For Quick Alerts
ALLOW NOTIFICATIONS  
For Daily Alerts

ಈ ಮೂರು ಕಾರಣಗಳಿಂದಾಗಿ ಸೀತಾ ದೇವಿ ರಾಮನನ್ನು ವಿವಾಹವಾದಳು

|

ವಿವಾಹ ಎನ್ನುವುದು ಒಂದು ಪವಿತ್ರವಾದ ಸಂಸ್ಕಾರ. ಈ ಬಂಧನವು ದೇವರು ನಿರ್ಣಯಿಸಿರುತ್ತಾನೆ. ಅಂತೆಯೇ ದೇವತೆಗಳ ವಿವಾಹವನ್ನು ಸಹ ಮೊದಲೇ ನಿರ್ಣಯಿಸುತ್ತಾನೆ. ದೇವತೆಗಳ ವಿವಾಹವೂ ಮೊದಲೇ ನಿರ್ಣಯವಾಗಿರುತ್ತದೆ. ರಾಮ-ಸೀತೆ, ವಿಷ್ಣು-ಲಕ್ಷ್ಮಿ, ಕೃಷ್ಣ-ರುಕ್ಮಿಣಿ, ಶಿವ-ಪಾರ್ವತಿ ಹೀಗೆ ದೇವಾನು ದೇವತೆಗಳು ಪವಿತ್ರವಾದ ಬಾಂಧವ್ಯವನ್ನು ಹೊಂದುವುದರ ಮೂಲಕ ಇತರರಿಗೆ ಮಾದರಿಯಾಗಿ ಉಳಿದಿದ್ದಾರೆ.

ವಿವಾಹ ಆಗುವ ಮೊದಲು ಅಥವಾ ಪ್ರಾಯಕ್ಕೆ ಬಂದ ಪ್ರತಿಯೊಬ್ಬ ಹುಡುಗ ಮತ್ತು ಹುಡುಗಿಯರಿಗೆ ತಮ್ಮದೇ ಆದ ಕನಸು ಹಾಗೂ ಆಸೆಯನ್ನು ಹೊಂದಿರುತ್ತಾರೆ. ಅದರಲ್ಲೂ ಪ್ರತಿಯೊಬ್ಬ ಹುಡುಗಿಯರಿಗೂ ತಮ್ಮದೇ ಆದ ಕನಸು ಹಾಗೂ ಆಸೆಗಳು ಇರುತ್ತವೆ. ಅವುಗಳ ಪ್ರಕಾರವೇ ತಮ್ಮ ಸಂಗಾತಿಯಿರಬೇಕು ಎಂದು ಬಯಸುತ್ತಾರೆ. ಗಂಧರ್ವ ವಿವಾಹ ಅಂದರೆ ಪ್ರೇಮ ವಿವಾಹವು ಎಲ್ಲಾ ಧರ್ಮಗಳಲ್ಲೂ ಸಾಮಾನ್ಯವಾಗಿ ಇರುತ್ತದೆ. ತಮಗೆ ಆಕರ್ಷಕರಾದ ವ್ಯಕ್ತಿಗಳೊಂದಿಗೆ ವಿವಾಹ ವಾಗುವುದರ ಮೂಲಕ ತಮ್ಮ ದಾಂಪತ್ಯ ಜೀವನವನ್ನು ನಡೆಸುತ್ತಾರೆ.

