For Quick Alerts
ALLOW NOTIFICATIONS  
For Daily Alerts

ಲುಬ್ಧಕ ಮತ್ತು ಶಿವ ದೇವರ ರೋಚಕ ಕಥೆ

|

ಹಿಂದೂ ಧರ್ಮದಲ್ಲಿ ಈಶ್ವರ ದೇವರನ್ನು ಪೂಜಿಸುವ ಒಂದು ಪಂಗಡವಾದರೆ, ಮತ್ತೊಂದು ವಿಷ್ಣುವನ್ನು ಪೂಜಿಸುವರು. ಈಶ್ವರ ದೇವರು ಬೇರೆಲ್ಲಾ ದೇವರಿಗಿಂತ ಬೇಗನೆ ಒಲಿಯುವರು ಎನ್ನುವ ಮಾತಿದೆ. ಅದೇ ರೀತಿಯ ಈಶ್ವರ ದೇವರಿಗೆ ಅತೀ ದೊಡ್ಡ ಹಬ್ಬವೆಂದರೆ ಅದು ಮಹಾಶಿವರಾತ್ರಿ. ಈ ದಿನದಂದು ಈಶ್ವರ ದೇವರನ್ನು ಆರಾಧಿಸಿದರೆ ಬೇಗನೆ ಒಲಿಯುವರು.

ಪುರಾಣಗಳಲ್ಲಿ ಈಶ್ವರ ದೇವರನ್ನು ಹೊಗಲುವಂತಹ ಹಲವಾರು ಕಥೆಗಳು ಇವೆ. ಇದರಲ್ಲಿ ಒಂದು ಲುಬ್ಧಕನ ಕಥೆ. ಪುರಾಣಗಳಲ್ಲಿ ಶಿವ ಹಾಗೂ ಲುಬ್ಧಕ ದ ಬಗ್ಗೆ ತುಂಬಾ ರೋಚಕ ಕಥೆಯಿದೆ. ಮಹಾಶಿವರಾತ್ರಿಯಂದು ಶಿವ ಪೂಜಿಸಿದರೆ ಯಾವ ಫಲವು ಸಿಗುವುದು ಎಂದು ತಿಳಿಯುವುದು. ಈ ಕಥೆಯ ಬಗ್ಗೆ ನಾವು ಕೂಡ ತಿಳಿಯುವ...

ಲುಬ್ಧಕ ಯಾರು?

ಲುಬ್ಧಕ ಯಾರು?

ಲುಬ್ಧಕ ಒಬ್ಬ ಮರ ಕಡಿಯುವ ಕಸುಬು ಮಾಡುವಂತಹ ವ್ಯಕ್ತಿ. ಆತ ಪ್ರತಿನಿತ್ಯವು ಕಾಡಿಗೆ ತೆರಳಿ, ಮರಗಳನ್ನು ಕಡಿದು, ಅದರಿಂದ ಸೌದೆ ತಯಾರಿಸಿಕೊಂಡು ಮಾರುಕಟ್ಟೆಗೆ ಬಂದು ಮಾರುತ್ತಲಿದ್ದ. ಅಂದಿನ ಕಾಲದಲ್ಲಿ ಯಾವುದೇ ಸಾಮಾನು ಕೊಳ್ಳಲು ಮತ್ತೊಂದು ಸಾಮಾನು ನೀಡುವಂತಹ ವಿನಿಮಯ ವ್ಯವಸ್ಥೆ ಚಾಲ್ತಿಯಲ್ಲಿತ್ತು. ಸೌದೆಯನ್ನು ಅಡುಗೆ ಮಾಡಲು ಮತ್ತು ಇತರ ಕೆಲವೊಂದು ರೀತಿಯ ಉಪಯೋಗಗಳಿಗೆ ಬಳಸಲಾಗುತ್ತಿತ್ತು. ಸೌದೆಗೆ ಪ್ರತಿಯಾಗಿ ಅಕ್ಕಿ, ಧಾನ್ಯ, ಬಟ್ಟೆ ಮತ್ತು ಇತರ ಕೆಲವೊಂದು ಸಾಮಗ್ರಿಗಳು ಸಿಗುತ್ತಲಿದ್ದವು.

