For Quick Alerts
ALLOW NOTIFICATIONS  
For Daily Alerts

  ಭಗವಾನ್ ವಿಷ್ಣುವಿನ ನರಸಿಂಹ ಅವತಾರದ ಒಂಬತ್ತು ರೂಪಗಳು

  By Jaya
  |

  ತನ್ನ ಭಕ್ತರನ್ನು ಪೊರೆಯಲು ಮತ್ತು ದುಷ್ಟರನ್ನು ಸಂಹರಿಸಲು ವಿಷ್ಣುವು ಹಲವಾರು ಅವತಾರಗಳನ್ನು ಎತ್ತಿದ್ದರು ಎಂಬುದಾಗಿ ಪುರಾಣಗಳಲ್ಲಿ ಹೇಳಲಾಗುತ್ತಿದೆ. ವಿಷ್ಣುವಿನ ನರಸಿಂಹ ಅವತಾರವು ಭೀಕರ ರೂಪವನ್ನು ಹೊಂದಿದೆ ಮತ್ತು ಭೀಭತ್ಸವಾಗಿದೆ. ಮಹಾವಿಷ್ಣುವಿನ ನಾಲ್ಕನೇ ಅವತಾರವೇ ನರಸಿಂಹ ಅವತಾರ. ಅಸುರ ಹಿರಣ್ಯಕಶಿಪುವನ್ನು ವಧಿಸಲು ಮಹಾವಿಷ್ಣುವು ಉಗ್ರ ನರಸಿಂಹ ಅವತಾರವನ್ನು ಎತ್ತಿ ಆತನನ್ನು ವಧಿಸುತ್ತಾರೆ. ತನ್ನ ಸಹೋದರ ಹಿರಣ್ಯಾಕ್ಷನನ್ನು ವಿಷ್ಣುವು ವರಾಹ ರೂಪದಲ್ಲಿ ವಧಿಸಿದ್ದಕ್ಕಾಗಿ ಹಿರಣ್ಯಕಶಿಪುವಿಗೆ ವಿಷ್ಣು ಎಂದರೆ ನಖಶಿಖಾಂತ ದ್ವೇಷವಾಗಿರುತ್ತದೆ.

  ತನ್ನ ರಾಜ್ಯದಲ್ಲಿ ಹರಿ ಪೂಜೆಯನ್ನು ಮಾಡುವವರಿಗೆ ಆತ ಮರಣ ಶಿಕ್ಷೆಯನ್ನು ವಿಧಿಸುತ್ತಿದ್ದ. ವಿಷ್ಣುವನ್ನು ವಧಿಸುವುದಕ್ಕಾಗಿಯೇ ಕಠಿಣ ತಪ್ಪಸ್ಸನ್ನು ಆಚರಿಸಿ ಬ್ರಹ್ಮನಿಂದ ವರವನ್ನು ಪಡೆಯುತ್ತಾನೆ. ಮನುಷ್ಯ ಅಥವಾ ಪ್ರಾಣಿ, ಆಕಾಶ ಅಥವಾ ಭೂಮಿ, ಅಸ್ತ್ರ ಇಲ್ಲವೇ ಶಸ್ತ್ರಗಳು ಕಟ್ಟಡ ಅಥವಾ ತೆರೆದ ಭಾಗದಲ್ಲಿ ತನ್ನನ್ನು ವಧಿಸಬಾರದು ಎಂಬುದಾಗಿ ವಿಚಿತ್ರ ವರವನ್ನು ಪಡೆಯುತ್ತಾನೆ. ವರವನ್ನು ಪಡೆದ ನಂತರ ಹಿರಣ್ಯಕಶಿಪುವಿನ ಕಾಟ ಇನ್ನಷ್ಟು ವಿಪರೀತವಾಗುತ್ತದೆ. ತನ್ನನ್ನು ವಧಿಸುವ ಶಕ್ತಿಯೇ ಇಲ್ಲ ಎಂಬುದಾಗಿ ಆತ ಅಟ್ಟಹಾಸದಿಂದ ಮೆರೆಯುತ್ತಾನೆ.

