For Quick Alerts
ALLOW NOTIFICATIONS  
For Daily Alerts

ಅಂದು ಲಂಕೆ ಸುಟ್ಟು ಭಸ್ಮವಾಗಲು ನಿಜವಾದ ಕಾರಣವೇನು?

|

ರಾಮಾಯಣವನ್ನು ಓದಿರುವವರು ಮತ್ತು ಅದನ್ನು ಕೇಳಿರುವವರಿಗೆ ರಾಮ, ಸೀತೆ, ದಶರಥ, ಲಕ್ಷಣ ಮತ್ತು ರಾವಣನ ಬಗ್ಗೆ ತಿಳಿದೇ ಇರುತ್ತದೆ. ಹಿಂದೂ ಪುರಾಣಗಳ ಬಗ್ಗೆ ರಾಮನು ಪತ್ನಿ ಸೀತೆ ಮತ್ತು ಸೋದರ ಲಕ್ಷ್ಮಣನ ಜತೆಗೆ ವನವಾಸಕ್ಕೆಂದು ತೆರಳಿದ್ದ ವೇಳೆ ಸೀತೆಯನ್ನು ಲಂಕಾಧಿಪತಿಯಾಗಿದ್ದ ರಾವಣನು ಅಪಹರಿಸುವನು. ಸೀತೆಯು ಲಂಕೆಯಲ್ಲಿ ಇರುವುದಾಗಿ ತಿಳಿದ ರಾಮನು ಅಲ್ಲಿಗೆ ತನ್ನ ಬಂಟ ಹನುಮಂತನನ್ನು ಕಳುಹಿಸಿ ಕೊಡುವನು. ಆಗ ಅಲ್ಲಿ ಹನುಮಂತನ ಬಾಲಕ್ಕೆ ರಾವಣನು ಬೆಂಕಿ ಹಚ್ಚಲು ಸೂಚಿಸುವನು.

ಈ ವೇಳೆ ಹನುಮಂತನು ಸಂಪೂರ್ಣ ಲಂಕೆಯನ್ನೇ ಸುಟ್ಟು ಹಾಕುತ್ತಾನೆ ಎನ್ನುವ ಕಥೆಯಿದೆ. ರಾಮ ಮತ್ತು ರಾವಣನ ನಡುವಿನ ದ್ವೇಷದಿಂದಾಗಿ ಹೀಗೆ ಆಗಿದೆ ಎಂದು ನಮಗೆಲ್ಲರಿಗೂ ತಿಳಿದಿದೆ. ಆದರೆ ಇದರ ಹಿಂದಿರುವ ಸಂಪೂರ್ಣ ಕಥೆ ಏನು ಎಂದು ನೀವು ಈ ಲೇಖನವನ್ನು ಓದಿ ತಿಳಿಯಬಹುದು. ಇತಿಹಾಸವನ್ನು ನೋಡುತ್ತಾ ಹೋದರೆ ಆಗ ಹಲವಾರು ಸುಂದರ ತಾಣಗಳನ್ನು ಸುಟ್ಟು ಹಾಕಲಾಗಿದೆ. ಇದರಿಂದಾಗಿ ಇಂದಿಗೂ ಆ ತಾಣಗಳು ಅನಾಥ ಸ್ಥಿತಿಯಲ್ಲಿದೆ. ನಾವು ಈ ಲೇಖನದಲ್ಲಿ ಹನುಮಂತನು ಲಂಕೆಯನ್ನು ಸುಟ್ಟಿರುವ ಕಥೆಯ ಬಗ್ಗೆ ತಿಳಿಯುವ...