ಸೌದೆಗಾಗಿ ಹುಡುಕಾಟ ನಡೆಸುವುದು ದೊಡ್ಡ ಸಾಹಸ

ಸೌದೆಗಾಗಿ ಹುಡುಕಾಟ ನಡೆಸುವುದು ದೊಡ್ಡ ಸಾಹಸ

ಸೌದೆಗಾಗಿ ಆತ ಪ್ರತಿನಿತ್ಯವು ಹೊಸ ಹೊಸ ಕಾಡುಗಳಿಗೆ ಹೋಗಬೇಕಾಗಿತ್ತು ಮತ್ತು ಹೊಸ ಮರಗಳನ್ನು ಹುಡುಕಿ ಅಲ್ಲಿಂದ ಸೌದೆ ತಯಾರಿಸಿ ತರಬೇಕಾಗಿತ್ತು. ಇದರಿಂದ ಆತ ಹೊಸ ಹೊಸ ಪ್ರದೇಶಗಳಿಗೆ ಹೋಗಲು ತುಂಬಾ ಆನಂದಿಸುತ್ತಿದ್ದ. ಕೆಲವೊಂದು ಸಲ ಆತ ಹೊಸ ಕಾಡುಗಳಿಗೆ ಕೂಡ ಹೋಗುತ್ತಲಿದ್ದ. ಒಂದು ಸಲ ಆತ ಹೊಸ ಕಾಡಿನೊಳಗೆ ಪ್ರವೇಶ ಮಾಡಿದ. ಆತನಿಗೆ ಆ ಜಾಗವು ತುಂಬಾ ಇಷ್ಟವಾಯಿತು ಮತ್ತು ದಿನಪೂರ್ತಿ ಅಲ್ಲಿ ಸೌದೆ ಕಡಿಯುತ್ತಲಿದ್ದ. ಕಾಡಿನಲ್ಲಿ ಇನ್ನಷ್ಟು ಹುಡುಕಬೇಕು ಎಂದು ಅಂದುಕೊಂಡು ಮುಂದೆ ಸಾಗಬೇಕು ಎಂದು ನಿರ್ಧಾರ ಮಾಡಿದ.

Most Read:ಭಾರತೀಯ ಹಿಂದೂ ಧರ್ಮದ ಆಚರಣೆಗಳ ಹಿಂದೆ ಇರುವ ವೈಜ್ಞಾನಿಕ ಕಾರಣಗಳು

ಲುಬ್ಧಕ ಕಾಡಿನಲ್ಲಿ ದಾರಿ ತಪ್ಪಿದ

ಲುಬ್ಧಕ ಕಾಡಿನಲ್ಲಿ ದಾರಿ ತಪ್ಪಿದ

ಸೂರ್ಯ ಮುಳುಗುವ ಮೊದಲು ದಿನವನ್ನು ಅಂತ್ಯಗೊಳಿಸಬೇಕು ಎಂದು ಆತ ನಿರ್ಧಾರ ಮಾಡಿದ. ಇದರಿಂದಾಗಿ ಆತ ಮರಳಲು ನಿರ್ಧರಿಸಿದ. ಅದೇ ದಾರಿಯಾಗಿ ಆತನ ಹಿಂತಿರುಗಲು ನಿರ್ಧರಿಸಿದ. ಈ ವೇಳೆ ಆತನಿಗೆ ದಾರಿಯು ತುಂಬಾ ದೀರ್ಘವಾಗುತ್ತಲಿದೆ ಎಂದು ಅನಿಸಿತು. ತಾನು ಬಂದಂತಹ ದಾರಿಯು ತಪ್ಪಿದೆ ಎಂದು ಆತನಿಗೆ ಆ ಕ್ಷಣಕ್ಕೆ ಅರಿವಾಯಿತು ಮತ್ತು ಆತ ಬೇರೆ ದಾರಿಯಲ್ಲಿ ಬಂದಿದ್ದ.

ಲುಬ್ಧಕ ಮರದ ಮೇಲೆ ಅಡಗಿ ಕುಳಿತ

ಲುಬ್ಧಕ ಮರದ ಮೇಲೆ ಅಡಗಿ ಕುಳಿತ

ದಟ್ಟಾರಣ್ಯದ ಮಧ್ಯೆ ಲುಬ್ಧಕ ದಾರಿ ತಪ್ಪಿದ್ದ. ಕತ್ತಲು ಕವಿಯುತ್ತಿದ್ದ ಕಾರಣದಿಂದಾಗಿ ಕಾಡು ಪ್ರಾಣಿಗಳಿಂದ ರಕ್ಷಣೆ ಪಡೆಯಲು ಆತ ಒಂದು ಮರವನ್ನೇರಿ ಕುಳಿತುಕೊಂಡ. ಏಕಾಂಗಿಯಾಗಿದ್ದ ಲುಬ್ಧಕ ನಿಗೆ ಗೊಂದಲವು ಉಂಟಾಯಿತು. ಇನ್ನೊಂದು ಕಡೆಯಿಂದ ಕಾಡು ಪ್ರಾಣಿಗಳು ಕೂಗುವ ಶಬ್ದವು ಆತನಲ್ಲಿ ಮತ್ತಷ್ಟು ಭೀತಿಯನ್ನು ಉಂಟು ಮಾಡಿತು. ಮರವನ್ನೇರಿ ಕುಳಿತುಕೊಂಡ ಬಳಿಕ ಆತ ಸಂಪೂರ್ಣ ರಾತ್ರಿಯನ್ನು ಅಲ್ಲಿ ಕಳೆಯಲು ನಿರ್ಧರಿಸಿದ. ತನಗೆ ಹತ್ತಿರದಲ್ಲೇ ಇದ್ದಂತಹ ಮರವನ್ನೇರಿ ಆತ ಕುಳಿತುಕೊಂಡ.

