For Quick Alerts
ALLOW NOTIFICATIONS  
For Daily Alerts

ಇಂದು ಮೌನಿ ಅಮಾವಾಸ್ಯೆ -ಅಪ್ಪಿತಪ್ಪಿಯೂ ಇಂತಹ ಕೆಲಸಗಳನ್ನು ಮಾಡಬೇಡಿ!

|

ಹಿಂದೂ ಪಂಚಾಂಗದ ಪ್ರಕಾರ ಪ್ರತೀ ತಿಂಗಳು ಅಮಾವಾಸ್ಯೆಯು ಬರುವುದು. ಪ್ರತಿಯೊಂದು ಅಮಾವಾಸ್ಯೆಯನ್ನು ಒಂದೊಂದು ಹೆಸರಿನಿಂದ ಕರೆಯಲಾಗುತ್ತದೆ. ಅದೇ ರೀತಿಯಲ್ಲಿ ಫೆ.4, 2019ರಂದು ಕಾಣಿಸಿಕೊಳ್ಳುವ ಅಮಾವಾಸ್ಯೆಯನ್ನು ಮೌನಿ ಅಮಾವಾಸ್ಯೆ ಎಂದು ಕರೆಯಲಾಗುತ್ತದೆ. ಇದು ತುಂಬಾ ಪವಿತ್ರವಾಗಿರುವ ಅಮವಾಸ್ಯೆ ಎಂದು ಪರಿಗಣಿಸಲಾಗಿದೆ. ಈ ದಿನ ಉಪವಾಸ ಮಾಡಿದರೆ ಅದರಿಂದ ಹೆಚ್ಚಿನ ಲಾಭವಾಗುವುದು.

ದಾನಧರ್ಮದಿಂದಲೂ ಈ ದಿನ ಲಾಭ ಪಡೆದುಕೊಳ್ಳಬಹುದು ಎಂದು ಹೇಳಲಾಗುತ್ತದೆ. ಆದರೆ ಕೆಲವೊಂದು ಒಳ್ಳೆಯ ಕೆಲಸ ಮಾಡುವಂತೆ, ಇನ್ನು ಕೆಲವು ಕೆಲಸಗಳನ್ನು ಮೌನಿ ಅಮಾವಾಸ್ಯೆ ದಿನ ಮಾಡಬಾರದು.

Mauni Amavasya

ಮೌನಿ ಅಮಾವಾಸ್ಯೆಯ ದಿನ ಮಾಡಲೇಬಾರದ ಕೆಲವೊಂದು ಕಾರ್ಯಗಳನ್ನು ಈ ಲೇಖನದಲ್ಲಿ ನೀಡಲಾಗಿದೆ. ಇದನ್ನು ನೀವು ತಿಳಿದುಕೊಂಡು ಅದನ್ನು ಪಾಲಿಸಿಕೊಂಡು ಹೋಗಿ.