  ಆದರೆ ಹಿರಣ್ಯಕಶಿಪುವಿನ ಪುತ್ರ ಪ್ರಹ್ಲಾದ ಮಹಾನ್ ಹರಿಭಕ್ತನಾಗಿರುತ್ತಾನೆ. ತಂದೆ ಹಿರಣ್ಯಕಶಿಪು ಪರಿಪರಿಯಾಗಿ ತಿಳಿಹೇಳಿದರೂ ಪುತ್ರನ ಹರಿಭಕ್ತ ಕಡಿಮೆಯಾಗುವುದಿಲ್ಲ ಬದಲಿಗೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇರುತ್ತದೆ. ಇದರಿಂದ ಕುಪಿತಗೊಂಡ ಹಿರಣ್ಯಕಶಿಪು ಮಗನನ್ನ ವಧಿಸಲು ಮುಂದಾಗುತ್ತಾನೆ. ಎತ್ತರದ ಪರ್ವತದಿಂದ ತಳ್ಳಿಸುತ್ತಾನೆ. ವಿಷ ಸರ್ಪಗಳಿಂದ ಕಚ್ಚಿಸುತ್ತಾನೆ, ತಲೆಯನ್ನು ಕಡಿಯಲು ಆಜ್ಞಾಪಿಸುತ್ತಾನೆ ಕೊನೆಗೆ ಹೆತ್ತ ತಾಯಿಯಿಂದಲೇ ವಿಷವನ್ನು ಉಣಿಸುತ್ತಾನೆ. ಆತನ ಹರಿಯ ದ್ವೇಷ ಮಗನ ಮೇಲಿನ ಪ್ರೀತಿಯನ್ನು ಕುರುಡಾಗಿಸುತ್ತದೆ. ಮಗ ಎಂಬ ವಾತ್ಸಲ್ಯವನ್ನು ಆತ ತೋರುವುದಿಲ್ಲ. 

  ದುಷ್ಟ ಶಕ್ತಿಗಳಿಂದ ಕಾಪಾಡುವ ಶಕ್ತಿಶಾಲಿ ನರಸಿಂಹ ಮಂತ್ರಗಳು

  ಆದರೆ ಹರಿಯ ರಕ್ಷಾಕವಚದಿಂದ ಧೂಳು ಕೂಡ ಪ್ರಹ್ಲಾದನ ಮೈಯನ್ನು ಸೋಕುವುದಿಲ್ಲ. ತಂದೆ ಎಷ್ಟು ಪ್ರಯತ್ನ ಮಾಡಿದರೂ ಪ್ರಹ್ಲಾದ ಬದುಕಿ ಬಂದು ತಂದೆಯ ಎದುರಿನಲ್ಲಿಯೇ ಹರಿಸ್ಮರಣೆಯನ್ನು ಮಾಡುತ್ತಾನೆ. ಇದಕ್ಕೆ ಮುಕ್ತಾಯ ಹಾಡಬೇಕೆಂದು ನಿರ್ಧರಿಸಿದ ಹಿರಣ್ಯಕಶಿಪು ಪ್ರಹ್ಲಾದನಲ್ಲಿಯೇ ಹರಿ ಎಲ್ಲಿದ್ದಾನೆ ಆತನನ್ನು ನನ್ನ ಮುಂದೆ ಬರಹೇಳು ಎಂದು ತಿಳಿಸುತ್ತಾನೆ. ಇದಕ್ಕೆ ಬಾಲಕ ಪ್ರಹ್ಲಾದ ಹರಿ ಎಲ್ಲೆಲ್ಲಿಯೂ ಇದ್ದಾನೆ ಎಂಬುದಾಗಿ ಉತ್ತರಿಸುತ್ತಾನೆ. ಅರಮನೆಯ ಕಂಬಗಳನ್ನು ಗೋಡೆಗಳನ್ನು ಪುಡಿ ಮಾಡುತ್ತಾ ಕೋಪೋದ್ರಿಕ್ತ ಹಿರಣ್ಯಕಶಿಪು ಇಲ್ಲಿದ್ದಾನೆಯೇ ಹರಿ ನಿನ್ನ ಹರಿ ಇಲ್ಲಿದ್ದಾನೆಯೇ ಎಂದು ಕೇಳುತ್ತಾನೆ. ಹೀಗೆ ಕಂಬವನ್ನು ಒಡೆದ ಸಂದರ್ಭದಲ್ಲಿಯೇ ಹರಿಯು ನರಸಿಂಹ ಅವತಾರವನ್ನು ತಾಳಿ ಹಿರಣ್ಯಕಶಿಪುವಿನ ಎದುರಿಗೆ ಪ್ರತ್ಯಕ್ಷನಾಗುತ್ತಾರೆ.

