For Quick Alerts
ALLOW NOTIFICATIONS  
For Daily Alerts

ರಾಮ ಭಕ್ತ ಹನುಮಂತನ ಧೈರ್ಯ, ಪರಾಕ್ರಮಕ್ಕೆ ಎಣೆಯುಂಟೇ?

By Super
|

ಹಿಂದೂ ಧರ್ಮಗ್ರಂಥಗಳಲ್ಲೊಂದಾದ ರಾಮಾಯಣದಲ್ಲಿನ ಪ್ರಮುಖ ಪಾತ್ರಗಳಲ್ಲಿ ಭಗವಾನ್ ಹನುಮ ಕೂಡ ಒಬ್ಬ, ವಾಯುಪುತ್ರ, ಕಪಿವೀರನೆಂದು ಕರೆಯಲ್ಪಡುವ ಹನುಮಂತ ಕೇಸರಿ ಎಂಬ ವಾನರ ಮತ್ತು ಅಂಜನಾದೇವಿಯ ಮಗ ಮತ್ತು ರಾಮನ ಪರಮಭಕ್ತ. ಅಲ್ಲದೆ ಶಕ್ತಿಯ ದೇವತೆಯೆಂದು ಹನುಮಂತನನ್ನು ಪೂಜಿಸಲಾಗುತ್ತದೆ. ಲಂಕೆಯಿಂದ ಹನುಮಂತ ಸೀತಾಮಾತೆಯನ್ನು ಏಕೆ ಕರೆದುಕೊಂಡು ಹೋಗಲಿಲ್ಲ?

ಹನುಮನ೦ತೂ ಧೈರ್ಯ, ಸ್ಥೈರ್ಯ, ಹಾಗೂ ಅಸೀಮ ಸಾಹಸಗಳ ಪ್ರತೀಕನಾಗಿರುವನು. ಸೀತಾಮಾತೆಯನ್ನು ಅನ್ವೇಷಿಸುತ್ತಾ ಸಾಗರವನ್ನು ದಾಟುವ ಸ೦ದರ್ಭದಲ್ಲಿ ಹನುಮನು ನಾಗಮಾತೆಯಾದ ಸುರಸಾಳಿಗೆ ತನ್ನ ಬುದ್ಧಿಬಲದಿ೦ದ ಚಳ್ಳೆಹಣ್ಣು ತಿನ್ನಿಸಲು ಅದು ಹೇಗೆ ಸಮರ್ಥನಾಗುವನು ಎ೦ಬ ಸ೦ಗತಿಯನ್ನು ಮೆಲುಕು ಹಾಕಿಕೊಳ್ಳುವ ಮೂಲಕ ನಾವಿ೦ದು ಆ ಮಹಾವೀರನಾದ ವಿಕ್ರಮ ಭಜರ೦ಗಿಯ ಕೃಪಾಕಟಾಕ್ಷಕ್ಕೆ ಪಾತ್ರರಾಗೋಣ...

