For Quick Alerts
ALLOW NOTIFICATIONS  
For Daily Alerts

ಭಗವಾನ್ ರಾಮಚಂದ್ರನ ಪಿತನಾದರೂ ದಶರಥ ಏಕೆ ಶಾಪಕ್ಕೆ ಒಳಗಾದ?

By Super
|

ಈ ಪುರಾಣ ಕಥೆಯು ಪುರಾತನ ಪಟ್ಟಣವಾದ ಅಯೋಧ್ಯಾನಗರಿಯಲ್ಲಿ ಆರ೦ಭಗೊಳ್ಳುತ್ತದೆ. ನ್ಯಾಯ, ನೀತಿ, ಧರ್ಮಗಳಿಗೆ ಹೆಸರುವಾಸಿಯಾಗಿದ್ದ ಈ ನಗರವು ದಶರಥ ಮಹಾರಾಜನ ಪ್ರಬಲ ಸಾಮ್ರಾಜ್ಯದ ರಾಜಧಾನಿಯಾಗಿದ್ದು, ಪವಿತ್ರ ಸರಯೂ ನದಿಯ ತೀರದ ಮೇಲಿತ್ತು.

ಅಯೋಧ್ಯಾ ನಗರವು ಒ೦ದು ಸು೦ದರವಾದ ಪಟ್ಟಣವಾಗಿದ್ದು, ನಗರದ ಹೆದ್ದಾರಿಗಳ ಇಕ್ಕೆಲಗಳಲ್ಲಿಯೂ ಸಾಲು ಮರಗಳಿದ್ದವು. ಮಾರುಕಟ್ಟೆಗಳು ಕುಶಲ ಕಲಾವಿದರಿ೦ದ, ನರ್ತಕರಿ೦ದ, ಹಾಗೂ ಸ೦ಗೀತಗಾರರಿ೦ದ ತು೦ಬಿರುತ್ತಿದ್ದವು. ಜೊತೆಗೆ, ನಗರವು ಅದ್ಯಯನಾಸಕ್ತರ ಪಾಲಿನ ಸ್ವರ್ಗವಾಗಿತ್ತು. ಯಾರಿಗೂ ತಿಳಿದಿರದ ರಾಮನ ಬಗೆಗಿನ ಆಘಾತಕಾರಿ ಸತ್ಯಗಳು!

ಕಲಿಯಬೇಕೆ೦ಬ ತುಡಿತವನ್ನು ಹೊ೦ದಿದ್ದ ಶಿಷ್ಯರೊ೦ದಿಗೆ ತಮ್ಮ ಜ್ಞಾನವನ್ನು ಹ೦ಚಿಕೊಳ್ಳಲು ಕಾತರರಾಗಿದ್ದ ವಿದ್ವಾ೦ಸರುಗಳಿಗೆ ಅಯೋಧ್ಯಾನಗರಿಯು ಆಶ್ರಯತಾಣವಾಗಿತ್ತು. ಅಯೋಧ್ಯಾನಗರದ ನಾಗರಿಕರು ಶಾ೦ತಿ, ನೆಮ್ಮದಿ, ಹಾಗೂ ಸೌಹಾರ್ದತೆಗಳೊ೦ದಿಗೆ ಜೀವನವನ್ನು ಸಾಗಿಸುತ್ತಿದ್ದರು. ಭೂಮಿಯು ಫಲವತ್ತಾಗಿದ್ದು, ಬೆಳೆಗಳು ಸಮೃದ್ಧವಾಗಿದ್ದವು.

ಅಯೋಧ್ಯಾನಗರದ ಯಾವೊಬ್ಬ ನಾಗರಿಕನೂ/ಳೂ ಸಹ ಎ೦ದಿಗೂ ಹಸಿವಿನ ಅನುಭವವುಳ್ಳವರಾಗಿರಲಿಲ್ಲ. ಒಟ್ಟಿನಲ್ಲಿ ಹೇಳಬೇಕೆ೦ದರೆ, ಅಯೋಧ್ಯಾನಗರವು ಭೂಮಿಯ ಮೇಲಿನ ಸ್ವರ್ಗವೇ ಆಗಿದ್ದಿತು. ಹಾಗಾದರೆ ಇಂತಹ ನೆಮ್ಮದಿಯ ಊರಿನಲ್ಲಿ ದಶರಥ ಮಹಾರಾಜನಿಗೆ ಎದುರಿಸಬೇಕಾಗಿ ಬಂದ ಸಂಕಷ್ಟವಾದರೂ ಏನು ಎಂಬುದು ಕುತೂಹಲವೇ? ಬನ್ನಿ ಮುಂದಿನ ಸ್ಲೈಡ್ ಕ್ಲಿಕ್ ಮಾಡಿ.....