ಬಿಲ್ವಾ ಮರದ ಎಲೆಗಳನ್ನು ಕೀಳುತ್ತಲಿದ್ದ

ಬಿಲ್ವಾ ಮರದ ಎಲೆಗಳನ್ನು ಕೀಳುತ್ತಲಿದ್ದ

ಮರವನ್ನು ಏರಿ ಕುಳಿತುಕೊಂಡ ಬಳಿಕ ಎಲೆಗಳನ್ನು ನೋಡಿದರೆ ಅದು ಬಿಲ್ವಾ ಮರವಾಗಿತ್ತು. ಮುಂದೇನು ಮಾಡುವುದು? ಕಾಡಿನಲ್ಲಿ ಸುತ್ತಾಡಿ ಸಂಪೂರ್ಣವಾಗಿ ದಣಿದಿರುವ ಕಾರಣದಿಂದಾಗಿ ದೇಹದಕ್ಕೆ ವಿಶ್ರಾಂತಿ ಬೇಕಾಗಿತ್ತು ಮತ್ತು ಮರದ ಮೇಲೆ ಕುಳಿತು ಕೊಂಡು ಆತ ನಿದ್ರೆಗೆ ಜಾರಿದರೆ ಆಗ ಕೆಳಗೆ ಬಿದ್ದು ಪ್ರಾಣಿಗಳಿಗೆ ಬಲಿಯಾಗಬೇಕಾಗುತ್ತದೆ ಎಂದು ಆತನಿಗೆ ಅನಿಸಿತು. ಇದಕ್ಕಾಗಿ ಆತ ಒಂದು ಆಟವಾಡಲು ನಿರ್ಧಾರ ಮಾಡಿದ. ಅದರಲ್ಲಿ ಆತ ಎಲೆ ಮತ್ತು ಮರದ ಆಟವಾಡಲು ನಿರ್ಧರಿಸಿದ. ಎಲೆಗಳನ್ನು ಕೀಳುವುದು ಮತ್ತು ಅದನ್ನು ನೆಲಕ್ಕೆ ಹಾಕುವುದು. ಈ ವೇಳೆ ಅದನ್ನು ಎಣಿಸುವುದು, ಇದರಿಂದ ಮೆದುಳು ಜಾಗೃತವಾಗಿರುವುದು ಮತ್ತು ನಿದ್ರೆ ಕೂಡ ಬರುವುದಿಲ್ಲ ಎಂದು ಲುಬ್ಧಕ ನಿರ್ಧಾರ ಮಾಡಿದ.

ಸಿಂಹದ ಘರ್ಜನೆ ಕೇಳಿತು

ಸಿಂಹದ ಘರ್ಜನೆ ಕೇಳಿತು

ಎಲೆಗಳನ್ನು ಕೆಳಗೆ ಹಾಕಿಕೊಂಡು ಲೆಕ್ಕ ಹಾಕುತ್ತಿದ್ದಂತೆ ಆತನಿಗೆ ಸಿಂಹವು ಘರ್ಜಿಸುತ್ತಿರುವುದು ಕೇಳಿತು. ಅದಕ್ಕೆ ಕೂಡ ತನ್ನ ಬಳಿಯಲ್ಲಿ ಮನುಷ್ಯನು ಇರುವುದು ತಿಳಿದಿರಬೇಕು. ಸಿಂಹವು ಮರದ ಹತ್ತಿರಕ್ಕೆ ಬರುತ್ತಿರುವಂತೆ ಅದರ ಘರ್ಜನೆ ಕೂಡ ಜೋರಾಗಿ ಕೇಳಿಸುತ್ತಾ ಇತ್ತು. ಕೆಲವೇ ಕ್ಷಣಗಳಲ್ಲಿ ಸಿಂಹವು ಮರದ ಕೆಳಗೆ ನಿಂತುಕೊಂಡು ಲುಬ್ಧಕ ನನ್ನು ಕೆಂಪು ಕಣ್ಣಿನಿಂದ ನೋಡುತ್ತಲಿತ್ತು. ಸಿಂಹವು ಖಂಡಿತವಾಗಿಯೂ ನನ್ನನ್ನು ತಿನ್ನಲಿದೆ ಎಂದು ಆತನಿಗೆ ಅನಿಸಿತು. ಸಿಂಹವು ಹಾರಿ ತನ್ನನ್ನು ಹಿಡಿಯಲಿದೆ ಎಂದು ಆತನಿಗೆ ಭೀತಿಯಾಗುತ್ತಲಿತ್ತು. ತನ್ನತ್ತ ನೋಡಿದ ಬಳಿಕ ಅದು ದೂರ ಹೋಗುತ್ತಲಿರುವುದು ಆತನಿಗೆ ಕಾಣಿಸಿತು. ಇದರಿಂದ ಲುಬ್ಧಕ ಮತ್ತಷ್ಟು ಗೊಂದಲಕ್ಕೆ ಒಳಗಾದ. ಸಿಂಹವು ತನಗೆ ಪ್ರಾಣ ಭಿಕ್ಷೆ ನೀಡಿರುವುದು ಯಾಕೆ ಎಂದು ಆತನಿಗೆ ಗೊಂದಲವು ಉಂಟಾಯಿತು.

