Latest Updates
-
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್!
ಗುರುವಾರದಂದು ಅಪ್ಪಿತಪ್ಪಿಯೂ ಇಂತಹ ಕೆಲಸ ಕಾರ್ಯಗಳನ್ನು ಮಾಡಬೇಡಿ
ಹಿಂದೂ ಧರ್ಮದಲ್ಲಿನ ನಂಬಿಕೆಗಳು ಅಪಾರವಾಗಿರುವಂತದ್ದು. ಇದರ ಹಿಂದೆ ಕೆಲವೊಂದು ವೈಜ್ಞಾನಿಕವಾದ ಕಾರಣಗಳು ಇದ್ದರೆ, ಇನ್ನು ಕೆಲವು ದೇವರ ಬಗ್ಗೆ ಇರುವಂತಹ ನಂಬಿಕೆಯಿಂದಾಗಿ ಪಾಲಿಸಿಕೊಂಡು ಬಂದಿರುವಂತದ್ದಾಗಿದೆ. ಹಿಂದೂಗಳು ಪ್ರತಿಯೊಂದು ದಿನವನ್ನು ಒಂದೊಂದು ದೇವರಿಗೆ ಮೀಸಲಾಗಿ ಇಡುವರು. ಅದಕ್ಕೆ ಅನುಗುಣವಾಗಿ ಪೂಜೆಗಳನ್ನು ಮಾಡಿ ದೇವರನ್ನು ಒಲಿಸಿಕೊಳ್ಳುವರು. ಪ್ರತಿ ನಿತ್ಯವು ಆಯಾಯ ದೇವರಿಗೆ ಮಾಡುವಂತಹ ಪೂಜೆ ಹೇಗೆ ಮುಖ್ಯವೋ ಅದೇ ರೀತಿಯಾಗಿ ಕೆಲವೊಂದು ಕ್ರಮಗಳನ್ನು ಪಾಲಿಸಿಕೊಂಡು ಕೂಡ ಹೋಗಬೇಕಾಗುತ್ತದೆ. ಇದು ಕೂಡ ನಮ್ಮ ಜೀವನದ ಮೇಲೆ ಪ್ರಮುಖ ಪಾತ್ರ ವಹಿಸುವುದು. ಗುರುವಾರವು ವಿಷ್ಣು ದೇವರಿಗೆ ಮೀಸಲಾಗಿರುವಂತಹ ದಿನ ಎಂದು ಹೇಳಲಾಗುತ್ತದೆ. ಬ್ರಹಸ್ಪತಿ ದೇವರನ್ನು ಕೂಡ ಈ ದಿನದಂದು ಪೂಜಿಸಲಾಗುತ್ತದೆ. ಬ್ರಹಸ್ಪತಿ ದೇವರುಗಳ ಗುರು ಎಂದು ಹೇಳಲಾಗುತ್ತದೆ.

ಜ್ಯೋತಿಷಿಗಳ ಪ್ರಕಾರ
ಬ್ರಹಸ್ಪತಿ ದೇವರನ್ನು ವಿಷ್ಣುವಿನ ಮತ್ತೊಂದು ಅವತಾರ ಎಂದು ಕೂಡ ಹೇಳಲಾಗುತ್ತದೆ. ವಿಷ್ಣು ದೇವರ ಪತ್ನಿಯು ಲಕ್ಷ್ಮೀಯಾಗಿರುವ ಕಾರಣದಿಂದಾಗಿ ನಾವು ಈ ದಿನದಂದು ಆಕೆಯನ್ನು ಕೂಡ ಪೂಜೆ ಮಾಡುತ್ತೇವೆ. ಗುರುವಾರದಂದು ಉಪವಾಸ ಮಾಡಿ ವಿಷ್ಣು ದೇವರು ಮತ್ತು ಬ್ರಹಸ್ಪತಿ ದೇವರನ್ನು ಒಲಿಸಿಕೊಳ್ಳಲಾಗುತ್ತದೆ.
ಜ್ಯೋತಿಷಿಗಳ ಪ್ರಕಾರ ಗುರುವಾರದಂದು ನಾವು ಕೆಲವೊಂದು ಕೆಲಸಗಳನ್ನು ಮಾಡಬಾರದು. ಇದರಿಂದ ಬ್ರಹಸ್ಪತಿ ದೇವರು ಮುನಿಯುವರು. ಯಾಕೆಂದರೆ ಗುರುವಾರವು ಗುರು ಗ್ರಹಕ್ಕೆ ಸಂಬಂಧಪಟ್ಟಿದೆ. ಇದು ಬ್ರಹಸ್ಪತಿ ದೇವರಿಗೂ ಸಂಬಂಧಿಸಿದ್ದಾಗಿದೆ. ನೀವು ಈ ಕೆಲಸಗಳನ್ನು ಗುರುವಾರ ಮಾಡಿದರೆ ಬ್ರಹಸ್ಪತಿ ದೇವರ ಕೋಪಕ್ಕೆ ತುತ್ತಾಗಿ ಶೈಕ್ಷಣಿಕ ಮತ್ತು ಆಧ್ಯಾತ್ಮಿಕ ಪ್ರಗತಿಗೆ ತಡೆಯಾಗುವುದು. ಯಾವ ಕೆಲಸಗಳನ್ನು ಮಾಡಬಾರದು ಎಂದು ಇಲ್ಲಿ ಹೇಳಲಾಗಿದೆ. ನೀವು ಅದನ್ನು ತಿಳಿದುಕೊಳ್ಳಿ.