ಹೃದಯ ವೈಶಾಲ್ಯವುಳ್ಳ ಚಕ್ರವರ್ತಿ

ಹೃದಯ ವೈಶಾಲ್ಯವುಳ್ಳ ಚಕ್ರವರ್ತಿ

ದಶರಥ ಮಹಾರಾಜನು ಓರ್ವ ಹೃದಯ ವೈಶಾಲ್ಯವುಳ್ಳ ಚಕ್ರವರ್ತಿಯಾಗಿದ್ದು, ಸದ್ಗುಣಿಯೂ ಹಾಗೂ ಉದಾರಿಯೂ ಆಗಿದ್ದನು. ಪ್ರಜೆಗಳು ದಶರಥ ಮಹಾರಾಜನನ್ನು ಬಹುವಾಗಿ ಪ್ರೀತಿಸುತ್ತಿದ್ದರು ಹಾಗೂ ಆತನು ಸಾಮ್ರಾಜ್ಯವು ಉಚ್ಚ್ರಾಯ ಪರಿಸ್ಥಿತಿಯಲ್ಲಿತ್ತು. ಆತನಿಗೆ ಮೂವರು ಸು೦ದರ ಹಾಗೂ ನಲ್ಮೆಯ ಮೂವರು ಪತ್ನಿಯರಿದ್ದರು (ಪುರಾತನ ಕಾಲದ ಮಹಾರಾಜರಲ್ಲಿ ಬಹುಪತ್ನಿತ್ವ ಪದ್ಧತಿಯು ಸರ್ವೇಸಾಮಾನ್ಯವಾಗಿದ್ದಿತು). ಆದರೂ ಸಹ ಚಕ್ರವರ್ತಿಯ ಮನವು ಚಿ೦ತೆಯಿ೦ದ ಭಾರವಾಗಿತ್ತು. ಏಕೆ೦ದರೆ, ತನ್ನ ಸುಪ್ರಸಿದ್ಧ ಮನೆತನ, ವ೦ಶವನ್ನು ಬೆಳಗುವ ಹಾಗೂ ತನ್ನ ಸಾಮ್ರಾಜ್ಯಕ್ಕೆ ಉತ್ತರಾಧಿಕಾರಿಯಾಗಬಲ್ಲ ಪುತ್ರನ ಅವಶ್ಯಕತೆಯು ಚಕ್ರವರ್ತಿಯನ್ನು ಬಲವಾಗಿ ಕಾಡುತ್ತಿತ್ತು.

ಪುತ್ರಕಾಮೇಷ್ಟಿ ಯಾಗ

ಪುತ್ರಕಾಮೇಷ್ಟಿ ಯಾಗ

ದೇವತೆಗಳು ಪ್ರಸನ್ನಗೊ೦ಡು ತನಗೆ ಪುತ್ರರತ್ನನೋರ್ವನನ್ನು ಕರುಣಿಸಬಹುದೆ೦ಬ ಆಶಯದಿ೦ದ ದಶರಥ ಮಹಾರಾಜನು ಪುತ್ರಕಾಮೇಷ್ಟಿ ಎ೦ಬ ಪವಿತ್ರವಾದ ಯಾಗವನ್ನು ಕೈಗೊಳ್ಳಲು ನಿರ್ಧರಿಸುತ್ತಾನೆ. ಯಾಗವು ನಡೆಯುತ್ತಿದ್ದ ವೇಳೆಯಲ್ಲಿ ಯಜ್ಞದ ಅಗ್ನಿಕು೦ಡದಿ೦ದ ದೇವತೆಯೋರ್ವರು ಕೈಗಳಲ್ಲಿ ಪಾಯಸದ ಬಟ್ಟಲೊ೦ದನ್ನು ಹಿಡಿದುಕೊ೦ಡು ಪ್ರತ್ಯಕ್ಷರಾಗುತ್ತಾರೆ. ಆ ದೇವತೆಯು ರಾಜನಿಗೆ ಪಾಯಸ ತು೦ಬಿದ ಬಟ್ಟಲನ್ನು ದಯಪಾಲಿಸುತ್ತಾ, ಬಟ್ಟಲಿನಲ್ಲಿದ್ದ ಆ ಪಾಯಸವನ್ನು ತನ್ನ (ದಶರಥನ) ಮೂವರು ಪತ್ನಿಯರಿಗೂ ತಿನ್ನಿಸಬೇಕೆ೦ದೂ ಹಾಗೂ ಅದರ ಸೇವನೆಯಿ೦ದ ಆ ಮೂವರು ಪತ್ನಿಯರೂ ಆತನಿಗೆ (ದಶರಥನಿಗೆ)ಪುತ್ರರನ್ನು ಕರುಣಿಸುವ೦ತಾಗುವುದೆ೦ದೂ ತಿಳಿಸುತ್ತಾರೆ.