ದೇವಿ ಪಾರ್ವತಿಯು ತನ್ನ ಸೋದರಿಯನ್ನು ರಾತ್ರಿ ಭೋಜನಕ್ಕೆ ಕರೆದರು

ದೇವಿ ಪಾರ್ವತಿಯು ತನ್ನ ಸೋದರಿಯನ್ನು ರಾತ್ರಿ ಭೋಜನಕ್ಕೆ ಕರೆದರು

ಈಶ್ವರ ದೇವರು ಕೈಲಾಸ ಪರ್ವತದಲ್ಲಿ ವಾಸಿಸುವರು ಎಂದು ನಮಗೆಲ್ಲರಿಗೂ ತಿಳಿದಿದೆ. ಅದೇ ರೀತಿಯಾಗಿ ಪಾರ್ವತಿ ದೇವಿ ಕೂಡ. ಪಾರ್ವತಿ ದೇವಿ ಮತ್ತು ಲಕ್ಷ್ಮೀ ದೇವಿಯು ಸೋದರಿಯರು. ಒಂದು ಸಲ ಪಾರ್ವತಿ ದೇವಿಯು ತನ್ನ ಮನೆಗೆ ಲಕ್ಷ್ಮೀ ದೇವಿಯನ್ನು ರಾತ್ರಿ ಭೋಜನಕ್ಕೆ ಆಹ್ವಾನಿಸುವರು. ಕೆಲವರ ಉಪಸ್ಥಿತಿ ಮತ್ತು ಎಲ್ಲಾ ರೀತಿಯ ಗೌರವದೊಂದಿಗೆ ಲಕ್ಷ್ಮೀ ದೇವಿ ಮತ್ತು ವಿಷ್ಣು ದೇವರು ಕೈಲಾಸಕ್ಕೆ ಬರುವರು. ಇವರು ಊಟ ಮಾಡುತ್ತಿರುವ ವೇಳೆ ಲಕ್ಷ್ಮೀ ದೇವಿಯು ಚಳಿಯಿಂದ ನಡುಗುತ್ತಿರುವುದು ಕಂಡುಬರುತ್ತದೆ. ಈ ವೇಳೆ ತನ್ನ ಮನೆಯಲ್ಲಿ ಸೋದರಿಯು ಆರಾಮದಾಯಕವಾಗಿಲ್ಲ ಎಂದು ತಿಳಿದು ಪಾರ್ವತಿ ದೇವಿಗೆ ತುಂಬಾ ನೋವಾಗುತ್ತದೆ. ಭೋಜನ ಸಮಾಪ್ತಿಯಾದ ಬಳಿಕ ಲಕ್ಷ್ಮೀ ದೇವಿ ಮತ್ತು ವಿಷ್ಣು ದೇವರು ಅಲ್ಲಿಂದ ತೆರಳಲು ಅನುವಾಗುವರು. ಮರುದಿನ ತಮ್ಮ ಮನೆಗೆ ರಾತ್ರಿ ಊಟಕ್ಕೆ ಬರಬೇಕೆಂದು ಈಶ್ವರ ದೇವರು, ಪಾರ್ವತಿ ಮತ್ತು ಇತರರನ್ನು ಲಕ್ಷ್ಮೀ ದೇವಿಯು ಆಹ್ವಾನಿಸವರು.

