For Quick Alerts
ALLOW NOTIFICATIONS  
For Daily Alerts

ವರಮಹಾಲಕ್ಷ್ಮಿ ಪೂಜೆಯ ಬಗ್ಗೆ ಇರುವ ಪುರಾಣ ಕಥೆಗಳು

By Hemanth
|

ಭಾರತದಲ್ಲಿ ಇರುವಷ್ಟು ಹಬ್ಬಗಳು ಬೇರೆ ಯಾವುದೇ ದೇಶದಲ್ಲೂ ಇಲ್ಲವೆನ್ನಬಹುದು. ಭಾರತದಲ್ಲಿರುವ ವಿವಿಧ ಧರ್ಮೀಯರು ಹಬ್ಬಗಳು ವರ್ಷವಿಡೀ ಆಚರಿಸಲ್ಪಡುತ್ತಿರುವುದು. ಅದರಲ್ಲೂ ಹಿಂದೂಗಳಿಗೆ ಮಳೆಗಾಲ ಆರಂಭವಾದ ಕೆಲವೇ ದಿನಗಳಲ್ಲಿ ಬರುವಂತಹ ಆಷಾಢ ತಿಂಗಳಲ್ಲಿ ಬರುವ ವರಮಹಾಲಕ್ಷ್ಮಿ ಪೂಜೆಯು ಎಲ್ಲಾ ಹಬ್ಬಗಳಿಗೆ ಆರಂಭವೆನ್ನಬಹುದು. ಈ ಹಬ್ಬವು ಸಂಪೂರ್ಣ ವರ್ಷಕ್ಕೆ ಸುಖ ಹಾಗೂ ಸಮೃದ್ಧಿ ಒದಗಿಸುವುದು.

ಆಷಾಢ ತಿಂಗಳ ನಾಲ್ಕನೇ ಶುಕ್ರವಾರದಂದು ವರಮಹಾಲಕ್ಷ್ಮಿ ಪೂಜೆಯನ್ನು ಆಚರಿಸಲಾಗುತ್ತದೆ. ಈ ವರಮಹಾಲಕ್ಷ್ಮಿ ಪೂಜೆಯ ವೇಳೆ ಹೂ, ಬಣ್ಣ ಮತ್ತು ರಂಗೋಲಿ ಹಚ್ಚಲಾಗುವುದು. ವರಮಹಾಲಕ್ಷ್ಮಿ ಪೂಜೆಯ ವೇಳೆ ಭಾರೀ ಹೂ ಹಾಗೂ ಆಭರಣಗಳಿಂದ ದೇವಿಯನ್ನು ಶೃಂಗರಿಸಲಾಗುತ್ತದೆ. ಪೂಜೆಯ ವೇಳೆ ಭಕ್ತರು ಸುಖ ಹಾಗೂ ಸಮೃದ್ಧಿ ಬೇಡುವರು. ಈ ವೇಳೆ ಮಾರುಕಟ್ಟೆಯಲ್ಲಿ ಪ್ರತಿಯೊಂದು ವ್ಯಾಪಾರವು ಹೆಚ್ಚಾಗಿರುವುದು. ಮಹಾಲಕ್ಷ್ಮೀ ದೇವಿಯನ್ನು ಸ್ವಾಗತಿಸಲು ಭಕ್ತರೆಲ್ಲರೂ ಕಾಯುತ್ತಾ ಇರುತ್ತಾರೆ.

