Just In
Don't Miss
- Sports
ಐಪಿಎಲ್ 2021: ಮುಂಬೈ vs ಕೋಲ್ಕತ್ತಾ, ಪಂದ್ಯದ ಹೈಲೈಟ್ಸ್
- Automobiles
ಐಷಾರಾಮಿ ಸೌಲಭ್ಯವುಳ್ಳ ಸ್ಟಾರಿಯಾ ಎಂಪಿವಿ ಅನಾವರಣಗೊಳಿಸಿದ ಹ್ಯುಂಡೈ
- Movies
'ಏಕ್ ಲವ್ ಯಾ': ಪ್ರೇಮ್ ಬರೆದು ಹಾಡಿರುವ ಹಾಡು ನಾಲ್ಕು ಭಾಷೆಯಲ್ಲಿ ಬಿಡುಗಡೆ
- News
ಲಾಕ್ಡೌನ್ ಇಲ್ಲ, ಹದಿನೈದು ದಿನ ಶಿಸ್ತಿನ ಕರ್ಫ್ಯೂ: ಸಿಎಂ ಉದ್ಧವ್ ಠಾಕ್ರೆ
- Finance
2021 ಸ್ಕೋಡಾ ಕೊಡಿಯಾಕ್ ಅಧಿಕೃತವಾಗಿ ಬಿಡುಗಡೆ: ಶೀಘ್ರದಲ್ಲೇ ಭಾರತಕ್ಕೆ ಎಂಟ್ರಿ
- Education
WCL Recruitment 2021: 44 ಮೆಡಿಕಲ್ ಸ್ಪೆಷಲಿಸ್ಟ್ ಮತ್ತು ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ನ.20ಕ್ಕೆ ಸೂರ ಸಂಹಾರ: ಸ್ಕಂದ ಷಷ್ಠಿಯೆಂದು ಕರೆಯುವ ಈ ಆಚರಣೆಯ ಮಹತ್ವವೇನು?
ನವೆಂಬರ್ 20ಕ್ಕೆ ಸೂರ ಸಂಹಾರ ಆಚರಿಸಲಾಗುತ್ತಿದೆ. ಸೂರ ಸಂಹಾರವನ್ನು ಸ್ಕಂದ ಷಷ್ಠಿ ಎಂದು ಆಚರಿಸಲಾಗುತ್ತಿದೆ. ಇದು ದಕ್ಷಿಣದ ಭಾರತದ ಪ್ರಮುಖ ಆಚರಣೆಗಳಲ್ಲಿ ಒಂದಾಗಿದ್ದು ಶಿವನ ಮಗನಾದ ಸುಬ್ರಹ್ಮಣ್ಯ ದೇವರಿಗೆ ಸಂಬಂಧ ಪಟ್ಟ, ಆರು ದಿನಗಳ ಕಾಲ ನಡೆಯುವ ಹಬ್ಬ ಇದಾಗಿದೆ. ಸುಬ್ರಹ್ಮಣ್ಯ ಸ್ವಾಮಿಯನ್ನು ಕಾರ್ತಿಕೇಯ, ಮುರುಗನ್ ಎಂಬ ಹೆಸರಿನಲ್ಲಿ ಕೂಡ ಆರಾಧಿಸಲಾಗುವುದು.
ಕಾರ್ತಿಕ ಮಾಸದ ಹುಣ್ಣಿಮೆಯಂದು ಈ ಹಬ್ಬ ಪ್ರಾರಂಭವಾಗುತ್ತದೆ. ಈ ಹಬ್ಬದಲ್ಲಿ ದೇವರಿಗೆ ರಥೋತ್ಸವ ಹಾಗು ವಿಶೇಷ ಪೂಜೆಗಳು ನಡೆಯುತ್ತವೆ. ಸ್ಕಂದ ಅಥವಾ ಸುಬ್ರಹ್ಮಣ್ಯನು ತನ್ನ ಆಯುಧವನ್ನು(ಭರ್ಜಿಯನ್ನು) ಪಡೆಯುವ ಮೂಲಕ ಕತ್ತಲೆಯ ಮೇಲೆ ಆಧ್ಯಾತ್ಮದ ಬೆಳಕಿನ ಗೆಲ್ಲುವ ಹಬ್ಬ ಇದಾಗಿದೆ.
