For Quick Alerts
ALLOW NOTIFICATIONS  
For Daily Alerts

ಮುಸ್ಲಿಂರ ಪವಿತ್ರ ಮಾಸ ರಂಜಾನ್‌ ತಿಂಗಳ ಬಗ್ಗೆ ಈ ವಿಷಯಗಳು ಗೊತ್ತಿದೆಯೇ?

|

ನಾವು ಇಡೀ ವಿಶ್ವವನ್ನು ಒಂದು ಸುತ್ತು ಹಾಕಿದರೆ ನಮಗೆ ಕಾಣಸಿಗುವುದು ಬೇರೆ ಬೇರೆ ರೀತಿಯ ಜನರು, ಅವರ ನಂಬಿಕೆ, ಅವರ ಆಹಾರ ಪದ್ಧತಿಗಳು, ಕಣ್ಮನ ತಣಿಸುವ ಜೀವನ ಶೈಲಿಗಳು ಹಾಗೂ ಅವರವರ ಧಾರ್ಮಿಕ ಆಚರಣೆಗಳು. ಯಾವುದೇ ದೇಶ ಎಷ್ಟೇ ಮುಂದುವರೆದಿದ್ದರೂ ಅವರ ಹಿಂದಿನ ಸಂಸ್ಕೃತಿ, ಪರಂಪರೆ, ಹಬ್ಬ - ಆಚರಣೆಗಳನ್ನು ಮಾತ್ರ ಕೈ ಬಿಟ್ಟಿರುವುದಿಲ್ಲ.

ಒಂದು ನಿರ್ದಿಷ್ಟ ದೇಶದ ಸಂಸ್ಕೃತಿ ಮತ್ತು ಆಚರಣೆಗಳು ಇಡೀ ದೇಶದ ಗೌರವವನ್ನು ಇತರ ರಾಷ್ಟ್ರಗಳ ಜೊತೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಸರಿ ಸಮಾನವಾಗಿ ನಿಲ್ಲಿಸುವಂತಹ ಶಕ್ತಿ ಪಡೆದಿರುತ್ತವೆ. ಒಂದು ದೇಶದ ಕೆಲವೊಂದು ಸಾಂಸ್ಕೃತಿಕ ಆಚರಣೆಗಳು ಇತರ ದೇಶದ ಜನರನ್ನು ತನ್ನತ್ತ ಸೆಳೆಯುವ ಅದ್ಭುತ ಲಕ್ಷಣಗಳನ್ನು ಹೊಂದಿ ಅಲ್ಲಿನವರನ್ನು ತನ್ನ ಅನುಯಾಯಿಗಳನ್ನಾಗಿ ಮಾಡಿಕೊಳ್ಳುವಂತಹ ಪರಂಪರೆ ಹಿಂದಿನಿಂದಲೂ ಬೆಳೆದು ಬಂದಿದೆ.

ಏಷ್ಯಾ ಖಂಡದಲ್ಲಿನ ನಮ್ಮ ಭಾರತ ದೇಶ ಹಲವು ಧರ್ಮಗಳ ಸಮನ್ವಯ ಹೊಂದಿರುವ ಪ್ರದೇಶ. ಹಿಂದೂ, ಮುಸ್ಲಿಂ, ಕ್ರೈಸ್ತ, ಬೌದ್ಧ, ಜೈನ ಹೀಗೆ ಇನ್ನೂ ಹತ್ತು ಹಲವಾರು ಧರ್ಮಗಳ ಆಚರಣೆಗಳನ್ನು ಸಮಾನವಾಗಿ ನೋಡಿ ನಾವೆಲ್ಲರೂ ಅಣ್ಣ ತಮ್ಮಂದಿರು ಎಂದು ಎಲ್ಲಾ ದೇಶಗಳಿಗೂ ಸಾರಿ ಹೇಳುವ ರಾಷ್ಟ್ರ. ಇಲ್ಲಿನ ಮುಸಲ್ಮಾನರು ಸಹ ನಮ್ಮ ದೇಶದ ಬಗ್ಗೆ ಅಷ್ಟೇ ಗೌರವ ಮತ್ತು ಪ್ರೀತಿಯನ್ನು ಹೊಂದಿದ್ದಾರೆ. ಇತ್ತೀಚಿನ ಕೆಲವು ವಿದ್ಯಮಾನಗಳನ್ನು ನೋಡುವುದಾದರೆ, ಹಿಂದೂಗಳು ಮುಸಲ್ಮಾನರ ಮಸೀದಿಗಳಿಗೆ ಭೇಟಿ ಕೊಟ್ಟರೆ ಅವರೂ ಸಹ ಹಿಂದೂ ದೇವಾಲಯಗಳಿಗೆ ಭೇಟಿ ಕೊಟ್ಟು ಯಾವುದೇ ಅಸಮಾನತೆಗೆ ಎಲ್ಲಿಯೂ ಎಡೆಮಾಡಿಕೊಟ್ಟಿಲ್ಲ.

ಇತರ ಧರ್ಮಗಳ ಆಚರಣೆಗಳ ಬಗ್ಗೆ ಅಪಾರವಾದ ಗೌರವವನ್ನು ವ್ಯಕ್ತಪಡಿಸುವ ಮತ್ತು ತಮ್ಮ ಧರ್ಮದ ಆಚರಣೆಗೆ ಇತರರನ್ನು ಆಹ್ವಾನಿಸುವ ಒಳ್ಳೆಯ ಮನಸ್ಥಿತಿ ಹೊಂದಿದ್ದಾರೆ. ಮುಸಲ್ಮಾನರ ಪವಿತ್ರ ಹಬ್ಬವಾದ ರಂಜಾನ್ ಆಚರಣೆಯಲ್ಲಿ ಇಂತಹ ಹಲವಾರು ಉದಾಹರಣೆಗಳನ್ನು ಬಹಳಷ್ಟು ಕಡೆ ನೋಡಬಹುದು.

ಹಾಗಾದರೆ ಅಂತಹ ರಂಜಾನ್ ಹಬ್ಬದ ಆಚರಣೆಯ ಪದ್ದತಿಯನ್ನು ತಿಳಿದುಕೊಳ್ಳುವ ಆಸಕ್ತಿ ಮತ್ತು ಕುತೂಹಲ ನಿಮಗೂ ಇರಬೇಕಲ್ಲವೇ? ಈ ಲೇಖನದಲ್ಲಿ ಇಡೀ ತಿಂಗಳ ರಂಜಾನ್ ಹಬ್ಬದ ಆಚರಣೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ.

