ಭಕ್ತರ ಪ್ರೀತಿಯ ದೇವ-ಶ್ರೀಕೃಷ್ಣನ ಕುರಿತಾಗಿ ನೀವು ಅರಿಯದ ಸತ್ಯಗಳು

By: jaya subramanya
Subscribe to Boldsky

ಹಿಂದೂ ಧರ್ಮದಲ್ಲಿ ಶ್ರೀಕೃಷ್ಣ ಪರಮಾತ್ಮನಿಗೆ ವಿಶೇಷವಾದ ಸ್ಥಾನವಿದೆ. ಶ್ರೀಕೃಷ್ಣನ ಮಂದಸ್ಮಿತ ನಗು ಮತ್ತು ಮಧುರ ವಾಣಿಯು ಹಿರಿಯರು ಕಿರಿಯರೆನ್ನದೆ, ಪಶು ಪಕ್ಷಿಗಳನ್ನು ಕೂಡ ಆಕರ್ಷಿಸಿತ್ತು. ಭಕ್ತ ವತ್ಸಲನೆಂಬ ಬಿರುದೂ ಆತನಿಗಿತ್ತು, ಏಕೆಂದರೆ ಶ್ರೀಕೃಷ್ಣನು ಭಕ್ತರ ಕಂಬನಿಗೆ ಕೂಡಲೇ ಮಿಡಿಯುತ್ತಾನೆ ಮತ್ತು ಅವರ ಕಷ್ಟಗಳನ್ನೆಲ್ಲಾ ದೂರ ಮಾಡುತ್ತಾನೆ ಎಂಬ ನಂಬಿಕೆ ಭಕ್ತ ಜನರಲ್ಲಿದೆ. ಶ್ರೀಕೃಷ್ಣ ಜನ್ಮಾಷ್ಟಮಿಯು ಕೃಷ್ಣನ ಹುಟ್ಟಿದ ಹಬ್ಬವಾಗಿ ಆಚರಿಸಲಾಗುತ್ತದೆ. ಈ ಬಾರಿಯ ಜನ್ಮಾಷ್ಟಮಿಯು ಆಗಸ್ಟ್ 14 ರಿಂದ ಬಂದಿದೆ. ಕೆಲವು ಹಿಂದೂ ಕ್ಯಾಲೆಂಡರ್‌ಗಳಲ್ಲಿ ಅಷ್ಟಮಿಯು 15 ನೇ ಆಗಸ್ಟ್‌ರಂದು ಆಚರಿಸಲಾಗುತ್ತದೆ.

ಜನ್ಮಾಷ್ಟಮಿ ವಿಶೇಷ- ರಾಧಾ-ಕೃಷ್ಣರ ಪ್ರೇಮ ಕಥೆ 

ಕೃಷ್ಣ ಭಕ್ತರು ಜನ್ಮಾಷ್ಟಮಿಯನ್ನು ಸಡಗರ ಸಂಭ್ರಮದಿಂದ ಆಚರಿಸುತ್ತಾರೆ. ಈ ದಿನದಂದು ಹೆಚ್ಚಿನವರು ವೃತಗಳನ್ನು ಮಾಡಿ ದೇವರಿಗೆ ಪೂಜೆಯನ್ನು ಮಾಡುತ್ತಾರೆ. ಅಂತೆಯೆ ಮೊಸರು ಕುಡಿಕೆ ಮೊದಲಾದ ಆಟೋಟ ಸ್ಪರ್ಧೆಗಳನ್ನು ನಡೆಸುತ್ತಾರೆ. ಇದರೊಂದಿಗೆ ಹಾಡು, ನೃತ್ಯ, ಮಕ್ಕಳಿಗೆ ಕೃಷ್ಣನ ವೇಷ ತೊಡಿಸುವುದು ಮೊದಲಾದ ಚಟುವಟಿಕೆಗಳನ್ನು ಅಷ್ಟಮಿಯ ಪ್ರಯುಕ್ತ ಭಕ್ತರು ಹಮ್ಮಿಕೊಳ್ಳುತ್ತಾರೆ. ಹಾಗಿದ್ದರೆ ಶ್ರೀಕೃಷ್ಣ ಜನ್ಮಾಷ್ಟಮಿಯ ಸಲುವಾಗಿ ಇಂದಿನ ಲೇಖನದಲ್ಲಿ ಕೃಷ್ಣನ ಕುರಿತಾದ ಕೆಲವೊಂದು ಮಾಹಿತಿಗಳನ್ನು ನಾವು ನಿಮ್ಮೊಂದಿಗೆ ಹಂಚಿಕೊಳ್ಳಲಿದ್ದೇವೆ....

