For Quick Alerts
ALLOW NOTIFICATIONS  
For Daily Alerts

27 ವರ್ಷಗಳ ಬಳಿಕ ದೀಪಾವಳಿ ಸಂದರ್ಭದಲ್ಲಿ ಗ್ರಹಣ: ಗ್ರಹಣದ ಬಳಿಕವಷ್ಟೇ ಈ ದೀಪಾವಳಿ ಪೂಜೆಗಳನ್ನು ಮಾಡಿ

|

ಗ್ರಹಣವನ್ನು ಜ್ಯೋತಿಷ್ಯದಲ್ಲಿ ಅಶುಭವೆಂದೇ ಪರಿಗಣಿಸಲಾಗುವುದು. ಈ ದಿನದಂದು ಯಾವುದೇ ಶುಭಕಾರ್ಯ ಮಾಡುವುದಿಲ್ಲ. ಈ ವರ್ಷವಂತೂ ದೀಪಾವಳಿ ಸಡಗರದ ಮಧ್ಯದಲ್ಲಿ ಗ್ರಹನ ಬಂದಿದೆ. ದಿಪಾವಳಿ ಹಬ್ಬ ಅಕ್ಟೋಬರ್‌ 24ರಂದು ಪ್ರಾರಂಭವಾಗಿದೆ. ಆದರೆ ಇಂದು ಅಂದರೆ ಅಕ್ಟೋಬರ್‌ 25ರಂದು ಸೂರ್ಯಗ್ರಹಣವಿದೆ. ಈ ದಿನ ಸೂರ್ಯಗ್ರಹಣದ ಸೂತಕವಿರುವುದರಿಂದ ಯಾವುದೇ ಹಬ್ಬ ಆಚರಣೆ ಮಾಡಲಾಗುವುದು. ದೀಪಾವಳಿಯಲ್ಲಿ ಸೂರ್ಯಗ್ರಹಣದ ಸೂತಕ ಸುಮಾರು 27 ವರ್ಷಗಳ ಬಳಿಕ ಇಂದು ಬಿದ್ದಿದೆ.

Surya Grahan 2022

ಸೂರ್ಯಗ್ರಹಣದ ಕಾರಣದಿಂದಾಗಿ ದೀಪಾವಳಿಯ ಮಾರನೇಯ ದಿನ ಮಾಡುತ್ತಿದ್ದ ಗೋವರ್ಧನ ಪೂಜೆಯನ್ನು ಈ ಸಾಲಿನಲ್ಲಿ ಅಕ್ಟೋಬರ್‌ 26ರಂದು ಮಾಡಲಾಗುತ್ತಿದೆ. ಈ ಗ್ರಹಣದ ಬಳಿಕ ದೀಪಾವಳಿಗೆ ಸಿದ್ಧತೆ ಮಾಡುವವರು ಪೂಜೆಗೆ ಈ ರೀತಿ ಸಿದ್ಧತೆ ಮಾಡಬೇಕು:

ಸೂರ್ಯಗ್ರಹಣ:

ಸೂರ್ಯಗ್ರಹಣ:

ಅಕ್ಟೋಬರ್ 25 ರಂದು ಸಂಜೆ 4 ಗಂಟೆಯಿಂದ ಸೂರ್ಯಗ್ರಹಣ ಆರಂಭವಾಗಲಿದೆ. ಸಂಜೆ 6.25ಕ್ಕೆ ಗ್ರಹಣ ಮುಗಿಯಲಿದೆ. ದೇಶದ ಉತ್ತರ ಮತ್ತು ಪಶ್ಚಿಮ ಭಾಗಗಳಲ್ಲಿ ಸೂರ್ಯಗ್ರಹಣವು ಸುಲಭವಾಗಿ ಗೋಚರಿಸುತ್ತದೆ. ಈ ಗ್ರಹಣವು ದೇಶದ ಪೂರ್ವ ಭಾಗಗಳಲ್ಲಿ ಗೋಚರಿಸುವುದಿಲ್ಲ.

ದೀಪಾವಳಿ ಪೂಜೆಯ ಮೇಲೆ ಸೂರ್ಯಗ್ರಹಣದ ಪ್ರಭಾವ

ದೀಪಾವಳಿ ಪೂಜೆಯ ಮೇಲೆ ಸೂರ್ಯಗ್ರಹಣದ ಪ್ರಭಾವ

ಜ್ಯೋತಿಷ್ಯದ ಲೆಕ್ಕಾಚಾರದ ಪ್ರಕಾರ 27 ವರ್ಷಗಳ ನಂತರ ದೀಪಾವಳಿ ಸಂದರ್ಭದಲ್ಲಿ ಇಂತಹ ಕಾಕತಾಳೀಯ ಸಂಭವಿಸುತ್ತಿದೆ. ಈ ಹಿಂದೆ 1995ರ ದೀಪಾವಳಿಯಂದು ಸೂರ್ಯಗ್ರಹಣ ಸಂಭವಿಸಿತ್ತು. ಹಾಗಾಗಿ ಈ ದಿನ ಗೋವರ್ಧನ ಪೂಜೆ ಮಾಡಲಾಗುವುದಿಲ್ಲ, ನಾಳೆ ಗೋವರ್ಧನ ಪೂಜೆ ಮಾಡಲಾಗುವುದು.

