Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಧನದ ಅಧಿಪತಿ ಹಿಂದಿನ ಜನ್ಮದಲ್ಲಿ ಕಳ್ಳನಾಗಿದ್ದನಂತೆ!!
ಕುಬೇರ ಹಿಂದೂ ಪುರಾಣಗಳ ಪ್ರಕಾರ ಯಕ್ಷ ಮತ್ತು ಹಣದ ದೇವತೆ. ಅಷ್ಟದಿಕ್ಪಾಲಕರಲ್ಲೊಬ್ಬ. ಉತ್ತರ ದಿಕ್ಕಿನ ಅಧಿಪತಿಯಾಗಿದ್ದಾನೆ. ಆದರೆ ಕುಬೇರ ತನ್ನ ಹಿಂದಿನ ಜನ್ಮದಲ್ಲಿ ಓರ್ವ ಕಳ್ಳನಾಗಿದ್ದನೆಂದು ಹೆಚ್ಚಿನವರಿಗೆ ಗೊತ್ತಿರಲಿಕ್ಕಿಲ್ಲ.
ಅದೂ ಸಾಮಾನ್ಯ ಕಳ್ಳನಲ್ಲ, ದೇವಾಲಯಗಳನ್ನೂ ಬಿಡದೇ ದೋಚುತ್ತಿದ್ದ ಖದೀಮನಾಗಿದ್ದ. ಚಿಂದಿಯಿಂದ ಪ್ರಾರಂಭಿಸಿ ಕೋಟ್ಯಾಧಿಪತಿಯಾದ ಈತನ ಜೀವನ ಕುತೂಹಲಕರವೂ ಆಗಿದೆ.... ಮುಂದೆ ಓದಿ...

ಶಿವಪುರಾಣದ ಪ್ರಕಾರ....
ಶಿವಪುರಾಣದ ಪ್ರಕಾರ ಸಾವಿರಾರು ವರ್ಷಗಳ ಹಿಂದೆ ಈ ಜಗತ್ತಿನಲ್ಲಿ ಗುನ್ನಿಧಿ ಎಂಬ ಬಡ ವ್ಯಕ್ತಿಯೊಬ್ಬನಿದ್ದ. ಈತನಿಗೆ ನಿತ್ಯದ ಊಟಕ್ಕೂ ಹಣವಿಲ್ಲವಾಗಿದ್ದು ಹೊಟ್ಟೆ ತುಂಬಿಸಲು ಅನಿವಾರ್ಯವಾಗಿ ಪುಡಿಗಳ್ಳತನ ಮಾಡತೊಡಗಿದ. ಒಂದು ರಾತ್ರಿ ಕಳ್ಳತನ ಮಾಡಲೆಂದು ಶಿವಮಂದಿರಕ್ಕೆ ನುಗ್ಗಿದ್ದ. ಶಿವಮಂದಿರದ ಒಳಗೆ ಅಮೂಲ್ಯ ಸಂಪತ್ತಿನ ಭಂಡಾರವೇ ಇತ್ತು. ಚಿನ್ನ ಮತ್ತು ಇತರ ಬೆಲೆಬಾಳುವ ವಸ್ತುಗಳೂ ಇದ್ದವು.

ಜ್ಯೋತಿಯನ್ನು ಬೆಳಗಿಸಲು ಮಾಡಿದ ಕಸರತ್ತು...
ಮಂದಿರದ ಒಳಗಿನ ಪುಟ್ಟ ದೀವಟಿಗೆಯೂ ಇತ್ತು. ಆದರೆ ಜ್ಯೋತಿ ನಂದಿಹೋಗಿತ್ತು. ಈ ಜ್ಯೋತಿಯನ್ನು ಬೆಳಗಿಸಲು ಗುನ್ನಿಧಿ ತನ್ನೆಲ್ಲಾ ಪ್ರಯತ್ನಪಟ್ಟ. ಆದರೆ ಪ್ರತಿಬಾರಿ ಈತ ಜ್ಯೋತಿ ಬೆಳಗಿಸಿದಾಗಲೂ ಎಲ್ಲಿಂದಲೋ ಗಾಳಿ ಬೀಸಿ ಈ ಜ್ಯೋತಿಯನ್ನು ನಂದಿಸಿಬಿಡುತ್ತಿತ್ತು. ಕೊಂಚಕಾಲ ತನ್ನ ಪ್ರಯತ್ನವನ್ನು ಮುಂದುವರೆಸಿದ. ಕಡೆಗೆ ತಾಳ್ಮೆ ಕಳೆದುಕೊಂಡು ತಾನು ಉಟ್ಟಿದ್ದ ಬಟ್ಟೆಯನ್ನೇ ಹೊತ್ತಿಸಿ ಮಂದಿರದಲ್ಲಿ ಬೆಳಕು ಮೂಡಿಸಿದ.