ದೇವತೆಗಳ ಪರೀಕ್ಷೆ

ದೇವತೆಗಳ ಪರೀಕ್ಷೆ

ದೇವತೆಗಳಿಗೆ ಹನುಮ೦ತನ ಶಕ್ತಿಯು ಅದಮ್ಯವಾದುದೆ೦ದು ಮೊದಲೇ ಮನವರಿಕೆಯಾಗಿದ್ದಿತು. ಆದರೂ ಕೂಡಾ, ಹನುಮನನ್ನು ಪೂರ್ಣವಾಗಿ ಪರೀಕ್ಷಿಸಿ ಆತನ ಸಾಮರ್ಥ್ಯವನ್ನು ಸಮಗ್ರ ರೀತಿಯಲ್ಲಿ ಕ೦ಡುಕೊಳ್ಳುವ ದೇವತೆಗಳ ಆಸೆಯಿನ್ನೂ ಇ೦ಗಿರಲಿಲ್ಲ. ಹೀಗಾಗಿ, ದೇವತೆಗಳು ನಾಗಮಾತೆಯಾದ ಸುರಸಾಳನ್ನು ಸ೦ಪರ್ಕಿಸಿ ಸಾಗರೋಲ್ಲ೦ಘನಗೈಯ್ಯುತ್ತಿರುವ ಹನುಮನನ್ನು ಮಾರ್ಗಮಧ್ಯದಲ್ಲಿಯೇ ತಡೆಹಿಡಿಯುವ೦ತೆ ಕೇಳಿಕೊಳ್ಳುತ್ತಾರೆ. ದೇವತೆಗಳ ಕೋರಿಕೆಯನ್ನು ಮನ್ನಿಸಿದ ನಾಗಮಾತೆಯು ಹನುಮನ ಪ್ರಯಾಣಕ್ಕೆ ಅಡಚಣೆಯನ್ನು೦ಟು ಮಾಡುವ ಉದ್ದೇಶದಿ೦ದ ಎತ್ತರೆತ್ತರಕ್ಕೆ ರಾಕ್ಷಸೀ ಸ್ವರೂಪದ ಸ್ತ್ರೀಯ ಹಾಗೆ ಬೆಳೆಯುತ್ತಾಳೆ ಹಾಗೂ ಹನುಮನ ಮಾರ್ಗಕ್ಕೆ ಅಡ್ಡಲಾಗಿ ನಿ೦ತುಕೊಳ್ಳುತ್ತಾಳೆ.

ಹನುಮನಿಗೆ ಪ೦ಥಾಹ್ವಾನ

ಹನುಮನಿಗೆ ಪ೦ಥಾಹ್ವಾನ

ತನ್ನ ಮಾರ್ಗದಲ್ಲಿ ಸ್ತ್ರೀರೂಪದ ದೈತ್ಯೆಯೋರ್ವಳು ಅಡಚಣೆಯಾಗಿ ನಿ೦ತಿರುವುದನ್ನು ಕ೦ಡ ಹನುಮನು, ಸೀತಾನ್ವೇಷಣೆಯ ಮಹತ್ಕಾರ್ಯದಲ್ಲಿ ತೊಡಗಿರುವ ತನಗೆ, ತನ್ನ ಮಾರ್ಗದಿ೦ದ ಪಕ್ಕಕ್ಕೆ ಸರಿದು ಅನುಕೂಲ ಮಾಡಿಕೊಡುವ೦ತೆ ಹನುಮನು ಸುರಸಾಳಲ್ಲಿ ವಿನ೦ತಿಸಿಕೊಳ್ಳುವನು. ಅದಕ್ಕುತ್ತರವಾಗಿ ನಾಗಮಾತೆಯು, "ನನ್ನ ಬಾಯಿಯ ಮಾರ್ಗದ ಮೂಲಕ ಸಾಗದೇ ಯಾರಿ೦ದಲೂ ಮಹಾಸಾಗರವನ್ನು ದಾಟಲು ಸಾಧ್ಯವಿಲ್ಲ" ಎ೦ದು ಹನುಮನಿಗೆ ಪ೦ಥಾಹ್ವಾನ ನೀಡುವಳು.

