For Quick Alerts
ALLOW NOTIFICATIONS  
For Daily Alerts

ಇತಿಹಾಸದಲ್ಲಿ ಕೀರ್ತಿಗಳಿಸಿಕೊಂಡ ಮಹಾನ್ ತಾಯಂದಿರು

ಲೋಕದಲ್ಲಿ ಕೆಟ್ಟ ಮಕ್ಕಳಿದ್ದರೂ ಕೆಟ್ಟ ತಾಯಿ ಇರುವುದಿಲ್ಲ ಎಂಬುದು ಜನಜನಿತವಾಗಿದೆ. ಮಾತೃ ಪ್ರೇಮಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ತಾಯಿ ಎಂಬುದಕ್ಕೆ ಇನ್ನೊಂದು ಹೆಸರಿಲ್ಲ ಅಂತೆಯೇ ಆ ಸ್ಥಾನವನ್ನು ಬೇರೆ ಯಾರಿಗೂ ತುಂಬಲಾಗದು.

By Manu
|

ಅನಾದಿ ಕಾಲದಿಂದಲೂ ಹೆಣ್ಣು ತಾಯಿ, ಪತ್ನಿ, ಸಹೋದರಿ, ಪುತ್ರಿ ಅಂತೆಯೇ ಹಲವಾರು ಸ್ತ್ರೀ ಸಂಬಂಧಿ ಪಾತ್ರಗಳನ್ನು ನಿಭಾಯಿಸಿಕೊಂಡು ನಮ್ಮ ಜೀವನದಲ್ಲಿ ಮಹತ್ತರ ಬದಲಾವಣೆಗಳನ್ನು ಮಾಡುತ್ತಿದ್ದಾರೆ. ಎಲ್ಲಿ ನಾರಿಯರನ್ನು ಪೂಜಿಸಲಾಗುತ್ತದೋ ಅಲ್ಲಿ ದೇವತೆಗಳು ನೆಲೆಸುತ್ತಾರೆ ಎಂಬ ಮಾತೊಂದಿದೆ.

ಅದರಲ್ಲೂ ಸ್ತ್ರೀ ಪಾತ್ರದಲ್ಲಿ ತಾಯಿಗೆ ಮಹತ್ತರವಾದ ಸ್ಥಾನವಿದೆ. ಲೋಕದಲ್ಲಿ ಕೆಟ್ಟ ಮಕ್ಕಳಿದ್ದರೂ ಕೆಟ್ಟ ತಾಯಿ ಇರುವುದಿಲ್ಲ ಎಂಬುದು ಜನಜನಿತವಾಗಿದೆ. ಮಾತೃ ಪ್ರೇಮಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ತಾಯಿ ಎಂಬುದಕ್ಕೆ ಇನ್ನೊಂದು ಹೆಸರಿಲ್ಲ ಅಂತೆಯೇ ಆ ಸ್ಥಾನವನ್ನು ಬೇರೆ ಯಾರಿಗೂ ತುಂಬಲಾಗದು.

ಇಂದಿನ ಕಲಿಯುಗದಲ್ಲಿ ಮಹಾನ್ ತಾಯಿಯರಿದ್ದು ಅಂತಹವರಿಂದ ಮಾತ್ರವೇ ಇಂದು ಲೋಕ ಉಳಿದಿದೆ ಎಂಬುದಾಗಿ ಹೇಳಬಹುದು. ಇಲ್ಲದಿದ್ದರೆ ಲೋಕದಲ್ಲಿರುವ ಕುಕೃತ್ಯಗಳಿಂದ ನಮ್ಮ ನಾಶ ಎಂದೋ ಆಗುತ್ತಿತ್ತು. ತಾಯಿ ತನ್ನ ಸುಖಕ್ಕಾಗಿ ಪ್ರಾರ್ಥಿಸದೇ ಮಕ್ಕಳ ಸುಖಕ್ಕಾಗಿ ಮಾತ್ರ ದೇವರನ್ನು ಬೇಡಿಕೊಳ್ಳುತ್ತಾಳೆ.

