For Quick Alerts
ALLOW NOTIFICATIONS  
For Daily Alerts

ಮಹಿಳೆಯರು ಭಕ್ತಿಯಿಂದ ಶಿವನನ್ನು ಪ್ರಾರ್ಥಿಸಿದರೆ, ಬಯಸಿದೆಲ್ಲಾ ನೆರವೇರುವುದು

By Deepu
|

ಶಿವರಾತ್ರಿಗೆ ಹಿಂದೂ ಧರ್ಮದಲ್ಲಿ ಅದರದ್ದೇ ಆದ ಮಹತ್ವವಿದೆ. ಶಿವನು ಪಾರ್ವತಿ ದೇವಿಯನ್ನು ವಿವಾಹವಾದ ದಿನವಾಗಿ ಶಿವರಾತ್ರಿಯಂದು ಪರಿಗಣಿಸಲಾಗುತ್ತದೆ. ಕೈಲಾಸನಾಥನು ಈ ದಿನದಂದು ಭೂಮಿಗೆ ಆಗಮಿಸಿ ಸಕಲ ಇಷ್ಟಾರ್ಥಗಳನ್ನು ಪೂರೈಸುತ್ತಾನೆಂಬ ನಂಬಿಕೆ ಹಿಂದೂ ಭಕ್ತರಲ್ಲಿದೆ. ಶಿವರಾತ್ರಿಗೆ ಹೆಚ್ಚು ಪಾವಿತ್ರ್ಯತೆ ಪ್ರಾಮುಖ್ಯತೆ ಇರುವುದು ಅಂದು ಆಚರಿಸುವ ಉಪವಾಸದಲ್ಲಿ. ಶುಚಿರ್ಭೂತರಾಗಿ ಶಿವನನ್ನು ಧ್ಯಾನಿಸುತ್ತಾ ದಿನಪೂರ್ತಿ ಭಕ್ತರು ಆಹಾರ ನೀರು ಮುಟ್ಟದೆ ಉಪವಾಸ ಕೈಗೊಳ್ಳುತ್ತಾರೆ.

ಶಿವರಾತ್ರಿ ಉಪವಾಸವು ಹಗಲಿನಿಂದ ಪ್ರಾರಂಭಗೊಂಡು ರಾತ್ರಿ ಪೂರ್ತಿ ನಡೆದು ಮರುದಿನ ಪ್ರಾತಃ ಕಾಲಕ್ಕೆ ಕೊನೆಗೊಳ್ಳುತ್ತದೆ. ವ್ರತದ ಸಮಯದಲ್ಲಿ ಆಹಾರವಿಲ್ಲದೆ ಕಟ್ಟುನಿಟ್ಟಾಗಿ ದೇವರಲ್ಲಿ ಐಕ್ಯಗೊಳ್ಳಬೇಕು. ವ್ರತಾಧಾರಿಯು ಹಣ್ಣಿನ ರಸ, ಹಣ್ಣುಗಳು ಮತ್ತು ವಿಶೇಷ ವ್ರತ ಆಹಾರಗಳಾದ ವ್ರತದ ಅನ್ನ, ಬೀಜಗಳು, ಈರುಳ್ಳಿ ಬೆಳ್ಳುಳ್ಳಿ ಇಲ್ಲದ ಪದಾರ್ಥಗಳನ್ನು ಸೇವಿಸಬಹುದು. ಸೂರ್ಯಾಸ್ತದ ನಂತರವಷ್ಟೇ ಊಟವನ್ನು ಸೇವಿಸಬೇಕು. ಮರುದಿನ ಮುಂಜಾನೆ ಲಿಂಗಕ್ಕೆ ಅಭಿಷೇಕವನ್ನು ಪೂರೈಸಿ ಪ್ರಾರ್ಥನೆಗಳನ್ನು ಸಲ್ಲಿಸಿದ ನಂತರವಷ್ಟೇ ವ್ರತವನ್ನು ಸಂಪನ್ನಗೊಳಿಸಬೇಕು. ವ್ರತ ಸಂಪನ್ನಗೊಳಿಸುವಾಗ ಪ್ರಸಾದ ಇಲ್ಲವೇ, ಶಿವನಿಗೆ ಅರ್ಪಿಸಿದ ಆಹಾರವನ್ನು ಮೊದಲು ತೆಗೆದುಕೊಳ್ಳಬೇಕು.