ಶ್ರೀ ಶ್ರೀನಿವಾಸ್ ಗುರೂಜಿ
ಶ್ರೀ ಸಾಯಿ ಅನುಗ್ರಹ ಜ್ಯೋತಿಷ್ಯ ಪೀಠ
ಪ್ರಧಾನ ಜ್ಯೋತಿಷ್ಯರು ಶ್ರೀ ಶ್ರೀನಿವಾಸ್ ಗುರೂಜಿ
ಕರಾವಳಿ ವಂಶಪರಂಪರೆ ಮನೆತನದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು
ನಿಮ್ಮ ಸಮಸ್ಯೆಗಳಾದ-
ಪ್ರೇಮ ವಿಚಾರ. ಪ್ರೀತಿಯಲ್ಲಿ ನಂಬಿ ಮೋಸ. ಅತ್ತೆ-ಸೊಸೆ ಕಲಹ. ಹಣಕಾಸಿನ ತೊಂದರೆ. ಮದುವೆಯಲ್ಲಿ ಅಡೆತಡೆ. ಸತಿ ಪತಿ ಕಲಹ. ಸಂತಾನ ಸಮಸ್ಯೆ. ಆರೋಗ್ಯ. ಉದ್ಯೋಗ. ಸಾಲ ಭಾದ ಲವ್ ಪ್ರಾಬ್ಲಮ್ ಇನ್ನು ಯಾವುದೇ ಜಟಿಲ ಸಮಸ್ಯೆಗಳಿಗೆ ಪರಿಹಾರ ತಿಳಿಸುತ್ತಾರೆ ಜೀವನದಲ್ಲಿ ಜಿಗುಪ್ಸೆ ಹೊಂದಿದ್ದರೆ ಶ್ರೀ ಸಾಯಿ ಬಾಬಾ ಪೂಜೆ ಶಕ್ತಿಯಿಂದ ಯಾವುದೇ ಸಮಸ್ಯೆ ಇದ್ದರೂ( 5) ದಿನದಲ್ಲಿಶಾಶ್ವತ ಪರಿಹಾರ ತಿಳಿಸುತ್ತಾರೆ
ಮನೆ ವಿಲಾಸ- #37/17 27th cross 12 th main 4th block ಜಯನಗರ್ ಬೆಂಗಳೂರು
M. 9986623344
Web : www.sadguru-sai.com

ಆಚರಣೆ ಹೇಗೆ ಮಾಡಲಾಗುವುದು?
ಈ ಆಚರಣೆಯಲ್ಲಿ ಭಕ್ತರು ಉಪವಾಸವಿದ್ದು ಸುಬ್ರಮಣ್ಯಸ್ವಾಮಿಯ ಜಪ ಮಾಡುತ್ತಾ ನಿಷ್ಠೆಯಿಂದ ಆಚರಿಸುತ್ತಾರೆ. ಸೂರ ಸಂಹಾರ ಆಚರಿಸುವುದರಿಂದ ಭಕ್ತರಿಗೆ ಒಳ್ಳೆಯ ಫಲ ಸಿಗುವುದು ಎಂಬುವುದು ಸುಬ್ರಮಣ್ಯ ಸ್ವಾಮಿಯ ಭಕ್ತರ ಅಚಲ ನಂಬಿಕೆಯಾಗಿದೆ.

ಸೂರ ಸಂಹಾರದ ಹಿಂದಿರುವ ಪೌರಾಣಿಕ ಕತೆ
ಅತಿ ದೊಡ್ಡದಾದ ಹಾಗು 18 ಮಹಾಪುರಾಣಗಳಲ್ಲಿ ಒಂದಾದ ಸ್ಕಂದ ಪುರಾಣದ ಪ್ರಕಾರ, ಸೂರಪದ್ಮ, ಸಿಂಹಮುಖ ಹಾಗು ತಾರಕಾಸುರ ರಾಕ್ಷಸರು ತಮ್ಮ ಸೈನ್ಯ ಕಟ್ಟಿಕೊಂಡು ದೇವತೆಗೆಳ ಮೇಲೆ ಯುದ್ಧ ಮಾಡಿ ಭೂಮಿಯನ್ನು ವಶಪಡಿಸಿಕೊಳ್ಳುತ್ತಾರೆ. ರಾಕ್ಷಸರು ದೇವತೆಗಳನ್ನು ಹಾಗೂ ಮನುಷ್ಯರನ್ನು ಹಿಂಸೆ ನೀಡುತ್ತಾರೆ. ರಾಕ್ಷಸ ಸೂರಪದ್ಮನು ಶಿವನು ಸತಿಯ ನಂತರ ಐಹಿಕ ಜೀವನವನ್ನು ತ್ಯಜಿಸಿ, ಗಂಭೀರವಾದ ತಪ್ಪಸ್ಸಿನಲ್ಲಿ ಮುಳುಗಿದ್ದಾನೆಂಬುದನ್ನು ಅರಿತು, ತನಗೆ ಶಿವನ ಮಗನಿಂದಲೇ ಸಾವಾಗ ಬೇಕು ಎಂಬ ವರವನ್ನು ತೆಗೆದುಕೊಂಡಿರುತ್ತಾನೆ.
