For Quick Alerts
ALLOW NOTIFICATIONS  
For Daily Alerts

ಭಗವಾನ್ ಕೃಷ್ಣನ ಭಕ್ತೆ ಮೀರಾ ಭಾಯಿ ಜೀವನದ ಬಗ್ಗೆ ಒಂದಿಷ್ಟು…

|

ಶ್ರದ್ಧಾಭಕ್ತಿಯಿಂದ ದೇವರನ್ನು ಪೂಜಿಸಿದರೆ ಖಂಡಿತವಾಗಿಯೂ ಅವರು ಒಲಿದು ಬರುವರು ಎನ್ನುವ ನಂಬಿಕೆಯಿದೆ. ನಾವು ಈ ಬಗ್ಗೆ ಹಲವಾರು ಪುರಾಣ ಕಥೆಗಳನ್ನು ಓದಿದ್ದೇವೆ. ಇದರಲ್ಲಿ ಸಾಮಾನ್ಯರು ಕೂಡ ತಮ್ಮ ಭಕ್ತಿಯಿಂದ ದೇವರನ್ನು ಒಲಿಸಿಕೊಂಡಿದ್ದಾರೆ. ಆದರೆ ನಿಷ್ಕಲ್ಮಷ ಮನಸ್ಸಿನಿಂದ ದೇವರನ್ನು ಪೂಜಿಸಬೇಕು. ಹಾಗಾದರೆ ಮಾತ್ರ ದೇವರು ಒಲಿಯುವರು. ಈ ಲೇಖನದಲ್ಲಿ ನಾವು ನಿಮಗೆ ಹೇಳಲು ಹೊರಟಿರುವುದು ಮೀರಾ ಭಾಯಿ ಬಗ್ಗೆ. ಮೀರಾ ಭಾಯಿ ತನ್ನ ಹಾಡುಗಳು ಮತ್ತು ವೀಣೆಯನ್ನು ಮೀಟುತ್ತಾ ಅದನ್ನು ಹಾಡುವುದರಲ್ಲಿ ತುಂಬಾ ಜನಪ್ರಿಯರಾಗಿದ್ದರು.

ಮೀರಾ ಭಾಯಿ ಅವರು ಕೃಷ್ಣನ ಧ್ಯಾನದಲ್ಲೇ ಸಂಪೂರ್ಣ ಜೀವನ ಕಳೆಯಲು ಬಯಸಿದವರು. ದೇವರು ಪ್ರತಿಯೊಬ್ಬರನ್ನು ತನ್ನ ಭಕ್ತರನ್ನಾಗಿ ಮಾಡಲು ಬಯಸುವರು. ಆದರೆ ಭೌತಿಕ ಪ್ರಪಂಚದಲ್ಲಿ ಕೆಲವೊಂದು ಸಲ ಭಕ್ತಿಯಿಂದ ದೇವರ ಧ್ಯಾನ ಮಾಡಲು ತುಂಬಾ ಕಷ್ಟವಾಗುವುದು. ಲೌಕಿಕ ಬದುಕು ದೇವರ ಧ್ಯಾನಕ್ಕೆ ಅಡ್ಡಿಯಾಗುವುದು. ಆದರೂ ಹಲವಾರು ತೊಂದರೆ ಹಾಗೂ ಸಮಸ್ಯೆಗಳನ್ನು ಎದುರಿಸಿದರೆ, ಕೆಲವರು ದೇವರ ವರ ಪಡೆಯುವಲ್ಲಿ ಯಶಸ್ವಿಯಾಗುವರು. ಇದಕ್ಕೆ ಬದ್ಧತೆ ಹಾಗೂ ಭಕ್ತಿಯು ಅತೀ ಅಗತ್ಯ. ಮೀರಾ ಭಾಯಿ ಕೃಷ್ಣ ದೇವರ ಭಕ್ತೆಯಾಗಿದ್ದರು. ಈ ಬಗ್ಗೆ ನೀವು ಈ ಲೇಖನದಲ್ಲಿ ಇನ್ನಷ್ಟು ತಿಳಿಯಿರಿ.