ವರಮಹಾಲಕ್ಷ್ಮಿ ಪೂಜೆ ಹೇಗೆ ಮಾಡಬೇಕು?...ಇಲ್ಲಿದೆ ನೋಡಿ ಕಂಪ್ಲೀಟ್ ಡಿಟೇಲ್ಸ್‌

ಮಹಿಳೆಯರು ಈ ದಿನಕ್ಕಾಗಿ ವರ್ಷದಿಂದ ಕಾಯುತ್ತಾ ಇರುತ್ತಾರೆ. ವರಮಹಾಲಕ್ಷ್ಮಿ ವ್ರತದಿಂದ ಸಿಗುವ ಸಮೃದ್ಧಿ ಹಾಗೂ ತಮ್ಮ ಕುಟುಂಬದವರಿಗೆ ದೀರ್ಘ ಆಯುಷ್ಯ ನೀಡಲೆಂದು ಪ್ರಾರ್ಥಿಸುವರು. ಕರ್ನಾಟಕ, ತಮಿಳುನಾಡು, ತೆಲಂಗಾಣ ಮತ್ತು ಆಂಧ್ರ ಪ್ರದೇಶದಲ್ಲಿ ಜನರು ಈ ಹಬ್ಬವನ್ನು ತುಂಬಾ ವಿಜೃಂಭಣೆಯಿಂದ ಆಚರಿಸುವರು ಮತ್ತು ವರಮಹಾಲಕ್ಷ್ಮಿಯ ಕೃಪಾಕಟಾಕ್ಷಕ್ಕೆ ಪಾತ್ರರಾಗಲು ಬಯಸುವರು. ವರಮಹಾಲಕ್ಷ್ಮಿಯನ್ನು ವಿಷ್ಣುವಿನ ಪತ್ನಿಯೆಂದು ಕರೆಯಲಾಗುತ್ತದೆ.

ಇಷ್ಟು ಮಾತ್ರವಲ್ಲದೆ ಆಕೆಯನ್ನು ಭೂಮಿ ತಾಯಿಯೆಂದೇ ಕರೆಯುವರು. ಕಮಲದಲ್ಲಿ ಮಹಾಲಕ್ಷ್ಮೀಯು ಪದ್ಮಾಸನ ಹಾಕಿಕೊಂಡು ಕುಳಿತುಕೊಳ್ಳುವಳು. ಪದ್ಮಪುರಾಣದಲ್ಲಿ ವರಮಹಾಲಕ್ಷ್ಮಿಯ ಹುಟ್ಟಿನ ಬಗ್ಗೆ ಹೇಳಲಾಗಿದೆ. ರಾಕ್ಷಸರಿಂದ ಸೋತ ಬಳಿಕ ಎಲ್ಲಾ ದೇವರುಗಳು ಜತೆ ಸೇರಿ ನಾರಾಯಣ ದೇವರಲ್ಲಿಗೆ ಹೋಗಿ ತಮ್ಮ ಅಳಲನ್ನು ತೋಡಿಕೊಳ್ಳುವರು ಮತ್ತು ರಾಕ್ಷಸರ ಹಿಂಸೆಯಿಂದ ತಮ್ಮನ್ನು ರಕ್ಷಿಸಬೇಕೆಂದು ಬೇಡಿಕೊಳ್ಳುವರು.

ಇದಕ್ಕೆ ಉತ್ತರಿಸಿದ ನಾರಾಯಣ ದೇವರು ಕ್ಷೀರ ಸಾಗರದಲ್ಲಿ ಮಂದಾರ ಬೆಟ್ಟವನ್ನು ಮಂಥನ ಮಾಡಬೇಕೆಂದು ಸಲಹೆ ನೀಡುತ್ತಾರೆ. ಮಂಥನದ ಕೆಲಸಕ್ಕೆ ರಾಕ್ಷಸರನ್ನು ಕೂಡ ಬಳಸಿಕೊಳ್ಳಬೇಕು. ನಾರಾಯಣನಿಗೆ ಹಾಸಿಗೆಯಾಗಿರುವ ಶೇಷನಾಗನನ್ನು ಮಂದಾರಗೆ ಕಟ್ಟಬೇಕು ಮತ್ತು ಹಗ್ಗದಂತೆ ಎಳೆಯಬೇಕು. ಕೂರ್ಮ(ಆಮೆ) ಬೆನ್ನ ಮೇಲೆ ಮಂದಾರವನ್ನು ಇಡಬೇಕು ಎಂದು ಹೇಳುತ್ತಾರೆ.