ದೇವತೆಗಳು ತಪ್ಪಸ್ಸಿನಲ್ಲಿದ್ದ ಶಿವನ ಪಾದಕ್ಕೆ ಬಿದ್ದು ತಮ್ಮನ್ನು ರಕ್ಷಿಸುವಂತೆ ಕೇಳುತ್ತಾರೆ. ಬ್ರಹ್ಮ ದೇವನ ಸಲಹೆಯ ಮೇರೆಗೆ ದೇವತೆಗಳು ಮನ್ಮಥನ ಸಹಾಯ ಪಡುತ್ತಾರೆ. ಮನ್ಮಥ ಶಿವನಲ್ಲಿ ಕಾಮದ ಇಚ್ಚೆಯನ್ನು ಪ್ರಚೋದಿಸುತ್ತಾನೆ. ಇದರಿಂದ ಕೋಪಗೊಂಡ ಶಿವನು ಮನ್ಮಥನನ್ನು ಸುಟ್ಟು ಬೂದಿ ಮಾಡುತ್ತಾನೆ.

ಸುಬ್ರಹ್ಮಣ್ಯ ಸ್ವಾಮಿಯ ಜನನ
ಶಿವನಿಂದ ಬಂದ ವೀರ್ಯಗಳು ಆರು ಭಾಗಗಳಾಗಿ ಗಂಗೆಯಲ್ಲಿ ಲೀನವಾಗುತ್ತದೆ. ಗಂಗೆಯು, ಆ ಆರು ಭಾಗಗಳನ್ನು ಒಂದು ಕಾಡಿನಲ್ಲಿ ಸ್ಥಾಪಿಸಿದಾಗ ಅದು ಆರು ಮಕ್ಕಳ ರೂಪ ಪಡೆದುಕೊಳ್ಳುತ್ತದೆ. ಆ ಮಕ್ಕಳನ್ನು ಆರು ಕಾರ್ತಿಕೇಯ ನಕ್ಷತ್ರಗಳ ಹೆಣ್ಣು ಮಕ್ಕಳು ನೋಡಿಕೊಳ್ಳುತ್ತಿದ್ದಾಗ ಪಾರ್ವತಿ ದೇವಿಯು ಆ ಆರು ಮಕ್ಕಳನ್ನು ಒಂದಾಗಿ ಮಾಡಿದಾಗ ಆರು ತಲೆಯುಳ್ಳ ಒಂದು ಮಗುವಾಗುತ್ತದೆ. ಅದುವೇ ಸುಬ್ರಹ್ಮಣ್ಯ.
ರಾಕ್ಷಸರು ತಮ್ಮ ಅಟ್ಟಹಾಸ ಮುಂದುವರೆಸಿದ್ದರು. ಸುರಪದ್ಮ ಇಂದ್ರನ ಮಗನನ್ನು, ಋಶಿಗಳನ್ನು ಹಾಗು ದೇವತೆಗಳನ್ನು ಒತ್ತೆಯಾಳುಗಳಾಗಿ ಇಟ್ಟು ಹಿಂಸೆ ನೀಡುತ್ತಾನೆ. ಸುಬ್ರಹಮಣ್ಯ ಸ್ವಾಮಿಯು ದೇವತೆಗಳ ಸೇನಾಪತಿಯಾಗಿ ರಾಕ್ಷಸರನ್ನು ಸೋಲಿಸುತ್ತಾನೆ. ಕೊನೆಯ ಯುದ್ಧದಲ್ಲಿ, ಸುಬ್ರಹ್ಮಣ್ಯ ಸ್ವಾಮಿಯು ಸೂರಪದ್ಮನನ್ನು ತನ್ನ ಆಯುಧದಿಂದ ಕೊಲ್ಲುತ್ತಾನೆ. ಈ ಪ್ರಕ್ರಿಯೆಗೆ 'ಸೂರಸಂಹಾರ' ಎಂದು ಹೆಸರು ಬಂತು.