ರಂಜಾನ್ ಹಬ್ಬ. ಪ್ರತಿಯೊಬ್ಬ ಮುಸಲ್ಮಾನನಿಗೆ ವರ್ಷದಲ್ಲಿ ಒಂದು ಬಾರಿ ಬರುವ ಅತ್ಯಂತ ದೊಡ್ಡ ಹಬ್ಬ. ಕೇವಲ ನಮ್ಮ ಭಾರತದಲ್ಲಿ ಮಾತ್ರವಲ್ಲದೆ ಇಡೀ ವಿಶ್ವದಾದ್ಯಂತ ಇರುವ ಎಲ್ಲಾ ಮುಸ್ಲಿಮರು ಒಂದು ತಿಂಗಳ ಕಾಲ ಕಟ್ಟುನಿಟ್ಟಾಗಿ ಉಪವಾಸವಿದ್ದು, ಅತ್ಯಂತ ಭಯ ಭಕ್ತಿಯಿಂದ ಆಚರಣೆ ಮಾಡುವ ವಿಶಿಷ್ಟ ಹಬ್ಬ. ಮುಸಲ್ಮಾನರ ಕಟ್ಟುನಿಟ್ಟಾದ ಈ ಆಚರಣೆಯೇ ನೋಡುಗರ ಮನಸೂರೆಗೊಳ್ಳುವಂತೆ ಮಾಡುತ್ತದೆ. ಈ ಲೇಖನದಲ್ಲಿ ರಂಜಾನ್ ಹಬ್ಬದ ವಿಶೇಷತೆ ಮತ್ತು ಆಚರಣೆಗಳಿಗೆ ಸಂಬಂಧ ಪಟ್ಟಂತೆ ಒಂದು ಮೆಲುಕು ಹಾಕಲಾಗಿದೆ.

ರಂಜಾನ್ ಎಂದರೇನು?

ರಂಜಾನ್ ಎಂದರೇನು?

ಇಸ್ಲಾಮಿಕ್ ಕ್ಯಾಲೆಂಡರ್ ಪ್ರಕಾರ 9 ನೇ ತಿಂಗಳಿಗೆ ಬರುವ ರಂಜಾನ್ ಹಬ್ಬ ಮುಸ್ಲಿಮರಿಗೆ ವರ್ಷದ ಅತ್ಯಂತ ಪವಿತ್ರ ಮತ್ತು ಧಾರ್ಮಿಕ ಸಂದರ್ಭ. ಈ ಸಂದರ್ಭದಲ್ಲಿ ದೇವರು ಕುರಾನ್ ನ ಮೊದಲ ಆವೃತ್ತಿಗಳನ್ನು ಪ್ರವಾದಿ ಮಹಮ್ಮದ್ ರಿಗೆ ಬೋಧಿಸಿದರು ಎಂಬ ನಂಬಿಕೆಯಿದೆ. ಆದ್ದರಿಂದ ಈ ಸಂದರ್ಭದಲ್ಲಿ ಆರೋಗ್ಯವಂತ ಮುಸ್ಲಿಮರು ಉಪವಾಸವಿದ್ದು ಹಬ್ಬದ ಆಚರಣೆ ನಡೆಸುತ್ತಾರೆ.

ರಂಜಾನ್ ಆಚರಣೆ ಯಾವಾಗ ಪ್ರಾರಂಭವಾಗುತ್ತದೆ?

ರಂಜಾನ್ ಆಚರಣೆ ಯಾವಾಗ ಪ್ರಾರಂಭವಾಗುತ್ತದೆ?

ಮುಸ್ಲಿಮರು ಹೆಚ್ಚಾಗಿ ಚಾಂದ್ರ ಮಾಸಗಳನ್ನು ಅನುಸರಿಸುತ್ತಾರೆ. ಅವರ ಪ್ರಕಾರ ಈ ಸಂಧರ್ಭದಲ್ಲಿ ಮೊದಲ ಅರ್ಧ ಚಂದ್ರಾಕಾರ ಗೋಚರಿಸಿದ ಕ್ಷಣದಲ್ಲಿ ರಂಜಾನ್ ತಿಂಗಳು ಆರಂಭವಾಗುತ್ತದೆ. ಪ್ರಪಂಚದ ಮುಸಲ್ಮಾನ ರಾಷ್ಟ್ರಗಳು ಈ ವಿಚಾರವಾಗಿ ತಮ್ಮದೇ ಆದ ಸಮಿತಿಗಳನ್ನು ಹೊಂದಿದ್ದು ಸರಿಯಾಗಿ ಪರಿಶೀಲಿಸಿ ಪ್ರಾರಂಭದ ದಿನಾಂಕವನ್ನು ಅಧಿಕೃತವಾಗಿ ಪ್ರಕಟಣೆ ಹೊರಡಿಸುತ್ತಾರೆ. ಮುಸ್ಲಿಮೇತರ ರಾಷ್ಟ್ರಗಳು ಮುಸಲ್ಮಾನ ರಾಷ್ಟ್ರಗಳ ಸೂಚನೆಯನ್ನು ಅನುಸರಿಸುತ್ತಾರೆ ಇಲ್ಲವೆಂದರೆ ರಾಷ್ಟ್ರೀಯ ಮಸೀದಿ ಅಥವಾ ಪ್ರತಿಷ್ಠಿತ ಇಸ್ಲಾಮಿಕ್ ಅಧಿಕಾರದವರು ನೀಡುವ ನಿರ್ದೇಶನವನ್ನು ಅನುಸರಣೆ ಮಾಡುತ್ತಾರೆ.

ಮುಸ್ಲಿಮರ ಉಪವಾಸದ ಹಿಂದಿನ ಕಥೆ : -

ಮುಸ್ಲಿಮರ ಉಪವಾಸದ ಹಿಂದಿನ ಕಥೆ : -

ಮುಸ್ಲಿಮರಲ್ಲಿ ಒಂದು ನಂಬಿಕೆ ಇದೆ. ಏನಂದರೆ ಉಪವಾಸ ಮಾಡುವ ಮುಖಾಂತರ ನಮ್ಮ ಸಂಬಂಧ ದೇವರ ಜೊತೆ ಗಟ್ಟಿಗೊಳ್ಳುತ್ತದೆ ಎಂದು. ರಂಜಾನ್ ಸಮಯದಲ್ಲಿ ಉಪವಾಸವು ಅತಿ ಮುಖ್ಯವಾಗಿದೆ. ಇದು ಮುಸ್ಲಿಮರು ತಮ್ಮ ನಂಬಿಕೆಗೆ ತಮ್ಮನ್ನು ತೊಡಗಿಸಿಕೊಳ್ಳಲು ಮತ್ತು ಅಲ್ಲಾಹ್ ಅಥವಾ ದೇವರ ಹತ್ತಿರ ಬರಲು ಅನುವು ಮಾಡಿಕೊಡುತ್ತದೆ. ಉಪವಾಸದ ಸಮಯದಲ್ಲಿ ಎಲ್ಲಾ ಮುಸ್ಲಿಮರು ಅಲ್ಲಾಹ್ ಸ್ಮರಿಸುತ್ತಾರೆ