ರಾಜಮನೆತನದ ಹುಡುಗಿ ಭಕ್ತೆಯಾದಳು

ರಾಜಮನೆತನದ ಹುಡುಗಿ ಭಕ್ತೆಯಾದಳು

ಜೋಧಪುರ ನಿರ್ಮಾಣದ ಹರಿಕಾರ ರಾವ್ ರಾಥೋಡ್ ವಂಶಸ್ಥರಾಗಿದ್ದ ರತನ್ ಸಿಂಗ್ ಅವರ ಮಗಳಾಗಿ ರಾಜಸ್ಥಾನದ ಮೆರ್ತಾದ ಚೌಕರಿ ಗ್ರಾಮದಲ್ಲಿ ಜನಿಸಿದವರು ಮೀರಾ ಭಾಯಿ. ರಾಜ ಮನೆತನದಿಂದ ಬಂದವರಾಗಿದ್ದ ಕಾರಣದಿಂದಾಗಿ ಅವರಿಗೆ ಸಾರ್ವಜನಿಕ ಸ್ಥಳಗಳಲ್ಲಿ ಹಾಡುವ ಅಥವಾ ನೃತ್ಯ ಮಾಡುವ ಅನುಮತಿ ಇರಲಿಲ್ಲ. ಆದರೆ ಅವರು ಇದನ್ನು ತುಂಬಾ ಇಷ್ಟಪಡುತ್ತಿದ್ದರು. ಬಾಲ್ಯದಿಂದಲೇ ಮೀರಾ ಭಾಯಿ ಅವರ ಹೃದಯದಲ್ಲಿ ಕೃಷ್ಣನ ಮೇಲಿನ ಪ್ರೀತಿಯು ಮೊಳಕೆಯೊಡೆದಿತ್ತು ಮತ್ತು ಇದು ಜೀವನವಿಡಿ ಹೆಚ್ಚಾಗುತ್ತಲೇ ಹೋಯಿತು. ಕವಿತೆಗಳು ಹಾಗೂ ಕೆಲವೊಂದು ಭಕ್ತಿ ಗೀತೆಗಳಿಂದಾಗಿ ಅವರು ತನ್ನ ಭಾವನೆಗಳನ್ನು ಹೊರಗೆ ಹಾಕುತ್ತಲಿದ್ದರು. ಒಂದು ದಿನ ಅರಮನೆಗೆ ಸನ್ಯಾಸಿಯೊಬ್ಬರು ಭೇಟಿ ನೀಡಿದರು ಮತ್ತು ಮೀರಾ ಭಾಯಿ ಅವರ ತಂದೆಯನ್ನು ಭೇಟಿಯಾದರು. ಈ ವೇಳೆ ಅವರು ಮೀರಾ ಭಾಯಿಗಾಗಿ ಕೃಷ್ಣ ಸಣ್ಣ ಮೂರ್ತಿಯೊಂದನ್ನು ಅವರ ತಂದೆಯ ಬಳಿ ನೀಡಿದರು. ಈ ಮೂರ್ತಿಯು ಕೃಷ್ಣನ ಬೊಂಬೆಯಂತೆ ಕಾಣುತ್ತಲಿತ್ತು. ಅದಾಗ್ಯೂ, ಮೀರಾ ಭಾಯಿ ತಂದೆಯು ಇದನ್ನು ಮಗಳಿಗೆ ನೀಡಲು ಹಿಂಜರಿಯುತ್ತಿದ್ದರು. ಯಾಕೆಂದರೆ ಇದು ಆಕೆಗೆ ಇಷ್ಟವಾಗುವುದಿಲ್ಲ ಎಂದು ಭಾವಿಸಿದ್ದರು. ಆದರೆ ಮೀರಾ ಇದನ್ನು ತುಂಬಾ ಇಷ್ಟಪಟ್ಟರು ಮತ್ತು ಈ ಸಂದರ್ಭದಲ್ಲಿ ಕೃಷ್ಣನ ಮೇಲಿನ ಪ್ರೀತಿಯು ಅವರಲ್ಲಿ ಮತ್ತಷ್ಟು ವೃದ್ಧಿಸುತ್ತಾ ಹೋಯಿತು.

Most Read: ನಾರದ ಮುನಿಗಳ ವೀಣೆಯ ನಾದಕ್ಕೆ ಮನಸೋತ ಹನುಮಂತ!