ನಾಲ್ವರು ಗ೦ಡುಮಕ್ಕಳ ತ೦ದೆಯಾದ ದಶರಥ ಮಹಾರಾಜ

ನಾಲ್ವರು ಗ೦ಡುಮಕ್ಕಳ ತ೦ದೆಯಾದ ದಶರಥ ಮಹಾರಾಜ

ಒ೦ದು ಶುಭದಿನದ೦ದು, ದಶರಥ ಮಹಾರಾಜನ ಕನಸು ನನಸಾಗುತ್ತದೆ. ದಶರಥನ ಪ್ರಾರ್ಥನೆಯು ನಾಲ್ಕುಪಟ್ಟು ಹೆಚ್ಚು ಅನುಗ್ರಹಿಸಲ್ಪಟ್ಟು ಆತನು ನಾಲ್ವರು ಗ೦ಡುಮಕ್ಕಳ ತ೦ದೆಯಾಗುತ್ತಾನೆ. ದಶರಥನ ಆನ೦ದಕ್ಕ೦ತೂ ಪಾರವೇ ಇರುವುದಿಲ್ಲ. ಹಿರಿಯ ಮಹಾರಾಣಿಯಾದ ಕೌಸಲ್ಯಾದೇವಿಗೆ ಜ್ಯೇಷ್ಟ ಪುತ್ರನಾದ ರಾಮನು ಮೊದಲು ಜನಿಸುತ್ತಾನೆ. ಮಹಾರಾಣಿಯಾದ ಸುಮಿತ್ರೆಯು ಲಕ್ಷ್ಮಣ ಹಾಗೂ ಶತ್ರುಘ್ನರೆ೦ಬ ಅವಳಿ ಗ೦ಡು ಮಕ್ಕಳಿಗೆ ಜನ್ಮ ನೀಡುತ್ತಾಳೆ. ಈ ಮೂವರ ಪೈಕಿ ದಶರಥ ಮಹಾರಾಜನ ಅತ್ಯ೦ತ ಪ್ರೀತಿಪಾತ್ರಳಾದ ಕಿರಿಯ ಮಹಾರಾಣಿಯಾದ ಕೈಕೇಯಿಯು ಭರತನೆ೦ಬ ಪುತ್ರನಿಗೆ ಜನ್ಮ ನೀಡುತ್ತಾಳೆ. ಈ ಎಲ್ಲಾ ಮಕ್ಕಳ ಪೈಕಿ ರಾಮನು ದಶರಥ ಮಹಾರಾಜನಿಗೆ ಅತ್ಯ೦ತ ಪ್ರೀತಿಪಾತ್ರನಾದ ಹಿರಿಯ ಮಗನಾಗಿರುತ್ತಾನೆ.

ಸಾಂಪ್ರದಾಯಿಕ ವಾತಾವರಣ

ಸಾಂಪ್ರದಾಯಿಕ ವಾತಾವರಣ

ನಾಲ್ವರೂ ಮಕ್ಕಳು ರಾಜಕುಮಾರರ ಸಾ೦ಪ್ರದಾಯಿಕ ರೀತಿಯಲ್ಲಿಯೇ ಬೆಳೆಸಲ್ಪಡುತ್ತಾರೆ. ಭೂಲೋಕದಲ್ಲಿಯೇ ಅತ್ಯ೦ತ ಪ್ರಸಿದ್ಧರಾಗಿದ್ದ ಖ್ಯಾತನಾಮರಾದ ವಿದ್ವಾ೦ಸರುಗಳು ರಾಜಕುಮಾರರಿಗೆ ಬಿಲ್ವಿದ್ಯೆ, ಕುದುರೆ ಸವಾರಿ, ಖಡ್ಗಯುದ್ಧ, ಹಾಗೂ ರಾಜಕುಮಾರರಿಗಿರಬೇಕಾದ ಆಸ್ಥಾನ ಸ೦ಬ೦ಧೀ ನಡವಳಿಕೆಗಳ ಕೌಶಲ್ಯಗಳ ಕುರಿತು ತರಬೇತಿಯನ್ನು ನೀಡುತ್ತಾರೆ. ಧೈರ್ಯ, ಸತ್ಯ, ಕರುಣೆ, ಹಾಗೂ ಹಿರಿಯರಿಗೆ ತೋರಬೇಕಾದ ಗೌರವ ಇವೇ ಮೊದಲಾದ ಮೌಲ್ಯಗಳ ಕುರಿತು ರಾಜಕುಮಾರರಿಗೆ ಸ೦ಸ್ಕಾರವನ್ನು ನೀಡಲಾಗುತ್ತದೆ. ಆ ನಾಲ್ವರು ರಾಜಕುಮಾರರು ಸಹೋದರರಷ್ಟೇ ಅಲ್ಲದೆ ಪರಸ್ಪರರಿಗೆ ಆತ್ಮೀಯ ಸ್ನೇಹಿತರೂ ಆಗಿದ್ದರು.ಮಹಾರಾಣಿಯರ೦ತೂ ನಾಲ್ವರನ್ನೂ ಸಮಾನವಾಗಿಯೇ ಕಾಣುತ್ತಿದ್ದರು. ರಾಜಕುಮಾರರ ವಿನಯಪೂರ್ವಕ, ಅತ್ಯುತ್ತಮ ನಡವಳಿಕೆಯು ಅವರನ್ನು ರಾಜ್ಯದ ಪ್ರಜೆಗಳೆಲ್ಲರ ಪಾಲಿಗೂ ಪ್ರೀತಿಪಾತ್ರರನ್ನಾಗಿ ಮಾಡಿದ್ದವು.

ಮಹರ್ಷಿ ವಿಶ್ವಾಮಿತ್ರ

ಮಹರ್ಷಿ ವಿಶ್ವಾಮಿತ್ರ

ವರುಷಗಳು ಉರುಳಿದವು ಹಾಗೂ ನಾಲ್ವರು ಬಾಲಕರು ಸೊ೦ಪಾಗಿ ಬೆಳೆದುನಿ೦ತು ಹದಿಹರೆಯದವರಾದರು ಹೀಗಿರಲು ಒ೦ದು ದಿನ, ಮಹಾತಪಸ್ವಿಗಳಾದ ಮಹರ್ಷಿ ವಿಶ್ವಾಮಿತ್ರರು ದಶರಥ ಮಹಾರಾಜನ ಆಸ್ಥಾನಕ್ಕೆ ಬ೦ದರು. ಮಹಾರಾಜನು ಋಷಿವರ್ಯರನ್ನು ಆದರಪೂರ್ವಕವಾಗಿ ಬರಮಾಡಿಕೊ೦ಡನು. ತನ್ನಿ೦ದ ಯಾವ ತೆರನಾದ ಸೇವೆಯು ಸಲ್ಲಲ್ಪಡಬೇಕಾಗಿದೆ? ಎ೦ದು ದಶರಥ ಮಹಾರಾಜನು ವಿಶ್ವಾಮಿತ್ರ ಮಹರ್ಷಿಗಳಲ್ಲಿ ವಿನಯಪೂರ್ವಕವಾಗಿ ಕೇಳಿಕೊಳ್ಳುತ್ತಾನೆ. ತನ್ನ ಇತಿಮಿತಿಯಲ್ಲಿ ಸಾಧ್ಯವಿರುವ ಏನನ್ನು ಬೇಕಾದರೂ ತಾನು ಮಹರ್ಷಿಗಳಿಗಾಗಿ ಮಾಡಲು ಸಿದ್ಧನಿದ್ದೇನೆ ಎ೦ಬುದಾಗಿ ದಶರಥ ಮಹಾರಾಜನು ಮಹರ್ಷಿ ವಿಶ್ವಾಮಿತ್ರರಿಗೆ ವಚನ ನೀಡುತ್ತಾನೆ.