ದೇವರೆಲ್ಲರು ಶೇಷನಾಗನ ಬಾಲವನ್ನು ಹಿಡಿದರೆ ರಾಕ್ಷಸರು ಬಾಯಿಯ ಭಾಗದಿಂದ ಎಳೆಯುತ್ತಾರೆ. ನಾರಾಯಣ ದೇವರೇ ಕೂರ್ಮಾವತಾರವಾಗಿ ಇದರಲ್ಲಿ ಭಾಗಿಯಾಗುವರು. ಬೆಟ್ಟವು ಮಂಥನವನ್ನು ಆರಂಭಿಸುತ್ತಾ ಇರುವಂತೆ ಕ್ಷೀರಸಾಗರವು ಪವಿತ್ರವಾದ ಕಾಮಧೇನು, ವಾರುಣಿ(ವಿಷ).ಐರಾವತ, ಪಾರಿಜಾತ, ಚಂದ್ರ ಮತ್ತು ದೇವಿ ಮಹಾಲಕ್ಷ್ಮೀಯ ಹೊರತರುತ್ತದೆ.

ವರಮಹಾಲಕ್ಷ್ಮಿ ಪೂಜೆ ಮಾಡುವಾಗ ಇದರ ಬಗ್ಗೆ ಗಮನವಿರಲಿ

ದೇವಿಯು ತನ್ನ ಸುಂದರ ಮೊಗದೊಂದಿಗೆ ಕಮಲದ ಮೇಲೆ ಪದ್ಮಾಸನದಲ್ಲಿ ಕುಳಿತುಕೊಂಡು ಹೊರಬರುವರು. ದೇವರುಗಳು ಶ್ರೀಸೋತ್ರವನ್ನು ಜಪಿಸುತ್ತಾ ಇರುವಂತೆ ದೇವಿಯು ತನಗೆ ತುಂಬಾ ಇಷ್ಟವಿರುವ ನಾರಾಯಣ ದೇವರ(ವಿಷ್ಣು) ಹೃದಯದೊಳಗೆ ಹೋಗುವರು. ಇದರ ಬಳಿಕ ನಡೆದ ಕಾಳಗದಲ್ಲಿ ರಾಕ್ಷಸರನ್ನು ಸೋಲಿಸಿ ಕಳೆದುಕೊಂಡ ಸ್ವರ್ಗವನ್ನು ಮರಳಿ ಪಡೆಯಲಾಯಿತು.

ವರಮಹಾಲಕ್ಷ್ಮಿ ಎಂದರೆ ಒಂದು ಪ್ರಮುಖವಾದ ಅರ್ಥವಿದೆ. ಇದರಲ್ಲಿ ವರವೆಂದರೆ ಶುಭಹಾರೈಕೆ ಮತ್ತು ವರಮಹಾಲಕ್ಷ್ಮಿಯೆಂದರೆ ಅಷ್ಟಲಕ್ಷ್ಮೀಯರನ್ನು ಪ್ರತಿನಿಧಿಸುವಾಕೆ ಎಂದರ್ಥ. ವರಮಹಾಲಕ್ಷ್ಮಿ ಪೂಜೆ ಮಾಡುವುದರಿಂದ ನಮ್ಮ ಜೀವನಕ್ಕೆ ಎಂಟು ರೀತಿಯ ಲಕ್ಷ್ಮೀಯರ ಆಶೀರ್ವಾದ ಸಿಗುವುದು. ವರಮಹಾಲಕ್ಷ್ಮಿ ವೃತದಿಂದ ದೇವಿಯನ್ನು ಸ್ವಾಗತಿಸಲು ಮತ್ತು ಒಳ್ಳೆಯ ಹಾರೈಕೆ ಪಡೆಯಲು ಆಚರಿಸಲಾಗುತ್ತದೆ.

ವರಮಹಾಲಕ್ಷ್ಮಿ ಹಬ್ಬದಂದು ನಡೆಸುವ 'ಯಮುನಾ ಪೂಜೆಯ' ಮಹತ್ವ

ಅಷ್ಟಲಕ್ಷ್ಮೀಯರು

ವರಮಹಾಲಕ್ಷ್ಮಿಯು ತನ್ನ ಅಷ್ಟ ಅವತಾರದಲ್ಲಿ ಕಾಣಿಸಿಕೊಂಡಿರುವುದೇ ಅಷ್ಟಲಕ್ಷ್ಮೀ ಎನ್ನಬಹುದು.