Lord Krishna

ಅದಕ್ಕಾಗಿಯೇ ಆಕೆಯನ್ನು ನಿಸ್ವಾರ್ಥಿ, ತ್ಯಾಗಮಯಿ ಎಂದು ಕರೆಯಲಾಗುತ್ತದೆ. ನಮ್ಮ ಪುರಾಣ ಕಾಲದಲ್ಲೂ ಮಹಾನ್ ತಾಯಂದಿರಿದ್ದು ಅವರುಗಳ ತ್ಯಾಗ ಮತ್ತು ಮಹಾನ್ ಕಾರ್ಯವನ್ನು ಇಂದಿಲ್ಲಿ ತಿಳಿಸುತ್ತಿದ್ದೇವೆ. ಕಷ್ಟದ ಸಮಯದಲ್ಲಿ ಕೂಡ ಎದೆಗುಂದದೆ ಈ ತಾಯಂದಿರು ಕಷ್ಟಪಡುತ್ತಾರೆ ಮತ್ತು ಧರ್ಮದ ಹಾದಿಯಲ್ಲಿ ನಡೆಯುತ್ತಾರೆ.

ಮಹಾ ಸತಿ ಅನುಸೂಯ
ಪವಿತ್ರ ನಾರಿ ಎಂಬ ಹೆಸರಿಗೆ ಪಾತ್ರವಾಗಿರುವ ಅನುಸೂಯ ಒಳ್ಳೆಯ ಚಿಂತನೆಗಳಿಂದಲೇ ತಮ್ಮ ಜೀವನವನ್ನು ನಡೆಸುತ್ತಾರೆ. ತನಗೆ ವಿಷ್ಣು, ಬ್ರಹ್ಮ ಮತ್ತು ಶಿವನಿಗೆ ಸಮರಿಸಮನಾಗಿರುವ ಪುತರು ಬೇಕೆಂಬುದು ಈ ಮಾಹಾನ್ ತಾಯಿಯ ಆಸೆಯಾಗಿತ್ತು. ಇದಕ್ಕಾಗಿ ಆಕೆ ಮಹಾನ್ ವ್ರತವನ್ನು ಕೈಗೊಳ್ಳುತ್ತಾರೆ. ಅನುಸೂಯಾ ದೇವಿಯ ನಿಷ್ಟೆಯನ್ನು ಅರಿತುಕೊಳ್ಳಲು ಸರಸ್ವತಿ, ಲಕ್ಷ್ಮೀ, ಮತ್ತು ಪಾರ್ವತಿಯರು ಪರೀಕ್ಷೆಯನ್ನು ನಡೆಸಲು ತೀರ್ಮಾನಿಸುತ್ತಾರೆ. ಇವರುಗಳು ಋಷಿಗಳ ರೂಪದಲ್ಲಿ ಆಕೆಯ ಮುಂದೆ ಪ್ರತ್ಯಕ್ಷರಾಗುತ್ತಾರೆ ಮತ್ತು ನಗ್ನ ರೂಪದಲ್ಲಿ ನಿರ್ವಾಣ ಭಿಕ್ಷೆಯನ್ನು ನೀಡುವಂತೆ ಪ್ರಾರ್ಥಿಸುತ್ತಾರೆ. ತನ್ನ ಪವಿತ್ರ ಧರ್ಮದ ವಿರುದ್ಧವಾಗಿ ಆಕೆ ಈ ರೀತಿ ಮಾಡಲು ಹಿಂದೇಟು ಹಾಕುತ್ತಾಳೆ.

ತನ್ನ ಪತಿ ಅತ್ರಿಯನ್ನು ಆಕೆ ಧ್ಯಾನಿಸುತ್ತಾಳೆ ಮತ್ತು ಬಂದಿರುವ ಋಷಿವರ್ಯರು ಮಗುವಿನ ರೂಪದಲ್ಲಿ ಪರಿವರ್ತನೆಯಾಗುವಂತೆ ಪ್ರಾರ್ಥಿಸುತ್ತಾಳೆ. ನಂತರ ಆ ಮಕ್ಕಳಿಗೆ ಆಕೆ ಹಾಲನ್ನು ಕುಡಿಸುತ್ತಾಳೆ. ಈ ದೇವತೆಗಳೇ ಆಕೆಯ ಮಕ್ಕಳಾಗುತ್ತಾರೆ. ಎರಡು ಕಾಲುಗಳು, ಒಂದು ದೇಹ, ಆರು ಕೈಗಳು ಮತ್ತು ಮೂರು ತಲೆಗಳ ರೂಪದಲ್ಲಿ ಈ ಮಕ್ಕಳು ಇರುತ್ತಾರೆ. ತದನಂತರ ದೇವಿಯರು ತಮ್ಮ ಪತಿಯಂದಿರನ್ನು ಹಿಂತಿರುಗಿಸುವಂತೆ ಅನುಸೂಯಾಳನ್ನು ಬೇಡಿಕೊಳ್ಳುತ್ತಾರೆ.

