For Quick Alerts
ALLOW NOTIFICATIONS  
For Daily Alerts

ಶ್ರೀಕೃಷ್ಣ ಮತ್ತು ಮಾವಿನ ಹಣ್ಣು ಮಾರುವವಳ ಕಥೆ

|

ಶ್ರೀಕೃಷ್ಣ ದೇವರು ಮಹಾಭಾರತದಲ್ಲಿ ನ್ಯಾಯ, ಧರ್ಮ ಮಾರ್ಗವಾಗಿ ನಡೆದರೆ ಮಾತ್ರ ಮೋಕ್ಷವು ಪ್ರಾಪ್ತಿಯಾಗುಗುವುದು ಎಂದು ಭೋದನೆ ಮಾಡುವರು. ಶ್ರೀಕೃಷ್ಣ ದೇವರ ಕೆಲವೊಂದು ಕಥೆಗಳು ತುಂಬಾ ಪ್ರೇರಣಾತ್ಮಕವಾಗಿ ಇರುತ್ತದೆ. ಇಂತಹ ಕಥೆಗಳಲ್ಲಿ ಸಿಗುವಂತಹ ನೀತಿ ಪಾಠಗಳನ್ನು ತಿಳಿದುಕೊಂಡು ಅದನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಆಗ ಖಂಡಿತವಾಗಿಯೂ ಮನುಷ್ಯನಿಗೆ ಜೀವನದಲ್ಲಿ ಯಶಸ್ಸು ಹಾಗೂ ನೆಮ್ಮದಿ ಸಿಗುವುದು.

ಶ್ರೀಕೃಷ್ಣ ದೇವರ ಕಥೆಗಳನ್ನು ಓದುತ್ತಲಿದ್ದರೆ ಆಗ ದೇವರ ಮಹಿಮೆಗಳು ನಮಗೆ ತಿಳಿಯುವುದು ಮಾತ್ರವಲ್ಲದೆ ನಾವು ಕೂಡ ಇದರಲ್ಲಿ ಒಂದು ಪಾತ್ರವಾಗುತ್ತೇವೆ. ಬಾಲ್ಯದಿಂದ ಹಿಡಿದು, ಯೌವನ ಹೀಗೆ ಶ್ರೀಕೃಷ್ಣನ ಮಹಿಮೆಯು ಅಪಾರ. ಶ್ರೀಕೃಷ್ಣ ಪರಮಾತ್ಮನ ಬಗ್ಗೆ ಪುರಾಣದಲ್ಲಿ ಹಲವಾರು ಕಥೆಗಳು ಇವೆ. ಇದರಲ್ಲಿ ಒಂದು ಶ್ರೀಕೃಷ್ಣ ಮತ್ತು ಹಣ್ಣು ಮಾರುವಾತನ ಕಥೆ. ದೇವರ ಹೃದಯಲ್ಲಿ ಸ್ಥಾನ ಪಡೆಯಲು ನಮಗೆ ದೊಡ್ಡ ತಪಸ್ಸು ಮಾಡಬೇಕಾಗಿಲ್ಲ.....

