Latest Updates
-
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ -
ದೇಹಕ್ಕೆ ಬಲ ನೀಡುವ ಹುರಿದಕ್ಕಿ ಉಂಡೆ ಸಲೀಸಾಗಿ ಮಾಡಿ! ಇಲ್ಲಿದೆ ಸುಲಭದ ಮನೆಮದ್ದು! -
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ -
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ!
ವರಮಹಾಲಕ್ಷ್ಮಿ ಹಬ್ಬದ ಆಚರಣೆಗೂ ಮುನ್ನ, ಇವೆಲ್ಲಾ ಸಂಗತಿಗಳು ತಿಳಿದಿರಲಿ
ಶ್ರಾವಣ ಮಾಸದಲ್ಲಿ ವರಮಹಾಲಕ್ಷ್ಮಿ ವ್ರತ/ಪೂಜೆಯು ಹಿಂದೂಗಳಿಗೆ ಮಂಗಳಕರವಾದ ಹಬ್ಬ. ಉತ್ತರ ಭಾರತ ಹಾಗೂ ದಕ್ಷಿಣ ಭಾರತದೆಲ್ಲೆಡೆಯೂ ಶ್ರಾವಣ ಮಾಸದಲ್ಲಿ ಲಕ್ಷ್ಮಿ ಹಬ್ಬವನ್ನು ಆಚರಿಸುತ್ತಾರೆ. ಉತ್ತರ ಭಾರತದವರು ವರಮಹಾಲಕ್ಷ್ಮಿಯ ಉತ್ಸವವನ್ನಾಗಿ ಆಚರಿಸಿದರೆ, ದಕ್ಷಿಣ ಭಾರತದವರು ಹಬ್ಬ ಹಾಗೂ ವ್ರತದ ರೂಪದಲ್ಲಿ ಆಚರಿಸುತ್ತಾರೆ.
ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು ಮತ್ತು ತೆಲಂಗಾಣದಲ್ಲಿ ವರಮಹಾಲಕ್ಷ್ಮಿಯ ವ್ರತ ಪ್ರಮುಖ ಹಬ್ಬಗಳಲ್ಲಿ ಒಂದು. ಬಿಹಾರ, ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶದಲ್ಲಿ ಮಹಾಲಕ್ಷ್ಮಿ ಪೂಜೆಯ ರೂಪದಲ್ಲಿ ಆಚರಿಸುತ್ತಾರೆ. ದೇವಿಯ ಈ ವ್ರತ ಹಾಗೂ ಹಬ್ಬವನ್ನು ಆಚರಿಸಿದರೆ ದಾರಿದ್ರ್ಯವೆಲ್ಲವೂ ಶಮನಗೊಂಡು, ಮನೆಯಲ್ಲಿ ಐಶ್ವರ್ಯ ನೆಲೆಸುತ್ತದೆ ಎನ್ನುವ ಪ್ರತೀತಿ ಇದೆ. ವರಮಹಾಲಕ್ಷ್ಮಿ ವ್ರತದ ಬಗ್ಗೆ ಇನ್ನಷ್ಟು ವಿಚಾರಗಳನ್ನು ತಿಳಿದುಕೊಳ್ಳಬೇಕೆಂದರೆ ಮುಂದಿರುವ ವಿವರಣೆಯನ್ನು ಓದಿ...

ಈ ಬಾರಿ ವರಮಹಾಲಕ್ಷ್ಮಿ ವ್ರತ ಆಗಸ್ಟ್ 4 ರಂದು ಆಚರಿಸಲಾಗುತ್ತದೆ
ಶ್ರಾವಣ ಮಾಸದ ಶುಕ್ಲ ಪಕ್ಷದ ಮೊದಲ ಶುಕ್ರವಾರದಂದು ವರಮಹಾಲಕ್ಷ್ಮಿ ಪೂಜೆಯನ್ನು ಆಚರಿಸಲಾಗುತ್ತದೆ. ಈ ವರ್ಷ ಅಂದರೆ 2017ರಲ್ಲಿ ವರಮಹಾಲಕ್ಷ್ಮಿ ಪೂಜೆ/ವ್ರತವನ್ನು ಆಗಸ್ಟ್ 4 ರಂದು ಆಚರಿಸಲಾಗುತ್ತದೆ.