ಮೀರಾ ಭಾಯಿ ಮದುವೆ

ಮೀರಾ ಭಾಯಿ ಮದುವೆ

ಒಂದು ಮೀರಾ ಭಾಯಿ ತನ್ನ ತಾಯಿ ಜತೆಗೆ ಮದುವೆಯೊಂದಕ್ಕೆ ಹೋಗಿದ್ದ ವೇಳೆ, ತನ್ನ ಭವಿಷ್ಯದಲ್ಲಿ ಪತಿಯಾಗುವಾತ ಯಾರು ಎಂದು ಪ್ರಶ್ನೆ ಮಾಡಿದ್ದರು. ಇದಕ್ಕೆ ತಮಾಷೆಗಾಗಿ ಮೀರಾ ತಾಯಿ ಅವರು ನಿನ್ನ ಪತಿ ಕೃಷ್ಣ ದೇವರು ಎಂದು ಹೇಳಿದ್ದರು. ಇದರಿಂದಾಗಿ ಕೃಷ್ಣನ ಮೇಲಿನ ಪ್ರೀತಿಯು ಅವರಲ್ಲಿ ಮತ್ತಷ್ಟು ಗಾಢವಾಯಿತು ಎಂದು ಜನರು ನಂಬಿದ್ದಾರೆ. ಚಿತ್ತೂರ್ ನ ರಾನಾ ಸಂಗ್ ನ ಹಿರಿಯ ಮಗ ಭೋಜ್ ರಾಜ್ ಅವರಿಗೆ ಮೀರಾ ಭಾಯಿ ಅವರನ್ನು ಮದುವೆ ಮಾಡಿಕೊಡಲಾಯಿತು. ತುಂಬಾ ಪ್ರಭಾವಿ ಮನೆತನದೊಂದಿಗೆ ಸಂಬಂಧ ಬೆಳೆಸಿದ್ದ ಕಾರಣದಿಂದಾಗಿ ಆಕೆಯ ಸಾಮಾಜಿಕ ಸ್ಥಿತಿಗತಿ ಮತ್ತು ಪ್ರತಿಷ್ಠೆಯು ಮತ್ತಷ್ಟು ಹೆಚ್ಚಾಯಿತು. ಆದರೆ ಭೌತಿಕ ಸಾಧನೆಯು ಆಕೆಗೆ ನಗಣ್ಯವಾಗಿತ್ತು. ಮದುವೆ ಬಳಿಕ ಕೂಡ ಆಕೆ ಸಂಜೆ ವೇಳೆ ಕೃಷ್ಣ ದೇವರ ಭಜನೆ ಮಾಡುತ್ತಿದ್ದರು ಮತ್ತು ನಾಮಜಪ ಮಾಡುತ್ತಲಿದ್ದರು. ಇದರನ್ನು ಅವರ ಪತಿ ಹಾಗೂ ಅತ್ತೆ ಮನೆಯವರು ಇಷ್ಟಪಡುತ್ತಿರಲಿಲ್ಲ.

