For Quick Alerts
ALLOW NOTIFICATIONS  
For Daily Alerts

ರೋಗ ಗುಣ ಪಡಿಸಿ ಅಪಮೃತ್ಯು ತಡೆಯುವ ಶಕ್ತಿ ಮೃತ್ಯುಂಜಯ ಹೋಮದಲ್ಲಿದೆ

|

ನೆರಳಿನಂತೆ ಹಿಂಬಾಲಿಸುವ ಸಾವಿನ ಬಗ್ಗೆ ಪ್ರತಿಯೊಬ್ಬ ವ್ಯಕ್ತಿಯಲ್ಲಿ ಒಂದು ಭಯ ಇದ್ದೇ ಇರುತ್ತದೆ. ಹುಟ್ಟಿದ ಮೇಲೆ ವ್ಯಕ್ತಿ ಸಾಯಲೇಬೇಕು. ಆದರೆ ಅಕಾಲಿಕ ಮರಣ ಯಾರೂ ಬಯಸುವುದಿಲ್ಲ.

ಯಾರು, ಯಾವಾಗ ಸಾಯುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ, ಸಾವನ್ನು ತಡೆಯಲು ಸಾಧ್ಯವಿಲ್ಲ ಎನ್ನುತ್ತಾರೆ. ಆದರೆ ಈ ವ್ಯಕ್ತಿ ಬದುಕುವುದು ಕಷ್ಟ ಎಂದು ವೈದ್ಯರು ಕೂಡ ಕೈಚೆಲ್ಲಿದ ವ್ಯಕ್ತಿಗಳು ಪವಾಡವಂಬಂತೆ ಬದುಕಿರುವ ಎಷ್ಟೋ ಉದಾಹರಣೆಗಳಿವೆ. ಆ ವ್ಯಕ್ತಿ ಹೇಗೆ ಬದುಕಿದ ಎಂದು ಕೇಳಿದರೆ ಮನೆಯವರ ಪ್ರಾರ್ಥನೆಯ ಫಲ, ದೇವರ ಕೃಪೆ ಎನ್ನುತ್ತಾರೆ.

ದೇವರುಗಳಲ್ಲಿ ಸೃಷ್ಠಿಗೆ ಕಾರಣ ಬ್ರಹ್ಮನಾದರೆ, ಜೀವಿತ ಕಾಲದ ರಕ್ಷಕನು ವಿಷ್ಣು ಹಾಗೂ ಅಂತ್ಯ ಕಾಲಕ್ಕೆ ಮೋಕ್ಷ ನೀಡುವುದು ಶಿವನೂ ಎಂಬ ನಂಬಿಕೆ ನಮ್ಮಲ್ಲಿದೆ. ಮಾನವ ಹುಟ್ಟುತ್ತಲೇ ಅವನ ಸಾವು ಕೂಡ ಬರುತ್ತಿರುತ್ತದೆ. ಕರ್ಮಾನುಸಾರ ಅನುಭವಿಸಬೇಕಾದ ಫಲಗಳನ್ನು ಜೀವಿತಾವಧಿಯಲ್ಲಿಯೇ ಅನುಭವಿಸುತ್ತಾನೆ ಎಂದು ಹೇಳಲಾಗುವುದು.

ಮೃತ್ಯು ಭಯ ದೂರ ಮಾಡುವ ಮೃತ್ಯುಂಜಯ ಹೋಮ

ಮೃತ್ಯು ಭಯ ದೂರ ಮಾಡುವ ಮೃತ್ಯುಂಜಯ ಹೋಮ

ಸ್ವರ್ಗ-ನರಕಗಳೆರಡರ ಫಲಗಳ ಬಹುಪಾಲನ್ನು ಮನುಷ್ಯನು ಮನುಷ್ಯ ತಮ್ಮ ಕರ್ಮದ ಫಲ ಹಾಗೂ ಪೂರ್ವಜನ್ಮದ ಕರ್ಮನುಸಾರ ಜನ್ಮದಲ್ಲಿಯೇ ಪಡೆಯುತ್ತಾನೆ ಶೇಷಭಾಗದಲ್ಲಿ ಒಂದು ಭಾಗ ಮರಣಕಾಲದಲ್ಲೂ ಉಳಿದಂತೆ ಮರಣಾನಂತರ ಜೀವಾತ್ಮನು ತನ್ನ ಊರ್ಧ್ವ ಪ್ರಯಾಣ ಕಾಲದಲ್ಲೂ ಪಡೆಯುತ್ತಾನೆಂದು ಗರುಡ ಪುರಾಣ ವಿವರಿಸಿದೆ.

ಹೀಗಿರುವಾಗ "ಶ್ರೀ ಮೃತ್ಯುಂಜಯ ಹೋಮ"ವನ್ನು ವಿಶೇಷವಾಗಿ ಯಾವುದೇ ಶ್ರೀ ಮೃತ್ಯುಂಜಯೇಶ್ವರ ಕ್ಷೇತ್ರದಲ್ಲಿ ಮಾಡಿಸಿ ಪ್ರಸಾದ ಸ್ವೀಕರಿಸಿದಲ್ಲಿ ಆತನಿಗೆ ದೈವಾನುಗ್ರಹವು ಒದಗಿ ಮೃತ್ಯು ಭಯಗಳು ದೂರವಾಗುತ್ತವೆ. ಮನೋಸ್ಥೈರ್ಯ ವೃದ್ಧಿಗೊಂಡು ಸನ್ಮಾರ್ಗದಲ್ಲಿ ನಡೆಯುವಂತಾಗುತ್ತದೆ ಹಾಗೂ ಪೂರ್ಣ ಜೀವನ ನಡೆಸುವಂತಾಗಿ ಮೋಕ್ಷ ಪ್ರಾಪ್ತಿ ಹೊಂದುವರೆಂದು ವೇದ ಪುರಾಣಗಳು ಹೇಳುತ್ತವೆ.