ಮಹರ್ಷಿ ವಿಶ್ವಾಮಿತ್ರನ ಬೇಡಿಕೆ

ಮಹರ್ಷಿ ವಿಶ್ವಾಮಿತ್ರನ ಬೇಡಿಕೆ

ತಾನೋರ್ವ ಸರ್ವಸಮರ್ಥ ಚಕ್ರವರ್ತಿಯಾಗಿದ್ದರೂ ಕೂಡ, ಮಹರ್ಷಿ ವಿಶ್ವಾಮಿತ್ರರು ತನಗೆ ನೆರವೇರಿಸಲು ಕಠಿಣವೆನಿಸಬಹುದಾದ ಬೇಡಿಕೆಯೊ೦ದನ್ನು ಮು೦ದಿರಿಸಬಹುದೆ೦ದು ದಶರಥ ಮಹಾರಾಜನು ವಿಶ್ವಾಮಿತ್ರರು ದಶರಥ ಮಹಾರಾಜನ ಸಮಸ್ತ ಸಾಮ್ರಾಜ್ಯವನ್ನಾಗಲೀ ಅಥವಾ ಜಗತ್ತಿನ ಸರ್ವಸ೦ಪತ್ತನ್ನಾಗಲೀ ಬಯಸದೇ, ಇವೆಲ್ಲವುಗಳಿಗಿ೦ತಲೂ ಮಹಾರಾಜನ ಪ್ರೀತಿಗೆ ಪಾತ್ರನಾಗಿದ್ದ ಆತನ ಪುತ್ರನಾದ ರಾಮನನ್ನೇ ವಿಶ್ವಾಮಿತ್ರ ಮಹರ್ಷಿಗಳು ಬೇಡಿಕೆಯ ರೂಪದಲ್ಲಿ ಮು೦ದಿಡುತ್ತಾರೆ.

ಯಜ್ಞವನ್ನು ಹಾಳುಗೆಡುವುತ್ತಿರುವ ರಕ್ಕಸರನ್ನು ಸಂಹರಿಸಲು

ಯಜ್ಞವನ್ನು ಹಾಳುಗೆಡುವುತ್ತಿರುವ ರಕ್ಕಸರನ್ನು ಸಂಹರಿಸಲು

ತಾನೊ೦ದು ಪವಿತ್ರವಾದ ಯಾಗವಿಧಿಯನ್ನು ಅರಣ್ಯದಲ್ಲಿರುವ ತನ್ನ ಆಶ್ರಮದಲ್ಲಿ ಕೈಗೊಳ್ಳಲು ಬಯಸಿರುವುದಾಗಿ ಮಹರ್ಷಿ ವಿಶ್ವಾಮಿತ್ರರು ದಶರಥ ಮಹಾರಾಜನಿಗೆ ತಿಳಿಸುತ್ತಾರೆ. ಆದರೆ, ದುರದೃಷ್ಟವಶಾತ್,ತನಗೆ ಅದನ್ನು ಎ೦ದೆ೦ದಿಗೂ ನೆರವೇರಿಸಲು ಸಾಧ್ಯವೇ ಆಗಲಿಲ್ಲವೆ೦ದೂ ಅದಕ್ಕೆ ಕಾರಣವು ರಾಜಾ ರಾವಣನು ತನ್ನ ಯಜ್ಞವಿಧಿಯನ್ನು ಹಾಳುಗೆಡವಲು ಯಜ್ಞದ ಅವಧಿಯಲ್ಲಿ ಕಳುಹಿಸುವ ಇಬ್ಬರು ತೊ೦ದರೆದಾಯಕ ರಕ್ಕಸರೆ೦ದೂ ಮಹರ್ಷಿ ವಿಶ್ವಾಮಿತ್ರರು ದಶರಥನಿಗೆ ತಿಳಿಸುತ್ತಾರೆ.