ತಡವಾಗಿ ಎದ್ದೇಳುವುದು

ತಡವಾಗಿ ಎದ್ದೇಳುವುದು

ಹಿಂದೂ ಧರ್ಮದ ಪ್ರಕಾರ ಪ್ರತಿಯೊಬ್ಬರು ಮುಂಜಾನೆ 4 ಗಂಟೆಯಿಂದ 6 ಗಂಟೆ ಮಧ್ಯೆ ಎದ್ದೇಳಬೇಕು ಎಂದು ಹೇಳಲಾಗುತ್ತದೆ. ಆದರೆ ಇಂದಿನ ದಿನಗಳಲ್ಲಿ ಇದನ್ನು ಪಾಲಿಸುವವರು ತುಂಬಾ ಕಡಿಮೆ. ಆದರೆ ಮೌನಿ ಅಮಾವಾಸ್ಯೆಯ ದಿನದಂದು ತಡವಾಗಿ ಏಳಬಾರದು. ಯಾಕೆಂದರೆ ತಡವಾಗಿ ಏಳುವುದರಿಂದ ದುಷ್ಟಶಕ್ತಿಗಳು ಬರುವುದು. ಇಂತಹ ಅಭ್ಯಾಸಗಳು ವ್ಯಕ್ತಿಯಲ್ಲಿ ನಾಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುವುದು. ಇಂತಹ ನಕಾರಾತ್ಮಕ ಶಕ್ತಿಗಳು ಅಮಾವಾಸ್ಯೆಯ ದಿನದಂದು ಹೆಚ್ಚು ಶಕ್ತಿಯುತವಾಗಿರುವುದು. ಇದರಿಂದಾಗಿ ಮೌನಿ ಅಮಾವಾಸ್ಯೆಯಂದು ತಡವಾಗಿ ಎದ್ದೇಳಬೇಡಿ. ಬೆಳಗ್ಗೆ ಬೇಗ ಎದ್ದ ಬಳಿಕ ನೀವು ಏನೂ ಮಾತನಾಡದೆ ಹೋಗಿ ಸ್ನಾನ ಮಾಡಿಕೊಂಡು ಬಂದು ದೇವರಿಗೆ ಪ್ರಾರ್ಥನೆ ಮಾಡಬೇಕು. ಸ್ನಾನ ಮಾಡುವ ನೀರಿಗೆ ಕಪ್ಪು ಎಳ್ಳನ್ನು ಹಾಕಿಕೊಂಡರೆ ಅದು ತುಂಬಾ ಒಳ್ಳೆಯದು.

ಲೈಂಗಿಕ ಕ್ರಿಯೆಯಲ್ಲಿ ತೊಡಗಬಾರದು

ಲೈಂಗಿಕ ಕ್ರಿಯೆಯಲ್ಲಿ ತೊಡಗಬಾರದು

ಅಮಾವಾಸ್ಯೆಯಂದು ನಕಾರಾತ್ಮಕ ಶಕ್ತಿಗಳು ಹೆಚ್ಚು ಶಕ್ತಿಯುತವಾಗಿರುವ ಕಾರಣದಿಂದಾಗಿ ಈ ದಿನದಂದು ದಂಪತಿಯು ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳಬಾರದು ಎಂದು ಹೇಳಲಾಗುತ್ತದೆ. ಈ ದಿನ ಲೈಂಗಿಕ ಕ್ರಿಯೆಯಿಂದಾಗಿ ಮಗು ಜನಿಸಿದರೆ ಅದಕ್ಕೆ ಅಂಗವೈಕಲ್ಯವು ಇರುವುದು ಎಂದು ಹೇಳಲಾಗುತ್ತದೆ.

Most Read: ಫೆಬ್ರವರಿ 2019 ತಿಂಗಳ ಆರಂಭದಿಂದ-ಅಂತ್ಯದವರೆಗೆ ಬರುವ ಮಂಗಳಕರ ದಿನಗಳು

ಪೂರ್ವಜರನ್ನು ನೋಯಿಸಬೇಡಿ

ಪೂರ್ವಜರನ್ನು ನೋಯಿಸಬೇಡಿ

ಮೌನಿ ಅಮಾವಾಸ್ಯೆಯ ದಿನದಂದು ಪೂರ್ವಜರನ್ನು ಸಂತುಷ್ಟಿಗೊಳಿಸುವ ದಿನವಾಗಿರುವುದು. ಪೂರ್ವಜರನ್ನು ಸಂತುಷ್ಟಿಗೊಳಿಸಲು ಜನರು ಹಲವಾರು ವಿಧಾನಗಳನ್ನು ಅನುಸರಿಸಿಕೊಂಡು ಹೋಗುವರು. ಉದ್ದೇಶಪೂರ್ವಕವಾಗಿ ಅಥವಾ ಉದ್ದೇಶಪೂರ್ವಕವಲ್ಲದೆ ಮಾಡಿರುವಂತಹ ತಪ್ಪುಗಳಿಂದ ಪರಿಹಾರ ಪಡೆಯಲು ಹಲವಾರು ಪರಿಹಾರವನ್ನು ಈ ದಿನದಂದು ಮಾಡಲಾಗುವುದು. ಕೋಪವು ನಮ್ಮ ಪೂರ್ವಜರನ್ನು ನೋಯಿಸುವುದು ಎಂದು ಹೆಚ್ಚಿನ ಜನರಿಗೆ ತಿಳಿದೇ ಇಲ್ಲ. ಇದರಿಂದಾಗಿ ಮೌನಿ ಅಮಾವಾಸ್ಯೆಯ ದಿನದಂದು ನೀವು ಕೋಪವನ್ನು ತ್ಯಜಿಸಿ. ನೀವು ಈ ದಿನ ಯಾವುದೇ ರೀತಿಯ ಹಿಂಸಾಕೃತ್ಯದಲ್ಲೂ ತೊಡಗಿಕೊಳ್ಳಬಾರದು.