ಶ್ರೀಕೃಷ್ಣ

ಶ್ರೀಕೃಷ್ಣ

ಶ್ರೀಕೃಷ್ಣ ದೇವರು ಮಹಾಭಾರತದಲ್ಲಿ ನ್ಯಾಯ, ಧರ್ಮ ಮಾರ್ಗವಾಗಿ ನಡೆದರೆ ಮಾತ್ರ ಮೋಕ್ಷವು ಪ್ರಾಪ್ತಿಯಾಗುಗುವುದು ಎಂದು ಭೋದನೆ ಮಾಡುವರು. ಶ್ರೀಕೃಷ್ಣ ದೇವರ ಕೆಲವೊಂದು ಕಥೆಗಳು ತುಂಬಾ ಪ್ರೇರಣಾತ್ಮಕವಾಗಿ ಇರುತ್ತದೆ. ಇಂತಹ ಕಥೆಗಳಲ್ಲಿ ಸಿಗುವಂತಹ ನೀತಿ ಪಾಠಗಳನ್ನು ತಿಳಿದುಕೊಂಡು ಅದನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಆಗ ಖಂಡಿತವಾಗಿಯೂ ಮನುಷ್ಯನಿಗೆ ಜೀವನದಲ್ಲಿ ಯಶಸ್ಸು ಹಾಗೂ ನೆಮ್ಮದಿ ಸಿಗುವುದು. ಶ್ರೀಕೃಷ್ಣ ದೇವರ ಕಥೆಗಳನ್ನು ಓದುತ್ತಲಿದ್ದರೆ ಆಗ ದೇವರ ಮಹಿಮೆಗಳು ನಮಗೆ ತಿಳಿಯುವುದು ಮಾತ್ರವಲ್ಲದೆ ನಾವು ಕೂಡ ಇದರಲ್ಲಿ ಒಂದು ಪಾತ್ರವಾಗುತ್ತೇವೆ. ಬಾಲ್ಯದಿಂದ ಹಿಡಿದು, ಯೌವನ ಹೀಗೆ ಶ್ರೀಕೃಷ್ಣನ ಮಹಿಮೆಯು ಅಪಾರ. ಶ್ರೀಕೃಷ್ಣ ಪರಮಾತ್ಮನ ಬಗ್ಗೆ ಪುರಾಣದಲ್ಲಿ ಹಲವಾರು ಕಥೆಗಳು ಇವೆ. ಇದರಲ್ಲಿ ಒಂದು ಶ್ರೀಕೃಷ್ಣ ಮತ್ತು ಹಣ್ಣು ಮಾರುವಾತನ ಕಥೆ. ದೇವರ ಹೃದಯಲ್ಲಿ ಸ್ಥಾನ ಪಡೆಯಲು ನಮಗೆ ದೊಡ್ಡ ತಪಸ್ಸು ಮಾಡಬೇಕಾಗಿಲ್ಲ. ಕೇವಲ ನಿಸ್ವಾರ್ಥ ಭಾವನೆ ಇದ್ದರೆ ನಾವು ದೇವರನ್ನು ಒಲಿಸಿಕೊಳ್ಳಬಹುದು ಎಂದು ಇಲ್ಲಿ ಹೇಳಲಾಗಿದೆ. ಈ ಕಥೆಯ ಬಗ್ಗೆ ನೀವು ಮುಂದಕ್ಕೆ ಓದಿಕೊಳ್ಳಿ.

ಬೆಣ್ಣೆ ಬಗ್ಗೆ ಕೃಷ್ಣನಿಗೆ ಇದ್ದ ಆಸೆ

ಬೆಣ್ಣೆ ಬಗ್ಗೆ ಕೃಷ್ಣನಿಗೆ ಇದ್ದ ಆಸೆ

ಯಶೋಧ ಮಾತೆಯು ಮಜ್ಜಿಗೆಯಿಂದ ಬೆಣ್ಣೆ ತೆಗೆಯಲು ಮಂಥಿಸುತ್ತಿದ್ದಾಗ ಕೃಷ್ಣನು ಅದರಲ್ಲಿ ಬರುವಂತಹ ಬೆಣ್ಣೆಯಲ್ಲಿ ಪಾಲು ಪಡೆಯುವ ತನಕ ಆಕೆಯನ್ನು ಅಲ್ಲಿಂದ ಬಿಡುತ್ತಲೇ ಇರಲಿಲ್ಲ. ಬೆಣ್ಣೆಯ ಬಿಳಿ ಬಣ್ಣ ಮತ್ತು ಅದರ ಹೊಳಪು ಕೃಷ್ಣನ ಹಸಿವನ್ನು ಮತ್ತಷ್ಟು ಹೆಚ್ಚಿಸಿದೆ. ಮನೆಯ ಹೊರಗಡೆ ಹಣ್ಣು ಮಾರುತ್ತಿರುವ ಮಹಿಳೆಯು ಬೊಬ್ಬೆ ಹಾಕುತ್ತಾ, ``ಹಣ್ಣುಗಳು, ಸಿಹಿಯಾದ ಮಾವಿನ ಹಣ್ಣುಗಳು, ಹಣ್ಣಾದ ಮಾವಿನ ಹಣ್ಣುಗಳು'' ಎಂದು ಹೇಳುವಳು. ಗೋಕುಲದಲ್ಲಿ ಮಹಿಳೆಯು ಮಾವಿನ ಹಣ್ಣುಗಳನ್ನು ಮಾರಾಟ ಮಾಡಲು ಬಂದಿರುವಳು.