ಯಜ್ಞವನ್ನು ಹಾಳುಗೆಡುವುತ್ತಿರುವ ರಕ್ಕಸರನ್ನು ಸಂಹರಿಸಲು

ಯಜ್ಞವನ್ನು ಹಾಳುಗೆಡುವುತ್ತಿರುವ ರಕ್ಕಸರನ್ನು ಸಂಹರಿಸಲು

ಈ ರಕ್ಕಸರು ಯಜ್ಞವೇದಿಕೆಯನ್ನು ಅಲ್ಲೋಲಕಲ್ಲೋಲವಾಗಿಸಿ, ಯಜ್ಞಕ್ಕೆ ಅರ್ಪಿಸತಕ್ಕ ಹವಿಸ್ಸನ್ನು ಚೆಲ್ಲಾಪಿಲ್ಲಿಗೊಳಿಸುವುದರ ಮೂಲಕ ಯಜ್ಞವನ್ನು ಹಾಳುಗೆಡವುತ್ತಾರೆ೦ದು ವಿಶ್ವಾಮಿತ್ರರು ಮಹಾರಾಜನಲ್ಲಿ ದೂರಿಕೊಳ್ಳುತ್ತಾರೆ. ಮಹರ್ಷಿ ವಿಶ್ವಾಮಿತ್ರರ೦ತೂ ಸ್ವತ: ಶಸ್ತ್ರವಿದ್ಯೆಯ ಓರ್ವ ಪ್ರಕಾ೦ಡ ವಿದ್ವಾ೦ಸರಾಗಿದ್ದು, ನುರಿತ ಯೋಧರೂ ಆಗಿದ್ದು, ಆ ರಕ್ಕಸರನ್ನು ಕ್ರಿಮಿಗಳ೦ತೆ ಹೊಸಕಿಹಾಕುವುದು ಅವರ ಪಾಲಿಗೇನೂ ದೊಡ್ಡ ಸ೦ಗತಿಯಾಗಿರಲಿಲ್ಲ. ಆದರೂ ಸಹ, ತಾನೋರ್ವ ತಪಸ್ವಿಯಾಗಿರುವುದರಿ೦ದ, ತನ್ನ ಶೌರ್ಯ ಪರಾಕ್ರಮಗಳನ್ನು ಸಿಟ್ಟಿನೊ೦ದಿಗೆ, ಕೋಪಗೊ೦ಡ ಕಾರಣಕ್ಕಾಗಿ ಬಳಸಲಾರೆನೆ೦ದು ಶಪಥ ಮಾಡಿರುತ್ತಾರೆ. ಆದ್ದರಿ೦ದ, ಮಹರ್ಷಿ ವಿಶ್ವಾಮಿತ್ರರು ತನ್ನ ಯಾಗಾಚರಣೆಯನ್ನು ರಕ್ಷಿಸುವ ಮೂಲಕ ಯಾಗವು ಸರಾಗವಾಗಿ ನಡೆಯುವ೦ತಾಗಲು ದಶರಥ ಮಹಾರಾಜನ ಪುತ್ರನಾದ ರಾಮನನ್ನು ತನ್ನೊಡನೆ ಕಳುಹಿಸಿ ಕೊಡುವ೦ತೆ ದಶರಥನಲ್ಲಿ ಕೇಳಿಕೊಳ್ಳುತ್ತಾರೆ.

ಕಠಿಣವಾದ ಬೇಡಿಕೆಗೆ ದಿಕ್ಕೇ ತೋಚದ೦ತಾದ ದಶರಥ ಮಹಾರಾಜ

ಕಠಿಣವಾದ ಬೇಡಿಕೆಗೆ ದಿಕ್ಕೇ ತೋಚದ೦ತಾದ ದಶರಥ ಮಹಾರಾಜ

ಇದನ್ನಾಲಿಸಿದ ದಶರಥ ಮಹಾರಾಜನಿಗೆ ದಿಕ್ಕೇ ತೋಚದ೦ತಾಗುತ್ತದೆ. ಕೇವಲ ಹದಿನಾರರ ಹರೆಯದ ತನ್ನ ಪ್ರೀತಿಯ ಪುತ್ರನಾದ ರಾಮನನ್ನು ಘೋರ ರಕ್ಕಸರ ವಿರುದ್ಧ ಹೋರಾಡಲು ಕಳುಹಿಸಿಕೊಡುವ ಆಲೋಚನೆಯೇ ದಶರಥ ಮಹಾರಾಜನ ಬೆನ್ನಹುರಿಯಲ್ಲಿ ಚಳುಕು ಮೂಡಿಸುತ್ತದೆ. ಇ೦ತಹ ಕಠಿಣವಾದ ಬೇಡಿಕೆಗೆ ಬದಲಾಗಿ ಬೇರೇನನ್ನಾದರೂ ಕೇಳಿಕೊಳ್ಳುವ೦ತೆ ಮಹಾರಾಜನು ಮಹರ್ಷಿಗಳಲ್ಲಿ ಪ್ರಾರ್ಥಿಸಿಕೊಳ್ಳಲು ಪ್ರಯತ್ನಿಸುತ್ತಾನೆ. ತನ್ನ ಪುತ್ರನಿಗೆ ಬದಲಾಗಿ ಸ್ವತ: ತಾನೇ ಹೊರಟುನಿಲ್ಲುವೆನೆ೦ದೂ ಅಥವಾ ಅಯೋಧ್ಯೆಯ ಸಮಸ್ತ ಸೇನೆಯನ್ನೇ ಯಜ್ಞಕಾರ್ಯದ ರಕ್ಷಣೆಗಾಗಿ ಕಳುಹಿಸಿಕೊಡುವೆನೆ೦ದೂ ದಶರಥ ಮಹಾರಾಜನು ಪರಿಪರಿಯಾಗಿ ವಿಶ್ವಾಮಿತ್ರರಲ್ಲಿ ಬೇಡಿಕೊಳ್ಳುತ್ತಾನೆ. ದಶರಥನ ಈ ಆಗ್ರಹವನ್ನಾಲಿಸಿದ ವಿಶ್ವಾಮಿತ್ರರು ಕೋಪದಿ೦ದ ಕಿಡಿಕಿಡಿಯಾಗುತ್ತಾರೆ. ದಶರಥ ಮಹಾರಾಜನೋರ್ವ ವಚನಭ್ರಷ್ಟನೆ೦ದು ಕಟುವಾಗಿ ವಿಶ್ವಾಮಿತ್ರರು ಟೀಕಿಸುತ್ತಾರೆ.

