For Quick Alerts
ALLOW NOTIFICATIONS  
For Daily Alerts

ಅರ್ಜುನ ಉಲೂಪಿಯರ ಕುತೂಹಲ ಕೆರಳಿಸುವ ಪ್ರೇಮ ಕಥೆ

By Deepak
|

ನಾಗ ಲೋಕದ ಯುವರಾಣಿಯಾದ ಉಲೂಪಿಯು (ಉಲೂಚಿ) ಅರ್ಜುನನನ್ನು ಮದುವೆಯಾದಳು. ಈಕೆಯು ನಾಗರಾಜನಾದ ಕೌರವ್ಯನ ಮಗಳು. ಈತನು ಗಂಗಾನದಿಯ ಆಳದಲ್ಲಿ ನೆಲೆಗೊಂಡಿದ್ದ ನಾಗಗಳ ಸಾಮ್ರಾಜ್ಯಕ್ಕೆ ರಾಜನಾಗಿದ್ದನು. ಉಲೂಪಿಯು ಶಸ್ತ್ರಾಸ್ತ್ರಗಳ ವಿದ್ಯೆಯಲ್ಲಿ ಪರಿಣಿತಿಯನ್ನು ಪಡೆದಿದ್ದಳು. ಈಕೆ ಅರ್ಜುನನ ಮತ್ತೊಬ್ಬ ಪತ್ನಿಯಾದ ಚಿತ್ರಾಂಗದಳ ಮಗ ಬಭ್ರುವಾಹನನಿಗೆ ಅಸ್ತ್ರ ವಿದ್ಯೆಯನ್ನು ಹೇಳಿಕೊಟ್ಟಳು. ಬಭ್ರುವಾಹನನಿಂದ ಅರ್ಜುನ ಹತನಾದಾಗ ಆತನಿಗೆ ಮರು ಜೀವವನ್ನು ನೀಡಿದವಳು ಈ ಉಲೂಪಿಯೇ.

ಅರ್ಜುನ ಒಂದು ವರ್ಷ ಗಡಿಪಾರಾಗಿದ್ದು ಮತ್ತು ಉಲೂಪಿಯನ್ನು ಭೇಟಿಯಾಗಿದ್ದು

The Love Story of Uloopi and Arjuna in Mahabharth

ಮಹಾಭಾರತದ ಪ್ರಕಾರ ಅರ್ಜುನನು ಪಾಂಡವರ ಪತ್ನಿಯಾದ ದ್ರೌಪದಿಯ ಅರಮನೆಯನ್ನು ಒಮ್ಮೆ ಅನಿವಾರ್ಯವಾಗಿ ಪ್ರವೇಶಿಸುವ ಮೂಲಕ ನಿಯಮವನ್ನು ಮುರಿದನಂತೆ. ಆ ನಿಯಮ ಏನೆಂದರೆ, ಪಾಂಡವರು ಐವರು ದ್ರೌಪದಿಯನ್ನು ಮದುವೆಯಾಗಿದ್ದ ವಿಚಾರ ಎಲ್ಲರಿಗು ಗೊತ್ತು. ಈಕೆ ಪ್ರತಿಯೊಬ್ಬ ಪತಿಯ ಜೊತೆಯಲ್ಲಿ ಒಂದು ವರ್ಷದಂತೆ ಸರದಿ ಪ್ರಕಾರ ಕಳೆಯುತ್ತಿದ್ದಳು. ಆ ಅವಧಿಯಲ್ಲಿ ಇತರರು ದ್ರೌಪದಿ ಇದ್ದ ಅತಃಪುರವನ್ನು ಪ್ರವೇಶಿಸಬಾರದು ಎಂಬ ನಿಯಮ ಚಾಲ್ತಿಯಲ್ಲಿತ್ತು.