Most Read:ಸಂಕಷ್ಟ ನಿವಾರಣೆಗೆ ಇಂತಹ ದೇವರುಗಳ ಮುಂದೆ ದೀಪ ಹಚ್ಚಿಡಿ

ಮರದ ಬುಡದಲ್ಲಿ ಶಿವಲಿಂಗವಿತ್ತು!

ಮರದ ಬುಡದಲ್ಲಿ ಶಿವಲಿಂಗವಿತ್ತು!

ಎಲೆಗಳನ್ನು ಕಿತ್ತು ಕೆಳಗೆ ಹಾಕುತ್ತಲೇ ಆತ ಇನ್ನರ್ಧ ರಾತ್ರಿಯನ್ನು ಕಳೆದ. ಸೂರ್ಯನ ಮೊದಲ ಕಿರಣಗಳು ಕಾಡಿನೊಳಗೆ ಪ್ರವೇಶಿಸುತ್ತಾ ಇರುವಂತೆ ಆತನ ಹೃದಯವು ತುಂಬಾ ಹಗುರವಾಯಿತು. ಆತ ಮರದಿಂದ ಕೆಳಗೆ ಜಿಗಿದ. ಅಲ್ಲಿ ನೋಡಿದರೆ ಮರದ ಬುಡದಲ್ಲಿ ಒಂದು ಶಿವಲಿಂಗವಿದೆ. ಆತ ಶಿವಲಿಂಗದ ಮೇಲೆ ಬಿಲ್ವಾ ಪತ್ರೆಗಳನ್ನು ಹಾಕುತ್ತಲಿದ್ದ. ಈ ಎಲೆಗಳು ತುಂಬಾ ಪವಿತ್ರವೆಂದು ಪರಿಗಣಿಸಲಾಗಿದೆ. ಆ ದಿನ ವಿಶೇಷವೆಂದರೆ ಶಿವರಾತ್ರಿ ಕೂಡ ಆಗಿತ್ತು.

ದೇವರು ನೀಡಿದ ಆಶೀರ್ವಾದ ಅವರಿಗೆ ಅರ್ಥವಾಯಿತು

ದೇವರು ನೀಡಿದ ಆಶೀರ್ವಾದ ಅವರಿಗೆ ಅರ್ಥವಾಯಿತು

ಸಿಂಹವು ತನಗೆ ಪ್ರಾಣ ಭಿಕ್ಷೆ ನೀಡಲು ಕಾರಣವೇನೆಂದು ಆತನಿಗೆ ಈಗ ಅರಿವಿಗೆ ಬಂತು. ರಾತ್ರಿಯಿಡಿ ಶಿವಲಿಂಗದ ಮೇಲೆ ಬಿಲ್ವಾ ಪತ್ರೆಗಳನ್ನು ಹಾಕಿದ್ದ ಪರಿಣಾಮವಾಗಿ ಸಿಂಹವು ತನಗೆ ಪ್ರಾಣ ಭಿಕ್ಷೆ ನೀಡಿದೆ ಎಂದು ಲುಬ್ಧಕ ನ ಅರಿವಿಗೆ ಬಂತು. ಆ ದಿನ ಆತ ಶಿವ ದೇವರ ಆಶೀರ್ವಾದದಿಂದ ಸೌದೆಯನ್ನು ಕೂಡ ಒಳ್ಳೆಯ ಬೆಲೆಗೆ ಮಾರಾಟ ಮಾಡಿದ.

English summary

The Story Of Lubdhaka And Lord Shiva

Shivaratri is the biggest festival dedicated to Lord Shiva, who is believed to be the easiest to please among all gods. Various stories in his praise are narrated on this day. One of these is the story of Lubdhaka which explains the significance of worshipping him on Shivratri and offering Bilwa leaves to him.
X
Desktop Bottom Promotion