ಸೂರ್ಯಗ್ರಹಣದ ಬಳಿಕ ಮನೆಯನ್ನು ಸ್ವಚ್ಛಮಾಡಿ

ಸೂರ್ಯಗ್ರಹಣದ ಬಳಿಕ ಮನೆಯನ್ನು ಸ್ವಚ್ಛಮಾಡಿ

ಸೂರ್ಯಗ್ರಹಣ ಬಳಿಕ ದೀಪಾವಳಿ ಪೂಜೆಯ ಕಡೆಗೆ ಗಮನ ನೀಡಬೇಕಾಗಿರುವುದರಿಂದ ಗ್ರಹಣ ಮಗಿದ ಬಳಿಕ ಮನೆಯನ್ನು ಒರೆಸಿ, ಗುಡಿಸಿ ನಂತರ ಸ್ನಾನ ಮಾಡಬೇಕು. ಆ ಬಳಿಕ ದೀಪಾವಳಿಯಲ್ಲಿ ನಡೆಯಬೇಕಾಗಿರುವ ಗೋವರ್ಧನ ಪೂಜೆಯ ಕಡೆಗೆ ಗಮನಹರಿಸಬೇಕು.

ರಾತ್ರಿ ಹೊತ್ತು ಹಣತೆಯನ್ನು ಹಚ್ಚಬಹುದೇ?

ರಾತ್ರಿ ಹೊತ್ತು ಹಣತೆಯನ್ನು ಹಚ್ಚಬಹುದೇ?

ದೀಪಾವಳಿಯಲ್ಲಿ ರಾತ್ರಿಯಲ್ಲಿ ಹಣತೆಯನ್ನು ಹಚ್ಚುವ ಸಂಪ್ರದಾಯವಿದೆ. ಅಕ್ಟೋಬರ್ 25ಕ್ಕೆ ಸೂರ್ಯಗ್ರಹಣ ಕಾರಣ ಯಾವುದೇ ಹಬ್ಬದ ಆಚರಣೆಯಿಲ್ಲ, ಆದರೆ ಗ್ರಹಣ ಮುಗಿದ ಮೇಲೆ ಅದರ ಸೂತಕ ಕೂಡ ಮುಗಿಯುವುದು. ಹೀಗಾಗಿ ರಾತ್ರಿ ಹೊತ್ತಿನಲ್ಲಿ ಮನೆಯಲ್ಲಿ ಹಣತೆಯನ್ನು ಹಚ್ಚಬಹುದು.

ಗೋವರ್ಧನ ಪೂಜೆ

ಗೋವರ್ಧನ ಪೂಜೆ

ಗೋವರ್ಧನ ಪೂಜೆ 2022 ದಿನಾಂಕ- ಅಕ್ಟೋಬರ್ 26, ಬುಧವಾರ

ಪ್ರತಿಪದ ಪ್ರಾರಂಭ- 25 ಅಕ್ಟೋಬರ್ 4:18 ರಿಂದ

ಪ್ರತಿಪದ ಮುಕ್ತಾಯ- ಅಕ್ಟೋಬರ್ 26 ಮಧ್ಯಾಹ್ನ 2:42 ಕ್ಕೆ

ಗೋವರ್ಧನ ಪೂಜೆ ಶುಭ ಮುಹೂರ್ತ- ಬೆಳಗ್ಗೆ 6:29 ರಿಂದ 8.43 ರವರೆಗೆ

ಪೂಜೆಯ ಒಟ್ಟು ಅವಧಿ - 2 ಗಂಟೆ 14 ನಿಮಿಷಗಳು

 ಸೂರ್ಯಗ್ರಹಣದ ಸಮಯದಲ್ಲಿ ಜಾಗ್ರತೆ

ಸೂರ್ಯಗ್ರಹಣದ ಸಮಯದಲ್ಲಿ ಜಾಗ್ರತೆ

ಜ್ಯೋತಿಷ್ಯದ ಪ್ರಕಾರ ಅಕ್ಟೋಬರ್ 25 ರಂದು ಸೂರ್ಯಗ್ರಹಣದ ಬಗ್ಗೆ ವೃಷಭ, ಮಿಥುನ, ಕನ್ಯಾ ಮತ್ತು ತುಲಾ ರಾಶಿಯ ಜನರು ಜಾಗರೂಕರಾಗಿರಬೇಕು. ಇದರ ಹೊರತಾಗಿ ಎಣ್ಣೆ ಮಸಾಜ್ ಮತ್ತು ಧೂಪ, ಆರತಿ ಅಥವಾ ಹವನವನ್ನು ದೀಪಗಳಿಂದ ಮಾಡಬಾರದು. ಈ ಸಮಯದಲ್ಲಿ ಗರ್ಭಿಣಿಯರು ಮತ್ತು ಜಾತಕ ದೋಷವುಳ್ಳವರು ಸಹ ಜಾಗರೂಕರಾಗಿರಬೇಕು.

English summary

Surya Grahan 2022: Do This Deepavali Work After Surya Grahan In Kannada

Surya Grahan 2022: These are deepavali puja you have to do after solar eclipse read on...
X
Desktop Bottom Promotion