ನವಿಲು ಗರಿ

ನವಿಲು ಗರಿ

ಶ್ರೀಕೃಷ್ಣನ ಕಿರೀಟದಲ್ಲಿ ನವಿಲು ಗರಿ ಇದ್ದೇ ಇರುತ್ತದೆ. ಈ ನವಿಲುಗರಿಯ ಕೃಷ್ಣನ ಕಿರೀಟವನ್ನು ಅಲಂಕರಿಸಿರುವುದರ ಹಿಂದೆ ಒಂದು ಕಥೆ ಇದೆ. ಕೃಷ್ಣನ ಕೊಳಲಿನ ನಿನಾದಕ್ಕೆ ಮಾರು ಹೋಗಿ ನವಿಲುಗಳ ರಾಜನು ಉಡುಗೊರೆಯಾಗಿ ಕೃಷ್ಣನಿಗೆ ನವಿಲಿನ ಗರಿಯನ್ನು ನೀಡುತ್ತದೆ. ಅಂತೆಯೇ ಇನ್ನೊಂದು ಕಥೆಯ ಪ್ರಕಾರ ಕೃಷ್ಣನ ದತ್ತು ತಂದೆ ನಂದ ಗೋಪಾಲನು ಪುಟ್ಟ ಬಾಲ ಕೃಷ್ಣನ ತಲೆಯನ್ನು ಅಲಂಕರಿಸಲು ನವಿಲಿನ ಗರಿಯನ್ನು ಸಿಂಗರಿಸಿದ್ದರು ಎಂದು ಹೇಳಲಾಗಿದೆ. ಕಥೆ ಯಾವುದೇ ಇದ್ದರೂ ನವಿಲಿನ ಗರಿ ಎಂದರೆ ಕೃಷ್ಣ ಪರಮಾತ್ಮನಿಗೆ ಪಂಚಪ್ರಾಣವಾಗಿದೆ.

ಬೆಣ್ಣೆ

ಬೆಣ್ಣೆ

ಬೆಣ್ಣೆ ಕಳ್ಳ ಎಂಬ ಹೆಸರಿನಿಂದಲೇ ಗೋಪಿಕಾ ಸ್ತ್ರೀಯರು ಕೃಷ್ಣನನ್ನು ಕರೆಯುತ್ತಿದ್ದರು. ಬೆಣ್ಣೆಯನ್ನು ಕದ್ದು ತಿನ್ನುತ್ತಿದ್ದುರಿಂದ ಈ ಹೆಸರು ಭಗವಂತನಿಗೆ ಬಂದಿದೆ. ಬೆಣ್ಣೆಯನ್ನು ಅರ್ಪಿಸದೆಯೇ ಕೃಷ್ಣನ ಪೂಜೆಯನ್ನು ಭಕ್ತರು ಸಂಪೂರ್ಣಗೊಳಿಸುವುದಿಲ್ಲ.

ಹಳದಿ ಬಟ್ಟೆ (ಪೀತಾಂಬರ)

ಹಳದಿ ಬಟ್ಟೆ (ಪೀತಾಂಬರ)

ಕೃಷ್ಣನಿಗೆ ಹಳದಿ ಬಟ್ಟೆಗಳೆಂದರೆ ಬಲು ಪ್ರೀತಿ. ಕೃಷ್ಣನ ಪ್ರತಿಯೊಂದು ಭಾವಚಿತ್ರದಲ್ಲಿ ಕೂಡ ಹಳದಿ ಬಟ್ಟೆಯನ್ನು ಕಾಣಬಹುದಾಗಿದೆ. ಕೃಷ್ಣನಿಗೆ ಹಳದಿ ಮೆಚ್ಚಿನ ಬಣ್ಣವಾಗಿದ್ದರಿಂದ ಯಾವಾಗಲೂ ಹಳದಿ ಬಟ್ಟೆಯನ್ನೇ ಧರಿಸುತ್ತಿದ್ದರು. ಇದಕ್ಕಾಗಿಯೇ ಹಳದಿ ಬಣ್ಣದ ಹೂವು ಮತ್ತು ಹಣ್ಣುಗಳನ್ನೇ ಭಕ್ತರು ಪರಮಾತ್ಮನಿಗೆ ಅರ್ಪಿಸುತ್ತಾರೆ.