ಕೃಷ್ಣ ಮೌನವಾಗಿಯೇ ಎಲ್ಲವನ್ನು ನೋಡುತ್ತಿರುವನು!

ಕೃಷ್ಣ ಮೌನವಾಗಿಯೇ ಎಲ್ಲವನ್ನು ನೋಡುತ್ತಿರುವನು!

ಕೃಷ್ಣನ ತಂದೆ ನಂದರಾಜ್ ಅವರು ಹಣ್ಣು ಮಾರುವಾಕೆಯನ್ನು ಕರೆದು, ``ದಯಮಾಡಿ ನೀನು ಇಲ್ಲಿ ಬರುವೆಯಾ? ನಮಗೆ ಸ್ವಲ್ಪ ಮಾವಿನ ಹಣ್ಣುಗಳು ಬೇಕು'' ಎನ್ನುವರು. ಮನೆಯ ಪ್ರವೇಶ ದ್ವಾರದ ಬಾಗಿಲು ಅರ್ಧ ತೆರೆದಿರುತ್ತದೆ. ಇದರಿಂದಲೇ ಕೃಷ್ಣನು ತನ್ನ ತಾಯಿಯ ಜತೆಗೆ ಕುಳಿತುಕೊಂಡು ಎಲ್ಲವನ್ನು ನೋಡುತ್ತಲಿರುವನು. ಇದೇ ವೇಳೆ ಮನೆಯ ಪ್ರವೇಶ ದ್ವಾರದ ಮುಂದೆ ಎರಡು ಬುಟ್ಟಿಗಳಲ್ಲಿ ಮಾವಿನ ಹಣ್ಣುಗಳನ್ನು ತುಂಬಿಕೊಂಡಿರುವಂತಹ ಮಹಿಳೆಯು ಬಂದು ನಿಲ್ಲುವಳು. ಅದರಲ್ಲಿದ್ದ ಮಾವುಗಳು ಬಂಗಾರದ ಬಣ್ಣದಿಂದ ಹೊಳೆಯುತ್ತಲಿದ್ದವು. ನಂದರಾಜ್ ಅವರು ಮಾವಿನ ಹಣ್ಣುಗಳ ಬೆಲೆಯ ಬಗ್ಗೆ ಚೌಕಾಶಿ ಮಾಡುತ್ತಾರೆ ಎಂದು ಮಾರುವಾಕೆ ಭಾವಿಸಿದ್ದಳು. ಆದರೆ ಅವರು ನೇರವಾಗಿ ಒಳಗೆ ಹೋಗಿ ಧಾನ್ಯಗಳಿಂದ ತುಂಬಿದ್ದ ಬುಟ್ಟಿಯನ್ನು ಆಕೆಗೆ ಕೊಟ್ಟರು.