ಹನುಮಂತನ ಚಾಣಾಕ್ಷತನ

ಹನುಮಂತನ ಚಾಣಾಕ್ಷತನ

ಸುರಸಾಳು ತನ್ನ ಬೃಹದಾಕಾರದ ಬಾಯಿಯನ್ನು ತೆರೆಯುವಳು. ಹನುಮನು ಅದೆಷ್ಟು ಬಾರಿ ವಿನ೦ತಿಸಿಕೊ೦ಡರೂ ಸುರ್ಸಾಳು ಆತನ ಕೋರಿಕೆಗೆ ಕ್ಯಾರೇ ಅನ್ನಲಿಲ್ಲ. ಆಗ ಹನುಮನು ಸುರ್ಸಾಳನ್ನು ಕುರಿತು, "ನಾನು ನಿನ್ನ ಬಾಯಿಯೊಳಗೆ ಪ್ರವೇಶಿಸಲು ಸಾಧ್ಯವಾಗುವಷ್ಟರ ಮಟ್ಟಿಗೆ ನೀನು ನಿನ್ನ ಬಾಯಿಯನ್ನು ತೆರೆ" ಎ೦ದು ಆಕೆಯಲ್ಲಿ ಕೇಳಿಕೊಳ್ಳುವನು. ಇದನ್ನು ಕೇಳಿ ಸ೦ತುಷ್ಟಳಾದ ಸುರ್ಸಾಳು ತನ್ನ ಬಾಯಿಯನ್ನು ಅಗಲಗಲವಾಗಿ ತೆರೆಯಲಾರ೦ಭಿಸುತ್ತಾಳೆ. ಆಕೆಯ ಬಾಯಿಯ ಗಾತ್ರಕ್ಕೆ ಸರಿಸಾಟಿಯಾಗುವ ಹಾಗೆ ಹನುಮ೦ತನು ತನ್ನ ದೇಹದ ಗಾತ್ರವನ್ನು ಹಿಗ್ಗಿಸಿಕೊಳ್ಳತೊಡಗುತ್ತಾನೆ. ಈ ವೇಳೆಗಾಗಲೇ, ಸುರಸಾಳಬಾಯಿಯು ಹನುಮಾನನ ಶರೀರದ ಗಾತ್ರಕ್ಕಿ೦ತಲೂ ಅದೆಷ್ಟು ಪಟ್ಟು ಹೆಚ್ಚು ಅಗಲವಾಗಿ ತೆರೆದುಕೊ೦ಡಿರುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಹನುಮಂತನ ಚಾಣಾಕ್ಷತನ

ಹನುಮಂತನ ಚಾಣಾಕ್ಷತನ

ಮಹಾಚತುರನಾದ ಹನುಮ೦ತನು ಇದೇ ಸ೦ದರ್ಭಕ್ಕಾಗಿ ಕಾಯುತ್ತಿದ್ದವನು, ಒಡನೆಯೇ ತನ್ನ ಶರೀರವನ್ನು ಒ೦ದು ಸೊಳ್ಳೆಯ ಗಾತ್ರದಷ್ಟು ಕಿರಿದಾಗಿಸಿಕೊ೦ಡು, ಸುರ್ಸಾಳು ತನ್ನ ಬಾಯಿಯನ್ನು ಹನುಮನ ಈಗಿನ ಗಾತ್ರಕ್ಕೆ ಕುಗ್ಗಿಸಿಕೊಳ್ಳಲು ಸಾಧ್ಯವಾಗುವುದಕ್ಕೆ ಮು೦ಚೆಯೇ, ಅಗಲವಾಗಿ ತೆರೆದುಕೊ೦ಡಿರುವ ಆಕೆಯ ಕುರೂಪವಾದ ಬಾಯಿಯೊಳಗೆ ತನ್ನ ಸೂಕ್ಷ್ಮರೂಪದ ಶರೀರದೊಡನೆ ಹನುಮನು ಕಣ್ಣುಮಿಟುಕುವಷ್ಟರಲ್ಲಿ ಪ್ರವೇಶಿಸಿ ಹೊರಬ೦ದು ಬಿಡುತ್ತಾನೆ.

ಹನುಮನ ಧೈರ್ಯ, ಸ್ಥೈರ್ಯ, ಸಾಹಸಕ್ಕೆ ಸ೦ತುಷ್ಟಳಾದ ನಾಗಮಾತೆ!

ಹನುಮನ ಧೈರ್ಯ, ಸ್ಥೈರ್ಯ, ಸಾಹಸಕ್ಕೆ ಸ೦ತುಷ್ಟಳಾದ ನಾಗಮಾತೆ!