ಗುರುವಾರ ಉಗುರು ಕತ್ತರಿಸಿಕೊಳ್ಳುವುದು
ಗುರುವಾರದಂದು ಉಗುರು ಕತ್ತರಿಸಿಕೊಳ್ಳಬಾರದು ಎಂದು ಹೇಳಲಾಗುತ್ತದೆ. ಅದೇ ರೀತಿಯಾಗಿ ಕ್ಷೌರ ಕೂಡ ಗುರುವಾರ ಮಾಡಿಸಿಕೊಳ್ಳಬಾರದು. ಗಡ್ಡ ಕೂಡ ತೆಗೆಸಿಕೊಳ್ಳುವುದು ತಪ್ಪು. ಹೀಗೆ ಮಾಡಿದರೆ ಅದರಿಂದ ನಿಮ್ಮ ಮೇಲೆ ಗ್ರಹ ಧನಾತ್ಮಕ ಶಕ್ತಿಯ ಪರಿಣಾಮವು ಕಡಿಮೆ ಆಗುವುದು. ಇದರಲ್ಲಿ ಯಾವುದನ್ನಾದರೂ ಮಾಡಿದರೆ ಆಗ ಅವರ ಜೀವನದ ಆಯುಷ್ಯವು ಕಡಿಮೆ ಆಗುವುದು ಎಂದು ಹೇಳಲಾಗುತ್ತದೆ.

ಗುರುವಾರದಂದು ತಲೆಗೆ ಸ್ನಾನ ಮಾಡುವುದು
ಗುರುವಾರದಂದು ತಲೆಗೆ ಸ್ನಾನ ಮಾಡಿಕೊಳ್ಳಬಾರದು ಎಂದು ಹೇಳಲಾಗುತ್ತದೆ. ಜಾತಕದಲ್ಲಿರುವಂತಹ ಗುರುವು ಮಹಿಳೆಯರಿಗೆ ಪತಿಗೆ ಸಂಬಂಧಿಸಿದ್ದಾಗಿದೆ. ಗುರುವಾರದಂದು ಮಹಿಳೆಯರು ತಲೆಗೆ ಸ್ನಾನ ಮಾಡಿದರೆ ಆಗ ಪತಿಯ ಸಮೃದ್ಧಿ ಮೇಲೆ ಅದು ಪರಿಣಾಮ ಬೀರುವುದು. ಇದರಿಂದಾಗಿ ಮಹಿಳೆಯರು ಗುರುವಾರ ಕೂದಲು ಕತ್ತರಿಸಿಕೊಳ್ಳಬಾರದು ಮತ್ತು ಸ್ನಾನ ಮಾಡಬಾರದು ಎಂದು ಹೇಳಲಾಗುತ್ತದೆ.

ಬಟ್ಟೆ ಒಗೆಯುವುದು
ಗುರುವಾರದಂದು ಬಟ್ಟೆ ಒಗೆಯುವುದು ಕೂಡ ಒಳ್ಳೆಯದಲ್ಲ ಎಂದು ಹೇಳಲಾಗುತ್ತದೆ. ಗುರುವಾರದಂದು ನೆಲ ಒರೆಸುವುದು ಒಳ್ಳೆಯದಲ್ಲ ಎಂದು ಪರಿಗಣಿಸಲಾಗಿದೆ. ಈ ರೀತಿ ಮಾಡುವ ಕಾರಣದಿಂದ ಮನೆಯಲ್ಲಿ ಮಕ್ಕಳ ಶಿಕ್ಷಣದ ಪ್ರಗತಿ ಮೇಲೆ ಪರಿಣಾಮ ಬೀರುವುದು. ವ್ಯಕ್ತಿಯ ಸಂಪತ್ತು ಮತ್ತು ಆರ್ಥಿಕ ಪರಿಸ್ಥಿತಿಗೂ ಇದು ಒಳ್ಳೆಯದಲ್ಲವೆಂದು ಪರಿಗಣಿಸಲ್ಪಟ್ಟಿದೆ.

ಜೇಡರ ಬಲೆ ತೆಗೆಯುವುದು
ಹಿಂದೂ ಪುರಾಣಗಳ ಪ್ರಕಾರ ಪ್ರತಿನಿತ್ಯ ಮನೆಯನ್ನು ಶುದ್ಧ ಹಾಗೂ ಶುಚಿಗೊಳಿಸುವುದು ಅತೀ ಅಗತ್ಯ. ಮನೆಯು ಶುಚಿಯಾಗಿಲ್ಲದೆ ಇದ್ದರೆ ಆಗ ಲಕ್ಷ್ಮೀ ದೇವಿಯು ನಿಮ್ಮ ಮನೆಗೆ ಬರುವುದಿಲ್ಲ ಎಂದು ನಂಬಲಾಗಿದೆ. ಇದಕ್ಕಾಗಿಯೇ ನಾವು ಮನೆಯ ಸುತ್ತಲು ಹಾಗೂ ಮನೆಯ ಒಳಗೆ ಇರುವಂತಹ ಜೇಡರ ಬಲೆಯನ್ನು ತೆಗೆಯುತ್ತೇವೆ. ಅದಾಗ್ಯೂ, ಮನೆಯಲ್ಲಿ ಜೇಡರಬಲೆಯಿದ್ದರೆ ಆಗ ನೀವು ಅದನ್ನು ಗುರುವಾರ ತೆಗೆಯಲು ಹೋಗಬೇಡಿ. ನಿಮಗೆ ಅಷ್ಟು ಅಗತ್ಯವಿದ್ದರೆ ಮನೆಯ ಮೂಲೆಗಳು ಹಾಗೂ ಜೇಡರಬಲೆಯನ್ನು ಹಿಂದಿನ ದಿನ ತೆಗೆದು ಸ್ವಚ್ಛ ಮಾಡಿಕೊಳ್ಳಿ.



Click it and Unblock the Notifications