ಆದಿ ಲಕ್ಷ್ಮೀ- ಒಂದು ಮೂಲ

ಧಾನ್ಯ ಲಕ್ಷ್ಮೀ- ಧಾನ್ಯಗಳ ದೇವರು

ಧೈರ್ಯ ಲಕ್ಷ್ಮೀ- ಧೈರ್ಯದ ದೇವತೆ

ಗಜ ಲಕ್ಷ್ಮೀ- ಶಕ್ತಿ ಮತ್ತು ಅಧಿಕಾರದ ದೇವತೆ

ಸಂತಾನ ಲಕ್ಷ್ಮೀ- ದಂಪತಿಗೆ ಸಂತತಿ ಭಾಗ್ಯ ನೀಡುವ ದೇವತೆ

ವಿಜಯಲಕ್ಷ್ಮೀ- ಗೆಲುವಿನ ದೇವತೆ

ವಿಧ್ಯಾಲಕ್ಷ್ಮೀ-ಜ್ಞಾನದ ದೇವತೆ

ಧನಲಕ್ಷ್ಮೀ-ಐಶ್ವರ್ಯ ನೀಡುವ ದೇವತೆ

ಹಬ್ಬದ ದಂತಕಥೆ

ಶಿವ ದೇವರು ಮತ್ತು ಅವರ ಪತ್ನಿ ಪಾರ್ವತಿ ದೇವಿಯು ಪಗಡೆಯಾಡುತ್ತಿರುವ ಸಂದರ್ಭದಲ್ಲಿ ಗೆಲುವು ಯಾರದ್ದು ಎನ್ನುವ ಬಗ್ಗೆ ವಿವಾದ ಉಂಟಾಗುತ್ತದೆ. ಪ್ರಾಮಾಣಿಕ ಬ್ರಾಹ್ಮಣನಾಗಿರುವ ಚಿತ್ರಾನಮಿಯಲ್ಲಿ ತೀರ್ಪು ನೀಡಲು ಹೇಳಲಾಗುತ್ತದೆ. ಆತ ಶಿವ ಗೆದ್ದಿರುವುದಾಗಿ ಘೋಷಿಸುತ್ತಾನೆ.

ಈ ತೀರ್ಪಿನಿಂದ ತುಂಬಾ ಕುಪಿತಳಾದ ದೇವಿ ಪಾರ್ವತಿಯು ಚಿತ್ರಾನಮಿಗೆ ಕುಷ್ಠರೋಗ ಬರಲಿ ಎಂದು ಶಾಪ ನೀಡುತ್ತಾಳೆ. ಬ್ರಾಹ್ಮಣನಿಗೆ ನೀಡಿದ ಶಾಪವನ್ನು ಹಿಂದಕ್ಕೆ ಪಡೆಯುವಂತೆ ಪಾರ್ವತಿಯಲ್ಲಿ ಶಿವನು ಬೇಡಿಕೊಳ್ಳುತ್ತಾನೆ. ಶಿವನ ಬೇಡಿಕೆಗೆ ಮಣಿದ ಪಾರ್ವತಿಯು ವರಮಹಾಲಕ್ಷ್ಮಿ ಪೂಜೆಯಂದು ಆತನು ಶಾಪದಿಂದ ಮುಕ್ತನಾಗುವನು ಎಂದು ಹೇಳುವಳು.