ಈ ಸಮಯದಲ್ಲಿ ದೇವರ ಪ್ರಾರ್ಥನೆ, ಕುರಾನ್ ಓದುವುದು ಮತ್ತು ದಾನ ಧರ್ಮ ಮಾಡುವುದು ಪ್ರಮುಖ ಕಾರ್ಯಗಳಾಗಿರುತ್ತವೆ. ಇಡೀ ದಿನ ಉಪವಾಸ ಇರುವುದರಿಂದ ಮುಸಲ್ಮಾನರ ಮಾನಸಿಕ ಸ್ಥೈರ್ಯ ಬಲಗೊಂಡು ಅವರ ನಂಬಿಕೆಯ ಮೇಲೆ ಕಾರ್ಯೋನ್ಮುಖವಾಗುವಂತಹ ಶಕ್ತಿಯನ್ನು ದೇವರು ನಮಗೆ ದಯಪಾಲಿಸುತ್ತಾನೆ ಎಂಬ ನಂಬಿಕೆಯಿದೆ. ಈ ಸಮಯದಲ್ಲಿ ಬಡವರ ಬಗ್ಗೆ ಕಾಳಜಿ ವಹಿಸಿ ಶ್ರೀಮಂತರು ಅವರಿಗೆ ಅಗತ್ಯವಿರುವ ವಸ್ತ್ರಗಳು, ಆಹಾರ ಸಾಮಗ್ರಿಗಳನ್ನು ದಾನ ಮಾಡುತ್ತಾರೆ.

ಪ್ರತಿಯೊಬ್ಬರೂ ಉಪವಾಸವಿರುವ ಅವಶ್ಯಕತೆ ಇದೆಯೇ ?

ಪ್ರತಿಯೊಬ್ಬರೂ ಉಪವಾಸವಿರುವ ಅವಶ್ಯಕತೆ ಇದೆಯೇ ?

ಇದು ಮುಸಲ್ಮಾನರಿಗೆಂದೇ ಮೀಸಲಾದ ಅತ್ಯಂತ ಪವಿತ್ರ ಆಚರಣೆ. ಪ್ರತಿ ಮುಸಲ್ಮಾನರು ಈ ಸಂದರ್ಭದಲ್ಲಿ ತಮ್ಮ ಇತರ ಕಾರ್ಯ ಚಟುವಟಿಕೆಗಳನ್ನು ಬದಿಗೂತ್ತಿ ಈ ಒಂದು ತಿಂಗಳ ಕಾಲ ಹಬ್ಬದ ಆಚರಣೆಯ ಮತ್ತು ಅದಕ್ಕೆ ಸಂಬಂಧಪಟ್ಟ ಕಾರ್ಯಕ್ರಮಗಳಿಗೆ ಮಾತ್ರ ಮನಸ್ಸು ಮಾಡುತ್ತಾರೆ. ಜೊತೆಗೆ ಮುಸ್ಲಿಮರು ತಮ್ಮ ನಂಬಿಕೆಯಲ್ಲಿ 5 ತತ್ವಗಳನ್ನು ಹೊಂದಿದ್ದಾರೆ. ಇದರಲ್ಲಿ ಉಪವಾಸವಿರುವುದು ಸಹ ಒಂದು. ಇತರ 4 ತತ್ವಗಳನ್ನು ಗಮನಿಸುವುದಾದರೆ.......

 • ಪ್ರತಿ ದಿನ ಐದು ಬಾರಿ ಪ್ರಾರ್ಥನೆ ಮಾಡುವುದು.
 • ದಾನ - ಧರ್ಮ ಮಾಡುವುದು.
 • ಪರಸ್ಪರ ನಂಬಿಕೆಯನ್ನು ಬೆಳೆಸಿಕೊಳ್ಳುವುದು.
 • ತಮ್ಮ ಜೀವನದಲ್ಲಿ ಒಂದು ಬಾರಿಯಾದರೂ ಮೆಕ್ಕಾ ಗೆ ಹಜ್ಜ್ ಯಾತ್ರೆ ಕೈಗೊಳ್ಳುವುದು.
ಉಪವಾಸ ವ್ರತದಿಂದ ಯಾರಿಗೆಲ್ಲಾ ವಿನಾಯಿತಿ ಇದೆ?

ಉಪವಾಸ ವ್ರತದಿಂದ ಯಾರಿಗೆಲ್ಲಾ ವಿನಾಯಿತಿ ಇದೆ?

ವರ್ಷದಲ್ಲಿ ಒಂದು ಬಾರಿ ಬರುವ ರಂಜಾನ್ ಹಬ್ಬವನ್ನು ಎಲ್ಲಾ ಮುಸಲ್ಮಾನ ಬಾಂಧವರು ಅತ್ಯಂತ ಸಂತೋಷ ಸಡಗರದಿಂದ ಉಪವಾಸವಿದ್ದು ಆಚರಣೆಗೆ ಮುಂದಾಗುತ್ತಾರೆ. ರಂಜಾನ್ ತಿಂಗಳಿನಲ್ಲಿ ಎಲ್ಲಾ ಮುಸ್ಲಿಂ ಬಾಂಧವರು ಪ್ರತಿ ದಿನ ಸೂರ್ಯ ಉದಯಿಸಿದ ನಂತರ ಮತ್ತು ಸೂರ್ಯ ಮುಳುಗುವವರೆಗೂ ಉಪವಾಸ ವ್ರತ ಕೈಗೊಳ್ಳುವುದು ವಾಡಿಕೆ. ಆದರೆ ಕೆಲವರಿಗೆ ಉಪವಾಸ ಮಾಡಲು ಸಾಧ್ಯ ಆಗುವುದಿಲ್ಲ.