ವರಮಹಾಲಕ್ಷ್ಮಿ ವ್ರತ/ಪೂಜೆಯನ್ನು ಏಕೆ ಆಚರಿಸಬೇಕು?
ವರಮಹಾಲಕ್ಷ್ಮಿ ಪೂಜೆ/ವ್ರತವು ಧನಲಕ್ಷ್ಮಿಗೆ ಅರ್ಪಿತವಾದದ್ದು. ವ್ರತ, ಪೂಜೆ, ಹಬ್ಬ, ಉತ್ಸವದ ರೂಪದಲ್ಲಿ ದೇವಿಯನ್ನು ಆರಾಧಿಸಿದರೆ ಅವಳ ಕೃಪೆಗೆ ಒಳಗಾಗುತ್ತೇವೆ. ಮನೆಯಲ್ಲಿ ಸಮೃದ್ಧವಾದ ಸಂಪತ್ತು ನೆಲೆಸುತ್ತದೆ. ತಾಯಿಯ ಆಶೀರ್ವಾದ ಲಭಿಸಿದರೆ ಮನೆಯಲ್ಲಿ ಕಷ್ಟಗಳು ದೂರವಾಗಿ, ಸುಖ-ಸಂತೋಷವು ನೆಲೆಸುತ್ತದೆ ಎನ್ನುವ ಪ್ರತೀತಿ ಇದೆ.

ವರಮಹಾಲಕ್ಷ್ಮಿ ಪೂಜೆಗೆ ಹೇಳಬೇಕಾದ ಶ್ಲೋಕ ಯಾವುದು?
ವರಮಹಾಲಕ್ಷ್ಮಿಗೆ ಹೇಳುವಂತಹ ಅನೇಕ ಶ್ಲೋಕಗಳಿವೆ. ಅವೆಲ್ಲಕ್ಕಿಂತಲೂ ಶ್ರೇಷ್ಠವಾದ ಶ್ಲೋಕವೆಂದರೆ ಲಕ್ಷ್ಮಿ ಅಷ್ಟೋತ್ತರ ಮತ್ತು ಲಕ್ಷ್ಮಿ ಸಹಸ್ರ ನಾಮ. ಹಬ್ಬದ ದಿನ ಈ ಎರಡು ಶ್ಲೋಕವನ್ನು ಹೇಳಿದರೆ ಹೆಚ್ಚು ಮಂಗಳಕರ. ಲಕ್ಷ್ಮಿ ದೇವಿಯೂ ಸಂತುಷ್ಟಳಾಗುತ್ತಾಳೆ ಎನ್ನಲಾಗುತ್ತದೆ.

ವರಮಹಾಲಕ್ಷ್ಮಿ ವ್ರತಾಚರಣೆಯ ಉಪವಾಸದ ನಿಯಮಗಳು
ಈ ವ್ರತಾಚರಣೆಗೆ ಯಾವುದೇ ಕಠಿಣವಾದ ಉಪವಾಸ ಕ್ರಮಗಳಿಲ್ಲ. ಈ ಸಮಯದಲ್ಲಿ ಅನುಸರಿಸಬೇಕಾದ ನಿಯಮಗಳು ಹೀಗಿವೆ...
*ವ್ರತಾಚರಣೆ ಮಾಡುತ್ತಿದ್ದ ಮಹಿಳೆ ಗರ್ಭಿಣಿಯಾಗಿದ್ದರೆ ಅಥವಾ ಅನಾರೋಗ್ಯದಿಂದ ಇದ್ದರೆ ಯಾವುದೇ ಬಗೆಯ ಉಪವಾಸ ಮಾಡುವ ಅಗತ್ಯವಿಲ್ಲ.
*ಸಾಮಾನ್ಯವಾಗಿ ಉಪವಾಸವೆಂದರೆ ಬೆಳಗ್ಗೆ ಸೂರ್ಯೋದಯದಿಂದ ದೇವಿ ಪೂಜೆ ಆಗುವವರೆಗೆ. ಆದರೆ ಇದು ನಿಮ್ಮ ಕೆಲಸ ಹಾಗೂ ಅನುಕೂಲಕ್ಕೆ ತಕ್ಕಂತೆ ಮಾಡಬಹುದು.
*ಬಾಳೆಕಾಯನ್ನು ಬೇಯಿಸಿ ನೈವೇದ್ಯ ಮಾಡಬೇಕೆನ್ನುವ ನಿಯಮವೇನು ಇಲ್ಲ. *ಹಬ್ಬದಂದು ತಯಾರಿಸುವ ಪ್ರಮುಖ ನೈವೇದ್ಯ ಹಾಗೂ ಪ್ರಸಾದವೆಂದರೆ ಕಡಲೆ ಉಸುಳಿ.