ನಿರ್ಗತಿಕರನ್ನು ಅಗೌರವಿಸುವುದು

ನಿರ್ಗತಿಕರನ್ನು ಅಗೌರವಿಸುವುದು

ಮೌನಿ ಅಮಾವಾಸ್ಯೆಯಂದು ದುಷ್ಟಶಕ್ತಿಗಳು ತುಂಬಾ ಪ್ರಭಾವಶಾಲಿಯಾಗಿ ಇರುವುದು. ಇದರಿಂದಾಗಿ ನೀವು ಯಾವುದೇ ರೀತಿಯಿಂದ ನಿರ್ಗತಿಕರಿಗೆ ನೋವು, ಅಗೌರವ ಅಥವಾ ಮಾನಹಾನಿ ಮಾಡಿದರೆ ಅದು ದೇವರ ಮುನಿಸಿಗೆ ಕಾರಣವಾಗುವುದು. ಇದರಿಂದಾಗಿ ಪ್ರತಿಯೊಬ್ಬರು ನಿರ್ಗತಿಕರಿಗೆ ತಮ್ಮಿಂದ ಆಗುವ ನೆರವು ನೀಡಬೇಕು. ಕೇವಲ ಮೌನಿ ಅಮಾವಾಸ್ಯೆಯಂದು ಮಾತ್ರವಲ್ಲ. ಎಲ್ಲಾ ಸಮಯದಲ್ಲೂ ಈ ಕೆಲಸ ಮಾಡಬಹುದು.

Most read: ಬಾಯಿಯ ಕ್ಯಾನ್ಸರ್‌ ನಿಯಂತ್ರಿಸುವ ಪವರ್ ಇಂತಹ ಆಹಾರಗಳಲ್ಲಿದೆ!

ಕೆಲವು ಮರಗಳ ಅಡಿಯಲ್ಲಿ ನಿಲ್ಲುವುದು

ಕೆಲವು ಮರಗಳ ಅಡಿಯಲ್ಲಿ ನಿಲ್ಲುವುದು

ಮೌನಿ ಅಮಾವಾಸ್ಯೆಯಂದು ಕೆಲವೊಂದು ಮರಗಳ ಅಡಿಯಲ್ಲಿ ನಿಲ್ಲುವುದರಿಂದ ನಕಾರಾತ್ಮಕ ಶಕ್ತಿಗಳು ಬರುವುದು ಎಂದು ನಂಬಲಾಗಿದೆ. ಇದರಲ್ಲಿ ಮುಖ್ಯವಾಗಿ ಆಲದ ಮರ, ಮದರಂಗಿ ಗಿಡ ಮತ್ತು ಅಶ್ವತ್ಥ ಮರ(ದೇವಾಲಯದಲ್ಲಿ ಇರುವಂತಹ ಮರವಲ್ಲ). ಇಲ್ಲಿ ಶಕ್ತಿಗಳು ಅಮಾವಾಸ್ಯೆಯಂದು ಶಕ್ತಿಯುತವಾಗಿರುವುದು. ಈ ದಿನದಂದು ನಕಾರಾತ್ಮಕ ಶಕ್ತಿ ಹೆಚ್ಚಾಗಿರುವ ಕಾರಣದಿಂದಾಗಿ ದೇವರ ನಾಮಜಪ ಹೆಚ್ಚು ಮಾಡಬೇಕು.

English summary

Things Not To Do On Mauni Amavasya

Mauni Amavasya will be observed on 4 Feb 2019. It it a highly auspicious day for performing various virtuous deeds. The day is highly auspicious for taking a bath at the confluence of the three rivers Ganga, Yamuna and Saraswati. However, there are things that the devotees are advised not to do on this day.
X
Desktop Bottom Promotion