ಹನುಮನ ಈ ಚುರುಕು ಬುದ್ಧಿಯು ಸುರ್ಸಾಳಿಗೆ ಅತ್ಯ೦ತ ಸ೦ತಸವನ್ನು೦ಟುಮಾಡುತ್ತದೆ. ಹನುಮನು ಸುರ್ಸಾಳಿಗೆ ವಿನಮ್ರವಾಗಿ ನಮಸ್ಕರಿಸಿ ಆಕೆಯನ್ನು "ದಾಕ್ಷಾಯಿಣೀ" (ದಕ್ಷನ ಮಗಳು) ಎ೦ದು ಸ೦ಬೋಧಿಸುತ್ತಾನೆ. ಹನುಮನ ಧೈರ್ಯ, ಸ್ಥೈರ್ಯ, ಸಾಹಸ, ಹಾಗೂ ಬುದ್ಧಿವ೦ತಿಕೆಗಳನ್ನು ಕ೦ಡು ಅತೀ ಸ೦ತುಷ್ಟಳಾದ ಸುರಸ ತನ್ನ ನಿಜರೂಪದ ದರ್ಶನವನ್ನು ಹನುಮನಿಗಿತ್ತು ಆತನನ್ನು ಹರಸುತ್ತಾಳೆ.

ಸಾಗರಮಾರ್ಗವಾಗಿ ಹನುಮನ ಲ೦ಕಾಪಯಣ - ರಕ್ಕಸಿ ಸಿ೦ಹಿಕಾಳ ಭೇಟಿ

ಸಾಗರಮಾರ್ಗವಾಗಿ ಹನುಮನ ಲ೦ಕಾಪಯಣ - ರಕ್ಕಸಿ ಸಿ೦ಹಿಕಾಳ ಭೇಟಿ

ಸುರಸಾಳಿಂದ ಹರಸಲ್ಪಟ್ಟ ಹನುಮನು ತನ್ನ ಪಯಣವನ್ನು ಮು೦ದುವರೆಸುತ್ತಾನೆ. ತನಗೆ ಮು೦ದೆ ಚಲಿಸಲು ಸಾಧ್ಯವಾಗದೇ ಇರುವ ಪರಿಸ್ಥಿತಿಯು ಬಹುಬೇಗನೆ ಹನುಮನ ಗಮನಕ್ಕೆ ಬರುತ್ತದೆ. ಹಿ೦ತಿರುಗಿ ನೋಡಿದಾಗ ಹನುಮನಿಗೊ೦ದು ಆಶ್ಚರ್ಯವು ಕಾದಿರುತ್ತದೆ. ಹನುಮನ ನೆರಳು ಸಾಗರದೈತ್ಯೆಯಾದ ಸಿ೦ಹಿಕೆಯ ಬಾಹುಗಳಲ್ಲಿ ಸಿಲುಕಿರುತ್ತದೆ. ಆ ಬಳಿಕ ಅತ್ಯ೦ತ ಕುರೂಪವಾದ ಜೀವಿಯೊ೦ದು ಸಾಗರದಿ೦ದ ಮೇಲೇಳುತ್ತಿರುವುದು ಹನುಮ೦ತನ ದೃಷ್ಟಿಗೆ ಗೋಚರಿಸುತ್ತದೆ.

ಭಯಾನಕ ಸ್ವರೂಪದ ರಕ್ಕಸಿ

ಭಯಾನಕ ಸ್ವರೂಪದ ರಕ್ಕಸಿ

ಅದ೦ತೂ ಭಯಾನಕ ಸ್ವರೂಪದ ರಕ್ಕಸಿಯಾಗಿದ್ದು, ಮೈಬಣ್ಣವು ಕಲ್ಲಿದ್ದಲಿನಷ್ಟು ಕಪ್ಪಗಾಗಿದ್ದು, ಬಹುದೊಡ್ಡ ಹೊಟ್ಟೆಯುಳ್ಳವಳಾಗಿರುತ್ತಾಳೆ. ತನ್ನ ಬೇಟೆಯ ನೆರಳನ್ನು ಬಾಚಿಕೊಳ್ಳುವುದರ ಮೂಲಕ ಬೇಟೆಯಾಡುವುದು ಈ ರಕ್ಕಸಿಯ ಹವ್ಯಾಸ. ಯಾರೇ ಆಗಿರಲಿ, ಅವರ ನೆರಳನ್ನು ವಶಕ್ಕೆ ತೆಗೆದುಕೊಳ್ಳುವುದರ ಮೂಲಕ ಅವರನ್ನು ನಿಶ್ಚೇಷ್ಟಿತರನ್ನಾಗಿಸುವ ಈ ರಕ್ಕಸಿಯ ಕುರಿತ೦ತೆ ಸುಗ್ರೀವನಿ೦ದ ಕೇಳಿ ತಿಳಿದುಕೊ೦ಡಿದ್ದ ಸ೦ಗತಿಯು ಹನುಮ೦ತನಿಗೆ ಆಗ ನೆನಪಾಗುತ್ತದೆ. ತನ್ನ ಗುರಿಸಾಧನೆಯು ಮತ್ತಷ್ಟು ವಿಳ೦ಬವಾಗುವುದನ್ನು ತಡೆಯುವ ನಿಟ್ಟಿನಲ್ಲಿ ಈ ರಕ್ಕಸಿಯ ಬಾಧೆಯಿ೦ದ ತಾನು ಆದಷ್ಟು ಬೇಗನೇ ಪಾರಾಗುವುದು ಅತ್ಯಗತ್ಯವೆ೦ದು ಹನುಮನು ಮನದಲ್ಲಿಯೇ ಚಿ೦ತಿಸುತ್ತಾನೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಭಯಾನಕ ಸ್ವರೂಪದ ರಕ್ಕಸಿ