  ಘನಘೋರ ಯುದ್ಧ ಇಬ್ಬರ ನಡುವೆ ನಡೆಯುತ್ತದೆ. ಅರ್ಧ ಮನುಷ್ಯ ರೂಪ ಮತ್ತು ಇನ್ನರ್ಧ ಸಿಂಹದ ರೂಪದಲ್ಲಿ ದೇವರು ಅಸುರನ ಮರಣಕ್ಕೆ ರೂಪತಾಳಿರುತ್ತಾರೆ. ಹಿರಣ್ಯಕಶಿಪುವಿನ ವರದಂತೆಯೇ ಅತ್ತ ಮನುಷ್ಯನೂ ಅಲ್ಲದೇ ಇತ್ತ ಪ್ರಾಣಿಯೂ ಅಲ್ಲದೆ, ತಮ್ಮ ತೊಡೆಯ ಮೇಲೆ ಹಿರಣ್ಯಕಶಿಪುವನ್ನು ಮಲಗಿಸಿ ಎದೆಯನ್ನು ನರಸಿಂಹ ದೇವರು ತಮ್ಮ ಉಗುರುಗಳಿಂದ ಸೀಳುತ್ತಾರೆ. ಹಿರಣ್ಯಕಶಿಪುವಿನ ಮರಣದ ನಂತರ ನರಸಿಂಹನ ಕೋಪವನ್ನು ಪ್ರಹ್ಲಾದನಿಗಲ್ಲದೆ ಬೇರಾರಿಗೂ ತಣಿಸಲು ಸಾಧ್ಯವಾಗಲಿಲ್ಲವಂತೆ...

  ನರಸಿಂಹ ರೂಪ

  ನರಸಿಂಹ ರೂಪ

  ಅಪಾಯದಿಂದ ತಮ್ಮ ಭಕ್ತರನ್ನು ರಕ್ಷಿಸಲು ನರಸಿಂಹ ಪ್ರತ್ಯಕ್ಷರಾಗುತ್ತಾರೆ ಎಂದು ಹೇಳಲಾಗಿದೆ. ಕಾಳಿ ಮಾತೆಗೆ ಆದಿ ಶಂಕರಾಚಾರ್ಯರು ತಮ್ಮ ಅರ್ಪಿಸುತ್ತಿದ್ದಾಗ ನರಸಿಂಹ ದೇವರು ಅವರನ್ನು ರಕ್ಷಿಸುತ್ತಾರೆ. ದೇವರನ್ನು ಒಲಿಸಿಕೊಳ್ಳಲು ಆದಿ ಶಂಕರರು ಲಕ್ಷ್ಮೀ ನರಸಿಂಹ ಸ್ತ್ರೋತ್ರವನ್ನು ನಂತರ ರಚಿಸಿದರಂತೆ.ನರಸಿಂಹ ರೂಪವು ಅರ್ಧ ಮಾನವ ಮತ್ತು ಅರ್ಧ ಸಿಂಹದ್ದಾಗಿದೆ. ತಮ್ಮ ಮುಖದಲ್ಲಿ ವ್ಯಘ್ರರೂಪವನ್ನು ದೇವರು ಬಿಂಬಿಸಿದ್ದಾರೆ. ಅಂತೆಯೇ ತಮ್ಮ ಬೆರಳುಗಳಲ್ಲಿ ಹರಿತವಾದ ಉಗುರುಗಳನ್ನು ಅವರು ಹೊಂದಿದ್ದಾರೆ. 74 ವಿಧಗಳಲ್ಲಿ ಅವರನ್ನು ವ್ಯಾಖ್ಯಾನಿಸಲಾಗಿದೆ. ಅದರಲ್ಲಿ ಒಂಬತ್ತು ರೂಪಗಳು ಪ್ರಮುಖವಾದವುಗಳು. ಈ ಒಂಭತ್ತು ರೂಪಗಳ ಹೆಸರುಗಳು ಈ ಕೆಳಗಿನಂತಿವೆ.

  ಉಗ್ರ ನರಸಿಂಹ

  ಉಗ್ರ ನರಸಿಂಹ

  ಉಗ್ರ ಎಂದರೆ ವ್ಯಘ್ರ ಭಯಂಕರ ಎಂಬರ್ಥವನ್ನು ನೀಡುತ್ತದೆ. ಹಿರಣ್ಯಕಶಿಪುವಿನ ವಧಾ ಸಮಯದಲ್ಲಿ ದೇವರು ಉಗ್ರ ರೂಪವನ್ನು ತಾಳಿದ್ದರು. ಪ್ರಹ್ಲಾದ ತಲೆತಗ್ಗಿಸಿ ನಮಸ್ಕಾರ ಭಂಗಿಯಲ್ಲಿ ದೇವರ ಬಳಿ ನಿಂತಿದ್ದ. ಈ ರೂಪದಲ್ಲೇ ದೇವರು ಗರುಡ ಮತ್ತು ಶಂಕರಾಚಾರ್ಯರಿಗೆ ದರ್ಶವನ್ನು ಇತ್ತರು ಎಂದು ಹೇಳಲಾಗಿದೆ.