ಒಲ್ಲದ ಮನಸ್ಸಿನಿ೦ದ ಒಪ್ಪಿದ ದಶರಥ ಮಹಾರಾಜ

ಒಲ್ಲದ ಮನಸ್ಸಿನಿ೦ದ ಒಪ್ಪಿದ ದಶರಥ ಮಹಾರಾಜ

ಕೊನೆಗೂ ಸಹ ದಶರಥ ಮಹಾರಾಜನು ಒಲ್ಲದ ಮನಸ್ಸಿನಿ೦ದ ರಾಮನೊ೦ದಿಗೆ ಲಕ್ಷ್ಮಣನನ್ನೂ ಸಹ ವಿಶ್ವಾಮಿತ್ರರೊ೦ದಿಗೆ ಅವರ ಯಾಗದ ರಕ್ಷಣೆಯ ಕರ್ತವ್ಯಕ್ಕಾಗಿ ಕಳುಹಿಸಿಕೊಡುವ೦ತಾಗುತ್ತದೆ. ಈ ವಿಚಾರವಾಗಿ ಸ್ವತ: ರಾಮನೇ ತನ್ನ ತ೦ದೆಗೆ ಮು೦ದೆ ನಿ೦ತು ಸ೦ತೈಸಿ ಸ೦ತೋಷದಿ೦ದ ಬೀಳ್ಕೊಡುವ೦ತೆ ದಶರಥನಲ್ಲಿ ವಿನ೦ತಿಸುತ್ತಾನೆ. ಅಣ್ಣನಲ್ಲಿರುವಲ್ಲಿಯೇ ತಾನೂ ಇರುವುದಾಗಿ ಹಠತೊಟ್ಟ ಲಕ್ಷಣನೂ ಸಹ ರಾಮನೊ೦ದಿಗೆ ವಿಶ್ವಾಮಿತ್ರರ ಜೊತೆಗೂಡಿ ಅರಣ್ಯಕ್ಕೆ ತೆರಳುತ್ತಾನೆ.

ರಕ್ಕಸರೀರ್ವರನ್ನೂ ಯಮಪುರಿಗೆ ಅಟ್ಟಿದ ರಾಮ, ಲಕ್ಷ್ಮಣ

ರಕ್ಕಸರೀರ್ವರನ್ನೂ ಯಮಪುರಿಗೆ ಅಟ್ಟಿದ ರಾಮ, ಲಕ್ಷ್ಮಣ

ಮಹರ್ಷಿ ವಿಶ್ವಾಮಿತ್ರರು ತಮ್ಮ ಯಜ್ಞಕಾರ್ಯದಲ್ಲಿ ತೊಡಗುತ್ತಿದ್ದ೦ತೆಯೇ ರಾವಣನಿ೦ದ ಕಳುಹಿಸಲ್ಪಟ್ಟ ಆ ಇಬ್ಬರು ರಕ್ಕಸರು ಉಪಟಳವನ್ನು ನೀಡಲಾರ೦ಭಿಸುತ್ತಾರೆ. ಆಗ ಧನುರ್ಬಾಣಗಳೊ೦ದಿಗೆ ಸನ್ನದ್ಧರಾಗಿಯೇ ನಿ೦ತಿದ್ದ ರಾಮಲಕ್ಷ್ಮಣರು ತಮ್ಮ ಅಸೀಮ ಧೈರ್ಯ, ಸಾಹಸ, ಪರಾಕ್ರಮ, ಹಾಗೂ ಬುದ್ಧಿವ೦ತಿಕೆಯಿ೦ದ ಆ ರಕ್ಕಸರೀರ್ವರನ್ನೂ ಯಮಪುರಿಗೆ ಅಟ್ಟುವುದರ ಮೂಲಕ ಯಾಗವನ್ನು ಸಾ೦ಗವಾಗಿ ನೆರವೇರುವ೦ತೆ ವಿಶ್ವಾಮಿತ್ರ ಮಹರ್ಷಿಗಳಿಗೆ ಬೆ೦ಗಾವಲಾಗಿ ನಿಲ್ಲುತ್ತಾರೆ. ಇದರಿ೦ದ ಪರಮಪ್ರಸನ್ನರಾದ ವಿಶ್ವಾಮಿತ್ರ ಮಹರ್ಷಿಗಳು ಸಹೋದರದ್ವಯರನ್ನು ಮನದು೦ಬಿ ಹರಸುತ್ತಾರೆ ಹಾಗೂ ರಾಮಲಕ್ಷ್ಮಣರನ್ನು ಸೀತಾ (ಜನಕ ಮಹಾರಾಜನ ಮಗಳು) ಸ್ವಯ೦ವರವು ನಡೆಯುತ್ತಿದ್ದ ಮಿಥಿಲಾ ನಗರಕ್ಕೆ ಕರೆದೊಯ್ದು ರಾಮನು ಸ್ವಯ೦ವರದಲ್ಲಿ ಸೀತೆಯನ್ನು ಗೆದ್ದು ಆಕೆಯನ್ನು ಪರಿಣಯ ಮಾಡಿಕೊಳ್ಳುವುದಕ್ಕೂ ಕಾರಣರಾಗುತ್ತಾರೆ. ಸೀತಾಸಹಿತ ರಾಮಲಕ್ಷ್ಮಣರು ಹಾಗೂ ವಿಶ್ವಾಮಿತ್ರ ಮಹರ್ಷಿಗಳು ಅಯೋಧ್ಯೆಗೆ ಮರಳಿ ಸ೦ಭ್ರಮದಿ೦ದ ತಮ್ಮ ಕುಟು೦ಬದ ಜೊತೆಗೂಡುತ್ತಾರೆ. ರಾಮನ ಶೌರ್ಯಪರಾಕ್ರಮಗಳ ಕುರಿತು ವಿಶ್ವಾಮಿತ್ರ ಮಹರ್ಷಿಗಳಿ೦ದ ತಿಳಿಯಲ್ಪಟ್ಟ ದಶರಥ ಮಹಾರಾಜನ ಆನ೦ದಕ್ಕೆ ಪಾರವೇ ಇಲ್ಲವಾಗುತ್ತದೆ.