ಇನ್ನು ಮಹಾಶಿವರಾತ್ರಿ ಮಹಿಳೆಯರಿಗೆ ವಿಶೇಷ ಮಹತ್ವದ್ದಾಗಿರುತ್ತದೆ. ಈ ರಾತ್ರಿಯನ್ನು ಶಿವನ ರಾತ್ರಿ ಎಂದು ನಂಬಲಾಗಿದ್ದು ಈ ರಾತ್ರಿಯಲ್ಲಿಯೇ ತ್ರಿದೇವರ ಪೈಕಿ ಓರ್ವ ದೇವರು ಪಾರ್ವತಿ ದೇವತೆಯೊಂದಿಗೆ ವಿವಾಹವಾದರು ಎಂದು ಹೇಳಲಾಗುತ್ತದೆ. ಇನ್ನು ಈ ದಿನದಂದು ಕನ್ಯೆಯರು ಶಿವನಲ್ಲಿ ಭಕ್ತಿಯಿಂದ ಪ್ರಾರ್ಥಿಸಿದರೆ ಆತನಂತಹ ಉತ್ತಮ ಗುಣವುಳ್ಳ ಪತಿ ಸಿಗುತ್ತಾನೆಂಬ ಪ್ರಪೀತಿಯಿದೆ. ವಿವಾಹಿಯ ಮಹಿಳೆಯರು ಈ ದಿನ ಭಕ್ತಿಯಿಂದ ಪ್ರಾರ್ಥಿಸಿದರೆ ಪತಿ, ಪುತ್ರ, ಸಹೋದರರ ಆರೋಗ್ಯ, ಆಯಸ್ಸು ಹೆಚ್ಚುತ್ತದೆ ಎಂದು ನಂಬಲಾಗುತ್ತದೆ. ಬನ್ನಿ ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ ಮುಂದೆ ಓದಿ...

ಶಿವಲಿಂಗಕ್ಕೆ ಅಭಿಷೇಕ

ಶಿವಲಿಂಗಕ್ಕೆ ಅಭಿಷೇಕ

ಈ ದಿನದಂದು ಮಹಿಳೆಯರು ಶಿವನನ್ನು ಪ್ರಾರ್ಥಿಸಿ ಆತನ ಮತ್ತು ಪಾರ್ವತಿಯ ಅನುಗ್ರಹ ಪಡೆಯಲು ಯತ್ನಿಸುತ್ತಾರೆ. ಮುಂಜಾನೆಯೇ ಮಿಂದು ಶಿವಲಿಂಗವನ್ನು ಹಾಲು, ನೀರು ಮತ್ತು ಜೇನಿನಿಂದ ಅಭಿಶೇಕ ಮಾಡುತ್ತಾರೆ. ಶಿವನಿಗೆ ಪ್ರಿಯವಾದ ಬಿಲ್ವಪತ್ರೆ, ಖೀರು, ಹಣ್ಣುಗಳು, ದತ್ತೂರಿ, ಅಖಂಡಪುಷ್ಪ ಮೊದಲಾದವುಗಳನ್ನು ಅರ್ಪಿಸುತ್ತಾರೆ. ಇಡಿಯ ದಿನ ಮಹಿಳೆಯರು ಉಪವಾಸವಿದ್ದು ಭಕ್ತಿಗೀತೆಗಳನ್ನು ಹಾಡುತ್ತಾ ಭಜನೆ ಮತ್ತು ಧ್ಯಾನದಲ್ಲಿ ದಿನ ಕಳೆಯುತ್ತಾರೆ. ಈ ದಿನ ಪೂರ್ಣ ಭಕ್ತಿಭಾವದಿಂದ ಶಿವನನ್ನು ಪೂಜಿಸಿದರೆ ಇಷ್ಟಾರ್ಥಗಳು ಸಿದ್ಧಿಸುವುದು ಎಂದು ನಂಬಲಾಗುತ್ತದೆ. ಅಲ್ಲದೇ ಜನ್ಮಜನ್ಮಾಂತರದ ಆವರ್ತದಿಂದ ಮುಕ್ತಿ ಪಡೆಯಲು ಸಾಧ್ಯ ಎಂದೂ ಹೇಳಲಾಗುತ್ತದೆ.