ಒಂದು ಬುಟ್ಟಿ ಮಾವಿನ ಹಣ್ಣುಗಳಿಗೆ ಒಂದು ಬುಟ್ಟಿ ಧಾನ್ಯಗಳು

ಒಂದು ಬುಟ್ಟಿ ಮಾವಿನ ಹಣ್ಣುಗಳಿಗೆ ಒಂದು ಬುಟ್ಟಿ ಧಾನ್ಯಗಳು

ಅಂದಿನ ದಿನಗಳಲ್ಲಿ ಯಾವುದೇ ವಸ್ತುಗಳನ್ನು ಖರೀದಿ ಮಾಡಲು ಮತ್ತೊಂದು ವಸ್ತುವನ್ನು ನೀಡುವಂತಹ ವಿನಿಮಯ ಪದ್ಧತಿಯು ಜಾರಿಯಲ್ಲಿತ್ತು. ಹೀಗಾಗಿ ವಸ್ತುಗಳನ್ನು ವಸ್ತುಗಳಿಗೆ ವಿನಿಮಯ ಮಾಡಿಕೊಳ್ಳಲಾಗುತ್ತಾ ಇತ್ತು. ಒಂದು ಬುಟ್ಟಿ ಮಾವಿನ ಹಣ್ಣುಗಳನ್ನು ಖರೀದಿ ಮಾಡಲು ನನಗೆ ಒಂದು ಬುಟ್ಟಿ ಧಾನ್ಯಗಳು ಸಾಕೇ ಎಂದು ನಂದರಾಜ್ ಅವರು ಕೇಳುವರು. ಹಣ್ಣು ಮಾರುವಾಕೆ ತನ್ನ ತಲೆ ತಗ್ಗಿಸಿ, ``ಇಂದಿನವರೆಗೆ ನನಗೆ ಯಾರು ಕೂಡ ಒಂದು ಬುಟ್ಟಿ ಧಾನ್ಯಗಳನ್ನು ನೀಡಿಲ್ಲ. ಕೇವಲ ಅರ್ಧ ಬುಟ್ಟಿ ನೀಡುತ್ತಲಿದ್ದರು''. ಸಂತೋಷದಿಂದ ಆಕೆ ಒಂದು ಬುಟ್ಟಿ ಮಾವಿನ ಹಣ್ಣುಗಳನ್ನು ನೀಡಿದಳು.

 ಕೃಷ್ಣನಿಗೆ ಮಾವಿನ ಹಣ್ಣು ಬೇಕಿತ್ತು!

ಕೃಷ್ಣನಿಗೆ ಮಾವಿನ ಹಣ್ಣು ಬೇಕಿತ್ತು!

ಯಶೋಧ ಮಾತೆಯು ಈಗಲೂ ಮಜ್ಜಿಗೆಯಿಂದ ಬೆಣ್ಣೆಯನ್ನು ಮಂಥಿಸುತ್ತಾ ಇದ್ದರು. ಆದರೆ ಕೃಷ್ಣನ ದೃಷ್ಟಿ ಮಾತ್ರ ಹೊರಗಡೆ ನಡೆಯುತ್ತಿದ್ದ ಮಾವಿನ ಹಣ್ಣು ಮತ್ತು ಧಾನ್ಯದ ವಿನಿಮಯದತ್ತ ಇತ್ತು. ಪುಟಾಣಿ ಮೆದುಳು ಕೂಡ ಮಾವಿನ ಹಣ್ಣುಗಳನ್ನು ಧಾನ್ಯಗಳನ್ನು ನೀಡಿ ಖರೀದಿ ಮಾಡಬಹುದು ಎಂದು ತಿಳಿದು ಕೊಂಡಿತು. ಇದನ್ನು ನೋಡಿದ ಬಳಿಕ ಆತ ನೇರವಾಗಿ ಗೋದಾಮಿಗೆ ತೆರಳಿ ತನ್ನ ಎರಡು ಅಂಗೈಯಲ್ಲಿ ಆಗುವಷ್ಟು ಧಾನ್ಯವನ್ನು ಹಿಡಿದುಕೊಂಡು ಬಂದ. ಆತ ಮಾವಿನ ಹಣ್ಣುಗಳನ್ನು ಮಾರುವವಳ ಬಳಿಗೆ ತೆರಳಿ, ಧಾನ್ಯವನ್ನು ಮಹಿಳೆಯ ಅಂಗೈಗೆ ಹಾಕುತ್ತಾ,``ಈ ಧಾನ್ಯಕ್ಕೆ ವಿನಿಮಯ ಮಾಡಿ, ನನಗೆ ಕೆಲವು ಮಾವಿನ ಹಣ್ಣುಗಳನ್ನು ನೀಡುತ್ತಿಯಾ'' ಎಂದು ಕೇಳುತ್ತಾನೆ.