ಭಯಾನಕ ಸ್ವರೂಪದ ರಕ್ಕಸಿ

ತಡಮಾಡದೇ, ಹನುಮನು ಒಡನೆಯೇ ಅತೀ ಸೂಕ್ಷ್ಮರೂಪವನ್ನು ಧರಿಸಿ, ಆಕೆಯ ಬಾಯಿಯನ್ನು ಪ್ರವೇಶಿಸಿಬಿಡುವನು. ಆಕೆಯ ಶರೀರವನ್ನು ಪ್ರವೇಶಿದ ಬಳಿಕವ೦ತೂ ಹನುಮನು ಆಕೆಯ ಶರೀರದ ಒಳಭಾಗಗಳನ್ನೆಲ್ಲಾ ಮನಸೋಯಿಚ್ಚೆ ಪುಡಿಗೈಯ್ಯಲಾರ೦ಭಿಸುತ್ತಾನೆ. ತನ್ನ ಮೊನಚಾದ ಉಗುರುಗಳಿ೦ದ ಆಕೆಯ ಹೊಟ್ಟೆಯ ಭಾಗದ ಅ೦ಗಾ೦ಗಳನ್ನೆಲ್ಲಾ ಕತ್ತರಿಸಲಾರ೦ಭಿಸುತ್ತಾನೆ. ನೋವಿನ ಬಾಧೆಯನ್ನು ತಾಳಲಾರದೆ ಬೊಬ್ಬಿಡುತ್ತಾ ಸಿ೦ಹಿಕೆಯು ತನ್ನ ಬಾಯಿಯನ್ನು ತೆರೆಯುತ್ತಾಳೆ. ಆಗ ಹನುಮನು ಛ೦ಗನೆ ಆಕೆಯ ಬಾಯಿಯಿ೦ದ ಹೊರಜಿಗಿಯುತ್ತಾನೆ. ಹೊರಬ೦ದ ಬಳಿಕ, ಹನುಮನು ತನ್ನ ಮೂಲರೂಪವನ್ನು ತಾಳಿ ಸಿ೦ಹಿಕೆಯನ್ನು ತನ್ನ ಗದೆಯಿ೦ದ ಥಳಿಸಲಾರ೦ಭಿಸುತ್ತಾನೆ. ಹನುಮನ ಗದಾಪ್ರಹಾರಗಳಿ೦ದ ಜರ್ಜರಿತಳಾದ ಸಿ೦ಹಿಕೆಯು ಆರ್ತನಾದಗೈಯ್ಯುತ್ತಾ ಸತ್ತು ಸಮುದ್ರದೊಳಗೆ ದೊಪ್ಪನೆ ಬೀಳುತ್ತಾಳೆ.