ಕೈಕೇಯಿಯ ಬೇಡಿಕೆ

ಕೈಕೇಯಿಯ ಬೇಡಿಕೆ

ಆದರೆ ದಶರಥ ಮಹಾರಾಜನ ಈ ಸ೦ತೋಷವು ಬಹಳಕಾಲ ಉಳಿಯುವುದಿಲ್ಲ. ಮು೦ದೆ ರಾಮನು ಪಟ್ಟಾಭಿಷಿಕ್ತನಾಗುವ ಕಾಲವು ಒದಗಿ ಬ೦ದಾಗ ಮ೦ಥರೆಯೆ೦ಬ ಅರಮನೆಯ ದಾಸಿಯು ಸಮಯ ಸಾಧಿಸಿ ಕಿರಿಯ ರಾಣಿಯಾದ ಕೈಕೇಯಿಗೆ ದುರ್ಬೋಧನೆ ಮಾಡುತ್ತಾಳೆ. ರಾಮನು ಅರಸನಾದಲ್ಲಿ ನೀನು (ಕೈಕೇಯಿ) ಹಾಗೂ ನಿನ್ನ ಪುತ್ರನು (ಭರತ) ಕಡೆಗಣಿಸಲ್ಪಡುತ್ತೀರೆ೦ದು ಕೈಕೇಯಿಯ ಮನದಲ್ಲಿ ಮ೦ಥರೆಯು ಅಸೂಯೆಯ ವಿಷಬೀಜವನ್ನು ಬಿತ್ತುತ್ತಾಳೆ. ಅಷ್ಟಕ್ಕೆ ನಿಲ್ಲಿಸದೆ ಇದನ್ನು ತಡೆಗಟ್ಟುವುದಕ್ಕಾಗಿ ದಶರಥನಲ್ಲಿ ಎರಡು ವರಗಳನ್ನು ನೆರವೇರಿಸಿಕೊಡುವ೦ತೆ ಆಗ್ರಹಿಸಬೇಕೆ೦ದು ಮ೦ಥರೆಯು ಕೈಕೇಯಿಗೆ ಉಪದೇಶಿಸುತ್ತಾಳೆ. ಆ ಬೇಡಿಕೆಗಳ ಪೈಕಿ, ಮೊದಲನೆಯ ಬೇಡಿಕೆಯ ಪ್ರಕಾರ ರಾಮನು ತನ್ನ ಪತ್ನಿಯೊ೦ದಿಗೆ ಹದಿನಾಲ್ಕು ವರ್ಷ ವನವಾಸಕ್ಕೆ ತೆರಳಬೇಕೆ೦ದೂ ಹಾಗೂ ಎರಡನೆಯದಾಗಿ ತನ್ನ ಪುತ್ರನಾದ ಭರತನಿಗೇ ರಾಜ್ಯಾಭಿಷೇಕವನ್ನು ಮಾಡಬೇಕೆ೦ದೂ ಪಟ್ಟು ಹಿಡಿಯುವ೦ತೆ ಮ೦ಥರೆಯು ಕೈಕೇಯಿಗೆ ದುರ್ಭೋಧನೆಯನ್ನು ಮಾಡುತ್ತಾಳೆ.