 • ಮಕ್ಕಳಿಗೆ ಮತ್ತು ವಯಸ್ಸಾದವರಿಗೆ ಈ ಪದ್ಧತಿಯಲ್ಲಿ ವಿನಾಯಿತಿ ಉಂಟು.
 • ಇನ್ನು ಗರ್ಭಿಣಿ ಸ್ತ್ರೀಯರು,
 • ಮುಟ್ಟಿನ ಸಮಸ್ಯೆಯಿಂದ ಬಳಲುತ್ತಿರುವ ಮಹಿಳೆಯರು,
 • ಆರೋಗ್ಯ ಅಸ್ವಸ್ಥತೆಯಿಂದ ಕೂಡಿರುವ ಜನರು,
 • ಪ್ರವಾಸ ಕೈಗೊಳ್ಳುವ ಮಂದಿ ಈ ಪದ್ಧತಿಯಿಂದ ಸ್ವಲ್ಪ ದೂರ ಉಳಿಯಬಹುದು.
ಉಪವಾಸ ವ್ರತಕ್ಕೆ ಅಪಮಾನ ಮಾಡುವ ವಿಚಾರಗಳು : -

ಉಪವಾಸ ವ್ರತಕ್ಕೆ ಅಪಮಾನ ಮಾಡುವ ವಿಚಾರಗಳು : -

ಮುಸಲ್ಮಾನರ ಉಪವಾಸ ವ್ರತ ಇತರರಿಗೆ ಮಾದರಿ ಎಂದು ಹೇಳಲಾಗುತ್ತದೆ. ಅಷ್ಟೊಂದು ಕಟ್ಟುನಿಟ್ಟಿನ ಆಚರಣೆ ಅವರದು. ಪವಿತ್ರ ರಂಜಾನ್ ತಿಂಗಳಿನಲ್ಲಿ ಸಾಮಾನ್ಯವಾಗಿ ಪ್ರತಿಯೊಬ್ಬ ಮುಸಲ್ಮಾನ ಭಾಂಧವರು ಇಡೀ ತಿಂಗಳು ಈ ಆಚರಣೆಗೆ ಮುಂದಾಗುತ್ತಾರೆ. ಆದರೆ ಕೆಲವೊಂದು ಅನಪೇಕ್ಷಿತ ಸಂದರ್ಭಗಳು ಈ ಪವಿತ್ರ ಕಾರ್ಯಕ್ಕೆ ದಕ್ಕೆ ಉಂಟುಮಾಡುತ್ತವೆ ಎಂದು ಹೇಳಲಾಗುತ್ತದೆ. ಅವುಗಳನ್ನು ಗಮನಿಸುವುದಾದರೆ,

 • ಬೇಕೆಂದೇ ತಿನ್ನುವುದು ಮತ್ತು ಕುಡಿಯುವುದು.
 • ಧೂಮಪಾನ ಮತ್ತು ಮದ್ಯಪಾನ ಮಾಡುವುದು.
 • ಲೈಂಗಿಕ ಚಟುವಟಿಕೆ ನಡೆಸುವುದು .

ಉಪವಾಸ ವ್ರತಕ್ಕೆ ದಕ್ಕೆ ಉಂಟಾಗುತ್ತದೆ.

ಮುಸ್ಲಿಮರ ಕಟ್ಟುನಿಟ್ಟಿನ ಉಪವಾಸವನ್ನು " ನೀವು ನೀರು ಸಹ ಕುಡಿಯದಂತೆ ಇಷ್ಟೊಂದು ಕಟ್ಟುನಿಟ್ಟಾಗಿ ಉಪವಾಸ ವ್ರತ ಪಾಲನೆ ಮಾಡುತ್ತೀರಿ. ಒಂದು ವೇಳೆ ಯಾರೂ ನೋಡದೇ ಇರುವಾಗ ಅಪ್ಪಿತಪ್ಪಿ ಆಹಾರ ಸೇವನೆ ಮಾಡಿದರೆ ಅಥವಾ ನೀರು ಕುಡಿದರೆ ಏನಾಗುತ್ತದೆ? " ಎಂದು ಪ್ರಶ್ನೆ ಮಾಡಿದರೆ ಅವರ ಉತ್ತರ ಹೀಗಿರುತ್ತದೆ.

ಏನೆಂದರೆ ಉಪವಾಸ ವ್ರತ ಮಾಡುವ ಸಮಯದಲ್ಲಿ ಏನಾದರೂ ತಿಂದರೆ ಅಥವಾ ಕುಡಿದರೆ ಅದು ಬೇಕೆಂದೇ ಉಪವಾಸ ವ್ರತವನ್ನು ಹಾಳು ಮಾಡಿದ ಹಾಗಾಗುತ್ತದೆ. ಇದು ನಮ್ಮ ರಂಜಾನ್ ಹಬ್ಬದ ಧಾರ್ಮಿಕ ಪದ್ಧತಿಗೆ ವಿರುದ್ಧ. ಉಪವಾಸ ಮಾಡುವ ಮುಖ್ಯ ಉದ್ದೇಶವೇ ನಮಗೆ ಸ್ವಯಂ ಸಂಯಮ ಅಭ್ಯಾಸ ಮಾಡಿಸಿ ನಮ್ಮ ಮನಸ್ಸನ್ನು ಧಾರ್ಮಿಕ ಕಾರ್ಯಗಳ ಕಡೆಗೆ ಹಾಯಿಸುವುದು. ಒಂದು ವೇಳೆ ಯಾವುದಾದರೂ ನೈಜ ಸಂದರ್ಭಕ್ಕೆ ಸಿಲುಕಿ ಅಪ್ಪಿತಪ್ಪಿ ಆಹಾರ ಸೇವನೆ ಮಾಡಿದರೆ ಅಥವಾ ನೀರು ಕುಡಿದರೆ ಅದು ತಪ್ಪೇನಲ್ಲ. ಸಂಜೆ ಪ್ರಾರ್ಥನೆ ಮಾಡಿ ನಂತರ ಮರುದಿನದಿಂದ ಉಪವಾಸ ವ್ರತವನ್ನು ಮಾಮೂಲಿನಂತೆ ಮುಂದುವರೆಸಬಹುದು ಎಂದು ಹೇಳುತ್ತಾರೆ.

ಪ್ರತಿ ವರ್ಷ ರಂಜಾನ್ ಹಬ್ಬ ಬೇರೆ ಬೇರೆ ದಿನಗಳಲ್ಲಿ ಏಕೆ ಬರುತ್ತದೆ?

ಪ್ರತಿ ವರ್ಷ ರಂಜಾನ್ ಹಬ್ಬ ಬೇರೆ ಬೇರೆ ದಿನಗಳಲ್ಲಿ ಏಕೆ ಬರುತ್ತದೆ?

