For Quick Alerts
ALLOW NOTIFICATIONS  
For Daily Alerts

ಮಾರ್ಗಶಿರ ಮಾಸ: ಲಕ್ಷ್ಮಿ ಪೂಜೆಯ ಬಗ್ಗೆ ತಿಳಿದಿರಬೇಕಾದ 10 ಸಂಗತಿಗಳಿವು

|

ಕರ್ನಾಟಕದಲ್ಲಿ ಡಿಸೆಂಬರ್ 5ರಿಂದ ಮಾರ್ಗಶಿರ ಮಾಸ ಪ್ರಾರಂಭವಾದರೆ ಜನವರಿ2, 2022ಕ್ಕೆ ಮುಕ್ತಾಯವಾಗುವುದು.

ಮಾರ್ಗಶಿರ/ ಮಾರ್ಗಶೀರ್ಷ ಮಾಸವೆಂಬುವುದು ಶ್ರೀ ವಿಷ್ಣು ಹಾಗೂ ಲಕ್ಷ್ಮಿಯ ಆರಾಧನೆಗೆ ಮೀಸಲಿಟ್ಟಿರುವ ಮಾಸವಾಗಿದೆ. ಮಾರ್ಗಶಿರ ಮಾಸದ ಪ್ರತೀ ಗುರುವಾರದಂದು ಲಕ್ಷ್ಮಿ ಪೂಜೆಯನ್ನು ಮಾಡಲಾಗುವುದು. ಲಕ್ಷ್ಮಿ ಮಾತೆಯನ್ನು ಆರಾಧಿಸುವುದರಿಂದ ಐಶ್ವರ್ಯ, ಸಂಪತ್ತು, ಅದೃಷ್ಟ ನೀಡಿ ಹರಿಸುತ್ತಾಳೆ ಎಂಬುವುದು ಆಕೆಯನ್ನು ನಂಬಿದ ಭಕ್ತರ ಅಚಲ ನಂಬಿಕೆಯಾಗಿದೆ.

Marghashirsha Month

ಲಕ್ಷ್ಮಿ ಪೂಜೆಯ ದಿನದಂದು ಉಪವಾಸವಿದ್ದು ಆಕೆಯನ್ನು ಆರಾಧಿಸುವುದರಿಂದ ಬದುಕಿನಲ್ಲಿರುವ ಕಷ್ಟಗಳು ನಿವಾರಣೆಯಾಗುವುದು, ಲಕ್ಷ್ಮಿ ನೆಮ್ಮದಿ ಬದುಕನ್ನು ಕರುಣಿಸುತ್ತಾಳೆ.

ಮಾರ್ಗಶಿರ ಮಾಸದಲ್ಲಿ ನೀವು ಲಕ್ಷ್ಮಿ ಪೂಜೆ ಮಾಡುವಾಗ ಗಮನಿಸಬೇಕಾದ 10 ಪ್ರಮುಖ ವಿಷಯಗಳ ಬಗ್ಗೆ ಹೇಳಲಾಗಿದೆ ನೋಡಿ:

ದಂಪತಿ ಅಷ್ಟ ಲಕ್ಷ್ಮಿಯರನ್ನು ಪೂಜಿಸಿ

ದಂಪತಿ ಅಷ್ಟ ಲಕ್ಷ್ಮಿಯರನ್ನು ಪೂಜಿಸಿ

1. ಲಕ್ಷ್ಮಿ ಪೂಜೆ ಮಾಡುವಾಗ ದಂಪತಿಗಳು ಉಪವಾಸದ ನಿಯಮಗಳನ್ನು ಪಾಲಿಸಬೇಕು. ದಂಪತಿ ಜೊತೆಯಾಗಿ ಲಕ್ಷ್ಮಿಗೆ ಪೂಜೆಯನ್ನು ಸಲ್ಲಿಸಬೇಕು.

2. ಭಕ್ತರು ಅಷ್ಟಲಕ್ಷ್ಮಿಯರನ್ನು ಪೂಜಿಸಬೇಕು.