ಕೊಳಲು

ಕೊಳಲು

ಕೃಷ್ಣನಿಗೆ ಕೊಳಲಿಲ್ಲದೆ ಅವರ ವ್ಯಕ್ತಿತ್ವ ಸಂಪೂರ್ಣವಾಗುವುದಿಲ್ಲ. ಮಾನವರು ಮತ್ತು ಪಶು ಪಕ್ಷಿಗಳೆನ್ನದೆ ಪ್ರತಿಯೊಬ್ಬರೂ ದೇವರ ಕೊಳಲು ನಾದಕ್ಕೆ ಮಾರು ಹೋಗುತ್ತಾರೆ.ಕೃಷ್ಣನು ಕೊಳಲನ್ನು ನುಡಿಸುತ್ತಿದ್ದಂತೆ ಪಶು ಪಕ್ಷಿಗಳು ನಾಟ್ಯವಾಡುತ್ತವೆ ಮತ್ತು ಚರಾಚರ ಜೀವಿಗಳು ತಮ್ಮನ್ನು ತಾವೇ ಮರೆತುಬಿಡುತ್ತಾರೆ.

ಕೊಳಲು

ಕೊಳಲು

ಕೊಳಲನ್ನು ಮಾರುವ ವ್ಯಕ್ತಿಯಿಂದ ಕೃಷ್ಣನು ಕೊಳಲನ್ನು ಖರೀದಿಸಿಕೊಂಡು ಅವರಿಂದಲೇ ಕೊಳಲು ನುಡಿಸುವುದನ್ನು ಕಲಿಯುತ್ತಾರೆ. ಕೊಳಲು ತುಂಬಾ ಪವಿತ್ರವಾಗಿದ್ದು ಕೊಳಲಿನ ನಿನಾದಕ್ಕೆ ತಕ್ಕಂತೆ ಹಲವಾರು ಹಾಡುಗಳನ್ನು ಕೂಡ ಬರೆಯಲಾಗಿದೆ. ದೇವರ ತುಟಿಯನ್ನು ಅಲಂಕರಿಸಿದ ಕೊಳಲು ನಿಜಕ್ಕೂ ಅದೃಷ್ಟದ್ದಾಗಿದೆ.

ಅವತಾರ ಪುರುಷ ಶ್ರೀ ಕೃಷ್ಣ ಜಗತ್ತಿಗೆ ಸಾರಿದ ಉಪದೇಶ

ದನಕರು

ದನಕರು

ಕೃಷ್ಣನಿಗೆ ಪ್ರಾಣಿಗಳು ಅಂದರೂ ಬಲು ಪ್ರೀತಿ. ಅದರಲ್ಲೂ ದನವೆಂದರೆ ದೇವರಿಗೆ ವಿಪರೀತ ಒಲವು. ತಮ್ಮ ಬಾಲ್ಯದಲ್ಲಿ ಗೋಪಾಲಕನಾಗಿ ದೇವರು ದನಕರುಗಳನ್ನು ನೋಡಿಕೊಳ್ಳುತ್ತಿದ್ದರು ಮತ್ತು ಗುಡ್ಡಕ್ಕೆ ಕರೆದೊಯ್ದು ಅದನ್ನು ಮೇಯಿಸುತ್ತಿದ್ದನು. ಹೀಗೆ ದೇವರ ಬಾಲ್ಯದ ದಿನಗಳಲ್ಲಿ ದನಕರುಗಳ ಪಾತ್ರ ಅತ್ಯಂತ ಹಿರಿದಾದುದಾಗಿದೆ.

English summary

Things that Lord Sri Krishna loved the most | things that were loved by Lord Sri Krishna

Janmashtami is celebrated to commemorate Lord Sri Krishna’s birth anniversary. In the year 2017, Janmashtami shall be celebrated on the 14th of August. For some sects of the Hindu community, Janmashtami will fall on the 15th of the same month. On this occasion, let’s discuss about some of the things that were close to Lord Sri Krishna’s heart. These things were loved by Lord Sri Krishna so much that these are offered to him by the devotees to win his grace. So, without further ado, let’s take a look at the things that are Lord Sri Krishna’s favorite.
Subscribe Newsletter