ಈಶ್ವರ ದೇವರು ಮತ್ತು ಪಾರ್ವತಿ ದೇವಿಯು ವಿಷ್ಣು ಅರಮನೆಗೆ ಬರುವರು

ಈಶ್ವರ ದೇವರು ಮತ್ತು ಪಾರ್ವತಿ ದೇವಿಯು ವಿಷ್ಣು ಅರಮನೆಗೆ ಬರುವರು

ಈಶ್ವರ ದೇವರು ಮತ್ತು ಪಾರ್ವತಿ ದೇವಿಯು ವಿಷ್ಣು ದೇವರು ಮತ್ತು ಲಕ್ಷ್ಮೀ ದೇವಿಯು ನೆಲೆಸಿರುವಂತಹ ಮನೆಗೆ ಹೋಗುವರು. ಅಲ್ಲಿನ ಸ್ಥಳದ ಸೌಂದರ್ಯವನ್ನು ನೋಡಿದ ಪಾರ್ವತಿ ದೇವಿ ಅವರಿಗೆ ತಮ್ಮ ಮನೆಯಲ್ಲೂ ಇದೇ ರೀತಿಯ ಸೌಂದರ್ಯವು ಇರಬೇಕೆಂದು ಮನಸ್ಸಿನಲ್ಲಿಯೇ ಅಂದುಕೊಳ್ಳುವರು. ಈ ಭೇಟಿಯ ಕೆಲವು ದಿನಗಳ ಬಳಿಕ ದೇವಿ ಪಾರ್ವತಿಯು ತುಂಬಾ ಬೇಸರಲ್ಲಿರುವುದಾಗಿ ಈಶ್ವರ ದೇವರು ಗಮನಿಸುವರು. ಈ ಬಗ್ಗೆ ಪಾರ್ವತಿ ದೇವಿ ಅವರಲ್ಲಿ ಕೇಳಿದಾಗ, ಆಕೆ ತನ್ನ ಆಕಾಂಕ್ಷೆಯನ್ನು ಹೇಳುವರು ಮತ್ತು ಇದನ್ನು ಪೂರೈಸಬೇಕೆಂದು ಹೇಳುವರು. ಅದಾಗ್ಯೂ, ಆಕೆಯ ಪತಿ ಈಶ್ವರ ಒಬ್ಬ ಸನ್ಯಾಸಿಯಾಗಿರುವ ಕಾರಣ ಮತ್ತು ಪಾರ್ವತಿ ದೇವಿಯು ಸನ್ಯಾಸಿಯ ಪತ್ನಿಯಾಗಿರುವ ಕಾರಣದಿಂದಾಗಿ ಅಂತಹ ಮನೆಯಲ್ಲಿ ವಾಸಿಸಬಾರದು ಎಂದು ವಿವರಿಸುವರು.

Most Read:ರಾಮ ಮತ್ತು ಹನುಮಂತನ ನಡುವೆ ಇರುವ ಬಂಧನದ ಕಥೆ

ದೇವಿ ಪಾರ್ವತಿ ಆಕಾಂಕ್ಷೆ

ದೇವಿ ಪಾರ್ವತಿ ಆಕಾಂಕ್ಷೆ

ಅದಾಗ್ಯೂ, ಲಕ್ಷ್ಮೀ ದೇವಿಯು ಕೈಲಾಸ ಪರ್ವತಕ್ಕೆ ಬಂದ ವೇಳೆ ಚಳಿಯಿಂದ ನಡುಗುತ್ತಿದದ್ದನ್ನು ಕಂಡು ಪಾರ್ವತಿ ದೇವಿಯು ಅಸಾಯಕರಾಗಿದ್ದರು. ಇದರಿಂದಾಗಿ ಅವರು ಈಶ್ವರ ದೇವರಿಗೆ ಹೇಳಿ ಅಂತಹ ದೊಡ್ಡ ಅರಮನೆ ಕಟ್ಟುವಂತೆ ಮನವಿ ಮಾಡಿದರು. ಪಾರ್ವತಿ ದೇವಿಯ ಬೇಡಿಕೆಗೆ ಒಪ್ಪಿದ ಈಶ್ವರ ದೇವರು, ವಿಶ್ವಕರ್ಮರ ಬಳಿಕ ಪಾರ್ವತಿ ದೇವಿಗೆ ಒಂದು ಸುಂದರವಾಗಿರುವ ಅರಮನೆ ನಿರ್ಮಿಸಲು ಹೇಳುವರು. ದೇವತೆಗಳ ವಾಸ್ತುಶಿಲ್ಪಿಯಾಗಿದ್ದ ವಿಶ್ವಕರ್ಮ ದೇವರು ಸ್ವರ್ಣದಿಂದಲೇ ಒಂದು ಅರಮನೆ ನಿರ್ಮಾಣ ಮಾಡಿದರು. ಇದು ಲಂಕಾದ ಸ್ವರ್ಣ ಮಹಲ್ ಎಂದು ಕರೆಯಲಾಯಿತು.