ನಮ್ಮ ಈಗಿನ ಆಧುನಿಕ ಗ್ರೆಗೋರಿಯನ್ ಕ್ಯಾಲೆಂಡರ್ ( ಸೂರ್ಯನ ಸುತ್ತ ಭೂಮಿ ಸುತ್ತುವುದನ್ನು ಆಧರಿಸಿ ತಯಾರು ಮಾಡಿದ ಕ್ಯಾಲೆಂಡರ್ ) ಗೆ ಹೋಲಿಸಿದರೆ ಮುಸ್ಲಿಮರ ಲೂನಾರ್ ಕ್ಯಾಲೆಂಡರ್ 10 ರಿಂದ 11 ದಿನಗಳ ಕಡಿಮೆ ಅವಧಿಯನ್ನು ಹೊಂದಿರುತ್ತದೆ. ಇದೇ ಕಾರಣದಿಂದ ಪ್ರತಿವರ್ಷ ರಂಜಾನ್ ಹಬ್ಬ ಬೇರೆ ಬೇರೆ ದಿನಗಳಲ್ಲಿ ಬರುತ್ತದೆ. ಈ ವರ್ಷ ಮೇ ಮೊದಲ ಆರಂಭದಲ್ಲಿ ಪ್ರಾರಂಭವಾಗುತ್ತದೆ. ಹತ್ತು ವರ್ಷಗಳ ಅವಧಿಯಲ್ಲಿ ಒಮ್ಮೆ ರಂಜಾನ್ ಆಚರಣೆ ಜನವರಿ ಮಧ್ಯಭಾಗದಲ್ಲಿ ಬರುತ್ತದೆ.

ಈ ವರ್ಷ ಮುಸಲ್ಮಾನ ಬಾಂಧವರು ಎಷ್ಟು ಕಾಲ ಉಪವಾಸವಿರಬೇಕು?

ಈ ವರ್ಷ ಮುಸಲ್ಮಾನ ಬಾಂಧವರು ಎಷ್ಟು ಕಾಲ ಉಪವಾಸವಿರಬೇಕು?

ಪ್ರತಿ ದಿನದ ಉಪವಾಸ ಸಮಯ ಸ್ಥಳದಿಂದ ಸ್ಥಳಕ್ಕೆ ಗಂಟೆಗಳ ಆಧಾರದಲ್ಲಿ ಬದಲಾಗುತ್ತಿರುತ್ತದೆ. ಇದು ವರ್ಷದ ಸಮಯದೊಂದಿಗೆ ಸಹ ಬದಲಾವಣೆ ಆಗುತ್ತದೆ.

ಒಂದು ಉದಾಹರಣೆಯನ್ನು ನೋಡುವುದಾದರೆ, ಉತ್ತರ ನಾರ್ವೆ ದೇಶದಲ್ಲಿ ರಂಜಾನ್ ಹಬ್ಬ ಡಿಸೆಂಬರ್ ತಿಂಗಳಿನಲ್ಲಿ ಬಂದರೆ ಅಲ್ಲಿನ ಮುಸ್ಲಿಂ ಬಾಂಧವರಿಗೆ ಈ ಸಮಯದಲ್ಲಿ ಉತ್ತರ ಧ್ರುವದ ಬಳಿ ಹಗಲಿನ ಸೀಮಿತ ಪ್ರಮಾಣದಿಂದಾಗಿ ಪ್ರತಿ ದಿನದ ಉಪವಾಸವು ಬಹಳ ಕಡಿಮೆ ಇರುತ್ತದೆ.

ಆದರೆ ಅದೇ ಸ್ಥಳದಲ್ಲಿ ಬೇಸಿಗೆಯ ದಿನಗಳಲ್ಲಿ ಉಪವಾಸದ ಸಮಯ ಹೆಚ್ಚಾಗುತ್ತದೆ. ಏಕೆಂದರೆ ಆ ಪ್ರದೇಶ ನಿರಂತರವಾದ ಹಗಲನ್ನು ನೋಡುತ್ತದೆ. ಇಂತಹ ಸಂದರ್ಭಗಳಲ್ಲಿ ಅಲ್ಲಿನ ಸರ್ಕಾರ ತನ್ನ ಮುಸ್ಲಿಂ ಜನತೆಗೆ ಹತ್ತಿರದ ಯಾವುದಾದರೂ ಮುಸಲ್ಮಾನ ದೇಶ ಅಥವಾ ಮುಸಲ್ಮಾನರ ಪವಿತ್ರ ಧಾರ್ಮಿಕ ಸ್ಥಳವಾದ ಸೌದಿ ಅರೇಬಿಯಾ ದೇಶದ ಮೆಕ್ಕಾ ಅನುಸರಿಸುವ ಉಪವಾಸದ ಸಮಯವನ್ನು ಅನುಸರಿಸುವಂತೆ ಸೂಚನೆ ನೀಡುತ್ತದೆ. ಈ ಸಂದರ್ಭಗಳನ್ನು ಗಂಟೆಗಳಲ್ಲಿ ಲೆಕ್ಕ ಹಾಕುವುದಾದರೆ, ಅಲ್ಲಿನ ಜನರಿಗೆ ಚಳಿಗಾಲದ ಸಮಯದಲ್ಲಿ ಕೇವಲ 11 ಗಂಟೆಗಳು ಮತ್ತು ಬೇಸಿಗೆ ಸಮಯದಲ್ಲಿ 20 ಗಂಟೆಗಳ ತನಕ ಉಪವಾಸದ ಸಮಯ ಎದುರಾಗುತ್ತದೆ.

ಇನ್ನು ಬೇರೆ ಬೇರೆ ದೇಶಗಳಲ್ಲಿ ಮುಸಲ್ಮಾನರು ಕಟ್ಟುನಿಟ್ಟಾಗಿ ಮಾಡುವ ಉಪವಾಸ ಸಮಯಗಳು ನಿಮಗೆ ಅಚ್ಚರಿ ಮೂಡಿಸುತ್ತವೆ.

ರಷ್ಯಾ ದೇಶ : 20 ಗಂಟೆಗಳಿಗೂ ಅಧಿಕ.

ಕೋಪನ್ಹ್ಯಾಗನ್ : ಕನಿಷ್ಠ 18 ಗಂಟೆಗಳು.

ಲಂಡನ್ : 17.5 ಗಂಟೆಗಳು.

ರೋಮ್ : 15.5 ಗಂಟೆಗಳು.

ಓಮನ್ ಮತ್ತು ರಿಯಾದ್ : 14 ಗಂಟೆಗಳು.

ಕೇಪ್ ಟೌನ್ : 12 ಘಂಟೆಗಳು

ಅರ್ಜೆಂಟೈನ ದೇಶದ ಉಶುಐಎ : 11 ಗಂಟೆಗಳು

ರಂಜಾನ್ ಹಬ್ಬದ ಆಚರಣೆಗೆ ಮುಸಲ್ಮಾನರ ತಯಾರಿ ಹೇಗೆ?

ರಂಜಾನ್ ಹಬ್ಬದ ಆಚರಣೆಗೆ ಮುಸಲ್ಮಾನರ ತಯಾರಿ ಹೇಗೆ?