ಮಹಿಳೆಯರು ವರಮಹಾಲಕ್ಷ್ಮಿ ಪೂಜೆಯಂದು ವ್ರತ ಮಾಡಿ ಪೂಜೆ ಮಾಡುವ ಮೂಲಕ ದೇವಿಯನ್ನು ಮನೆಗೆ ಆಹ್ವಾನಿಸುವರು. ಆಷಾಢ ತಿಂಗಳ ನಾಲ್ಕನೇ ಶುಕ್ರವಾರದಂದು ನಡೆಯುವ ಪೂಜೆಯಂದು ಚಿತ್ರಾನಮಿ ಕೂಡ ತನ್ನ ಶಾಪದಿಂದ ಮುಕ್ತನಾಗುವ. ಮತ್ತೊಂದು ಪುರಾಣದ ಪ್ರಕಾರ ಮರಾಠ ರಾಜ್ಯದಲ್ಲಿ ಚಾರುಮತಿಯು ತುಂಬಾ ಧರ್ಮ ಹಾಗೂ ನ್ಯಾಯದ ಜೀವನ ಸಾಗಿಸುತ್ತಾ ಇರುತ್ತಾಳೆ. ಆಕೆ ತನ್ನ ತಂದೆತಾಯಿ ಹಾಗೂ ಅತ್ತೆಮಾವನನ್ನು ತುಂಬಾ ಪ್ರೀತಿಯಿಂದ ಆರೈಕೆ ಮಾಡುತ್ತಾಳೆ. ಆಕೆ ತನ್ನ ಕಾರ್ಯ ಮತ್ತು ಮಾತುಗಳಿಂದಲೂ ಅವರನ್ನು ಸಂತೃಪ್ತಿಗೊಳಿಸುತ್ತಾಳೆ.

ಪತಿ ಹಾಗೂ ಮಕ್ಕಳನ್ನು ಕೂಡ ಪ್ರೀತಿ ಹಾಗೂ ಮಮತೆಯಿಂದ ನೋಡಿಕೊಳ್ಳುವಳು. ಈ ಎಲ್ಲಾ ಸೇವೆಗಳೊಂದಿಗೆ ಆಕೆ ತನ್ನ ಹೃದಯ ಹಾಗೂ ಆತ್ಮವನ್ನು ವರಮಹಾಲಕ್ಷ್ಮಿ ದೇವಿಯ ಪೂಜೆಗೆ ಮೀಸಲಿಡುತ್ತಾಳೆ. ತನ್ನ ಕನಸನ್ನು ಪತಿ, ಅತ್ತೆ ಮತ್ತು ಗ್ರಾಮದ ಇತರ ಮಹಿಳೆಯರೊಂದಿಗೆ ಹಂಚಿಕೊಳ್ಳುವ ಆಕೆ ಎಲ್ಲರೂ ಪೂಜೆ ಮಾಡಲು ಪ್ರೇರೇಪಿಸುತ್ತಾಳೆ. ಎಲ್ಲರೂ ವರಮಹಾಲಕ್ಷ್ಮಿಯನ್ನು ಪೂಜೆ ಮಾಡಿ ಆಶೀರ್ವಾದ ಪಡೆಯುವರು. ಈ ಪುರಾಣಗಳೊಂದಿಗೆ ಈ ಪವಿತ್ರ ದಿನದಂದು ಎಲ್ಲರೂ ವರಮಹಾಲಕ್ಷ್ಮಿ ದೇವರ ಆಶೀರ್ವಾದ ಪಡೆಯುವ. ಪ್ರತೀ ಕ್ಷಣದಲ್ಲೂ ಅಷ್ಟ ಲಕ್ಷ್ಮೀಯರು ನಮಗೆಲ್ಲರಿಗೂ ಆಶೀರ್ವಾದ ನೀಡಲಿ ಎಂದು ಬೇಡಿಕೊಳ್ಳುವ.

English summary

The Legend Associated With The Varamahalakshmi Vrata

The monsoons are not just a thirst-quenching relief from hot sweltering summers. The onset of monsoons rushes with it the spring of nature, spreading blossoms of hope and blessings all around. The auspicious month of Aashada is symbolic because it holds the calendar date of the Varamahalakshmi festival - the festival heralding gaiety and prosperity till the conclusion of the next year. This benevolent festival is celebrated on the last Friday of the Hindu month of Aashada, the month that sets in soon after summer - the months of July-August as per the English calendar year...
Story first published: Thursday, August 3, 2017, 7:02 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X