For Quick Alerts
ALLOW NOTIFICATIONS  
For Daily Alerts

ಪ್ರತೀ ವರ್ಷ ಜನ ಮನ ಸೆಳೆಯುವ, 'ನವರಾತ್ರಿ ಹಬ್ಬ'ದ ಮಹತ್ವ

By Hemanth
|

ಹಿಂದೂ ಪುರಾಣಗಳ ಪ್ರಕಾರ ದೇವಿಯು ಭೂಮಿಗೆ ಬಂದ ಆಪತ್ತನ್ನು ವಿವಿಧ ರೂಪಗಳಲ್ಲಿ ನಿವಾರಣೆ ಮಾಡುವ ಒಂಬತ್ತು ದಿನಗಳನ್ನು ನವರಾತ್ರಿಯಂತೆ ಆಚರಿಸಲಾಗುವುದು. ನವರಾತ್ರಿಯ ವೇಳೆ ದೇವಿಯ ಒಂಭತ್ತು ರೂಪಗಳ ಆರಾಧನೆ ನಡೆಯುವುದು. ದೇವಿಯ ಆರಾಧನೆಯನ್ನು ದೇಶದ ಪ್ರತಿಯೊಂದು ಭಾಗದಲ್ಲಿರುವ ಹಿಂದೂಗಳು ಮಾಡುವರು. ಒಂಬತ್ತು ದಿನಗಳ ಕಾಲ ದೇವಿಯನ್ನು ವಿವಿಧ ರೀತಿಯಿಂದ ಶೃಂಗರಿಸಿದ ಬಳಿಕ ದಶಮಿಯಂದು ಜಲಸ್ತಂಭನ ಮಾಡಲಾಗುವುದು.

ದೇವಿಯು ನವರಾತ್ರಿ ಸಂದರ್ಭದಲ್ಲಿ ಮಹಿಷಾಸುರನನ್ನು ವಧಿಸಿದಳು ಎಂದು ನಾವೆಲ್ಲರೂ ಆಕೆಯನ್ನು ಪೂಜಿಸುತ್ತೇವೆ. ಮಹಿಷಾಸುರನು ರಾಜೋ ಗುಣ( ವಿಶ್ರಾಂತಿ ಇಲ್ಲದ ಮತ್ತು ಆಕ್ರಮಣಕಾರಿ)ದೊಂದಿಗೆ ಹುಟ್ಟಿದ ರಾಕ್ಷಸ. ಮಹಿಷಾಸುರನ ತಲೆಯು ಕೋಣದ ತಲೆಯಾಗಿರುವ ಕಾರಣ ಆತನಲ್ಲಿ ತಮೋ ಗುಣ(ಜಡತ್ವ ಮತ್ತು ಆಲಸ್ಯ)ವು ಮನೆಮಾಡಿತ್ತು. ಆತನಲ್ಲಿನ ರಾಜೋ ಮತ್ತು ತಮೋ ಗುಣದಿಂದ ಆತ ಮೂರು ಲೋಕದಲ್ಲಿಯೂ ತನ್ನ ಸಾಮ್ರಾಜ್ಯ ಸ್ಥಾಪಿಸಿದ್ದ.

Durga mata

ರಾಜೋ ಮತ್ತು ತಮೋ ಗುಣಗಳನ್ನು ಹೊಂದಿರುವ ಶುದ್ಧಿಯಿಲ್ಲದೆ ಇರುವ ವ್ಯಕ್ತಿಯನ್ನು ಕೂಡ ಮಹಿಷಾಸುರನಿಗೆ ಹೋಲಿಸಬಹುದು. ತಾಯಿ ದುರ್ಗೆಯು ಜನರಲ್ಲಿ ಇರುವ ಮಹಿಷಾಸುರ ಗುಣವನ್ನು ತೆಗೆದುಹಾಕಿ ಆತ್ಮವು ದೈವಾತ್ಮವಾಗುವಂತೆ ಮಾಡುವಳು. ಮಹಿಷಾಸುರನ ವಧೆಯು ಅಂತಿಮವಾಗಿ ಅಹಂ ಕೊನೆಗೊಂಡು ದೈವತ್ವವು ಸ್ಥಾನ ಪಡೆಯುತ್ತದೆ ಎನ್ನುವುದನ್ನು ತೋರಿಸಿಕೊಡುವುದು.