ಈ ನಿಯಮವನ್ನು ಯಾರು ಮುರಿಯುತ್ತಾರೋ, ಅವರು ಒಂದು ವರ್ಷ ದೇಶವನ್ನು ತೊರೆದು ಹೋಗಬೇಕು ಎಂಬ ನಿಯಮವನ್ನು ವಿಧಿಸಲಾಗಿತ್ತು. ಒಮ್ಮೆ ಅರ್ಜುನನು ಒಬ್ಬ ಬಡಪಾಯಿಗೆ ಸಹಾಯ ಮಾಡಬೇಕಾದ ಅನಿವಾರ್ಯತೆಗೆ ಸಿಕ್ಕಿಕೊಂಡನು. ಆಗ ಅದಕ್ಕಾಗಿ ಅವನಿಗೆ ತನ್ನ ಗಾಂಢೀವ ಮತ್ತು ಅಕ್ಷಯ ತೂರಿಣಗಳ ಅವಶ್ಯಕತೆ ಇತ್ತು. ಆದರೆ ಅವನು ಅದನ್ನು ದ್ರೌಪದಿಯ ಅಂತಃಪುರದಲ್ಲಿ ಮರೆತು ಬಿಟ್ಟು ಬಿಟ್ಟಿದ್ದನು. ಈಗಾಗಿ ಅವನು ಅನಿವಾರ್ಯವಾಗಿ ಈ ನಿಯಮವನ್ನು ಮುರಿಯಲೇಬೇಕಾಯಿತು. ಹೀಗೆ ಅವನು ದೇಶವನ್ನು ತ್ಯಜಿಸಿ ಹೋಗಬೇಕಾಯಿತು.

ಅರ್ಜುನ ಮತ್ತು ಉಲೂಪಿಯರ ಮದುವೆ
ಈ ವನವಾಸದ ಅವಧಿಯಲಿ ಅರ್ಜುನನು ನಾಗಲೋಕದ ಯುವರಾಣಿ ಉಲೂಪಿಯನ್ನು ಭೇಟಿಯಾದನು. ಉಲೂಪಿಯು ಅರ್ಜುನನ್ನು ಕಂಡು ಮೋಹಿತಳಾದಳು ಮತ್ತು ಅವನನ್ನು ನಾಗಲೋಕಕ್ಕೆ ಕರೆದುಕೊಂಡು ಹೋಗಿ ಮದುವೆಯಾಗುವಂತೆ ಕೇಳಿಕೊಂಡಳು. ಅರ್ಜುನನು ಆಕೆಯನ್ನು ವಿವಾಹವಾದನು.ಇವರಿಬ್ಬರಿಗೆ ಇರವನ್ ಎಂಬ ಮಗನು ಸಹ ಜನಿಸಿದನು. ನೀರಿನಲ್ಲಿರುವ ಎಲ್ಲಾ ಪ್ರಾಣಿಗಳು ಅರ್ಜುನನ ಮಾತನ್ನು ಪಾಲಿಸುತ್ತವೆ ಮತ್ತು ಆತನು ನೀರಿನಲ್ಲಿ ಅಜೇಯನಾಗಿರುವಂತಹ ವರವನ್ನು ಉಲೂಪಿಯು ಅರ್ಜುನನಿಗೆ ನೀಡಿದಳು. ದುಶ್ಯಂತ ಶಕುಂತಲೆಯರ ಕುತೂಹಲ ಕೆರಳಿಸುವ ಪ್ರೇಮ ಕಥೆ

ಬಬ್ರುವಾಹನನಿಂದ ಹತನಾದ ಅರ್ಜುನ ಮತ್ತು ಉಲೂಪಿಯು ಆತನಿಗೆ ಮರುಜೀವ ನೀಡಿದ್ದು
ವರ್ಷಗಳ ನಂತರ ಪಾಂಡವರು ಅಶ್ವಮೇಧ ಯಾಗವನ್ನು ಮಾಡಿದರು. ತನ್ನ ರಾಜ್ಯದ ಗಡಿಯನ್ನು ಪ್ರವೇಶಿಸಿದ ಈ ಯಾಗದ ಕುದುರೆಯನ್ನು ಬಬ್ರುವಾಹನು ಬಂಧಿಸಿದನು. ಈ ಬಬ್ರುವಾಹನನಿಗೆ ಯುದ್ಧಕಲೆಯನ್ನು ತಿಳಿಸಿಕೊಟ್ಟವಳು ಉಲೂಪಿ.