ಇದು ಆಯಾ ಕುಟುಂಬಗಳ ಮೇಲೆ ಅವಲಂಬಿತವಾಗಿರುತ್ತದೆ. ಪ್ರತಿಯೊಂದು ಕುಟುಂಬವೂ ಹಬ್ಬದ ಆಚರಣೆಗೆ ತನ್ನದೇ ಆದ ರೀತಿಯಲ್ಲಿ ತಯಾರಿ ನಡೆಸುತ್ತದೆ. ಇದು ಮುಸಲ್ಮಾನರ ದೊಡ್ಡ ಆಚರಣೆ ಆಗಿರುವುದರಿಂದ ಬಂಧು - ಬಾಂಧವರು ಗೆಳೆಯರು ಒಟ್ಟುಗೂಡಿ ಸಂತೋಷ ಸಂಭ್ರಮದಿಂದ ಹಬ್ಬದ ಆಚರಣೆ ಮಾಡುತ್ತಾರೆ. ದೂರದ ಊರುಗಳಿಂದ ನೆಂಟರು ಇಷ್ಟರು ಮನೆಗೆ ಬರುತ್ತಾರೆ. ಬಹಳ ದಿನಗಳಿಂದ ಭೇಟಿ ಆಗದೆ ಉಳಿದಿದ್ದ ಎಲ್ಲರನ್ನೂ ಇದೊಂದು ಪವಿತ್ರ ಸಂದರ್ಭ ಒಂದಾಗಿ ತಮ್ಮ ಖುಷಿಯನ್ನು ಹಂಚಿಕೊಳ್ಳುವಂತೆ ಮಾಡುತ್ತದೆ. ಹಲವಾರು ಶ್ರೀಮಂತ ಮನೆತನದವರು ತಮ್ಮ ತಮ್ಮ ಮನೆಗಳಲ್ಲಿ ಇಫ್ತಾರ್ ಕೂಟವನ್ನು ಏರ್ಪಡಿಸಿ ಹತ್ತಿರದವರನ್ನು ಮತ್ತು ಗೆಳೆಯರನ್ನು ಆಹ್ವಾನಿಸುತ್ತಾರೆ. ಇನ್ನು ಮಸೀದಿಗಳು ಸಹ ಇಫ್ತಾರ್ ಕೂಟವನ್ನು ಆಯೋಜಿಸಿ ಯಾರು ಬೇಕಾದರೂ ಬಂದು ಪ್ರಾರ್ಥನೆ ಮಾಡಿ ಆಹಾರ ಸೇವಿಸಬಹುದು ಎಂಬ ಸೂಚನೆ ಕೊಟ್ಟಿರುತ್ತಾರೆ. ಎಂತಹ ಕೆಟ್ಟ ಚಟಗಳನ್ನು ಹೊಂದಿರುವ ಒಬ್ಬ ಮುಸಲ್ಮಾನ ವ್ಯಕ್ತಿ ಈ ಪವಿತ್ರ ಸಮಯದಲ್ಲಿ ತನ್ನೆಲ್ಲಾ ಹವ್ಯಾಸಗಳನ್ನು ಬದಿಗಿಟ್ಟು ಒಂದು ತಿಂಗಳ ಕಾಲ ಇತರರ ಜೊತೆ ಬೆರೆತು ಉಪವಾಸ ಮಾಡಿ ಅತ್ಯಂತ ಶ್ರದ್ಧೆ, ಭಕ್ತಿಯಿಂದ ತನ್ನ ಕುಟುಂಬದ ಜೊತೆ ಸೇರಿ ಧಾರ್ಮಿಕ ಹಬ್ಬದ ಆಚರಣೆಗೆ ಮುಂದಾಗುತ್ತಾನೆ.

ರಂಜಾನ್ ಹಬ್ಬದ ಇಡೀ ತಿಂಗಳ ಆಚರಣೆ ಹೇಗಿರುತ್ತದೆ?

ರಂಜಾನ್ ಹಬ್ಬದ ಇಡೀ ತಿಂಗಳ ಆಚರಣೆ ಹೇಗಿರುತ್ತದೆ?

ಪವಿತ್ರ ರಂಜಾನ್ ಹಬ್ಬದ ದಿನಗಳನ್ನು ರಂಜಾನ್ ತಿಂಗಳು ಎಂದೇ ಕರೆಯುತ್ತಾರೆ. ಈ ಸಂದರ್ಭದಲ್ಲಿ ಪ್ರತಿದಿನ ಮುಸ್ಲಿಮರು ಬೆಳಗ್ಗೆ ಸೂರ್ಯ ಹುಟ್ಟುವ ಮುಂಚೆ ಎದ್ದು ಪ್ರಾರ್ಥನೆ ಮಾಡಿ ಆಹಾರ ಸೇವನೆ ಮಾಡುತ್ತಾರೆ. ಇದಕ್ಕೆ ಅವರ ಭಾಷೆಯಲ್ಲಿ ' ಸುಹೂರ್ ' ಎಂದು ಕರೆಯುತ್ತಾರೆ. ಇನ್ನು ಇಡೀ ದಿನ ಉಪವಾಸವಿದ್ದು ಆಹಾರ ಮತ್ತು ನೀರಿನ ಸೇವನೆ ಮಾಡದೆ ಸೂರ್ಯ ಮುಳುಗಿದ ಮೇಲೆ ಇಫ್ತಾರ್ ಕೂಟದ ಮೂಲಕ ತಮ್ಮ ಉಪವಾಸವನ್ನು ಅಂತ್ಯಗೊಳಿಸುತ್ತಾರೆ. ನಂತರ ರಾತ್ರಿಯ ಸಮಯದಲ್ಲಿ ನಡೆಯುವ ಪ್ರಾರ್ಥನೆಗಳನ್ನು ( ತರವಿಹ್ ) ನೆರವೇರಿಸಿ ಮಲಗುತ್ತಾರೆ. ಸಾಮಾನ್ಯವಾಗಿ ಈ ಪ್ರಾರ್ಥನೆಗಳು ಮಸೀದಿಗಳಲ್ಲಿ ಎಲ್ಲಾ ಮುಸಲ್ಮಾನರನ್ನು ಒಗ್ಗೂಡಿಸಿ ನಡೆಯುವ ಪ್ರಾರ್ಥನೆ ಆಗಿರುತ್ತದೆ. ಆದರೆ ಮಸೀದಿಗೆ ಹೋಗಲು ಆಗದೆ ಇರುವವರು ತಮ್ಮ ತಮ್ಮ ಮನೆಗಳಲ್ಲಿ ಪ್ರಾರ್ಥಿಸಬಹುದು.