ಶಿವನಂತಹ ಪತಿಗಾಗಿ

ಶಿವನಂತಹ ಪತಿಗಾಗಿ

ಪ್ರಾರ್ಥನೆ ಈ ದಿನದಂದು ಕನ್ಯೆಯರು ಶಿವನಲ್ಲಿ ವಿಶೇಷವಾಗಿ ಪ್ರಾರ್ಥಿಸುವ ಮೂಲ ಶಿವನ ಗುಣವುಳ್ಳ ಪತಿಯೇ ದೊರಕುತ್ತಾನೆ ಎಂಬ ನಂಬಿಕೆಯಿದೆ. ಕನ್ಯೆಯರೂ ವಿವಾಹಿತ ಮಹಿಳೆಯರೂ ಇಡಿಯ ದಿನ ಉಪವಾಸವನ್ನು ಆಚರಿಸುತ್ತಾರೆ. ವಿವಾಹಿತೆಯರ ಪ್ರಾರ್ಥನೆಯಿಂದ ಶಿವ ಮತ್ತು ಪಾರ್ವತಿಯರ ಅನುಗ್ರಹ ಪಡೆಯುವ ಮೂಲಕ ವೈವಾಹಿಕ ಜೀವನ ಸುಮಧುರವಾಗಿರಲು ಮತ್ತು ಆರೋಗ್ಯಕರವಾಗಿರಲು ಸಾಧ್ಯ ಎಂದು ನಂಬಲಾಗಿದೆ.

ಕನ್ಯೆಯರಿಗೆ ಬೇಗನೇ ಸೂಕ್ತ ಜೀವನಸಂಗಾತಿ ಸಿಗಲೂ...

ಕನ್ಯೆಯರಿಗೆ ಬೇಗನೇ ಸೂಕ್ತ ಜೀವನಸಂಗಾತಿ ಸಿಗಲೂ...

ಅಷ್ಟೇ ಅಲ್ಲ, ಸೂಕ್ತ ಜೀವನ ಸಂಗಾತಿಯನ್ನು ಪಡೆಯಲು ಅಸಮರ್ಥರಾದ ಕನ್ಯೆಯರಿಗೆ ಬೇಗನೇ ಸೂಕ್ತ ಜೀವನಸಂಗಾತಿ ಸಿಗಲೂ ಈ ದಿನ ಭಕ್ತಿಯಿಂದ ಮಾಡುವ ಪಾರ್ಥನೆ ಫಲ ನೀಡುತ್ತದೆ ಎಂದು ಹಿರಿಯರು ಹೇಳುತ್ತಾರೆ. ಶಿವರಾತ್ರಿಯ ಈ ಶುಭಸಂದರ್ಭದಲ್ಲಿ ಶಿವನ ಮತ್ತು ಪಾರ್ವತಿಯ ಅನುಗ್ರಹ ಪಡೆಯುವ ಈ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಲು ಮಹಿಳೆಯರು ಮತ್ತು ಕನ್ಯೆಯರು ಹೆಚ್ಚು ಉತ್ಸುಕರಾಗಿರುತ್ತಾರೆ.