  ಕ್ರೋಧ ನರಸಿಂಹ

  ಕ್ರೋಧ ನರಸಿಂಹ

  ಹೊರಬಿಟ್ಟ ಹಲ್ಲುಗಳನ್ನು ಈ ರೂಪದಲ್ಲಿ ನೋಡಬಹುದಾಗಿದೆ. ಇದು ವಿಷ್ಣುವಿನ ಮೂರನೇ ಅವತಾರವಾದ ವರಾಹದ ಸಮ್ಮಿಶ್ರ ರೂಪವಾಗಿದೆ. ತಮ್ಮ ಕೋರೆ ಹಲ್ಲುಗಳಲ್ಲಿ ಅವರು ಭೂಮಿಯನ್ನು ಎತ್ತಿದ್ದಾರೆ.

  ಮಲ್ಲೊಲಾ ನರಸಿಂಹ

  ಮಲ್ಲೊಲಾ ನರಸಿಂಹ

  ಮಾ ಅಂದರೆ ತಾಯಿ ಲಕ್ಷ್ಮೀ ದೇವಿಯಾಗಿದ್ದಾರೆ. ಲೋಲಾ ಅಂದರೆ ಲಕ್ಷ್ಮೀಯ ಪತಿ ಎಂಬರ್ಥವಾಗಿದೆ. ಈ ರೂಪದಲ್ಲಿ ನರಸಿಂಹ ದೇವರು ಶಾಂತರಾಗಿದ್ದಾರೆ ಮತ್ತು ಲಕ್ಷ್ಮೀಯೊಂದಿಗೆ ಆಸೀನರಾಗಿದ್ದಾರೆ.

  ಜ್ವಾಲಾ ನರಸಿಂಹ

  ಜ್ವಾಲಾ ನರಸಿಂಹ

  ಇದು ನರಸಿಂಹನ ಕ್ರೋಧ ಭೀಭತ್ಸ ರೂಪವಾಗಿದೆ. ಎಂಟು ಕೈಗಳನ್ನು ದೇವರು ಹೊಂದಿದ್ದಾರೆ. ಎರಡು ಕೈಗಳಿಂದ ಹಿರಣ್ಯಕಶಿಪುವಿನ ಹೊಟ್ಟೆಯನ್ನು ಇವರು ಬಗೆದಿದ್ದಾರೆ ಮತ್ತು ಆತನ ಕರುಳನ್ನು ಮಾಲೆಯಾಗಿ ಧರಿಸಿಕೊಂಡಿದ್ದಾರೆ. ಇನ್ನೆರಡು ಕೈಗಳಿಂದ ಅಸುರನನ್ನು ತೊಡೆಯಲ್ಲಿ ಇರಿಸಿಕೊಂಡಿದ್ದಾರೆ ಮತ್ತು ಇನ್ನೆರಡು ಕೈಗಳಿಂದ ಚಕ್ರ ಮತ್ತು ಶಂಖವನ್ನು ಹಿಡಿದುಕೊಂಡಿದ್ದಾರೆ.

  ವರಾಹ ನರಸಿಂಹ

  ವರಾಹ ನರಸಿಂಹ

  ನರಸಿಂಹ ದೇವರ ಈ ರೂಪವನ್ನು ಪ್ರಹ್ಲಾದ ವರದರ ಅಥವಾ ಶಾಂತ ನರಸಿಂಹ ಎಂದಾಗಿ ಕರೆಯಲಾಗಿದೆ. ಈ ರೂಪದಲ್ಲಿ ದೇವರು ಪತ್ನಿ ಲಕ್ಷ್ಮೀಯೊಂದಿಗೆ ಕಾಣಿಸಿಕೊಂಡಿದ್ದಾರೆ.

   ಭಾರ್ಗವ ನರಸಿಂಹ

  ಭಾರ್ಗವ ನರಸಿಂಹ

  ಪರಶುರಾಮನಿಗೆ ನರಸಿಂಹ ದೇವರು ಅನುಗ್ರಹವನ್ನು ನೀಡುತ್ತಾರೆ. ಭಾರ್ಗವ ನರಸಿಂಹ ಎಂಬುದಾಗಿ ಕರೆಯಲಾಗಿದೆ. ಇದು ಉಗ್ರ ನರಸಿಂಹ ರೂಪವನ್ನು ಹೋಲುತ್ತದೆ.