ರಂಜಾನ್ ಹಬ್ಬದ ಮುಖ್ಯ ಸಂಪ್ರದಾಯಗಳನ್ನು ಮೆಲುಕು ಹಾಕುವುದಾದರೆ,

ರಂಜಾನ್ ಹಬ್ಬದ ಮುಖ್ಯ ಸಂಪ್ರದಾಯಗಳನ್ನು ಮೆಲುಕು ಹಾಕುವುದಾದರೆ,

ಪ್ರೋಫೆಟ್ ಮೂಹಮ್ಮದ್ ಅವರು ಅನುಸರಿಸುತ್ತಿದ್ದ ಸಂಪ್ರದಾಯವನ್ನು ಎಲ್ಲಾ ಮುಸಲ್ಮಾನ ಬಾಂಧವರು ಅನುಸರಿಸುತ್ತಾರೆ. ಏನಂದರೆ ಪ್ರತಿ ದಿನದ ಉಪವಾಸವನ್ನು ಖರ್ಜೂರಗಳನ್ನು ಸೇವಿಸುವ ಮೂಲಕ ಅಂತ್ಯಗೊಳಿಸುವುದು. ಇದಾದ ನಂತರ ಮಾಗ್ರಿಬ್ ಪ್ರಾರ್ಥನೆ ಮಾಡಿ ಆಹಾರ ಸೇವನೆ ಮಾಡಲು ಕುಳಿತುಕೊಳ್ಳುತ್ತಾರೆ.

ಮಧ್ಯಪ್ರಾಚ್ಯ ದೇಶದ ಹಲವಾರು ಪ್ರದೇಶಗಳಲ್ಲಿ, ಪ್ರತಿಯೊಬ್ಬರೂ ತಮ್ಮ ಮನೆಗಳನ್ನು ಸಾಂಪ್ರದಾಯಿಕ ದೀಪಗಳು ಮತ್ತು ಬ್ಯಾನರ್ ಗಳೊಂದಿಗೆ ರಂಜಾನ್ ಹಬ್ಬವನ್ನು ಬರಮಾಡಿಕೊಳ್ಳುವ ಬಗೆಯಲ್ಲಿ ಅಲಂಕಾರ ಮಾಡಿರುತ್ತಾರೆ. ಈಜಿಪ್ಟ್ ಮತ್ತು ಟರ್ಕಿ ದೇಶಗಳಲ್ಲಿ ಮುಸಹರತಿಯೊಬ್ಬ ಬೀದಿಗಳಲ್ಲಿ ಸಂಚರಿಸಿ ಡೋಲು ಬಾರಿಸುವ ಮೂಲಕ ಎಲ್ಲರನ್ನು ಬೆಳಗಿನ ಆಹಾರ ಸೇವನೆಗೆ ಎಚ್ಚರಗೊಳಿಸುತ್ತಾನೆ.

ಇನ್ನು ಹಲವಾರು ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ರಂಜಾನ್ ಹಬ್ಬದ ತಿಂಗಳಿನಲ್ಲಿ ದೂರದರ್ಶನದಲ್ಲಿ ಪ್ರಸಿದ್ಧ ಸೆಲೆಬ್ರಿಟಿಗಳ ಜೊತೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಹಲವು ಧಾರ್ಮಿಕ ನಾಟಕಗಳ ಕಥಾಹಂದರಗಳನ್ನು ಇಡೀ ದಿನ ಪ್ರದರ್ಶನ ಮಾಡುತ್ತಾರೆ. ಮುಸಲ್ಮಾನ ಬಾಂಧವರು ಕುರಾನ್ ಓದುವ ಬದಲು ಇಂತಹ ಧಾರ್ಮಿಕ ಕಾರ್ಯಕ್ರಮಗಳ ಬಗ್ಗೆ ಹೆಚ್ಚು ಒಲವು ತೋರಿ ನಂತರ ಇಫ್ತಾರ್ ಕೂಟ ಆಯೋಜನೆ ಮಾಡುತ್ತಾರೆ.

ರಂಜಾನ್ ತಿಂಗಳಿನಲ್ಲಿ ಮುಸ್ಲಿಮರ ಇತರೆ ಕಾರ್ಯಕ್ರಮಗಳು : -

ರಂಜಾನ್ ತಿಂಗಳಿನಲ್ಲಿ ಮುಸ್ಲಿಮರ ಇತರೆ ಕಾರ್ಯಕ್ರಮಗಳು : -

ಇಡೀ ರಂಜಾನ್ ತಿಂಗಳು ಮುಸ್ಲಿಮರಿಗೆ ಬಹಳ ಪವಿತ್ರವಾದ ಆಚರಣೆಯ ಮಾಸವಾಗಿರುತ್ತದೆ. ಬಹುತೇಕ ಮುಸಲ್ಮಾನರು ಈ ಸಂದರ್ಭದಲ್ಲಿ ದಾನಗಳನ್ನು ಮಾಡುವ ಮುಖಾಂತರ ತಮ್ಮ ಮನಸ್ಸಿನಲ್ಲಿ ತೃಪ್ತಿಯನ್ನು ಕಾಣುತ್ತಾರೆ. ಅವರ ಪದ್ಧತಿಯಲ್ಲಿ ಇದನ್ನು ಝಕಾತ್ - ಅಲ್ - ಫಿತರ್ ಎಂದು ಕರೆಯುತ್ತಾರೆ. ಸಾಮಾನ್ಯವಾಗಿ ದಾನಗಳನ್ನು ಈದ್ ಪ್ರಾರ್ಥನೆಗೆ ಮುಂಚೆ ಮಾಡುತ್ತಾರೆ. ದಾನ ಮಾಡುವುದರಿಂದ ತಮ್ಮ ಪಾಪ ಕರ್ಮಗಳು ಕಳೆಯುತ್ತವೆ ಮತ್ತು ಬಡವರಿಗೆ ಆಹಾರವನ್ನು ಒದಗಿಸುವ ಉದ್ದೇಶ ಸಹ ಕೈಗೂಡುತ್ತದೆ ಎಂಬ ನಂಬಿಕೆ.

ಝಕಾತ್ - ಅಲ್ - ಫಿತರ್ ಸಾಧಾರಣವಾಗಿ ಒಂದು ಹೊತ್ತಿನ ಆಹಾರದ ಮೊತ್ತವಾಗಿರುತ್ತದೆ. ಅದು £7 ಗೆ ಸಮನಾಗಿರುತ್ತದೆ. ವಯಸ್ಸು ಅಥವಾ ಲಿಂಗದ ತಾರತಮ್ಯವಿಲ್ಲದೆ ಎಲ್ಲಿಯವರೆಗೆ ಒಬ್ಬರಿಗೆ ಆಹಾರ ಒದಗಿಸಲು ಅವರಿಗೆ ಸಾಧ್ಯವಾಗುವುdo ಅಲ್ಲಿಯವರೆಗೆ ಎಲ್ಲಾ ಮುಸ್ಲಿಮರು ಈ ಮೊತ್ತವನ್ನು ಪಾವತಿ ಮಾಡಬೇಕು. ಮಕ್ಕಳ ಹಾಗೂ ಕುಟುಂಬ ಸದಸ್ಯರ ಪರವಾಗಿ ಕುಟುಂಬದ ಮುಖ್ಯಸ್ಥರು ಈ ಮೊತ್ತವನ್ನು ಪಾವತಿಸಬೇಕು.