ರಾಮ ಮತ್ತು ಸೀತೆಯ ವಿವಾಹವು ಸ್ವಯಂವರದ ಮೂಲಕ ನಡೆಯಿತು ಎನ್ನಲಾಗುವುದು. ಆದರೆ ಇವರ ವಿವಾಹವನ್ನು ದೇವಾನು ದೇವತೆಗಳು ಮೊದಲೇ ಊಹಿಸಿದ್ದರು ಎನ್ನಲಾಗುವುದು. ಸ್ವಯಂ ವರಕ್ಕೂ ಮುಂಚೆಯೇ ರಾಮನು ಸೀತೆಯನ್ನು ಒಂದು ಉದ್ಯಾನ ವನದಲ್ಲಿ ನೋಡಿದ್ದನು. ರಾಮನು ಸೀತೆಯ ಸೌಂದರ್ಯವನ್ನು ಕಂಡು ಆಕರ್ಷಣೆಗೆ ಒಳಗಾಗಿದ್ದನು. ಜೊತೆಗೆ ಅವಳನ್ನೇ ವಿವಾಹವಾಗಬೇಕು ಎಂದು ಬಯಸಿದನು. ಜೊತೆಗೆ ಸೀತೆಯು ತನ್ನನ್ನು ಪತಿಯಾಗಿ ಸ್ವೀಕರಿಸಲು ಇಚ್ಛಿಸುವಂತೆ ಮಾಡು ಎಂದು ಪಾರ್ವತಿ ದೇವಿಯಲ್ಲಿ ಪ್ರಾರ್ಥಿಸಿಕೊಂಡಿದ್ದನು ಎನ್ನಲಾಗುವುದು. ಸೀತಾ ದೇವಿಯು ರಾಮನನ್ನು ಮೆಚ್ಚಲು ಅಥವಾ ಅವನನ್ನು ವಿವಾಹವಾಗಲು ಮೂರು ಮುಖ್ಯ ಕಾರಣಗಳಿದ್ದವು. ಹಾಗಾದರೆ ಆ ಮೂರು ಕಾರಣಗಳು ಯಾವವು? ಎನ್ನುವುದನ್ನು ತಿಳಿಯಲು ಈ ಮುಂದೆ ವಿವರಿಸಲಾದ ವಿವರಣೆಯನ್ನು ಪರಿಶೀಲಿಸಿ.

ಮೊದಲ ಕಾರಣ

ಮೊದಲ ಕಾರಣ

ಸೀತಾ ದೇವಿಯು ಬಾಲ್ಯದಲ್ಲಿ ಇರುವಾಗ ಒಮ್ಮೆ ಚೆಂಡಿನಲ್ಲಿ ಆಡುತ್ತಿದ್ದಳು. ಒಮ್ಮೆ ಅವಳ ಚೆಂಡು ಶಿವ ಧನಸ್ಸಿನ ಕೆಳಗೆ ಬಿದ್ದಿತು. ಆಗ ಸೀತೆ ಸುಲಭವಾಗಿ ಧನಸ್ಸನ್ನು ಎತ್ತಿ ಚೆಂಡನ್ನು ತೆಗೆದಳು. ಅದನ್ನು ನೋಡುತಿದ್ದ ಅವಳ ತಂದೆ ಇವಳ ವಿವಾಹವನ್ನು ಅವಳಿಗೆ ಸಮನಾದ ಬಲ ಇರುವವರೊಂದಿಗೆ ಮಾಡಬೇಕು ಎಂದುಕೊಂಡನು. ಸಾವಿರಾರು ರಾಜ ಕುಮಾರರನ್ನು ಸ್ವಯಂವರಕ್ಕೆ ಆಮಂತ್ರಿಸಲಾಗಿತ್ತು. ಆದರೆ ರಾಮನು ಮಾತ್ರ ಶಿವ ಧನಸ್ಸ ಅನ್ನು ಸುಲಭವಾಗಿ ಎತ್ತಿ ಮುರಿದನು. ಹಾಗಾಗಿ ಸೀತೆಗೆ ಸರಿಯಾದ ಬಲವಂತ ಹಾಗೂ ಸಾಮಥ್ರ್ಯ ಹೊಂದಿರುವವನು ಕೇವಲ ರಾಮ ಮಾತ್ರ ಎನ್ನುವುದನ್ನು ನಿರ್ಣಯಿಸಿದರು. ಜೊತೆಗೆ ಸೀತೆಯನ್ನು ಸಂರಕ್ಷಿಸುತ್ತಾನೆ ಎನ್ನುವುದನ್ನು ನಿರ್ಣಯಿಸಿದನು.