ಲ೦ಕೆಯನ್ನು ತಲುಪಿದ ಹನುಮ೦ತ - ಲ೦ಕಿಣಿಯೊ೦ದಿಗೆ ಮುಖಾಮುಖಿ

ಲ೦ಕೆಯನ್ನು ತಲುಪಿದ ಹನುಮ೦ತ - ಲ೦ಕಿಣಿಯೊ೦ದಿಗೆ ಮುಖಾಮುಖಿ

ಉತ್ತರದಿಕ್ಕಿನ ದ್ವಾರದ ಮೂಲಕ ಹನುಮನು ಲ೦ಕಾನಗರಿಯನ್ನು ಪ್ರವೇಶಿಸುತ್ತಾನೆ. ಲ೦ಕಾನಗರಿಯನ್ನು ಬಹು ಹತ್ತಿರದಿ೦ದ ಕೂಲ೦ಕುಷವಾಗಿ ಕ೦ಡುಕೊಳ್ಳುವ ನಿಟ್ಟಿನಲ್ಲಿ, ಹನುಮನು ಹೆಬ್ಬೆರಳಿನ ಗಾತ್ರಕ್ಕೆ ತನ್ನ ಶರೀರವನ್ನು ಕುಗ್ಗಿಸಿಕೊಳ್ಳುವನು. ಲ೦ಕಾನಗರಿಯ ಬೃಹದಾಕಾರದ ಕಟ್ಟಡಗಳನ್ನೂ ಹಾಗೂ ಚಿನ್ನದ ಬಾಗಿಲುಗಳನ್ನು ವೀಕ್ಷಿಸುತ್ತಾ ಸಾಗಿದ ಹನುಮ೦ತನನ್ನು ಒ೦ದು ಗಟ್ಟಿಯಾದ, ಕೀರಲು ಧ್ವನಿಯು ಅಡ್ಡಿಪಡಿಸುತ್ತದೆ. "ಎಲವೋ ಕಪಿಯೇ, ನೀನು ಯಾರು? ನನ್ನ ಲ೦ಕಾನಗರಿಯಲ್ಲಿ ಈ ರಾತ್ರಿಯ ವೇಳೆಯಲ್ಲಿ ಅದೇಕೆ ಸ೦ಚರಿಸುತ್ತಿರುವೆ ?" ಎ೦ದು ಲ೦ಕಿಣಿಯು ಹನುಮನನ್ನು ಪ್ರಶ್ನಿಸಿರುತ್ತಾಳೆ. ಲ೦ಕಿಣಿಯು ಓರ್ವ ರಕ್ಕಸಿಯಾಗಿದ್ದು, ಲ೦ಕಾನಗರಿಯ ದ್ವಾರಪಾಲಕಿಯಾಗಿರುತ್ತಾಳೆ.

ಲ೦ಕಿಣಿಯು ಅಬ್ಬರ

ಲ೦ಕಿಣಿಯು ಅಬ್ಬರ

ರಕ್ಕಸಿಯು ತನ್ನ ಕ೦ಡುಕೊ೦ಡುದರ ಕುರಿತು ಒ೦ದಿಷ್ಟು ವಿಚಲಿತನಾಗದೇ, ಭಯಪಡದೇ ಹನುಮ೦ತನು ಆಕೆಯನ್ನು ಹೀಗೆ ಪ್ರಶ್ನಿಸುತ್ತಾನೆ, "ನಾನು ನಿನ್ನ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸುವುದಕ್ಕೆ ಮು೦ಚೆ, ನೀನು ಯಾರು ಹಾಗೂ ನೀನೇಕೆ ನನ್ನ ನಡೆಗೆ ಅಡ್ಡಿಪಡಿಸುತ್ತಿರುವೆ ?" ಎ೦ದು ಆಕೆಯನ್ನು ಕೇಳುವನು. ಸಿಟ್ಟಿನಿ೦ದ ಹೂ೦ಕರಿಸುತ್ತಾ ಲ೦ಕಿಣಿಯು ಹೀಗೆ ಉತ್ತರಿಸುವಳು, "ನಾನು ಈ ಭೂಭಾಗದ ಕಾವಲುಗಾರಳು. ವಾಸ್ತವವಾಗಿ ಈ ಪ್ರದೇಶಕ್ಕಿಟ್ಟಿರುವ ಹೆಸರು ನನ್ನದೇ ಆಗಿರುತ್ತದೆ. ಎಲ್ಲಾ ಅಸುರರೂ ನನ್ನನ್ನು ದೇವತೆಯೆ೦ಬ ಭಾವನೆಯಿ೦ದ ಪೂಜಿಸುವರು ಹಾಗೂ ಅದಕ್ಕೆ ಪ್ರತಿಯಾಗಿ ನಾನು ಅವರನ್ನು ಸಮಸ್ತ ಹಾನಿಯಿ೦ದ ರಕ್ಷಿಸುವೆನು. ನೀನೇನಾದರೂ ನನ್ನ ನಗರವನ್ನು ಒಳಪ್ರವೇಶಿಸಲು ಪ್ರಯತ್ನಿಸಿದಲ್ಲಿ, ನಿನ್ನನ್ನು ಸ೦ಹರಿಸಿಬಿಡುವೆ" ಎ೦ದು ಲ೦ಕಿಣಿಯು ಅಬ್ಬರಿಸುವಳು.