ಒಂದು ಬುಟ್ಟಿ ಧಾನ್ಯವೇ ಅಥವಾ ಒಂದು ಬುಟ್ಟಿ ಸಂಪತ್ತೇ?

ಒಂದು ಬುಟ್ಟಿ ಧಾನ್ಯವೇ ಅಥವಾ ಒಂದು ಬುಟ್ಟಿ ಸಂಪತ್ತೇ?

ಕೃಷ್ಣನ ಸುಂದರವಾದ ಕಣ್ಣುಗಳು, ಹಣೆ ಮೇಲೆ ಬೀಳುತ್ತಿರುವಂತಹ ಗುಂಗುರು ಕೂದಲು, ಆ ಕೂದಲಿಗೆ ಸಿಕ್ಕಿಸಿರುವಂತಹ ನವಿಲಿನ ಗರಿ...ಹೀಗೆ ಹಣ್ಣು ಮಾರುವಾಕೆ ಕೃಷ್ಣನ ಸೌಂಧರ್ಯವನ್ನು ನೋಡುತ್ತಲಿರುವಳು. ಇದಕ್ಕೆ ತಕ್ಕಂತೆ ಮುಖದ ಮೇಲಿನ ಮುಗ್ದತೆ. ಆಕೆಯ ಕಣ್ಣುಗಳು ಮಗುವಿನ ಪ್ರೇಮದಲ್ಲಿ ಮುಳುಗಿ ಹೋಯಿತು. ಆಕೆ ಸಂತೋಷದಿಂದಲೇ ತನ್ನ ಬುಟ್ಟಿಯಿಂದ ಮಾವಿನ ಹಣ್ಣನ್ನು ತೆಗೆದು ಕೃಷ್ಣನ ಕೈಗಿತ್ತಳು. ಯಾಕಿಲ್ಲ, ನಂದಲಾಲ ಎನ್ನುತ್ತಾ ಮತ್ತೊಂದು ಬುಟ್ಟಿ ನೋಡುತ್ತಲಿದ್ದರೆ ಆಗ ಆಕೆಗೆ ಅಚ್ಚರಿಯು ಕಾದಿತ್ತು. ಮಗು ನೀಡಿದಂತಹ ಧಾನ್ಯವು ಬೆಳೆಬಾಳುವ ಆಭರಣ, ಹವಳಗಳು ಮತ್ತು ಬಂಗಾರವಾಗಿ ಪರಿವರ್ತನೆ ಆಗಿತ್ತು. ಆಕೆಗೆ ಇದನ್ನು ನೋಡಿ ಮಾತೇ ಹೊರಡಲಿಲ್ಲ. ಕೃಷ್ಣನತ್ತ ಆಕೆ ನೋಡಿದಳು. ಕೃಷ್ಣನು ಮಾವಿನ ಹಣ್ಣನ್ನು ತಿನ್ನುತ್ತಲೇ ಕಿರುನಗು ನಕ್ಕ. ಆಕೆಗೆ ಈ ಮಗು ದೈವಿಸಂಭೂತವಾಗಿರುವುದು ಎಂದು ಅದಾಗಲೇ ತಿಳಿದುಬಂತು.

English summary

The Story Of Lord Krishna And The Fruit Seller

Lord Krishna's stories have always been inspirational. They are not just examples of the prowess of the lord, but also leave the reader feeling the magic of God's grace on his life and his presence everywhere. From the many stories that our scriptures tell about Lord Krishna, the one about Lord Krishna and the fruit seller puts forth the love that the lord had for everyone around him.
X
Desktop Bottom Promotion