ಈ ಪಾವತಿ ಝಕಾತ್ ಗೆ ಭಿನ್ನವಾಗಿದೆ, ಇದನ್ನು ವರ್ಷದ ಯಾವುದೇ ಸಮಯದಲ್ಲಿ ನೀಡಬಹುದು ಮತ್ತು ಇದು ಇಸ್ಲಾಮಿನ 5 ಸ್ತಂಭಗಳಲ್ಲಿ ಒಂದಾಗಿದೆ. ಇದು ಪೂರ್ಣ ವರ್ಷದ ಉಳಿತಾಯದ ಶೇಕಡಾ 2.5 ಕ್ಕೆ ಸಮನಾಗಿರುತ್ತದೆ.

ರಂಜಾನ್‌ನ ಕೊನೆಯ 10 ದಿನಗಳು ವಿಶೇಷವಾಗಿ ಪೂಜಿಸಲ್ಪಡುತ್ತವೆ. ಹೆಚ್ಚು ಧಾರ್ಮಿಕ ಶ್ರದ್ಧೆ, ಭಕ್ತಿ ಮತ್ತು ಆರಾಧನೆಯ ಮೇಲೆ ಇವುಗಳು ಕೇಂದ್ರೀಕರಿಸುತ್ತವೆ. ಏಕೆಂದರೆ ಈ ಅವಧಿಯಲ್ಲಿ ಕುರಾನ್ ಪ್ರವಾದಿ ಮೊಹಮ್ಮದ್ ರವರಿಗೆ ಬೋಧಿಸಲ್ಪಟ್ಟಿವೆ ಎಂದು ನಂಬಲಾಗಿದೆ, ಇದನ್ನು "ಶಕ್ತಿಯ ರಾತ್ರಿ" ಎಂದು ಕರೆಯಲಾಗುತ್ತದೆ.

ಪ್ರವಾದಿ ಮುಹಮ್ಮದ್ ಒಂದು ನಿರ್ದಿಷ್ಟ ರಾತ್ರಿಯನ್ನು ಕುರಾನ್ ಓದಲು ಎಂದಿಗೂ ನಿರ್ದಿಷ್ಟಪಡಿಸದ ಕಾರಣ, ಮುಸ್ಲಿಮರು ಆ 10 ದಿನಗಳನ್ನು ಕುರಾನ್ ಓದುವ ಮತ್ತು ಅಧ್ಯಯನ ಮಾಡುವ ಮೂಲಕ ತಮ್ಮ ಆಧ್ಯಾತ್ಮಿಕತೆಯನ್ನು ಹೆಚ್ಚಿಸಲು ಬಳಸುತ್ತಾರೆ.

ಕೆಲವು ಮುಸ್ಲಿಮರು ಈ ಅವಧಿಯಲ್ಲಿ ತಮ್ಮ ಲಿಂಗಕ್ಕೆ ಅನುಗುಣವಾಗಿ ಮಸೀದಿಯ ಪ್ರತ್ಯೇಕ ಭಾಗಗಳಲ್ಲಿ ವಾಸಿಸಲು ಮತ್ತು ಮಲಗಲು ಆಯ್ಕೆ ಮಾಡಿಕೊಳ್ಳುತ್ತಾರೆ. ಇದನ್ನು ಇಟಿಕಾಫ್ ಎಂದು ಕರೆಯಲಾಗುತ್ತದೆ. ಈ ಸಮಯದಲ್ಲಿ ತಮ್ಮ ಧಾರ್ಮಿಕ ಜ್ಞಾನವನ್ನು ಹೆಚ್ಚಿಸಿಕೊಳ್ಳುವುದರ ಮೇಲೆ ಗಮನಹರಿಸುತ್ತಾರೆ.

ರಂಜಾನ್ ತಿಂಗಳ ಕೊನೆಯಲ್ಲಿ ಏನಾಗುತ್ತದೆ?

ರಂಜಾನ್ ತಿಂಗಳ ಕೊನೆಯಲ್ಲಿ ಏನಾಗುತ್ತದೆ?

ಪವಿತ್ರ ತಿಂಗಳ ಕೊನೆಯಲ್ಲಿ ಈದ್ ಅಲ್-ಫಿತರ್ ಅಥವಾ ಇದನ್ನು ಸಾಮಾನ್ಯವಾಗಿ ಈದ್ ಎಂದು ಕರೆಯಲ್ಪಡುವ ಮೂರು ದಿನಗಳ ಆಚರಣೆಯಿದೆ.

ರಂಜಾನ್ ಹಬ್ಬದ ದಿನ ಮಸೀದಿಯಲ್ಲಿ ಹೋಗಿ ಪ್ರಾರ್ಥನೆ ಸಲ್ಲಿಸಲು ಎಲ್ಲಾ ಮುಸಲ್ಮಾನ ಕುಟುಂಬಗಳು ಸಾಮಾನ್ಯವಾಗಿ ಬೇಗನೆ ಎಚ್ಚರಗೊಂಡು ತಮ್ಮ ಸಮುದಾಯದ ಸ್ನೇಹಿತರು, ಕುಟುಂಬ ಮತ್ತು ಇತರರ ಜೊತೆ ಮಸೀದಿಗಳಿಗೆ ತೆರಳುತ್ತಾರೆ. ಇದು ಆಹಾರ ಮತ್ತು ಹಬ್ಬದ ಆಚರಣೆಯ ಖುಷಿಯ ಸಮಯ ಆಗಿರುವುದರಿಂದ, ಇದನ್ನು ನೆನಪಿನಲ್ಲಿಟ್ಟುಕೊಳ್ಳಲು ಚಿಕ್ಕ ಮಕ್ಕಳು ಉಡುಗೊರೆಗಳನ್ನು ಪಡೆದಾಗ ಅದನ್ನು ಗುರುತಿಸಲು ಮನೆಗಳನ್ನು ಸಂಭ್ರಮದಿಂದ ಅಲಂಕಾರ ಮಾಡಲಾಗುತ್ತದೆ.

English summary

Things to know About Muslim Holy Month Ramadan

Ramadan is a holy month for muslim. Here are interesting facts about ramadan, Read on..
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X