ಅತ್ತೆ ಮನೆಯವರೊಂದಿಗೆ ಮೀರಾ ಭಾಯಿ ಸಂಬಂಧ

ಅತ್ತೆ ಮನೆಯವರೊಂದಿಗೆ ಮೀರಾ ಭಾಯಿ ಸಂಬಂಧ

ಮೀರಾ ಭಾಯಿ ಅತ್ತೆ ಮನೆಯವರು ತಮ್ಮ ಮನೆಯಲ್ಲಿ ದುರ್ಗಾ ಮಾತೆಯನ್ನು ಪೂಜಿಸುತ್ತಿದ್ದರು. ಮೀರಾ ಭಾಯಿ ಕೂಡ ದುರ್ಗಾ ಮಾತೆಯ ಪೂಜೆ ಮಾಡಬೇಕು ಎಂದು ಬಯಸಿದ್ದರು. ಆದರೆ ತಾನು ಈಗಾಗಲೇ ಕೃಷ್ಣ ದೇವರಿಗೆ ಬದ್ಧಳಾಗಿರುವ ಕಾರಣದಿಂದ ಇದು ಸಾಧ್ಯವಿಲ್ಲವೆಂದು ಮೀರಾ ಭಾಯಿ ನಿರಾಕರಿಸಿದರು. ಇಂತಹ ಸಣ್ಣ ವಿಚಾರದಿಂದಾಗಿ ಮೀರಾ ಭಾಯಿ ಮತ್ತು ಆಕೆ ಅತ್ತೆ ಮನೆಯವರ ಮಧ್ಯೆ ಸಣ್ಣ ಮನಸ್ತಾಪವು ಶುರುವಾಯಿತು. ಕೃಷ್ಣ ದೇವರ ಮೇಲೆ ಮೀರಾ ಭಾಯಿ ಭಕ್ತಿಯು ಹೆಚ್ಚಾಗುತ್ತಿದ್ದಂತೆ ಅತ್ತೆ ಮನೆಯವರೊಂದಿಗಿನ ಭಿನ್ನಾಭಿಪ್ರಾಯವು ವಿಸ್ತರಿಸಿತು. ಅತ್ತೆ ಮನೆಯವರು ಒಂದು ಸಲ ಆಕೆಯನ್ನು ಹತ್ಯೆ ಮಾಡಲು ಕೂಡ ಪ್ರಯತ್ನಿಸಿದರು. ಒಂದು ಸಲ ಸಂಬಂಧಿಕರು ಪತಿಯೊಂದಿಗೆ ಆಕೆಯ ಸಂಬಂಧ ಕೆಡಿಸಲು ಅಪಪ್ರಚಾರ ಮಾಡಲು ಹೋಗಿ, ತನ್ನ ಕೋಣೆಯಲ್ಲಿ ಆಕೆ ಬೇರೆ ಪುರುಷರೊಂದಿಗೆ ಇರುತ್ತಾರೆ ಎಂದು ಹೇಳಿದ್ದರು. ಆದರೆ ಆಕೆ ಕೋಣೆಯಲ್ಲಿ ಕೃಷ್ಣನ ಮೂರ್ತಿಗೆ ಅಲಂಕಾರ ಮಾಡುವುದುನ್ನು ಪತಿಯು ಕಣ್ಣಾರೆ ನೋಡಿದ್ದ.

ವಿಷದ ನೀರು

ವಿಷದ ನೀರು

ಒಂದು ಸಲ ಅತ್ತೆ ಮನೆಯವರು ಮೀರಾ ಭಾಯಿ ಅವರನ್ನು ಕೊಲ್ಲುವ ಉದ್ದೇಶದಿಂದ ತಮ್ಮ ಕೆಲಸದವನಲ್ಲಿ ಒಂದು ಲೋಟ ನೀರನ್ನು ಕೊಟ್ಟು ಕಳುಹಿಸಿದ್ದರು. ಇದರಲ್ಲಿ ಮಕರಂದವಿದೆ ಮತ್ತು ಇದು ತುಂಬಾ ಪವಿತ್ರ ನೀರು ಎಂದು ಅವರು ಹೇಳಿ ಕಳುಹಿಸಿದ್ದರು. ಮೀರಾ ಭಾಯಿಯನ್ನು ಕೊಲ್ಲುವ ಉದ್ದೇಶದಿಂದ ಅವರು ಈ ನೀರಿಗೆ ವಿಷ ಹಾಕಿದ್ದರು. ಮುಗ್ದ ಹುಡುಗಿಯು ಅದನ್ನು ಕುಡಿಬಿಟ್ಟಳು. ಆದರೆ ವಿಷವು ಆಕೆಗೆ ಯಾವುದೇ ಪರಿಣಾಮ ಬೀರಲಿಲ್ಲ ಮತ್ತು ಆಕೆ ತುಂಬಾ ಸುರಕ್ಷಿತವಾಗಿದ್ದರು. ಮೀರಾ ಭಾಯಿ ಕಥೆಯಲ್ಲಿ ಈ ಘಟನೆಯನ್ನು ತಪ್ಪದೆ ಉಲ್ಲೇಖಿಸಲಾಗುತ್ತದೆ. ಕೃಷ್ಣ ದೇವರು ಆಕೆಯನ್ನು ರಕ್ಷಣೆ ಮಾಡಿದ ಎಂದು ಹೇಳಲಾಗುತ್ತದೆ.