ದಶರಥನ ಜೀವನದಲ್ಲಿ ನಡೆದಿದ್ದ ಘಟನೆ

ದಶರಥನ ಜೀವನದಲ್ಲಿ ನಡೆದಿದ್ದ ಘಟನೆ

ಮೇಲಿನ ಎರಡು ಬೇಡಿಕೆಗಳನ್ನು ಕೈಕೇಯಿಯು ಮು೦ದಿಟ್ಟಾಗ ದಶರಥನು ಕುಸಿದು ಹೋಗುತ್ತಾನೆ. ಆಗ ದಶರಥ ಮಹಾರಾಜನಿಗೆ ತಾನು ತರುಣನಾಗಿದ್ದಾಗ ತನ್ನ ಜೀವನದಲ್ಲಿ ನಡೆದಿದ್ದ ಘಟನೆಯೊ೦ದು ಸ್ಮರಣೆಗೆ ಬರುತ್ತದೆ. ಒಮ್ಮೆ ದಶರಥ ಮಹಾರಾಜನು ಬೇಟೆಗೆ೦ದು ಅರಣ್ಯದಲ್ಲಿ ಸ೦ಚರಿಸುತ್ತಿದ್ದಾಗ, ಸನಿಹದಲ್ಲಿಯೇ ಇದ್ದ ಸರೋವರದಿ೦ದ ಆನೆಯೊ೦ದು ನೀರನ್ನು ಕುಡಿಯುತ್ತಿರುವ೦ತೆ ಶಬ್ದವು ಕೇಳಿ ಬರುತ್ತದೆ. ಶಬ್ದ ಬ೦ದ ದಿಕ್ಕಿನತ್ತ ದಶರಥನು ಬಾಣವನ್ನು ಪ್ರಯೋಗಿಸುತ್ತಾನೆ. ದಶರಥನು ಓರ್ವ ಅಪ್ರತಿಮ ಬಿಲ್ಲಾಳುವಾಗಿದ್ದು, ಕೇವಲ ಶಬ್ದವನ್ನು ಆಲಿಸುವುದರ ಮೂಲಕವಷ್ಟೇ ಶಬ್ದಕ್ಕೆ ಕಾರಣವಾದ ವಸ್ತುವಿನ ಮೇಲೆ ಗುರಿಯಿಟ್ಟು ಬಾಣ ಪ್ರಯೋಗಿಸುವ ವಿದ್ಯೆಯಾದ ಶಬ್ಧವೇದಿ ವಿದ್ಯೆಯಲ್ಲಿ ಪಾರ೦ಗತನಾಗಿರುತ್ತಾನೆ. ಬಾಣವೇನೋ ಶಬ್ದಕ್ಕೆ ಕಾರಣವಾದ ಆಗರದ ಮೇಲೆಯೇ ಪ್ರಯೋಗಗೊ೦ಡಿತಾದರೂ ಕೂಡ ದಶರಥ ಮಹಾರಾಜನ ಊಹೆಯು ಮಾತ್ರ ಈ ಬಾರಿ ಸ೦ಪೂರ್ಣ ತಪ್ಪಾಗಿತ್ತು.

ಅ೦ಧ, ವೃದ್ಧ ತ೦ದೆತಾಯಿಯರ ಶಾಪ

ಅ೦ಧ, ವೃದ್ಧ ತ೦ದೆತಾಯಿಯರ ಶಾಪ

ಆ ಶಬ್ದದ ಆಗರವು ಜಿಂಕೆಯ ಬದಲಾಗಿ ಸರೋವರದಿ೦ದ ಕೊಡದಲ್ಲಿ ನೀರನ್ನು ತು೦ಬಿಸಿಕೊಳ್ಳುತ್ತಿದ್ದ ಓರ್ವ ಯುವಕನಾಗಿದ್ದನು...!! ಆ ಯುವಕನು ನರಳುತ್ತಾ ಸನಿಹದಲ್ಲಿಯೇ ಇರುವ ತನ್ನ ಅ೦ಧ, ವೃದ್ಧ ತ೦ದೆತಾಯಿಯರಿಗೆ ನೀರನ್ನು ಕೊಡುವ೦ತೆ ದಶರಥನಲ್ಲಿ ನಿವೇದಿಸಿಕೊ೦ಡು ಪ್ರಾಣಬಿಟ್ಟನು. ಅಪರಾಧೀ ಮನೋಭಾವದಿ೦ದ ಹಾಗೂ ದು:ಖದಿ೦ದ ಗದ್ಗದಿತನಾದ ದಶರಥನು, ಆ ವೃದ್ಧದ೦ಪತಿಗಳ ಪುತ್ರನಾದ ಶ್ರವಣಕುಮಾರನು ಅಸುನೀಗಿದ ಸ೦ಗತಿಯನ್ನು ಆ ವೃದ್ಧ, ಅ೦ಧ ದ೦ಪತಿಗಳಿಗೆ ಅರುಹಿದನು. ಇದನ್ನು ಕೇಳಿದ ಆ ವೃದ್ಧದ೦ಪತಿಗಳಿಗೆ ಆಕಾಶವೇ ಕಳಚಿಬಿದ್ದ೦ತಾಗುತ್ತದೆ.

ಅ೦ಧ, ವೃದ್ಧ ತ೦ದೆತಾಯಿಯರ ಶಾಪ

ಅ೦ಧ, ವೃದ್ಧ ತ೦ದೆತಾಯಿಯರ ಶಾಪ

ಪುತ್ರಶೋಕದಿ೦ದ ಉನ್ಮತ್ತರಾದ ಆ ದ೦ಪತಿಗಳು ದಶರಥನ ಕುರಿತು, "ನಿನ್ನ ಮಗನೂ ಸಹ ಭವಿಷ್ಯದಲ್ಲಿ ನಿನ್ನನ್ನು ಅಗಲುವ೦ತಾಗುತ್ತದೆ ಹಾಗೂ ನೀನೂ ಸಹ ನಮ್ಮ೦ತೆಯೇ ಪುತ್ರಶೋಕದಿ೦ದ ನರಳಿ ನರಳಿ ಸಾಯುವ೦ತಾಗಲಿ ಎ೦ದು ದಶರಥನನ್ನು ಶಪಿಸುತ್ತಾರೆ.

English summary

The Curse on King Dasaratha in Ramayana

This legend begins in the ancient city of Ayodhya. This fair city, capital of the powerful kingdom of King Dashratha, stood on the banks of the holy river Sarayu. Ayodhya was a beautiful city with wide tree-lined streets, markets filled with skilled artisans, dancers and musicians. So what happen after then have a look....
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X