ಶಿವನ ವರ...
ಇವನ್ನೆಲ್ಲಾ ಗಮನಿಸುತ್ತಿದ್ದ ಶಿವ ಈತನ ಎಡೆಬಿಡದ ಪ್ರಯತ್ನಗಳನ್ನು ಹಾಗೂ ಉದ್ದೇಶಪೂರ್ವಕವಲ್ಲದಿದ್ದರೂ ಮಂದಿರದೊಳಗೆ ಬೆಳಕನ್ನು ತಂದ ಪ್ರಯತ್ನವನ್ನು ಮೆಚ್ಚಿದ. ಬಳಿಕ ಶಿವ ಈತನಿಗೆ ಮುಂದಿನ ಜನ್ಮದಲ್ಲಿ ಹಣದ ಅಧಿಪತಿಯಾಗಿ ಜನಿಸುವಂತೆ ವರವನ್ನಿತ್ತ. ತನ್ನ ಭಕ್ತರ ಅಲ್ಪ ಸೇವೆಗೂ ಶಿವ ಸಂಪ್ರೀತನಾಗುತ್ತಾನೆ ಎಂಬುದಕ್ಕೆ ಇದೊಂದು ಉತ್ತಮ ಉದಾಹರಣೆಯಾಗಿದೆ.

ಶಿವಲಿಂಗ
ಇದೇ ಕಾರಣಕ್ಕೆ ಪ್ರತಿ ಶಿವಲಿಂಗದ ಎದುರು ಪ್ರತಿದಿನ ಸಂಜೆಯಾಗುತ್ತಿದ್ದಂತೆಯೇ ಜ್ಯೋತಿಯನ್ನು ಬೆಳಗಿಸಲಾಗುತ್ತದೆ. ಇದರಿಂದ ಧನದ ಕುರಿತಾದ ಎಲ್ಲಾ ಸಮಸ್ಯೆಗಳೂ ಪರಿಹಾರವಾಗುತ್ತದೆ ಎಂದು ನಂಬಲಾಗಿದೆ.

ಓಂ ನಮಃ ಶಿವಾಯಃ....
ಈ ಜ್ಯೋತಿಯನ್ನು ಬೆಳಗಿಸುವಾಗ ನೀವು "ಓಂ ನಮಃ ಶಿವಾಯಃ" ಎಂಬ ಮಂತ್ರವನ್ನು ಉಚ್ಛರಿಸಬೇಕು. ಕುಬೇರ ಹಣಕ್ಕೆ ಅಧಿಪತಿಯೇ ಹೊರತು ಮಾಲಿಕನಲ್ಲ. ಇದೇ ಕಾರಣಕ್ಕೆ ಕುಬೇರನ ವಿಗ್ರಹವನ್ನು ಯಾವುದೇ ಮಂದಿರದ ಒಳಗೆ ಇರಿಸುವುದಿಲ್ಲ, ಬದಲಿಗೆ ಹೊರಗೆ ಇರಿಸಲಾಗುತ್ತದೆ.

ಹಿಂದೂ ಪುರಾಣದ ಪ್ರಕಾರ...
ಹಿಂದೂ ಪುರಾಣದ ಪ್ರಕಾರ ಈತ ವಿರೂಪಗೊಂಡ ದೇಹವನ್ನು ಹೊಂದಿದ್ದು ಶಿವನ ಗಣಗಳಲ್ಲಿ ಒಬ್ಬನಾಗಿದ್ದ ಎಂದು ಹೇಳಲಾಗುತ್ತದೆ.



Click it and Unblock the Notifications