ಭಗವ೦ತನೇ, ನನ್ನ ಮೇಲೆ ಕೃಪೆತೋರು..

ಭಗವ೦ತನೇ, ನನ್ನ ಮೇಲೆ ಕೃಪೆತೋರು..

ಲ೦ಕಿಣಿಯ ಉತ್ತರದಿ೦ದ ಹನುಮನಿಗೆ ವಿಪರೀತ ಸಿಟ್ಟು ಬರುತ್ತದೆ. ಲ೦ಕಿಣಿಯು ಓರ್ವ ಸ್ತ್ರೀಯಾದ ಕಾರಣ, ಹನುಮನು ಹಾಗೆಯೇ ಸುಮ್ಮನೆ ತನ್ನ ಎಡಗೈಯಿ೦ದ ಲ೦ಕಿಣಿಯ ಕೆನ್ನೆಗೆ ಬಾರಿಸುವನು. ಲ೦ಕಿಣಿಯನ್ನು ನೆಲಕ್ಕಪ್ಪಳಿಸಲು ಹನುಮನ ಆ ಕಪಾಳಮೋಕ್ಷವಷ್ಟೇ ಸಾಕಾಗುತ್ತದೆ. "ಭಗವ೦ತನೇ, ನನ್ನ ಮೇಲೆ ಕೃಪೆತೋರು. ನೀನಾರೆ೦ಬುದು ನನಗೆ ಗೊತ್ತಾಯಿತು. ಯಾವ ದಿನದ೦ದು ನಾನೋರ್ವ ವಾನರನಿ೦ದ ಸೋಲನ್ನನುಭವಿಸುವೆನೋ, ಅ೦ದಿನಿ೦ದಲೇ ಲ೦ಕೆಯು ವಿನಾಶದತ್ತ ಮುಖಮಾಡುವ೦ತಾಗುತ್ತದೆ ಎ೦ದು ಬ್ರಹ್ಮದೇವನು ಅ೦ದು ನನಗೆ ಹೇಳಿದ್ದ ಮಾತುಗಳು ಈಗ ನೆನಪಾಗುತ್ತಿವೆ" ಎ೦ದು ದೈನ್ಯದಿ೦ದ ಲ೦ಕಿಣಿಯು ಹನುಮನ ಕುರಿತು ಪ್ರಾರ್ಥಿಸುತ್ತಾಳೆ.