ಪಾರ್ವತಿ ದೇವಿಯ ಇಚ್ಛೆ ಈಡೇರಿತು

ಪಾರ್ವತಿ ದೇವಿಯ ಇಚ್ಛೆ ಈಡೇರಿತು

ಸ್ವರ್ಣದಿಂದಲೇ ನಿರ್ಮಿಸಲ್ಪಟ್ಟಿರುವಂತಹ ಅರಮನೆಯಿಂದ ತುಂಬಾ ಸಂತೋಷಗೊಂಡ ಪಾರ್ವತಿ ದೇವಿಯು ಇದರ ಸಂಭ್ರಮವನ್ನು ಆಚರಿಸಲು ಎಲ್ಲಾ ದೇವ ದೇವತೆಗಳು, ವಿವಿಧ ಋಷಿ ಮುನಿಗಳನ್ನು ಆಹ್ವಾನಿಸುವರು. ಈ ವೇಳೆ ಅರಮನೆಯ ಪ್ರವೇಶದ ಸಮಾರಂಭದಲ್ಲಿ ಈಶ್ವರ ದೇವರು ಮತ್ತು ಪಾರ್ವತಿ ದೇವಿಯು ಬಂದಿರುವಂತಹ ಅತಿಥಿಗಳಿಗೆ ವಿವಿಧ ರೀತಿಯ ಉಡುಗೊರೆ ಹಾಗೂ ದಾನ ನೀಡುವರು. ಅದಾಗ್ಯೂ, ವಿಶ್ವ ಮುನಿ ಎಂಬವರು ದಾನದ ರೂಪದಲ್ಲಿ ಈಶ್ವರ ದೇವರಲ್ಲಿ ಸ್ವರ್ಣ ಮಹಲ್ ನ್ನು ಕೇಳುವರು.ಇದರಿಂದ ಈಶ್ವರ ದೇವರು ಅರಮನೆಯನ್ನು ಋಷಿಗೆ ನೀಡುವರು. ಮುನಿಯ ಈ ವರ್ತನೆಯಿಂದ ತುಂಬಾ ದುಃಖಿತರಾದ ಪಾರ್ವತಿ ದೇವಿ ಅವರು ಈ ಅರಮನೆಯು ಒಂದು ದಿನ ಭಸ್ಮವಾಗಿ ಹೋಗಲಿ ಎಂದು ಶಾಪ ನೀಡುವರು.

Most Read:ಶ್ರೀರಾಮ ಸೀತೆಗೆ ಏಕೆ ಅಗ್ನಿ ಪರೀಕ್ಷೆ ಮಾಡಲು ಹೇಳಿದ?

ಪಾರ್ವತಿ ದೇವಿಯ ಶಾಪದಿಂದ ಲಂಕೆಯು ಸುಟ್ಟು ಭಸ್ಮವಾಯಿತು!

ಪಾರ್ವತಿ ದೇವಿಯ ಶಾಪದಿಂದ ಲಂಕೆಯು ಸುಟ್ಟು ಭಸ್ಮವಾಯಿತು!

ಪುಲಸ್ತ್ಯ ಮುನಿಯ ಮೊಮ್ಮಗ ಮತ್ತು ವಿಶ್ವ ಋಷಿಯ ಮಗ ವಾಲ್ಮೀಕಿ ಬರೆದಿರುವ ರಾಮಾಯಣದ ಪ್ರಕಾರ, ಪಾರ್ವತಿ ದೇವಿ ಅವರು ನೀಡಿರುವಂತಹ ಶಾಪದಂತೆ ಲಂಕೆಯಲ್ಲಿದ್ದ ಸ್ವರ್ಣ ಅರಮನೆಯು ಸುಟ್ಟು ಭಸ್ಮವಾಯಿತು ಎಂದು ಹೇಳಲಾಗಿದೆ.

English summary

The Real Story Why Lanka Got Burnt!

The story of the entire golden palace of Lanka being set on fire by Lord Hanuman is an integral part of the Ramayana written by Valmiki. But that is just a part of the entire sequence of events that lead to this incident. From the times when Karma, blessings and curses worked, there is another story worth knowing.
X
Desktop Bottom Promotion