ಅಷ್ಟಲಕ್ಷ್ಮಿಯರು

* ಶ್ರೀ ಧನ ಲಕ್ಷ್ಮಿ ಮಾತೆ

* ಶ್ರೀ ಗಜ ಲಕ್ಷ್ಮಿ ಮಾತೆ

* ಶ್ರೀ ವೀರ ಲಕ್ಷ್ಮಿ ಮಾತೆ

* ಶ್ರೀ ಐಶ್ವರ್ಯ ಲಕ್ಷ್ಮಿ ಮಾತೆ

* ಶ್ರೀ ವಿಜಯ ಲಕ್ಷ್ಮಿ ಮಾತೆ

* ಶ್ರೀ ಆದಿ ಲಕ್ಷ್ಮಿ ಮಾತೆ

* ಶ್ರೀ ಧಾನ್ಯ ಲಕ್ಷ್ಮಿ ಮಾತೆ

* ಶ್ರೀ ಸಂತಾನ ಲಕ್ಷ್ಮಿ ಮಾತೆ

ಲಕ್ಷ್ಮಿ ಪೂಜೆಯ ನಿಯಮ

ಲಕ್ಷ್ಮಿ ಪೂಜೆಯ ನಿಯಮ

3. ಉಪವಾಸ ಗುರುವಾರ ಬೆಳಗ್ಗೆಯಿಂದ ಪ್ರಾರಂಭವಾಗುವುದು. ಸ್ನಾನ ಮಾಡಿ ಮಡಿ ಬಟ್ಟೆ ತೊಟ್ಟು ಮೊದಲಿಗೆ ಗಣೇಶನಿಗೆ ಪೂಜೆ ಸಲ್ಲಿಸಿ ನಂತರ ಲಕ್ಷ್ಮಿಗೆ ಪೂಜೆ ಸಲ್ಲಿಸಬೇಕು.

4. ಕಲಶದ ಒಳಗಡೆ ನೀರು ತುಂಬಿ 5 ಬಗೆಯ ಎಲೆಗಳಿಂದ ಅಲಂಕರಿಸಬೇಕು ನಂತರ ತೆಂಗಿನಕಾಯಿಯನ್ನು ಕಲಶದ ಬಾಯಿಯಲ್ಲಿ ಇಡಬೇಕು, ಕಲಶದ ಒಳಗಡೆ ನೀರಿನಲ್ಲಿ ಸ್ವಲ್ಪ ಅಕ್ಕಿ ಹಾಗೂ ನಾಣ್ಯಗಳನ್ನು ಹಾಕಿರಬೇಕು.

ಲಕ್ಷ್ಮಿಗೆ ಅಲಂಕಾರ

ಲಕ್ಷ್ಮಿಗೆ ಅಲಂಕಾರ

5. ಕಲಶವನ್ನು ಕೆಂಪು ಬಟ್ಟೆಯಿಂದ ಅಲಂಕರಿಸಬೇಕು. ಕುಂಕುಮ ಬಳಸಿ ಸ್ವಸ್ತಿಕ್ ಬಳಸಿ ಅದರ ಮೇಲೆ ಹಲಗೆ ಇಟ್ಟು ಕಲಶವನ್ನು ಪ್ರತಿಷ್ಠಾಪನೆ ಮಾಡಿ.

6. ಪ್ರಸಾದಕ್ಕೆ 5 ಬಗೆಯ ಹಣ್ಣುಗಳಿರಬೇಕು. ಸೇಬು, ಕಿತ್ತಳೆ, ಪಿಯರ್ಸ್, ಕಿತ್ತಳೆ, ದಾಳಿಂಬೆ ಇಡಬಹುದು ಅಲ್ಲದೆ ಲಕ್ಷ್ಮಿ ಮುಂದೆ ಬಾಳೆ ಹಣ್ಣಿನ ಚಿಪ್ಪು ಇಡಿ.

'ಮಹಾಲಕ್ಷ್ಮಿ ವ್ರತ ಕತೆ' ಓದಿ

'ಮಹಾಲಕ್ಷ್ಮಿ ವ್ರತ ಕತೆ' ಓದಿ

7. ಕಲಶದ ಮುಂದೆ ಹೂಗಳಿಂದ ಅಲಂಕರಿಸಿ, ದೀಪ ಬೆಳಗಿ.

8. ಈ ದಿನ 'ಮಹಾಲಕ್ಷ್ಮಿ ವ್ರತ ಕತೆ' ಓದಬೇಕು, ಲಕ್ಷ್ಮಿ ಮಂತ್ರಗಳನ್ನು ಪಠಿಸಿ. ಲಕ್ಷ್ಮಿ ಪೂಜೆ ಮಾಡುವಾಗ ಲಕ್ಷ್ಮಿ ಸಹಸ್ರನಾಮ ಸ್ತೋತ್ರ ಪಠಿಸಿ.

ಮುತ್ತೈದೆಯರಿಗೆ ತಾಂಬೂಲ ನೀಡಿ

ಮುತ್ತೈದೆಯರಿಗೆ ತಾಂಬೂಲ ನೀಡಿ

9. ಸಂಜೆ ಸಿಹಿ ಸೇರಿ 9 ಬಗೆಯ ಸ್ವಾತಿಕ ಆಹಾರ ತಯಾರಿಸಿ ಲಕ್ಷ್ಮಿಗೆ ನೈವೇದ್ಯ ಇಡಿ.

10. ನಂತರ 5 ಮುತ್ತೈದೆಯರನ್ನು ಕರೆದು ಅವರಿಗೆ ಅರಿಶಿಣ ಕುಂಕುಮ, ತಾಂಬೂಲ ನೀಡಿ ಅವರ ಆಶೀರ್ವಾದ ಪಡೆಯಿರಿ.

English summary

Things You Should Know About Marghashirsha Laxmi Puja

Things you should know about Marghashirsha Laxmi Puja, read on...
X
Desktop Bottom Promotion