ರಾಮನು ತಂದೆಯ ಅನುಮತಿ ಬೇಕು ಎಂದನು

ರಾಮನು ತಂದೆಯ ಅನುಮತಿ ಬೇಕು ಎಂದನು

ಜನಕ ರಾಜನು ಸೀತೆಯನ್ನು ವಿವಾಹವಾಗಲು ಕೇಳಿಕೊಂಡನು. ಆಗ ರಾಮನು ತಾನು ಇಲ್ಲಿಗೆ ಬಂದಿರುವುದು ವಿಶ್ವಾಮಿತ್ರರೊಂದಿಗೆ. ಅವರ ಆಶಯದಂತೆ ನಾನು ಧನಸ್ಸಅನ್ನು ಎತ್ತಿದೆ. ಆದರೆ ಸೀತೆಯನ್ನು ವಿವಾಹವಾಗಲು ನನ್ನ ತಂದೆ ದಶರಥನನ್ನು ಕೇಳಬೇಕು. ಹಾಗಾಗಿ ತಂದೆ ಒಪ್ಪಿಗೆ ಸೂಚಿಸಿದರೆ ಅಥವಾ ಅನುಮತಿ ನೀಡಿದರೆ ಸೀತೆಯನ್ನು ವಿವಾಹವಾಗುತ್ತೇನೆ ಎಂದು ಹೇಳಿದನು. ಇಲ್ಲವಾದರೆ ವಿವಾಹವಾಗುವುದಿಲ್ಲ ಎಂದು ಹೇಳಿದನು.

Most Read: ಶ್ರೀರಾಮ ಸೀತೆಗೆ ಏಕೆ ಅಗ್ನಿ ಪರೀಕ್ಷೆ ಮಾಡಲು ಹೇಳಿದ?

ಎರಡನೇ ಕಾರಣ

ಎರಡನೇ ಕಾರಣ

ರಾಮನು ತನ್ನನ್ನು ತಾನು ಏನು ಎನ್ನುವುದನ್ನು ತೋರಿಸುವ ಸಾಮಥ್ರ್ಯವನ್ನು ಹೊಂದಿದ್ದನು. ಹೆಚ್ಚಿನ ಪುರುಷರು ತಮ್ಮ ಮನಸ್ಸಿನಲ್ಲಿ ಹಾಗೂ ಹೃದಯದಲ್ಲಿ ಯಾವ ಬಯಕೆಗಳಿವೆ ಎನ್ನುವುದನ್ನು ಹೇಳುವುದಿಲ್ಲ. ಅದರ ಬದಲು ಹೆಚ್ಚು ಚಿಂತೆಯನ್ನು ಮಾಡುತ್ತಾರೆ. ತನ್ನ ಮನಸ್ಸಿನಲ್ಲಿ ಏನಿದೆ ಎನ್ನುವುದನ್ನು ರಾಮ ವ್ಯಕ್ತಪಡಿಸಿದನು. ಉದ್ಯಾನವನದಲ್ಲಿ ಮೊದಲು ಭೇಟಿಯಾದಾಗ ತಂದೆಯ ಅನುಮತಿ ಇಲ್ಲದೆ ವಿವಾಹವಾಗುವುದಿಲ್ಲ ಎಂದು ಹೇಳಿದನು. ರಾಮನಲ್ಲಿ ಒಂದು ಸಂಗತಿಯ ಬಗ್ಗೆ ಯೋಚಿಸುವ ಹಾಗೂ ನಿರ್ಣಯ ತೆಗೆದುಕೊಳ್ಳುವ ಸಾಮಥ್ರ್ಯ ವಿತ್ತು. ಹಾಗಾಗಿ ಅವನ ಬಗ್ಗೆ ಸೀತೆಗೆ ಹೆಚ್ಚಿನ ಆನಂದ ಹಾಗೂ ಬಯಕೆಗಳು ಇದ್ದವು. ಉತ್ತಮ ಮನಸ್ಸು ಹಾಗೂ ಪ್ರೀತಿಯಿದ್ದರೆ ಪ್ರಜ್ಞೆಯ ಭಾವ ಹಾಗೂ ವಿಶ್ವಾಸಾರ್ಹತೆ ಇರುತ್ತದೆ ಎನ್ನುವುದು ತಿಳಿದಿದ್ದಳು.