ತಾಯಿ ದುರ್ಗೆ
ತಾಯಿ ದುರ್ಗೆಯನ್ನು ಕೆಲವೊಂದು ಕಡೆಗಳಲ್ಲಿ ಆಕೆಯ ಒಂಭತ್ತು ಅವತಾರಗಳಿಂದ ಪೂಜಿಸಲಾಗುವುದು. ಇನ್ನು ಕೆಲವು ಕಡೆ ಮೂರು ಅವತಾರಗಳನ್ನು ಪೂಜಿಸುತ್ತಾರೆ. ದೇವಿಯನ್ನು ಮೊದಲ ಮೂರು ದಿನಗಳ ಕಾಲ ನೈಜ ಇಚ್ಛೆ ನೆರವೇರಿ, ಮನಸ್ಸಿನಲ್ಲಿರುವ ದುಷ್ಟಶಕ್ತಿಗಳು ನಿವಾರಣೆಯಾಗಲಿ ಎಂದು ಪೂಜಿಸಲಾಗುವುದು. ತಾಯಿ ದುರ್ಗೆಯ ಪೂಜಿಸಿದರೆ ಮನಸ್ಸಿನಲ್ಲಿ ಇರುವಂತಹ ದುಷ್ಟಶಕ್ತಿಗಳು ನಾಶವಾಗುವುದು ಎಂದು ಹೇಳಲಾಗುತ್ತದೆ.

ಲಕ್ಷ್ಮೀ ದೇವಿ
ಶುದ್ಧವಾಗಿರುವ ಮನಸ್ಸು ಅಂತಿಮವಾಗಿ ಮುಕ್ತಿ ಪಡೆಯುವುದು. ದುಷ್ಟಶಕ್ತಿಯ ನಿವಾರಣೆ ಮಾಡಿಕೊಂಡು ಶುದ್ಧ ಮನಸ್ಸನ್ನು ಹೊಂದಿರುವುದು. ತಾಯಿ ದುರ್ಗೆಯನ್ನು ಲಕ್ಷ್ಮೀಯ ರೂಪದಲ್ಲಿ ಪೂಜಿಸುವುದರಿಂದ ಎಲ್ಲಾ ರೀತಿಯ ಸದ್ಗುಣಗಳೊಂದಿಗೆ ಮನಸ್ಸು ಶುದ್ಧಿಯಾಗುವುದು. ಲೌಕಿಕ ಸಂಪತ್ತಿನೊಂದಿಗೆ ಆಕೆಯು ಆಧ್ಯಾತ್ಮಿಕ ಸಂಪತ್ತನ್ನು ನೀಡುವಳು. ಆಕೆಯನ್ನು ಶುದ್ಧ ಮನಸ್ಸಿನಿಂದ ಪೂಜಿಸುವ ಪ್ರತಿಯೊಬ್ಬರಿಗೂ ಸತ್ಯದ ಉನ್ನತ ಜ್ಞಾನವು ಸಿಗುವುದು. ಶುದ್ಧ ಮನಸ್ಸು ಇದ್ದರೆ ಮಾತ್ರ ದುಷ್ಟತೆಯ ನಿವಾರಣೆ ಮಾಡಿ ಸ್ವಯಂ ಜ್ಞಾನ ಪಡೆಯಬಹುದು. ಇದರಿಂದಾಗಿ ನವರಾತ್ರಿಯ ವೇಳೆ ನಾಲ್ಕನೇ ದಿನದಿಂದ ಆರನೇ ದಿನದ ತನಕ ಲಕ್ಷ್ಮೀಯ ರೂಪದಲ್ಲಿ ದುರ್ಗೆಯ ಪೂಜಿಸಲಾಗುವುದು.