ಇನ್ನು ಶಿವರಾತ್ರಿಯಂದು ಪೂಜೆಗೆ ಬೇಕಾದ ಸಾಮಾಗ್ರಿಗಳು

ಇನ್ನು ಶಿವರಾತ್ರಿಯಂದು ಪೂಜೆಗೆ ಬೇಕಾದ ಸಾಮಾಗ್ರಿಗಳು

ಶಿವನು ಎಂದಿಗೂ ತನ್ನ ಭಕ್ತರಲ್ಲಿ ಕಟ್ಟುನಿಟ್ಟಿನ ವ್ರತವನ್ನು ಕೈಗೊಳ್ಳುವಂತೆ ಬಯಸುವುದಿಲ್ಲ. ಅಂತೆಯೇ ಶ್ರದ್ಧೆ ಭಕ್ತಿಯಿಂದ ಶಿವನನ್ನು ಪೂಜಿಸುವುದು ಅತ್ಯವಶ್ಯಕವಾಗಿದೆ. ಶಿವನಿಗೆ ಫಲಪುಷ್ಟಗಳನ್ನು ಅರ್ಪಿಸುವುದಕ್ಕಿಂತ ಬಿಲ್ವವನ್ನು ಅರ್ಪಿಸಿ ಪೂಜಿಸಿದರೂ ಸಾಕು ಆ ಮಹಾದೇವ ಸಂತೃಪ್ತಗೊಳ್ಳುತ್ತಾನೆ. ಭೋಲೇನಾಥನನ್ನು ಮೆಚ್ಚಿಸಲು ನಿಮ್ಮ ಮನದಲ್ಲಿ ಶುದ್ಧವಾದ ಆಚರಣೆ ಮತ್ತು ನಿಷ್ಕಲ್ಮಶವಾದ ಭಕ್ತಿ ಇದ್ದರೆ ಸಾಕು. ಅದಾಗ್ಯೂ ಎಲ್ಲಾ ಪೂಜೆಗಳನ್ನು ವಿಧಿವತ್ತಾಗಿ ಮಾಡಬೇಕು ಎಂಬುದು ನಿಮ್ಮ ಬಯಕೆಯಾಗಿದ್ದಲ್ಲಿ ಪೂಜೆಗೆ ಬೇಕಾದ ಸಾಮಾಗ್ರಿಗಳ ಪಟ್ಟಿ ಇಲ್ಲಿದೆ. ಮಹಾಶಿವರಾತ್ರಿ ಪೂಜೆಯನ್ನು ನಡೆಸಲು ಬೇಕಾದ ವಸ್ತುಗಳ ಪಟ್ಟಿ ಇಲ್ಲಿದೆ.

ಪೂಜೆ ನಡೆಸಲು ಬೇಕಾದ ವಸ್ತುಗಳು

ಪೂಜೆ ನಡೆಸಲು ಬೇಕಾದ ವಸ್ತುಗಳು

*ಶಿವಲಿಂಗ ಅಥವಾ ಶಿವದೇವರ ಫೋಟೋ

*ಉಣ್ಣೆಯಿಂದ ಮಾಡಿದ ಮ್ಯಾಟ್

*ದೀಪ ನಿಮಗೆ ಬೇಕಾದಷ್ಟು ಆದರೂ ಒಂದು ದೀಪ ಕಡ್ಡಾಯ

*ಹತ್ತಿ ಬತ್ತಿಗಳು

*ಗಂಟೆ

*ಕಲಶ ಅಥವಾ ತಾಮ್ರದ ಮಡಿಕೆ

*ಆರತಿ

*ಶಿವಲಿಂಗ ಅಥವಾ ದೇವರ ಫೋಟೋವನ್ನು ಇರಿಸಲು ಬಿಳಿಯ ಬಟ್ಟೆ

*ಹಣ್ಣುಗಳು - ಬಾಳೆಹಣ್ಣು ಮುಖ್ಯವಾದುದು

*ಗಂಗಾ ಜಲ

*ದನದ ಹಾಲು

*ಮೊಸರು

*ಒಣ ಹಣ್ಣು

*ಎಳನೀರು

*ತೆಂಗಿನಕಾಯಿ

*ಸಕ್ಕರೆ

*ಜೇನು

*ಪಂಚಾಮೃತ - ಮೊಸರು, ಜೇನು, ತುಪ್ಪ, ಸಕ್ಕರೆ ಮತ್ತು ಹಾಲಿನಿಂದ ತಯಾರಿಸಿದ್ದು

*ಅಡಿಕೆ

*ವೀಳ್ಯದೆಲೆ ನಿಮಗೆ ಬೇಕಾದಲ್ಲಿ ಇವುಗಳನ್ನು ಆರಿಸಿಕೊಳ್ಳಬಹುದು:

*ಗಣೇಶನ ವಿಗ್ರಹ

*ಲಕ್ಷ್ಮೀ ವಿಗ್ರಹ

*ಆಸನ - ಮರದ ಸಣ್ಣ ಮಣೆ ಕುಳಿತುಕೊಳ್ಳಲು

*ಸಣ್ಣ ಪಾತ್ರೆಗಳು

*ಚಮಚಗಳು

*ಗ್ಲಾಸ್‌ಗಳು

*ಅಭಿಷೇಕವನ್ನು ಮಾಡಲು ದೊಡ್ಡ ಪಾತ್ರೆ

*ಏಲಕ್ಕಿ ಅಥವಾ ದಾಲ್ಚಿನ್ನಿ

*ಜನಿವಾರ (ನೀವು ಬ್ರಾಹ್ಮಣ ಪೂಜಾರಿಗಳಿಂದ ಪೂಜೆ ನೆರವೇರಿಸುತ್ತಿದ್ದಲ್ಲಿ)