ಸೀತಾ ದೇವಿ
ಲಕ್ಷ್ಮೀ ದೇವಿಯ ಇನ್ನೊಂದು ಅವತಾರವೆಂಬುದು ಸೀತಾ ದೇವಿಗೆ ಇರುವ ಹೆಸರಾಗಿದೆ. ತನ್ನ ಪತಿಗೆ ನಿಷ್ಟಳಾಗಿದ್ದ ಸೀತಾ ಮಾತೆ ಮಹಾನ್ ಪತಿವ್ರತೆ ಎಂದೆನಿಸಿದ್ದಾರೆ. ರಾವಣನ ಬಂಧನದಲ್ಲಿದ್ದ ಸೀತೆಯನ್ನು ಶ್ರೀರಾಮನ ಬಿಡಿಸಿಕೊಂಡು ಬಂದ ನಂತರ ಲೋಕಕ್ಕೆ ಆಕೆ ಪವಿತ್ರಳು ಎಂಬುದನ್ನು ಸಾರುವ ಅಭಿಲಾಶೆ ಶ್ರೀರಾಮನಿಗೆ ಉಂಟಾಗುತ್ತದೆ. ಇದಕ್ಕಾಗಿ ಸೀತಾ ಮಾತೆ ಅಗ್ನಿಗೆ ಧುಮುಕುತ್ತಾಳೆ ಮತ್ತು ಅಗ್ನಿ ದೇವನು ಸೀತೆಯನ್ನು ಸ್ಪರ್ಶಿಸದೆಯೇ ಆಕೆಯನ್ನು ಶ್ರೀರಾಮನಿಗೆ ಒಪ್ಪಿಸುತ್ತಾನೆ. ಅದಾಗ್ಯೂ ಕೆಲವು ಸಮಯಗಳ ನಂತರ ಅಗಸನೊಬ್ಬನ ಮಾತುಗಳನ್ನು ಕೇಳಿ ಗರ್ಭಿಣಿ ಸೀತೆಯನ್ನು ಶ್ರೀರಾಮನು ಅರಣ್ಯಕ್ಕೆ ಕಳುಹಿಸುತ್ತಾನೆ.

ಭೂ ತಾಯಿಯ ಮಗಳು 'ಸೀತಾ ಮಾತೆಯ' ರಹಸ್ಯ....

ವಾಲ್ಮೀಕಿ ಆಶ್ರಮದಲ್ಲಿ ಜಾನಕಿಯು ಇಬ್ಬರು ಅವಳಿ ಜವಳಿ ಪುತ್ರರಿಗೆ ಜನ್ಮವನ್ನು ನೀಡುತ್ತಾಳೆ. ಶ್ರೀರಾಮನಂತೆಯೇ ಆಕೆ ತನ್ನ ಮಕ್ಕಳಿಗೂ ಶಿಕ್ಷಣವನ್ನು ಯುದ್ಧದ ಸಾಮರ್ಥ್ಯವನ್ನು ನೀಡುತ್ತಾಳೆ. ಸಮಯ ಬಂದಾಗ ತನ್ನ ಪತಿ ಶ್ರೀರಾಮನಿಗೆ ಮಕ್ಕಳನ್ನು ಒಪ್ಪಿಸಿ ಆಕೆ ಭೂಮಿಯನ್ನು ಸೇರಿಕೊಳ್ಳುತ್ತಾಳೆ.