ಸರಸ್ವತಿ ದೇವಿ
ಶುದ್ಧ ಮನಸ್ಸಿನಿಂದ ಎಲ್ಲಾ ರೀತಿಯ ದುಷ್ಟಶಕ್ತಿಗಳ ತೊಡೆದು ಹಾಕಿ ಜ್ಞಾನ ಹಾಗೂ ವಿದ್ಯೆ ಪಡೆಯಬಹುದು. ಜ್ಞಾನದ ದೇವತೆಯೆಂದೇ ಪೂಜಿಸಲಾಗುವ ಸರಸ್ವತಿ ದೇವಿಯನ್ನು ಅಹಂನ ಧ್ವಂಸ ಮಾಡಲು ಪೂಜಿಸುತ್ತೇವೆ. ಸರಸ್ವತಿ ದೇವಿಯ ಪೂಜೆ ಮಾಡುವುದರಿಂದ ಆಕೆಯು ನಮ್ಮಲ್ಲಿರುವ ಅಜ್ಞಾನದ ಭ್ರಮೆಯ ದೂರ ಮಾಡಿ ಅಂತಿಮವಾಗಿ ಶ್ರೇಷ್ಠ ಸತ್ಯ ಅರಿಯುವಂತೆ ಮಾಡುವಳು. ಇದರೊಂದಿಗೆ ನಾವು ಶ್ರೇಷ್ಠ ಜ್ಞಾನ ಪಡೆಯಬಹುದಾಗಿದೆ. ಅಜ್ಞಾನದಲ್ಲಿರುವ ವ್ಯಕ್ತಿಯು ಯಾವಾಗಲೂ ದುಷ್ಟ ಕಾರ್ಯ ಮಾಡುತ್ತಾನೆ. ಅದೇ ಪರಿಶುದ್ಧ ಹಾಗೂ ಜ್ಞಾನ ಹೊಂದಿರುವ ವ್ಯಕ್ತಿ ಆಧ್ಯಾತ್ಮಿಕವಾಗಿಯೂ ಸುದೃಢನಾಗಿರುವ.

ವಿಜಯದಶಮಿ
ನವರಾತ್ರಿಯ ಹತ್ತನೇ ದಿನವನ್ನು ವಿಜಯದಶಮಿಯೆಂದು ಕರೆಯಲಾಗುವುದು. ಈ ದಿನವು ಮನುಷ್ಯನು ತನ್ನಲ್ಲಿರುವ ದುಷ್ಟತೆಯ ನಿವಾರಣೆ ಮಾಡಿಕೊಂಡು ಪರಿಶುದ್ಧವಾಗಿರುವ ಮನಸ್ಸಿನೊಂದಿಗೆ ಶ್ರೇಷ್ಠ ಜ್ಞಾನವ ಪಡೆಯುವುದಾಗಿದೆ. ದೇವಿಯ ಮೂರು ರೂಪಗಳಿಗೆ ತನ್ನದೇ ಆಗಿರುವ ಪ್ರಾಮುಖ್ಯತೆ ಇದೆ. ಇದರಲ್ಲಿ ಯಾರನ್ನಾದರೂ ಪೂಜಿಸದೆ ಇದ್ದರೆ ಅಂತಿಮ ಗುರಿ ಪಡೆಯಲು ಸಾಧ್ಯವಾಗದು. ಇದರಿಂದಾಗಿ ನವರಾತ್ರಿಯ ಸಮಯದಲ್ಲಿ ನಮ್ಮಲ್ಲಿರುವ ಎಲ್ಲಾ ರೀತಿಯ ದುಷ್ಟತೆಯನ್ನು ನಿವಾರಣೆ ಮಾಡಿ ಆಧ್ಯಾತ್ಮಿಕ ಶಕ್ತಿ ಪಡೆಯಬೇಕು. ನಾವು ಪರಿಶುದ್ಧವಾದ ಮನಸ್ಸಿನಿಂದ ದುರ್ಗೆ, ಲಕ್ಷ್ಮೀ ಮತ್ತು ಸರಸ್ವತಿಯ ಪೂಜೆ ಮಾಡಬೇಕು. ನಮ್ಮ ಪ್ರಾರ್ಥನೆಗೆ ದುರ್ಗೆಯು ಒಲಿದು ಆಕೆ ನಮಗೆ ಆಶೀರ್ವಾದ ನೀಡಲಿ.

ದಸರಾ ವಿಶೇಷ-ಗೊಂಬೆ ಹಬ್ಬದ ಮೆರುಗನ್ನು ಕಣ್ತುಂಬಿಕೊಳ್ಳಿ....

English summary

The Spiritual Significance of Navaratri

Navratri is a widely celebrated festival across the country. The spirit of festivity is at its heights during the nine days dedicated to the Divine Mother. A peep into the essence of Navratri and its symbolism makes the observance of the rituals associated with it more meaningful. Symbolism in the legend of Navratri
X
Desktop Bottom Promotion