*ಹೂವುಗಳು - ಬಿಳಿ ಮತ್ತು ಗುಲಾಬಿ ತಾವರೆ ಹೂವುಗಳು

ಪೂಜೆ ನೆರವೇರಿಸುವುದು

ಪೂಜೆ ನೆರವೇರಿಸುವುದು

ಪೂಜೆಯನ್ನು ರಾತ್ರಿ ಮಾಡಲಾಗುತ್ತದೆ. ರಾತ್ರಿಪೂರ್ತಿ ಒಂದು ಬಾರಿ ಅಥವಾ ನಾಲ್ಕು ಬಾರಿ ಪೂಜೆಯನ್ನು ನಡೆಸಬಹುದಾಗಿದೆ. ನೀವು ನಾಲ್ಕು ಬಾರಿ ಪೂಜೆಯನ್ನು ಮಾಡುತ್ತೀರಿ ಎಂದಾದಲ್ಲಿ, ರಾತ್ರಿ ವೇಳೆಯನ್ನು ನಾಲ್ಕು ಭಾಗಗಳನ್ನಾಗಿ ವಿಂಗಡಿಸಿ. ನಾಲ್ಕು ವೇಳೆಯಲ್ಲೂ ನೀವು ಪೂಜೆಯನ್ನು ನಡೆಸಬಹುದಾಗಿದೆ. ಒಂದು ಬಾರಿ ಪೂಜೆಯನ್ನು ನಡೆಸಿದರೆ ಸಾಕು ಎಂಬುದು ನಿಮ್ಮ ವಿಚಾರವಾಗಿದ್ದರೆ, ಒಮ್ಮೆ ಮಾತ್ರ ರಾತ್ರಿ ವೇಳೆಯಲ್ಲಿ ಪೂಜೆ ನಡೆಸಿ, ನಂತರ ಹಾಲು, ಶ್ರೀಗಂಧ, ಮೊಸರು, ತುಪ್ಪು, ಜೇನು, ಸಕ್ಕರೆ, ಪನ್ನೀರು ಮತ್ತು ನೀರಿನಿಂದ ಅಭಿಷೇಕವನ್ನು ಮಾಡಿ.

ಪೂಜೆ ನೆರವೇರಿಸುವುದು

ಪೂಜೆ ನೆರವೇರಿಸುವುದು

ನಾಲ್ಕು ಪ್ರಹಾರಗಳಲ್ಲಿ ನೀವು ಪೂಜೆಯನ್ನು ನಡೆಸುತ್ತೀರಿ ಎಂದಾದಲ್ಲಿ, ಮೊದಲಿಗೆ ನೀರಿನಿಂದ ಅಭಿಷೇಕವನ್ನು ಮಾಡಿ. ಎರಡನೇ ಪ್ರಹಾರದಲ್ಲಿ ಅಭಿಷೇಕ ಮಾಡಲು ಮೊಸರು ಬಳಸಿ. ಅಂತೆಯೇ ಮೂರನೇ ಮತ್ತು ನಾಲ್ಕನೆಯ ಪ್ರಹಾರದಲ್ಲಿ ಜೇನು ಮತ್ತು ತುಪ್ಪವನ್ನು ಅಭಿಷೇಕ ನಡೆಸಲು ಬಳಸಿ. ನಾಲ್ಕು ಅಭಿಷೇಕಗಳ ನಡುವೆ ಇತರ ಸಾಮಾಗ್ರಿಗಳನ್ನು ಬಳಸಿಕೊಂಡು ನಿಮಗೆ ದೇವರನ್ನು ಪೂಜಿಸಬಹುದಾಗಿದೆ...

English summary

Significance of women worship Lord Shiva during Maha Shivratri

Maha Shivratri is a Hindu festival which holds a special significance for women. Also known as Shivratri, it is one of the festivals that is ...
X
Desktop Bottom Promotion