ಬುಟ್ಟಿಯಲ್ಲಿ ವಿಷದ ಹಾವು

ಬುಟ್ಟಿಯಲ್ಲಿ ವಿಷದ ಹಾವು

ಅತ್ತೆ ಮನೆಯವರು ಆಕೆಯನ್ನು ಕೊಲ್ಲಲು ಹಲವಾರು ರೀತಿಯಿಂದ ಪ್ರಯತ್ನ ಮಾಡುತ್ತಲೇ ಇದ್ದರು. ಆದರೆ ಮೀರಾ ಭಾಯಿಗೆ ಮಾತ್ರ ಇದರಿಂದ ಯಾವುದೇ ರೀತಿಯಿಂದಲೂ ಪರಿಣಾಮವಾಗುತ್ತಿರಲಿಲ್ಲ. ಒಂದು ಸಲ ಆಕೆಗೆ ಅತ್ತೆ ಮನೆಯವರು ಒಂದು ಬುಟ್ಟಿಯನ್ನು ಕಳುಹಿಸಿಕೊಟ್ಟರು. ಕೆಲಸದವನು ಮೀರಾ ಭಾಯಿಯಲ್ಲಿ ಇದರಲ್ಲಿ ಹೂಗಳು ಇದೆ ಎಂದು ಹೇಳಿದ್ದ. ಆದರೆ ನಿಜವಾಗಿಯೂ ಅದರಲ್ಲಿ ಹಾವು ಇತ್ತು. ಅದಾಗ್ಯೂ, ಆಕೆ ಬುಟ್ಟಿಯನ್ನು ತೆರೆದು ನೋಡಿದ ವೇಳೆ ಬುಟ್ಟಿಯಲ್ಲಿ ಹೂವಿನ ಮಾಲೆಯಿತ್ತು. ಮತ್ತೊಂದು ಘಟನೆಯಲ್ಲಿ ಮೀರಾ ಭಾಯಿಗೆ ಬಾಯಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಹೇಳಲಾಗಿತ್ತು. ಆಕೆ ಇದನ್ನು ಕೂಡ ಪ್ರಯತ್ನಿಸಿ ನೋಡಿದ್ದರು. ಆದರೆ ನೀರಿನಲ್ಲಿ ಮುಳಗದೆ ಜೀವಂತವಾಗಿ ತೇಲುತ್ತಾ ಇದ್ದರು. ಕೃಷ್ಣ ದೇವರು ಮೀರಾ ಭಾಯಿಯನ್ನು ರಕ್ಷಿಸಿದ್ದಾರೆ ಎನ್ನುವುದನ್ನು ತೋರಿಸಲು ಇದು ಕೆಲವು ಘಟನೆಗಳಾಗಿವೆ. ಆಕೆ ಈ ಐಷಾರಾಮಿ ಹಾಗೂ ಲೌಕಿಕ ಬದುಕನ್ನು ತೊರೆದು ವೃಂದಾವನಕ್ಕೆ ಹೋದರು. ಇದರಿಂದಾಗಿ ಆಕೆ ಯಾವುದೇ ಅಡೆತಡೆಯಿಲ್ಲದೆ ಕೃಷ್ಣನ ಪೂಜೆ ಹಾಗೂ ಭಕ್ತಿಯಲ್ಲಿ ತೊಡಗಿರಬಹುದು. ಮೀರಾ ಭಾಯಿಯು 1546ರಲ್ಲಿ ಮೃತಪಟ್ಟರು ಎಂದು ನಂಬಲಾಗಿದೆ. ಆದರೆ ಮೀರಾ ಭಾಯಿ ಅವರು ಹೇಗೆ ಮತ್ತು ಎಲ್ಲಿ ಮೃತಪಟ್ಟರು ಎನ್ನುವ ಬಗ್ಗೆ ಭಿನ್ನ ಅಭಿಪ್ರಾಯಗಳು ಇದೆ.

English summary

The Life story of Meera bai

Composing and signing poems while playing with her Veena, she looked beautiful, lost in devotion to Lord Krishna. Meera Bai wanted to do this her whole life. While God welcomes everybody who wants to be his devotee, the materialistic world might throw hurdles in the way. Despite the hurdles, some devotees attain the Supreme through their utter dedication and unmoved devotion. Meera Bai was one such devotee of Lord Krishna.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X