ಮೂರನೇ ಕಾರಣಗಳು

ಮೂರನೇ ಕಾರಣಗಳು

ರಾಮನಿಗೆ ಸ್ವಯಂ ನಿಯಂತ್ರಣದ ಸಾಮರ್ಥ್ಯವಿದೆ. ರಾಮ ತನ್ನ ಭಾವನೆಗಳನ್ನು ಬಹಳ ಬುದ್ಧಿವಂತಿಕೆಯಿಂದ ನಿಭಾಯಿಸಬಲ್ಲನು. ಸ್ವಯಂ ನಿಯಂತ್ರಣ ಹಾಗೂ ಸ್ವಯಂ ಶಿಸ್ತನ್ನು ಹೊಂದಿದ್ದಾನೆ. ಹಲವಾರು ಸೈತಾನರು ಸೀತೆಯ ಸೌಂದರ್ಯವನ್ನು ಮೆಚ್ಚಿದ್ದಾರೆ ವಿವಾಹವಾಗಲು ಮುಂದಾದರು. ಆದರೆ ಅವರಲ್ಲಿ ಯಾರೂ ರಾಮನ ರೀತಿಯಲ್ಲಿ ಇರಲಿಲ್ಲ. ರಾಮನಲ್ಲಿ ಮೋಡಿಮಾಡುವಂತಹ ಗುಣಗಳಿದ್ದವು. ರಾಮನಲ್ಲಿ ಮೋಡಿಮಾಡುವಂತಹ ಗುಣ, ಸೌಂದರ್ಯ ಹಾಗೂ ಬಲ ಮೂರು ಇದ್ದವು. ಸೀತೆ ಬಯಸಿದ ಮೂರು ಗುಣಗಳು ರಾಮನಲ್ಲಿ ಇತ್ತು. ಅಲ್ಲದೆ ತಂದೆಯ ಪರವಾನಗಿ ಪಡೆಯುವ ವರೆಗೂ ಕಾಯುವಂತಹ ಸ್ವಯಂ ನಿಯಂತ್ರಣ ಶಕ್ತಿ ಇತ್ತು ಎನ್ನುವುದನ್ನು ತಿಳಿದಳು. ಅದು ರಾಮನನ್ನೇ ವಿವಾಹವಾಗಬೇಕು ಎನ್ನುವ ಭಾವನೆ ಮೂಡಲು ಕಾರಣವಾದ ಪ್ರಮುಖ ಸಂಗತಿಗಳಾದವು.

Most Read: ಭೂ ತಾಯಿಯ ಮಗಳು 'ಸೀತಾ ಮಾತೆಯ' ರಹಸ್ಯ....

ಸೀತಾ ದೇವಿ

ಸೀತಾ ದೇವಿ

ಸೀತಾ ದೇವಿ ಅತ್ಯುತ್ತಮವಾದ ಮನಸ್ಸು ಹಾಗೂ ಸೌಂದರ್ಯವನ್ನು ಹೊಂದಿರುವವಳಾಗಿದ್ದಳು. ಅವಳ ಸರಳ ಭಾವನೆ ಹಾಗೂ ಪ್ರೀತಿಯಿಂದಲೇ ಜನರ ಮನಸ್ಸನ್ನು ಗೆದ್ದಳು. ಪತಿಯೊಂದಿಗೆ ಅತ್ಯುತ್ತಮ ಹೊಂದಾಣಿಕೆ ಹಾಗೂ ಸಹಕಾರ ನೀಡುವುದರೊಂದಿಗೆ ಮಾದರಿಯ ದೇವತೆಯಾದಳು. ಅಲ್ಲದೆ ಭಕ್ತರಿಗೆ ಅತ್ಯುತ್ತಮ ಮಾದರಿಯ ಜೀವನವನ್ನು ತೋರಿಸಿಕೊಟ್ಟಿದ್ದಾಳೆ ಎನ್ನಲಾಗುವುದು.

English summary

Three Reasons Why Sita Agreed To Marry Rama

The Gods had predicted that Rama would marry Sita . When Rama saw Sita for the first time, in the garden before the Swayamvara he was captured by her beauty and had decided to marry her. Sita too was enchanted by Rama’s looks and prayed to Parvati wishing Rama to be her husband .Apart from the physical attraction there are three very important valid reasons which Sita saw in Ram and agreed to marry him.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X