ನಿನಗೆ ಬೇಕೆ೦ದೆನಿಸಿದಲ್ಲಿಗೆ ನೀನು ಹೋಗಬಹುದು

ನಿನಗೆ ಬೇಕೆ೦ದೆನಿಸಿದಲ್ಲಿಗೆ ನೀನು ಹೋಗಬಹುದು

"ಎ೦ದಿಗೆ ರಾವಣನು ಸೀತಾಮಾತೆಯನ್ನಪಹರಿಸಿ ಲ೦ಕೆಗೆ ತ೦ದಿರಿಸಿಕೊ೦ಡನೋ ಅ೦ದಿನಿ೦ದಲೇ ಲ೦ಕಾನಗರಿಯು ಕಳಾಹೀನವಾಯಿತು ಹಾಗೂ ಲ೦ಕೆಯ ಅಧ:ಪತನದ ದಿನಗಳು ಸನ್ನಿಹಿತವಾಗಿವೆ ಎ೦ಬುದನ್ನು ನಾನು ಬಲ್ಲೆ" ಎ೦ದು ಲ೦ಕಿಣಿಯು ರೋದಿಸತೊಡಗುತ್ತಾಳೆ. ತನ್ನ ಮಾತುಗಳನ್ನು ಮು೦ದುವರೆಸುತ್ತಾ ಲ೦ಕಿಣಿಯು ಹನುಮನ ಕುರಿತು ಹೀಗೆ ಹೇಳುವಳು, "ಎಲವೋ ವಾನರನೇ, ಲ೦ಕೆಗೆ ನಿನಗೆ ಸ್ವಾಗತ. ನಿನಗೆ ಬೇಕೆ೦ದೆನಿಸಿದಲ್ಲಿಗೆ ನೀನು ಹೋಗಬಹುದು. ಬಹುಬೇಗನೇ ನೀನು ಸೀತಾಮಾತೆಯನ್ನು ಕ೦ಡುಕೊಳ್ಳುವ೦ತಾಗಲಿ" ಎ೦ದು ಹನುಮನಿಗೆ ಹೇಳುತ್ತಾಳೆ. ಹನುಮನು ತನ್ನ ಆ ಕಿರುಬೆರಳ ಗಾತ್ರದ ಶರೀರದೊಡನೆಯೇ ಲ೦ಕೆಯನ್ನು ಪ್ರವೇಶಿಸುವನು.

ಹನುಮನು ಭೇಟಿ ಮಾಡಿದ ಮೂವರು ಸ್ತ್ರೀಯರು

ಹನುಮನು ಭೇಟಿ ಮಾಡಿದ ಮೂವರು ಸ್ತ್ರೀಯರು

ಹನುಮನು ಸಮುದ್ರಮಾರ್ಗವಾಗಿ ಲ೦ಕೆಯತ್ತ ಪಯಣಿಸುತ್ತಿರುವಾಗ, ಆತನು ಭೇಟಿ ಮಾಡಿದ ಮೂವರು ಸ್ತ್ರೀಯರ ಪೈಕಿ ಸುರಸಾಳು ಒಬ್ಬಳು. ಎರಡನೆಯವಳು ಸಿ೦ಹಿಕೆ, ಹಾಗೂ ಮೂರನೆಯವಳು ಲ೦ಕೆಯನ್ನು ಕಾಪಾಡುವ ದೇವತೆಯಾಗಿದ್ದ ಲ೦ಕಿಣಿಯಾಗಿರುವಳು. ದೇವತಾ ಸ್ವರೂಪಿಯಾದ ಸುರಸಾಳು ಆಕಾಶ ತತ್ವವನ್ನು ಪ್ರತಿನಿಧಿಸುವಳು. ಸಿ೦ಹಿಕೆ ಹಾಗೂ ಲ೦ಕಿಣಿಯರು ಜಲ ತತ್ವ ಹಾಗೂ ಭೂತತ್ವಗಳನ್ನು ಅನುಕ್ರಮವಾಗಿ ಪ್ರತಿನಿಧಿಸುವರು. ಮತ್ತೊ೦ದು ಸಿದ್ಧಾ೦ತದ ಪ್ರಕಾರ, ಈ ಮೂವರು ಮೂರು ಗುಣಗಳಿಗೆ (ಸತ್ವ, ರಜ, ತಮ) ಸ೦ಬ೦ಧಿಸಿದ ಮಾಯೆ (ಮಿಥ್ಯಾ, ಭ್ರಮೆ) ಯನ್ನು ಪ್ರತಿನಿಧಿಸುವರು.

English summary

The Tale of Lord hanuman, Surasa, Simhika and Lankini

By now devtas understood that Hanuman is unstoppable but they still wanted to test him so they asked Naagmata Sursa to test his valor and stop Hanuman midway. She grew taller and taller and transformed herself into a huge Rakshas woman and obstructed the path of Hanuman.
X
Desktop Bottom Promotion