಹ ಏರ್ಪಡುವುದು. ಚಾಂದ್ರಮಾನ ಕಾರ್ತಿಕಮಾಸದ ಶುಕ್ಲಪಕ್ಷದ 12ನೇ ದಿನ ಅಂದರೆ ದ್ವಾದಶಿಯಂದು ವಿಷ್ಣು ಸ್ವರೂಪಿ ನೆಲ್ಲಿಕಾಯಿ ಗಿಡದೊಂದಿಗೆ ತುಳಸಿಯ ವಿವಾಹವನ್ನು ಮಾಡಲಾಗುತ್ತದೆ. ಈ ವರ್ಷ ನವೆಂಬರ್ 26ರಂದು ತುಳಸಿ ವಿವಾಹ ಪೂಜೆ ಮಾಡಲಾಗುವುದು.

ತುಳಸಿ ವಿವಾಹದ ದಿನಾಂಕ ಮತ್ತು ಮುಹೂರ್ತ
ಪ್ರತಿ ವರ್ಷ ತುಳಸಿ ವಿವಾಹವನ್ನು ಕಾರ್ತಿಕ್ ತಿಂಗಳ ಶುಕ್ಲ ಪಕ್ಷದ ದ್ವಾದಶಿ ದಿನಾಂಕದಂದು ಮಾಡಲಾಗುತ್ತದೆ. ಈ ವರ್ಷ ಈ ಏಕಾದಶಿ ದಿನಾಂಕವು ನವೆಂಬರ್ 25 ರಂದು ಪ್ರಾರಂಭವಾಗಿ 26 ರಂದು ಕೊನೆಗೊಳ್ಳುತ್ತದೆ. ತುಳಸಿ ಮದುವೆ ದ್ವಾದಶಿಯಂದು ಅಂದರೆ ನವೆಂಬರ್ 26 ರಂದು ನಡೆಯಲಿದೆ.
ತುಳಸಿ ವಿವಾಹಕ್ಕೆ ಶುಭ ಮುಹೂರ್ತ
ದ್ವಾದಶಿ ತಿಥಿ ಪ್ರಾರಂಭ: ನವೆಂಬರ್ 29, ಬೆಳಗ್ಗೆ 5:10ರಿಂದ
ದ್ವಾದಶಿ ತಿಥಿ ಮುಕ್ತಾಯ: ನವೆಂಬರ್ 27 ಬೆಳಗ್ಗೆ 7:46ಕ್ಕೆ

ತುಳಸಿ ವಿವಾಹದ ಪೂಜಾ ವಿಧಿ
ಹೆಂಗಳೆಯರು ತುಳಸಿ ಗಿಡವನ್ನು ಮದುವಣಗಿತ್ತಿಯಂತೆ ಸಿಂಗರಿಸುತ್ತಾರೆ. ವಿಷ್ಣುವಿನ ಅಥವಾ ಅವನ ಅವತಾರವಾದ ಕೃಷ್ಣ, ರಾಮನ ಫೋಟೋವನ್ನು ಇಲ್ಲವೇ ಸಾಲಿಗ್ರಾಮ ಕಲ್ಲು, ಇಲ್ಲವೇ ನೆಲ್ಲಿಕಾಯಿ ಗಿಡವನ್ನು ತುಳಸಿ ಗಿಡದ ಪಕ್ಕ ಇಟ್ಟು ಇಬ್ಬರನ್ನೂ ಸ್ನಾನ ಮಾಡಿಸಿ ಶುಭ್ರ ಬಟ್ಟೆ ತೊಡಿಸಿ ಹೂವು, ಹಣ್ಣುಗಳಿಂದ ಅಲಂಕರಿಸುತ್ತಾರೆ. ವಿಷ್ಣುವಿನ ಭಾವಚಿತ್ರ ಹಾಗೂ ತುಳಸಿ ಗಿಡಕ್ಕೆ ಹತ್ತಿಯಿಂದ ತಯಾರಿಸಿದ ಮಾಲೆಯನ್ನು ತೊಡಿಸಿ ಮದುವೆಯ ಶಾಸ್ತ್ರ ಮಾಡಲಾಗುತ್ತದೆ. ಹಿಂದೂ ವಿವಾಹ ಪದ್ಧತಿಯಲ್ಲಿ ನಡೆಯುವ ಆಚರಣೆಯಂತೆಯೇ ವಿಷ್ಣು-ತುಳಸಿ ವಿವಾಹವನ್ನು ಭಕ್ತರು ಆಚರಿಸುತ್ತಾರೆ.

ತುಳಸಿ ವಿವಾಹದಂದು ಪಾಲಿಸುವ ಕ್ರಮಗಳು
ತುಳಸಿ ವಿವಾಹ ಆಚರಣೆ ಮಾಡುವವರು ಉಪವಾಸವರಬೇಕು. ಮನೆ ಮುಂದೆ ಇರುವ ತುಳಸಿ ಗಿಡದ ಸುತ್ತ ಮದುವೆ ಮಂಟಪ ನಿರ್ಮಿಸಿ ಅದಕ್ಕೆ ಅಲಂಕರಿಸಿರುತ್ತಾರೆ, ಈ ಮಂಟಪಕ್ಕೆ ಬೃಂದಾವನವೆಂದು ಹೆಸರು. ಈ ಮಂಟಪದಲ್ಲಿ ವೃಂದಾಳ ಆತ್ಮವಿದ್ದು ಮರುದಿನ ಬೆಳಗ್ಗೆ ಹೊರಟು ಹೋಗುತ್ತದೆ ಎಂಬ ನಂಬಿಕೆಯಿದೆ. ತುಳಸಿ ವಿವಾಹ ನೋಡಲು ಬಂದವರು ತುಳಸಿ ಹಾಗೂ ವಿಷ್ಣು ಫೋಟೋ ಅಥವಾ ನೆಲ್ಲಿಕಾಯಿ ಗಿಡವನ್ನು ಅಲಂಕಾರ ಮಾಡಿ ಪೂಜಿಸಿದ ಮಹಿಳೆಯರಿಗೆ ಉಡುಗೊರೆಗಳನ್ನು ನೀಡಬೇಕು.
ತುಳಸಿ ವಿವಾಹ ಹಬ್ಬದಲ್ಲಿ ಸಿಹಿತಿಂಡಿ, ಜ್ಯೂಸ್, ಹಬ್ಬದ ಅಡುಗೆಯನ್ನು ಮಾಡಿ ಬಂದವರಿಗೆ ನೀಡಲಾಗುವುದು.

ತುಳಸಿ ವಿವಾಹ ಮಾಡುವುದರಿಂದ ದೊರೆಯುವ ಪ್ರಯೋಜನಗಳು
* ಮನೆಯಲ್ಲಿ ಮಕ್ಕಳ ಮದುವೆಗೆ ಇರುವ ಅಡೆತಡೆಗಳು ದೂರವಾಗುತ್ತದೆ
* ಮನೆಗೆ ಐಶ್ಚರ್ಯ ಲಭಿಸುತ್ತದೆ
* ಮನೆ ಮಂದಿಗೆ ಸಂತೋಷ ಉಂಟು ಮಾಡುವುದು.
* ಮನೆಯವರ ಶ್ರೇಯಸ್ಸಿಗಾಗಿ ಈ ಪೂಜೆ ಮಾಡಲಾಗುವುದು
* ಮಕ್ಕಳ ಭಾಗ್ಯ ಲಭಿಸುವುದು.
* ಕನ್ಯಾದಾನ ಮಾಡುವ ಭಾಗ್ಯ ದೊರೆಯುವುದು