ಬಬ್ರುವಾಹನನಿಗೆ ಅರ್ಜುನ ತನ್ನ ತಂದೆ ಎಂಬ ಅಂಶ ತಿಳಿದಿರಲಿಲ್ಲ. ಹಾಗಾಗಿ ಅಶ್ವಮೇಧದ ಕುದುರೆಯನ್ನು ಬಿಡಿಸಿಕೊಳ್ಳಲು ಸೈನ್ಯ ಸಮೇತನಾಗಿ ಬಂದ ಅರ್ಜುನನನ ಮೇಲೆ ಈತ ಯುದ್ಧ ಮಾಡಿದನು. ಈ ಯುದ್ಧದಲ್ಲಿ ಅರ್ಜುನನು ಬಬ್ರುವಾಹನನ ಬಾಣದ ಆಘಾತಕ್ಕೆ ಸಿಲುಕಿ ಮೂರ್ಛೆ ಹೋದನು. ಇದನ್ನು ತಿಳಿದ ಉಲೂಪಿಯು ಕೂಡಲೆ ಆ ಸ್ಥಳಕ್ಕೆ ಆಗಮಿಸಿದಳು. ಮತ್ತು ನಾಗಗಳ ಬಳಿ ಇದ್ದ ಜ್ಞಾನವನ್ನು ಬಳಸಿ ಅರ್ಜುನನ್ನು ಉಳಿಸಿದಳು. ನಂತರ ತಂದೆ-ಮಕ್ಕಳಿಬ್ಬರನ್ನು ಮತ್ತೆ ಒಂದು ಮಾಡಿದವಳು ಇದೇ ಉಲೂಪಿ.

ಈ ಘಟನೆಯು ಮತ್ತೊಂದು ಘಟನೆಯೊಂದಿಗೆ ತಳುಕು ಹಾಕಿಕೊಂಡಿದೆ. ತನ್ನ ಮಗನಾದ ಭೀಷ್ಮನನ್ನು ಕುಟಿಲ ತಂತ್ರದಿಂದ ಶಿಖಂಡಿಯನ್ನು ಮುಂದೆ ನಿಲ್ಲಿಸಿಕೊಂಡು ಕೊಂದು ಹಾಕಿದ್ದಕ್ಕಾಗಿ ಗಂಗಾದೇವಿಯು ಅರ್ಜುನನಿಗೆ ತನ್ನ ಮಗನಿಂದಲೆ ಸಾವು ಬರಲಿ ಎಂಬ ಶಾಪವನ್ನು ನೀಡಿದ್ದಳು. ಮಹಾಭಾರತದ ವೀರ ಯೋಧ 'ಅರಾವಣನ' ರೋಚಕ ಕಥೆ

ಉಲೂಪಿಗೆ ಈ ಶಾಪದ ಕುರಿತು ತಿಳಿದುಬಂದಿತು. ಆಗ ಆಕೆಯು ಗಂಗಾ ದೇವಿಯನ್ನು ಕ್ಷಮಿಸು ಎಂದು ಕೇಳಿಕೊಂಡಳು. ಆಗ ಗಂಗಾದೇವಿಯು ಉಲೂಪಿಗೆ ಹೀಗೆ ಹೇಳಿದಳು. ಬಭ್ರುವಾಹನನು ಅರ್ಜುನನನ್ನು ಕೊಲ್ಲುತ್ತಾನೆ. ಆಗ ಉಲೂಪಿಯು ಆತನಿಗೆ ಮೃತಸಂಜೀವಿನಿಯ ಸಹಾಯದಿಂದ ಮರುಜೀವವನ್ನು ನೀಡಬಹುದು ಎಂದು ಹೇಳಿದಳು. ಮಹಾಭಾರತದ ಕೊನೆಯ ಭಾಗದಲ್ಲಿ ಪಾಂಡವರು ಸ್ವರ್ಗಾರೋಹಣಕ್ಕೆ ಹೋದಾಗ, ಉಲೂಪಿಯು ಗಂಗಾನದಿಯಲ್ಲಿರುವ ತನ್ನ ರಾಜ್ಯಕ್ಕೆ ಮರಳಿ ಬಂದಳು ಎಂದು ಹೇಳಲಾಗಿದೆ.

English summary

The Love Story of Uloopi and Arjuna in Mahabharth

Uloopi was a Naga Princess and she got married to Arjuna, the third of the Pandava brothers. She was the daughter of the Serpent King, Kauravya, who ruled the underwater kingdom of snakes in the Ganga River.
X
Desktop Bottom Promotion