ಮೃತ್ಯುಂಜಯ ಹೋಮ ಹೇಗೆ ಮಾಡಬೇಕು?

ಮೃತ್ಯುಂಜಯ ಹೋಮ ಹೇಗೆ ಮಾಡಬೇಕು?

ಮೃತ್ಯುಂಜಯ ಹೋಮ ಹಾಗೂ ಮೃತ್ಯುಂಜಯ ಜಪವನ್ನು ಶ್ರದ್ಧೆ, ಭಕ್ತಿ, ನಂಬಿಕೆ ಮತ್ತು ಏಕಾಗ್ರತೆಯಿಂದ ಮಾಡಬೇಕು. ಇದನ್ನು ನದಿ ತೀರ ಅಥವಾ ಅರನ್ಯ ಪ್ರದೇಶದಲ್ಲು ಏಕಾಂತ ಸ್ಥಳದಲ್ಲಿ ಪಂಚಯಾಮ ದೊರೆಯುವ ಸ್ಥಳದಲ್ಲಿ ಆ ದಿನದ ಪ್ರಾತಃ ಕಾಲದಿಂದ ಹಿಡಿದು ನಾಳೆ ಪ್ರಾತಃ ಕಾಲದವರೆಗೆ ಮಾಡಬೇಕು. ಈ ಹೋಮಕ್ಕೆ ಮೃತ್ಯು ದೋಷ ನಿವಾರಣೆ ಮಾಡುವ ಶಕ್ತಿ ಇದೆ.

ಮೃತ್ಯುಂಜಯ ಮಂತ್ರ ಪಠಿಸಬೇಕು

ಮೃತ್ಯುಂಜಯ ಮಂತ್ರ ಪಠಿಸಬೇಕು

ಅಕಾಲಿಕ ಸಾವಿನ ಕುರಿತು ಭಯವಿರುವಾಗ ಶಿವನ ದೇವಾಲಯಕ್ಕೆ ಹೋಗಿ ಪೂಜೆ ಮಾಡಿಸಿ ಸಾವಿರದ ಒಂದು ಮಂತ್ರವನ್ನು ಪಠಣೆ ಮಾಡಬೇಕು. ಹೀಗೆ ಮಾಡಿದರೆ ಉತ್ತಮ ಫಲ ಸಿಗುವುದು. ಕಾಯಿಲೆಯಿಂದ ಬಳಲುತ್ತಿರುವವರು ಈ ಮಂತ್ರ ಪಠಿಸಿದರೆ ಶೀಘ್ರವೇ ಗುಣಮುಖರಾಗಬಹುದು.

ಇನ್ನು ಪ್ರತಿದಿನ 108 ಬಾರಿ ಮೃತ್ಯುಂಜಯ ಮಂತ್ರವನ್ನು ಪಠಿಸಿದರೆ ಬೇಗನೆ ಗುಣಮುಖರಾಗುತ್ತಾರೆ. 108 ತುಂಬಾ ಪ್ರಮುಖವಾದುದ್ದು ಏಕೆಂದರೆ ಇದು ಗಣಿತದ ಲೆಕ್ಕಾಚಾರವನ್ನು ಹೊಂದಿದೆ. 12 ಹಾಗೂ ಒಂಭತ್ತರ ಗುಣಾಕಾರವಾಗಿದೆ 108. ಇಲ್ಲಿ 12 ರಾಶಿ ಚಕ್ರವನ್ನು ಸುಚಿಸುತ್ತದೆ ಮತ್ತು 9 ನವಗ್ರಹಗಳನ್ನು. ಒಬ್ಬ ವ್ಯಕ್ತಿ ಈ ಮಂತ್ರವನ್ನು 108 ಬಾರಿ ಪಠಿಸಿದಾಗ ಆತನ ಎಲ್ಲಾ ನವಗ್ರಹಗಳು ಮತ್ತು ರಾಶಿ ಚಕ್ರಗಳು ಆತನ ಜೀವನದಲ್ಲಿ ಮಾಡುವ ಏರು ಪೇರುಗಳನ್ನು ಹೊರತುಪಡಿಸಿ ಸರಿಯಾದ ದಾರಿಗೆ ಬರುತ್ತವೆ

 ಮೃತ್ಯುಂಜಯ ಮಂತ್ರ

ಮೃತ್ಯುಂಜಯ ಮಂತ್ರ

ಓಂ ತ್ರ್ಯಯಂಬಕಂ ಯಜಮಾಹೆ, ಸುಗಂಧಿಂ ಪುಷ್ಟಿ ವರ್ಧನಂ.

ಉರವರುಕಿಮೀವ್ ಬಂಧನಾತ್, ಮೃತ್ಯುರ್ ಮೋಕ್ಷಾಯ ಮಮೃತಾತ್.

English summary

The Power Of Mrityunjaya Homam

Maha Mrityunjaya homam is one of the name of Lord Shiva who helps to relieve from untimely death in life. This homam is also known as Maha Sanjeevani Homa/Yagna.
Story first published: Thursday, April 23, 2020, 18:30 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X