ಕುಂತಿ
ಪಂಚ ಕನ್ಯೆಯಲ್ಲಿ ಒಬ್ಬಳು ಎಂಬ ಹೆಸರು ಕುಂತಿಗಿದೆ. ದೇವರನ್ನು ಸಂಪ್ರೀತಿ ಪಡಿಸಿ ಪುತ್ರನನ್ನು ಪಡೆಯುವ ವಿಶೇಷ ವರವನ್ನು ಆಕೆ ಪಡೆದುಕೊಂಡಿದ್ದಳು. ಅಂತೆಯೇ ಸೂರ್ಯನಿಂದ ಆಕೆ ಕರ್ಣನನ್ನು ಪಡೆದುಕೊಳ್ಳುತ್ತಾಳೆ. ವಿವಾಹದ ನಂತರ ಕುಂತಿಗೆ ಮಕ್ಕಳಾಗಿರುವುದಿಲ್ಲ. ಸಮಾಜಕ್ಕೆ ಹೆದರಿ ವಿವಾಹಕ್ಕೆ ಮುನ್ನವೇ ಕರ್ಣನನ್ನು ಪಡೆದುದಕ್ಕೆ ಭಯಗೊಂಡು ಆಕೆ ಮಗುವನ್ನು ನದಿಯಲ್ಲಿ ತೇಲಿಬಿಟ್ಟಿರುತ್ತಾಳೆ. ಇದುವೇ ನೋವಿನಿಂದ ಆಕೆ ಜೀವನ ಪೂರ್ತಿ ಕೊಗುತ್ತಿರುತ್ತಾಳೆ. ಆದರೆ ತನ್ನ ವೃತ ಪೂಜೆಗಳಿಂದ ಆಕೆ ದೇವತೆಗಳನ್ನು ಖುಷಿಪಡಿಸುತ್ತಾಳೆ ಮತ್ತು ಅವರುಗಳಿಂದ ಪುತ್ರರುಂಟಾಗುವ ವರವನ್ನು ಪಡೆದುಕೊಳ್ಳುತ್ತಾಳೆ.

ಧರ್ಮದೇವರಿಂದ ಆಕೆ ಯುಧಿಷ್ಟಿರನನ್ನು ಇಂದ್ರನಿಂದ ಅರ್ಜುನನ್ನು, ವಾಯುವಿನಿಂದ ಭೀಮನನ್ನು ಪಡೆದುಕೊಳ್ಳುತ್ತಾಳೆ. ತನ್ನ ವರವನ್ನು ಪಾಂಡುವಿನ ಮತ್ತೊಬ್ಬ ಪತ್ನಿ ಮಾದ್ರಿಗೂ ಆಕೆ ಹಂಚಿಕೊಳ್ಳುತ್ತಾಳೆ. ಅಶ್ವಿನಿ ಕುಮಾರರಿಂದ ನಕುಲ ಸಹದೇವರನ್ನು ಮಾದ್ರಿ ಪಡೆದುಕೊಳ್ಳುತ್ತಾಳೆ. ಶಾಪದಿಂದ ಮಾದ್ರಿ ಮತ್ತು ಪಾಂಡು ಇಹಲೋಕವನ್ನು ತ್ಯಜಿಸುತ್ತಾರೆ. ಆದರೆ ಮಾದ್ರಿಯ ಪುತ್ರರನ್ನು ಆಕೆ ಸ್ವಂತ ಮಕ್ಕಳಂತೆ ಕಂಡುಕೊಂಡು ಐದು ಮಕ್ಕಳನ್ನು ಆಕೆ ಸಮಾನ ಭಾವದಿಂದ ಸಲಹುತ್ತಾಳೆ.

ಯಶೋಧೆ
ಕೃಷ್ಣ ದೇವರ ಸಾಕುತಾಯಿಯಾಗಿದ್ದಾಳೆ ಯಶೋಧಾ. ದೇವಕಿಯು ಕೃಷ್ಣನ ಮಾತೆಯಾಗಿದ್ದರೂ ಇಡಿಯ ವಿಶ್ವವು ಕೃಷ್ಣನ ತಾಯಿಯಾಗಿ ಯಶೋಧೆಯನ್ನೇ ಕಾಣುತ್ತದೆ. ಆಕೆಯ ಪುತ್ರ ವಾತ್ಸಲ್ಯ ಇಂದಿಗೂ ಇತಿಹಾಸದಲ್ಲಿ ರಾರಾಜಿಸುತ್ತಿದೆ.
ಇವರೇ ನೋಡಿ, 'ಮಹಾಭಾರತ'ದಲ್ಲಿ ವರ್ಣಿಸಲಾದ ಸುರಸುಂದರಿಯರು!

ಇವರೇ ನೋಡಿ, 'ಮಹಾಭಾರತ'ದಲ್ಲಿ ವರ್ಣಿಸಲಾದ ಸುರಸುಂದರಿಯರು!

English summary

The Greatest Mothers In The Hindu Mythology

There are many instances in the mythology where glorious mothers have been instrumental in the lives of illustrious sons. These mothers are a role model for every woman in today's society. They have become immortals in their own right and shall be remembered for as long as our civilization exists. Today, we bring to you a list of some notable mothers mentioned in the Hindu Mythology.
X
Desktop Bottom Promotion