ವರಮಹಾಲಕ್ಷ್ಮಿ ಹಬ್ಬ ಆಚರಣೆ ಸಾಧ್ಯವಾಗದಿದ್ದರೆ
ಹಲವಾರು ವರ್ಷಗಳಿಂದಲೂ ವರಮಹಾಲಕ್ಷ್ಮಿ ಹಬ್ಬ/ವ್ರತವನ್ನು ಆಚರಿಸಿಕೊಂಡು ಬಂದು, ಈಗ ಯಾವುದೋ ಅಡಚಣೆಯಿಂದ ಆಚರಿಸಲು ಸಾಧ್ಯವಾಗದಿದ್ದರೆ, ಮುಂದಿನ ಶುಕ್ರವಾರ ಅಥವಾ ನವರಾತ್ರಿ ಹಬ್ಬದ ಸಮಯದಲ್ಲಿ ಬರುವ ಶುಕ್ರವಾರದಂದು ಆಚರಿಸಬಹುದು.

ಪೂಜೆಯಲ್ಲಿ ಹಳದಿ ದಾರದ ವಿಶೇಷ
ವರಮಹಾಲಕ್ಷ್ಮಿ ಪೂಜೆಯಲ್ಲಿ ಹಳದಿ ದಾರ/ನಂಬು ಸಾರಡು ಪ್ರಮುಖವಾದ ವಸ್ತು. ಈ ದಾರದಲ್ಲಿ 9 ಗಂಟನ್ನು ಹಾಕಿ, ಮಧ್ಯದಲ್ಲಿ ಒಂದು ಹೂವನ್ನು ಸೇರಿಸಿ ಕಟ್ಟುತ್ತಾರೆ. ಪೂಜಾ ಸಮಯದಲ್ಲಿ ಇದನ್ನು ಬಲಗೈಗೆ ಕಟ್ಟಿಕೊಂಡು ಪೂಜೆ ಮಾಡಲಾಗುವುದು. ಇದು ಆಧ್ಯಾತ್ಮಿಕವಾಗಿ ಹೆಚ್ಚು ಪವಿತ್ರತೆಯಿಂದ ಕೂಡಿದೆ ಎನ್ನಲಾಗುತ್ತದೆ.

ವರಮಹಾಲಕ್ಷ್ಮಿ ಹಬ್ಬದ ಸಮಯದಲ್ಲಿ ಪರಿಗಣಿಸಲಾಗುವ ಇತರ ವಿಚಾರಗಳು
*ಈ ಪೂಜೆ ಅಥವಾ ವ್ರತಾಚರಣೆ ಮಾಡಲು ಯಾರನ್ನೂ ಒತ್ತಾಯಿಸಬಾರದು. ಪೂಜೆ ಮಾಡಲು ಬಯಸುವವರು ಹೃದಯಪೂರ್ವಕವಾಗಿ ಮಾಡಬೇಕು. ಸಂಪೂರ್ಣ ಭಕ್ತಿಯಿಲ್ಲದೆ ಅಥವಾ ಆಸಕ್ತಿಯಿಲ್ಲದೆ ಆಚರಿಸಿದರೆ ಪೂಜೆ ಮಾಡಿದ ಫಲ ಲಭಿಸದು.
*ಪೂಜೆ/ವ್ರತವನ್ನು ಹೊಸದಾಗಿ ಆಚರಿಸುತ್ತಿದ್ದರೆ, ಈ ಮೊದಲು ಆಚರಿಸುತ್ತಾ ಬಂದವರ ಸಲಹೆ ಪಡೆದು ಆಚರಿಸಬೇಕು.

ವರಮಹಾಲಕ್ಷ್ಮಿ ಹಬ್ಬದ ಸಮಯದಲ್ಲಿ ಪರಿಗಣಿಸಲಾಗುವ ಇತರ ವಿಚಾರಗಳು
*ಸಾಮಾನ್ಯವಾಗಿ ವಿವಾಹಿತ ಮಹಿಳೆಯರಿಂದ ಈ ಪೂಜೆಯನ್ನು ಮಾಡಲಾಗುವುದು. ತಾಯಿಗೆ ಸಹಾಯ ಮಾಡಲು ಅವಿವಾಹಿತ ಮಹಿಳೆಯರು ನಿಲ್ಲಬಹುದು.
*ಇನ್ನೇನು 22 ದಿನಗಳಲ್ಲಿ ಒಂದು ಮಗುವಿಗೆ ಜನ್ಮ ನೀಡುತ್ತೀದ್ದೀರಿ ಎಂದಾದರೆ ಈ ವ್ರತಾಚರಣೆಯನ್ನು ಮಾಡದೆ, ಮುಂದಿನ ಅನುಕೂಲಕರ ದಿನದಲ್ಲಿ ಮಾಡಬೇಕು.



Click it and Unblock the Notifications