  ಕರಂಜ ನರಸಿಂಹ

  ಕರಂಜ ನರಸಿಂಹ

  ಭಗವಾನ್ ರಾಮನನ್ನು ನೋಡಲು ಹನುಮಾನ್ ಒಮ್ಮೆ ತಪಸ್ಸು ಮಾಡಿದರೆಂದು ಹೇಳಲಾಗುತ್ತದೆ. ಭಗವಾನ್ ಮಹಾ ವಿಷ್ಣು ರಾಮನ ಅವತಾರದ ಬದಲು ನರಸಿಂಹನಾಗಿ ಕಾಣಿಸಿಕೊಂಡರು. ಭಗವಾನ್ ನರಸಿಂಹನ ರೂಪವು ರಾಮನಿಗೆ ಹೋಲುತ್ತದೆ. ಅವರು ಬಿಲ್ಲು ಮತ್ತು ಬಾಣವನ್ನು ಹೊಂದಿದ್ದಾರೆ ಮತ್ತು ತನ್ನ ತಲೆಯ ಮೇಲೆ ಛತ್ರಿಯಾಗಿ ಸರ್ಪವನ್ನು ಹರಡಿಕೊಂಡಿದ್ದರು.ಕರಂಜಾ ಎಂಬುದು ಹನುಮಾನ್ ತಪಸ್ಸು ಮಾಡಿದ ಮತ್ತು ಅಲ್ಲಿ ನರಸಿಂಹರು ಕಾಣಿಸಿಕೊಂಡಿ ಮರದ ಹೆಸರಾಗಿದೆ.

  ಯೋಗ ನರಸಿಂಹ

  ಯೋಗ ನರಸಿಂಹ

  ಈ ಭಂಗಿಯಲ್ಲಿ ದೇವರು ತಪ್ಪಸ್ಸು ಮಾಡುತ್ತಿದ್ದಾರೆ. ಕಾಲುಗಳನ್ನು ಓರೆಯಾಗಿ ಕಣ್ಣುಗಳನ್ನು ಮುಚ್ಚಿದ ಭಂಗಿಯಲ್ಲಿ ದೇವರು ಇದ್ದಾರೆ. ಯೋಗ ಮುದ್ರೆಯಲ್ಲಿ ತಮ್ಮ ಹಸ್ತಗಳನ್ನು ದೇವರು ಹಿಡಿದುಕೊಂಡಿದ್ದಾರೆ. ಈ ರೂಪದಲ್ಲೇ ದೇವರು ಪ್ರಹ್ಲಾದನಿಗೆ ಯೋಗ ಭಂಗಿಯನ್ನು ತಿಳಿಸಿಕೊಟ್ಟಿದ್ದರಂತೆ.

  ಲಕ್ಷ್ಮೀ ನರಸಿಂಹ

  ಲಕ್ಷ್ಮೀ ನರಸಿಂಹ

  ಭಗವಾನ್ ನರಸಿಂಹನ ಶಾಂತ ರೂಪವಾಗಿದೆ ಲಕ್ಷ್ಮೀ ನರಸಿಂಹ ರೂಪ. ದೇವರ ಸಂಗಾತಿಯಾಗಿ ಲಕ್ಷ್ಮೀಯು ಸೆಂಜು ಲಕ್ಷ್ಮೀಯ ರೂಪದಲ್ಲಿದ್ದಾರೆ. ನರಸಿಂಹ ಅವತಾರ ಸಮಯದಲ್ಲಿ ಲಕ್ಷ್ಮೀ ದೇವಿಯು ಸೆಂಜು ಲಕ್ಷ್ಮೀಯ ರೂಪವನ್ನು ತಾಳಿದ್ದರು. ಅದಕ್ಕಾಗಿಯೇ ಕೆಲವು ಮನೆಗಳಲ್ಲಿ ನರಸಿಂಹ ದೇವರೊಂದಿಗೆ ಸೆಂಜು ಲಕ್ಷ್ಮೀಯನ್ನು ಇರಿಸಿ ಪೂಜಿಸಲಾಗುತ್ತದೆ.

   

  English summary

  The Nine Forms Of Lord Narasimha

  Lord Maha Vishnu has taken a lot of forms for the good of his devotees and the welfare of the whole world. Among all the avatars of Lord Maha Vishnu, the form of Lord Narasimha is perhaps the most ferocious one. Lord Narasimha is the fourth avatar of Lord Maha Vishnu. This avatar was taken to destroy the demon King Hiranyakashyapu and rescue his devotee Prahalada. The story says that Hiranyakashyapu was the King of Asuras and loathed the Devas. He considered Lord Maha Vishnu to be his greatest enemy, as the Lord helped the Devas against the tyranny of the Asuras.
  Story first published: Thursday, December 7, 2017, 15:45 [IST]
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more