ಸ್ಕಂದ ಷಷ್ಠಿಯನ್ನು ಆಚರಿಸುವ ವಿಧಾನ
ಸುಬ್ರಹ್ಮಣ್ಯ ಸ್ವಾಮಿಯ ದೇವಾಲಯಗಳಲ್ಲಿ ಈ ಹಬ್ಬ ಅದ್ದೂರಿಯಾಗಿ ಆಚರಿಸಲಾಗುವುದು. ಷಷ್ಠಿಗೂ ಆರು ದಿನ ಮುನ್ನ ಶುರು ಆಗಿ ಷಷ್ಠಿಯ ದಿನ ಮುಕ್ತಾಯಗೊಳ್ಳುತ್ತದೆ. ಈ ದಿನಗಳಲ್ಲಿ ಭಕ್ತರು, ಸುಬ್ರಹಮಣ್ಯನ ಸ್ತೋತ್ರಗಳನ್ನು, ಕಥೆಗಳನ್ನು ಓದುತ್ತಾರೆ ಹಾಗು ದೇವರ ಕಥೆಗಳನ್ನು ವೇದಿಕೆಯ ಮೇಲೆ ನಿರ್ವಹಿಸುತ್ತಾರೆ. ಸಾವಿರಾರು ಜನ ಅಂದಿನ ವಿಶೇಷವಾದ ಅನ್ನ ಸಂತರ್ಪಣೆಯಲ್ಲಿ ಪಾಲ್ಗೊಳ್ಳುತ್ತಾರೆ.
ಸ್ಕಂದ ಷಷ್ಠಿಯ ದಿನ ಭಕ್ತಾದಿಗಳು ಜಪವನ್ನು ಮಾಡಿ, ಕಾವಡಿಯನ್ನು ಸುಬ್ರಹ್ಮಣ್ಯನ ದೇವಸ್ಥಾನಕ್ಕೆ ತೆಗೆದುಕೊಂಡು ಹೋಗುತ್ತಾರೆ.
ಶ್ರೀ ಶ್ರೀನಿವಾಸ್ ಗುರೂಜಿ
ಶ್ರೀ ಸಾಯಿ ಅನುಗ್ರಹ ಜ್ಯೋತಿಷ್ಯ ಪೀಠ
ಪ್ರಧಾನ ಜ್ಯೋತಿಷ್ಯರು ಶ್ರೀ ಶ್ರೀನಿವಾಸ್ ಗುರೂಜಿ
ಕರಾವಳಿ ವಂಶಪರಂಪರೆ ಮನೆತನದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು
ನಿಮ್ಮ ಸಮಸ್ಯೆಗಳಾದ-
ಪ್ರೇಮ ವಿಚಾರ. ಪ್ರೀತಿಯಲ್ಲಿ ನಂಬಿ ಮೋಸ. ಅತ್ತೆ-ಸೊಸೆ ಕಲಹ. ಹಣಕಾಸಿನ ತೊಂದರೆ. ಮದುವೆಯಲ್ಲಿ ಅಡೆತಡೆ. ಸತಿ ಪತಿ ಕಲಹ. ಸಂತಾನ ಸಮಸ್ಯೆ. ಆರೋಗ್ಯ. ಉದ್ಯೋಗ. ಸಾಲ ಭಾದ ಲವ್ ಪ್ರಾಬ್ಲಮ್ ಇನ್ನು ಯಾವುದೇ ಜಟಿಲ ಸಮಸ್ಯೆಗಳಿಗೆ ಪರಿಹಾರ ತಿಳಿಸುತ್ತಾರೆ ಜೀವನದಲ್ಲಿ ಜಿಗುಪ್ಸೆ ಹೊಂದಿದ್ದರೆ ಶ್ರೀ ಸಾಯಿ ಬಾಬಾ ಪೂಜೆ ಶಕ್ತಿಯಿಂದ ಯಾವುದೇ ಸಮಸ್ಯೆ ಇದ್ದರೂ( 5) ದಿನದಲ್ಲಿಶಾಶ್ವತ ಪರಿಹಾರ ತಿಳಿಸುತ್ತಾರೆ
ಮನೆ ವಿಲಾಸ- #37/17 27th cross 12 th main 4th block ಜಯನಗರ್ ಬೆಂಗಳೂರು
M. 9986623344
Web : www.sadguru-sai.com